ಇಂದು ನಾನು ನಿಮಗೆ ತಿಳಿಸಲಿರುವ ವಿಷಯವೆಂದರೆ ಅಯೋಧ್ಯೆಯಿಂದ ಬಂದ ಅಕ್ಷತೆಗಳನ್ನು ನಾವು ಏನು ಮಾಡಬೇಕು. ಇದೇ ತಿಂಗಳು 22 ನೇ ತಾರೀಕು ಅಯೋದ್ಯಾ ರಾಮ ಮಂದಿರ ಉದ್ಘಾಟನೆ ಆಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರತಿಷ್ಠಾಪನೆ ಮಹೋತ್ಸವ ಇದೆ. ಸುಮಾರು 500 ಸಾವಿರ ವರ್ಷಗಳ ಹಿಂದೆ ಅಯೋಧ್ಯೆಯಲ್ಲಿದ್ದಂತಹ ರಾಮ ಮಂದಿರವನ್ನು ಧ್ವಂಸ ಮಾಡಿ ಬಾಬ್ರಿ ಮಸೀದಿ ಕಟ್ಟಿದರು. ಮತ್ತೆ ಅದನ್ನು ಧ್ವಂಸ ಮಾಡಿ ನಮ್ಮ ಶ್ರೀ ರಾಮಚಂದ್ರನ ರಾಮಮಂದಿರವನ್ನು ನಿರ್ಮಾಣ ಮಾಡಿ ಸೀತಾರಾಮ ಲಕ್ಷ್ಮಣ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದೇವೆ.

WhatsApp Group Join Now
Telegram Group Join Now

ಇದು ಎಂತಹ ಒಳ್ಳೆಯ ಸುದ್ದಿ ನಮ್ಮ ಸನಾತನ ಧರ್ಮದಲ್ಲಿ ಶ್ರೀರಾಮಚಂದ್ರನಿಗೆ ಒಂದು ಉತ್ತಮ ಸ್ಥಾನ ಇದೆ. ರಾಮೋ ವಿಗ್ರಹವಾಃ ಧರ್ಮಃ ಎಂದು ಹೇಳುತ್ತದೆ ಶಾಸ್ತ್ರ. ಧರ್ಮ ಸ್ವರೂಪ ಶ್ರೀರಾಮಚಂದ್ರ ಇಲ್ಲಿ ಕನ್ನಡಿಗರ ಎಲ್ಲಾ ಹೆಮ್ಮೆ ಪಡುವಂತಹ ಮತ್ತೊಂದು ವಿಷಯವೇನೆಂದರೆ. ಅಯೋಧ್ಯೆಯಲ್ಲಿ ಗರ್ಭಗುಡಿಯಲ್ಲಿ ಸ್ಥಾಪನೆ ಮಾಡುವಂತ ರಾಮನ ವಿಗ್ರಹ ಅಂದರೆ ಬಾಲ ರಾಮ ವಿಗ್ರಹ ಅಲ್ಲಿರುವಂತಹ ವಿಗ್ರಹಗಳನ್ನು ಕೆತ್ತನೆ ಮಾಡಿರುವಂತಹ ನಮ್ಮ ಕರ್ನಾಟಕದವರಾಗಿದ್ದಾರೆ. ನನ್ನ ಮೈಸೂರಿನ ಅರುಣ್ ಯೋಗಿ ರಾಜ್ ರವರು ನಮ್ಮ ಕನ್ನಡಿಗರಾಗಿರುವುದು ಎಂತಹ ಗರ್ವ ಕಾರಣ.

ಏಕೆಂದರೆ ನಮ್ಮ ಕರ್ನಾಟಕದಿಂದ ಶಿಲೆ ಹೋಗಿ ಕನ್ನಡಿಗರೇ ಕೆತ್ತನೆ ಮಾಡಿರುವಂತಹ ರಾಮನ ಮೂರ್ತಿಯನ್ನು ಈಗ ಇಡೀ ದೇಶವೇ ಪೂಜಿಸುತ್ತದೆ. ಆರಾಧನೆ ಮಾಡುತ್ತಾರೆ ಇದು ಎಷ್ಟು ಒಳ್ಳೆಯ ವಿಷಯ ಅಲ್ಲವೇ. ಮತ್ತೊಂದು ವಿಚಾರವೆಂದರೆ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ನಡೆಯುತ್ತಿರುವ ಸಂದರ್ಭದಲ್ಲಿ ನಮ್ಮ ಪ್ರಧಾನಮಂತ್ರಿಗಳಾದಂತಹ ನರೇಂದ್ರ ಮೋದಿಯವರು ಅಯ್ಯೋದ್ಯ‌ ರಾಮ ದೇವರ ಶಂಕು ಸ್ಥಾಪನೆ ಮಾಡಿದ್ದರು. ಕೆಲ ದಿನಗಳಲ್ಲಿ ಭವ್ಯವಾಗಿ ಅಯೋದ್ಯ ರಾಮ ಮಂದಿರ ನಿರ್ಮಾಣವಾಗಿದೆ. ಅವರಿಗೆ ನಾವು ಕೃತಜ್ಞತೆಗಳನ್ನು ಹೇಳಬೇಕು.

ಅಯೋಧ್ಯೆಯಲ್ಲಿ ಬಾಲರಾಮ ಮಂದಿರ ನಿರ್ಮಾಣ ಸಂದರ್ಭದಲ್ಲಿ ಟನ್ ಗಟ್ಟಲೆ ಅಕ್ಷತೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ದೇಶದಲ್ಲಿರುವಂತಹ ಎಲ್ಲರ ಮನೆಗು ತಲುಪಬೇಕು. ಎಲ್ಲರಿಗೂ ಶ್ರೀ ರಾಮನ ಅನುಗ್ರಹ ಸಿಗಬೇಕು ಎಲ್ಲರ ಮನೆಗೂ ಅಕ್ಷತೆ ತಲುಪಬೇಕು ಎಂದು ಮೋದಿಜಿಯವರು ಆಜ್ಞೆ ಮಾಡಿದ್ದಾರೆ. ವಿಶ್ವ ಹಿಂದೂ ಪರಿಷತ್ ನವರು ಇದನ್ನು ಕೈಗೆ ತೆಗೆದುಕೊಂಡು ಎಲ್ಲರ ಮನೆಗೆ ಅಕ್ಷತೆಯನ್ನು ಕಳುಹಿಸುತ್ತಿದ್ದಾರೆ. ಈ ಅಕ್ಷತೆ ಯಾವುದೇ ಸಮಯದಲ್ಲಾದರೂ ನಿಮ್ಮ ಮನೆಗೆ ಬರಬಹುದು.

ತಲೆಯ ಮೇಲೆ ಹೊತ್ತುಕೊಂಡು ಅವರು ನಿಮ್ಮ ಮನೆಯ ಹತ್ತಿರ ಬಂದ ತಕ್ಷಣ ಒಂದು ತಟ್ಟೆಯಲ್ಲಿ ಕರ್ಪೂರವನ್ನು ತೆಗೆದುಕೊಂಡು ಆ ಅಕ್ಷತೆಗೆ ನೀವು ಆರತಿಯನ್ನು ಮಾಡಿ. ಖಂಡಿತವಾಗಿ ನಿಮಗೆ ಶ್ರೀರಾಮನ ಅನುಗ್ರಹ ದೊರೆಯುತ್ತದೆ. ಶ್ರೀರಾಮ ರಕ್ಷೆ ಸರ್ವ ಜಗತ್ ರಕ್ಷೆ ಅವರು ಸ್ವಲ್ಪ ಅಕ್ಷತೆಯನ್ನು ಮಾತ್ರ ಕೊಡುತ್ತಾರೆ. ಅದಕ್ಕೆ ನೀವು ಒಂದು ಕೆಲಸವನ್ನು ಮಾಡಬೇಕು ಮನೆಯಲ್ಲಿ ಒಂದು ಬೌಲಿನಲ್ಲಿ ಸ್ವಲ್ಪ ಅಕ್ಷತೆಯನ್ನು ಮಾಡಿ ಇಟ್ಟುಕೊಂಡಿರಿ. ಅಕ್ಷತೆಯನ್ನು ಹೇಗೆ ಮಾಡಬೇಕು ಎಂದರೆ ಅಕ್ಕಿ ಮತ್ತು ಅರಿಶಿಣವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಬಾರದು ಸ್ವಲ್ಪ ತುಪ್ಪವನ್ನು ಹಾಕಿ ಬೆರೆಸಿದರೆ ಅದು ಅಕ್ಷತೆಯಾಗುತ್ತದೆ.

ಒಂದು ಬೌಲ್ ನಲ್ಲಿ ಅಥವಾ ಒಂದು ಡಬ್ಬದಲ್ಲಿಯೂ ಇಟ್ಟುಕೊಂಡು ಅವರು ಬಂದ ತಕ್ಷಣ ಪೂಜೆ ಮಾಡಿ ನಮಸ್ಕಾರ ಮಾಡಿಕೊಳ್ಳಿ. ಅವರು ಅಕ್ಷತೆಯನ್ನು ಜಾಸ್ತಿ ಕೊಡುವುದಿಲ್ಲ ಗೋಮುಖ ಮುದ್ರೆ ಅಂದರೆ ಸ್ವಲ್ಪ ಕೊಡುತ್ತಾರೆ. ನೀವು ಮಾಡಿ ಕೊಂಡಿರುವ ಅಕ್ಷತೆಯಲ್ಲಿ ಅದನ್ನು ಬೆರೆಸಿಕೊಳ್ಳಿ ನಿಮ್ಮ ಮಕ್ಕಳು ಎಲ್ಲಾದರೂ ಓದುತ್ತಿದ್ದರೆ ಹಾಸ್ಟೆಲ್ನಲ್ಲಿದ್ದರೆ ಅವರು ಬಂದ ತಕ್ಷಣ ಅವರ ತಲೆಯ ಮೇಲೆ ಹಾಕಿ ಅವರಿಗೂ ಶ್ರೀ ರಾಮನ ಅನುಗ್ರಹ ಸಿಗುತ್ತದೆ. ನೀವು ಸಹ ಅಕ್ಷತೆಯನ್ನು ತಲೆಯ ಮೇಲೆ ಹಾಕಿಕೊಳ್ಳಿ. ಅಕ್ಷತೆ ಕೆಳಗಡೆ ಬಿದ್ದರೆ ಅದನ್ನು ಪೊರಕೆಯಲ್ಲಿ ಗುಡಿಸಬೇಡಿ.

ಒಂದು ಬಟ್ಟೆಯಲ್ಲಿ ಕ್ಲೀನ್ ಮಾಡಿ ತುಳಸಿ ಗಿಡಕ್ಕೆ ಹಾಕಿ ಇಲ್ಲವೇ ಹೂವಿನ ಗಿಡಕ್ಕೆ ಹಾಕಿ ಯಾರು ತುಳಿಯದಂತ ಸ್ಥಳದಲ್ಲಿ ಹಾಕಿ. ಶ್ರೀರಾಮಚಂದ್ರನ ಒಂದು ಫೋಟೋವನ್ನು ಸಹ ಕೊಡುತ್ತಾರೆ. ಆ ಫೋಟೋವನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಮತ್ತು ನಿಯಮ ಪತ್ರಿಕೆ ನಿಯಮ ನಿಬಂಧನೆಗಳ ಪತ್ರಿಕೆಯನ್ನು ಕೊಡುತ್ತಾರೆ. ಜನವರಿ 22ನೇ ತಾರೀಕು ನಾವು ಏನನ್ನು ಮಾಡಬೇಕು ಏನನ್ನು ಮಾಡಬಾರದು ಎಂಬುದು ಅದರಲ್ಲಿ ಇರುತ್ತದೆ. ಜನವರಿ 20ನೇ ತಾರೀಕಿನ ಒಳಗೆ ಪ್ರತಿಯೊಂದು ಮನೆಗೆ ಬಂದು ತಲುಪುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋಗಳನ್ನು ವೀಕ್ಷಿಸಿ.

By god