ಅಕ್ಕಿ, ರವೆ, ಬೇಳೆ ಕಾಳು,ದವಸ ಧಾನ್ಯಗಳಲ್ಲಿ ಹುಳು ಆಗದಂತೆ ಹೀಗೆ ಮಾಡಿ… ಇವತ್ತಿನ ವಿಷಯ ಬೇಳೆಕಾಳುಗಳಲ್ಲಿ ದವಸ ಧಾನ್ಯಗಳಲ್ಲಿ ಇನ್ನಿತರ ಕಾತ್ಯ ಪದಾರ್ಥಗಳಲ್ಲಿ ಹುಳು ಆಗಬಾರದು ಅಂದರೆ ಏನು ಮಾಡಬೇಕು. ಹಿಂದಿನ ಕಾಲದಲ್ಲಿ ರಾಗಿ ಆಗಿರಬಹುದು ಅಥವಾ ಜೋಳ, ಬೇಳೆ ಕಾಳುಗಳಾಗಿರಬಹುದು ವರ್ಷಗಟ್ಟಲೆ ಅದನ್ನು ಸಂಗ್ರಹ ಮಾಡಿಡುತ್ತಿದ್ದರು ಮುಂದಿನ ವರ್ಷದ ಬೆಳೆಗಳು ಬರುವವರೆಗೂ ಅದನ್ನು ಸಂಗ್ರಹಿಸಿ ಇಡುತ್ತಿದ್ದರು ಯಾವುದೇ ಹುಳಗಳು ಆಗದಂತೆ ಅಲ್ಲಿ ಉಪಯೋಗಿಸುತ್ತಿದ್ದ ಸೂತ್ರವೆಂದರೆ ಅಗೆ ಹೂ ಇದನ್ನು ಸಾಮಾನ್ಯವಾಗಿ ಹಳ್ಳಿಯ ಕಡೆ ನೋಡಬಹುದು ಹಳ್ಳಿಗಳ ಲಿ ಆಳವಾಗಿ ಇದನ್ನು ಗುಂಡಿಯಾಗಿ ತೋಡಿರುತ್ತಾರೆ ಆಳವಾಗಿ ಇರುತ್ತದೆ. ಇದು ಗುಂಡಿ ತೋಡಿ ಅದಕ್ಕೆ ಒಳ ಗೋಡೆಯ ಮೇಲೆ ಸಗಣಿಯನ್ನು ತಾರಸಿ ಅದಕ್ಕೆ ಸಗಣಿ ಮತ್ತು ಸುಣ್ಣವನ್ನು ಮಿಶ್ರಣ ಮಾಡಿದ ಲೇಪನವನ್ನು ಮೇಲ್ಭಾಗದಲ್ಲಿ ಒಂದು ಕಲ್ಲನ್ನು ಇಟ್ಟು ಅದರ ಮೇಲೆ ಸುಣ್ಣ ಮತ್ತು ಸಗಣಿಯನ್ನು ಹಾಕಿ ಅದರ ಮೇಲೆ ಮಣ್ಣನ್ನು ಹಾಕಿ ಗಾಳಿ ಹೋಗದಂತೆ ಮಾಡಿರುತ್ತಾರೆ.
ಅದರ ಒಳಗೆ ದವಸ ಧಾನ್ಯಗಳನ್ನು ವರ್ಷಕ್ಕೆ ಆಗುವಂತೆ ಇಡುತ್ತಿದ್ದರು ಅದು ಕ್ವಿಂಟಲ್ ಗಟ್ಟಲೆ ಇರುತ್ತಿತ್ತು, ಅದು ಬೇಕೆನಿಸಿದಾಗ ಅದನ್ನು ತೆಗೆದು ಮತ್ತೆ ಅದನ್ನು ಅದೇ ರೀತಿ ಮುಚ್ಚಿಡುತ್ತಿದ್ದರು. ಇದರ ರಹಸ್ಯ ಎಂದರೆ ದವಸ ಧಾನ್ಯಗಳನ್ನು ಮೊದಲು ಸಂಪೂರ್ಣವಾಗಿ ಸೂರ್ಯನ ಬಿಸಿಲಿನಲ್ಲಿ ಒಣಗಿಸಬೇಕು. ತೇವಾಂಶ ಉಳಿದಿರಬಾರದು ತೇವಾಂಶ ಉಳಿದರೆ ಫಂಗಸ್ ಹುಳ ಉಪ್ಪಟೆಗಳು ಬರುತ್ತವೆ ಹಾಗಾಗಿ ಇದನ್ನು ಬಿಸಿಲಿನಲ್ಲ ತೇವದ ಅಂಶ ಹೋಗುವಂತೆ ಒಣಗಿಸಿ ನಂತರ ಗಾಳಿ ಹೋಗದಂತೆ ಇಡಬೇಕು.ಈಗ ನಾವು ಹಾಗೆಯೆ ಹೂ ತೆಗೆಯಲು ಆಗುವುದಿಲ್ಲ ಏಕೆಂದರೆ ಪಟ್ಟಣಗಳಲ್ಲಿ ಎಲ್ಲಿಯೂ ತೆಗೆಯಲು ಆಗುವುದಿಲ್ಲ, ಇಂದಿನ ಕಾಲದಲ್ಲಿ ಅಗೆ ಹೂ ನಲ್ಲಿ ಇಟ್ಟಿರುವ ದವಸ ಧಾನ್ಯಗಳು ತೆಗೆದುಕೊಳ್ಳಬೇಕೆಂದರೆ ಅದನ್ನು ತೆರೆದು ಒಂದು ದಿನ ಹಾಗೆ ಬಿಡುತ್ತಿದ್ದರು ತಕ್ಷಣ ಅದರ ಒಳಗೆ ಇಳಿಯುತ್ತಿರಲಿಲ್ಲ,ಒಂದು ದಿನ ಬಿಟ್ಟು ದೀಪವನ್ನು ಅಚ್ಚಿ ಅದರೊಳಗೆ ಬಿಡುತ್ತಿದ್ದರು ಆ ದೀಪವು ಉರಿಯುತ್ತಿದೆ ಎಂದರೆ ಅದರ ಒಳಗೆ ಆಮ್ಲಜನಕವಿದೆ ಎಂದರ್ಥ.ದೀಪವು ಆರಿಹೋಯಿತು ಎಂದರೆ ಅದರೊಳಗೆ ಆಮ್ಲಜನಕವಿಲ್ಲ ಅದರೊಳಗೆ ಇಳಿದರೆ ಉಸಿರಾಡಲು ಆಗುವುದಿಲ್ಲ ಉಸರುಗಟ್ಟಿ ಮನುಷ್ಯನು ಸಾಯುತ್ತಾನೆ ಎಂದು ಪರೀಕ್ಷಿಸಿ ಇಳಿಯುತ್ತಿದ್ದರು.
ಯಾವಾಗ ನೀವು ಗಾಳಿ ಹೋಗದಂತೆ( ಏರ್ ಟೈಟ್) ಇಡುತ್ತೀರಾ ಅವಾಗ ಆ ಜಾಗದಲ್ಲಿ ಯಾವುದೇ ಜೀವಿಗೆ ಹೊಸದಾಗಿ ಸೃಷ್ಟಿಯಾಗಲು ಅಥವಾ ಅಲ್ಲಿ ಜೀವಿಸಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿ ಆಮ್ಲಜನಕ ಇರುವುದಿಲ್ಲ ಯಾವುದೇ ಜೀವಿಗಾದರೂ ಆಮ್ಲಜನಕದ ಅವಶ್ಯಕತೆ ತುಂಬಾ ಇರುತ್ತದೆ ಹಾಗೂ ಅಲ್ಲಿ ತೇವಾಂಶವು ಸಹ ಇರುವುದಿಲ್ಲ.ಏಕೆಂದರೆ ಎಲ್ಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಒಣಗಿಸಿ ಅದರೊಳಗೆ ಇಟ್ಟಿರುತ್ತಾರೆ. ಯಾವುದೇ ಜೀವಿ ಅಲ್ಲಿ ಜೀವಿಸಲು ಸಾಧ್ಯವಿಲ್ಲ ಆದರೆ ಈಗಿನ ಕಾಲದಲ್ಲಿ ಕೆಮಿಕಲ್ಸ್ ಸ್ಪ್ರೇ ಹಾಗೂ ಔಷಧಿಗಳನ್ನು ಆಹಾರ ಪದಾರ್ಥಗಳಲ್ಲಿಟ್ಟು ಅದನ್ನೇ ನಾವು ಸೇವಿಸುತ್ತೇವೆ.ಹಿಂದಿನ ಕಾಲದಲ್ಲಿ ಈಗಿನ ಕಾಲದವರಿಗಿಂತ ತುಂಬಾ ಬುದ್ಧಿವಂತರಾಗಿದ್ದರು ಯಾವುದೇ ಹಾನಿಕರ ಔಷಧಿಗಳನ್ನು ಬಳಸದೆ ತಮ್ಮ ಬುದ್ಧಿ ಶಕ್ತಿಯಿಂದ ಆಹಾರ ಪದಾರ್ಥಗಳನ್ನು ವರ್ಷದವರೆಗೂ ಇಡುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ನೋಡಿರಿ.