ಆರೋಗ್ಯ ಸಲಹೆಗಳು… ರಾತ್ರಿ ವೇಳೆಯಲ್ಲಿ ಕರಿದ ಕಾರದ ಮತ್ತು ಕೊಬ್ಬು ಇರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು, ಪ್ರೋಟೀನ್ಗಳ ಸೇವನೆ ಆಹಾರದಲ್ಲಿ ಅತಿ ಮುಖ್ಯ ಬೆಳೆಕಾಳುಗಳು ದ್ವಿದಳ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಉಪಯೋಗಿಸಬೇಕು, ತಂಪು ಪಾನೀಯಗಳ ಸೇವನೆಯಿಂದ ಶರೀರಕ್ಕೆ ಯಾವುದೇ ಕ್ಯಾಲೋರಿ ದೊರಕುವುದಿಲ್ಲ ಆದರೆ.

WhatsApp Group Join Now
Telegram Group Join Now

ಶರೀರದ ತೂಕ ಹೆಚ್ಚುತ್ತದೆ, ಆಹಾರ ಸೇವಿಸುವಾಗ ನಿರಾಳ ಮನಸ್ಥಿತಿಯಿಂದ ಇರಬೇಕು, ಆಲ್ಕೋಹಾಲ್ ಸೇವನೆಯನ್ನು ತ್ಯಜಿಸುವುದು ಒಳ್ಳೆಯದು ಇಲ್ಲದಿದ್ದರೆ ಇದು ಜೀರ್ಣಶಕ್ತಿಯ ಮೇಲೆ ದುಷ್ಪರಿಣಾಮ ಬೀರುವುದು, ಹುಳಿ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಕೂಡದು, ಆಹಾರದಲ್ಲಿ ಹಸಿರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮಾಡುವುದು ಒಳ್ಳೆಯದು, ಆತಂಕ ಕಡಿಮೆ.

ಮಾಡುವ ಮಾತ್ರೆಗಳು ಮತ್ತು ನಿದ್ರೆ ಮಾತ್ರೆಗಳ ಸೇವನೆ ಮಾಡಬಾರದು, ಮಲಗುವ ಕೋಣೆಯೊಳಗೆ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು, ಕೋಪ ತಾಪಗಳನ್ನು ದೂರ ಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕು, ದಿನನಿತ್ಯ ಹಲ್ಲು ವಸಡು ನಾಲಿಗೆಗಳನ್ನು ಶುಭ್ರವಾಗಿಟ್ಟುಕೊಳ್ಳಬೇಕು, ಉಸಿರನ್ನು ದೀರ್ಘವಾಗಿ ಎಳೆದು ಕೆಲವು ಸೆಕೆಂಡುಗಳು ಕಾಲ ಒಳಗೆ ನಿಲ್ಲಿಸಿ.

ಆನಂತರ ನಿಧಾನವಾಗಿ ಹೊರಗೆ ಬಿಡಬೇಕು, ತಮಗೆ ಶಕ್ತಿ ಇರುವಷ್ಟು ಮಾತ್ರ ಕೆಲಸ ಮಾಡಬೇಕು ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು, ಪ್ರತಿದಿನ ಆರರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡಬೇಕು, ಆಯಾಸವಾದಾಗ ವಿಶ್ರಾಂತಿ ಪಡೆಯಬೇಕು, ನೆಟ್ಟಗೆ ನಿಲ್ಲಬೇಕು ನೆಟ್ಟಗೆ ಕುಳಿತುಕೊಳ್ಳಬೇಕು ನೆಟ್ಟಗೆ ನಡೆಯಬೇಕು ಯಾವ ಕಾರಣಕ್ಕೂ ಬಗ್ಗಬಾರದು.

ಆಹಾರವನ್ನು ಚೆನ್ನಾಗಿ ಆಗಿದು ತಿನ್ನಬೇಕು, ಸಾಂಬಾರ್ ಪದಾರ್ಥಗಳನ್ನು ಮತ್ತು ಕರಿದ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಬಾರದು,ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಬಾರದು, ಪ್ರತಿದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು, ದಿನಕ್ಕೆ ಒಂದು ಬಾರಿ ಸಾಯಂಕಾಲ ಹೊರಗಡೆ ಶುದ್ಧವಾದ ಗಾಳಿಯಲ್ಲಿ ಮಲಗಿ ನಿದ್ದೆ.

ಮಾಡಬೇಕು, ಬ್ರಹ್ಮಚರ್ಯ ವ್ರತವನ್ನು ಪಾಲಿಸಬೇಕು, ಗಂಧಕ ಕರ್ಪೂರ ತುಳಸಿ ಗಿಡ ಧೂಪ ಶ್ರೀಗಂಧ ಬೇವನ ಕಡ್ಡಿಯಿಂದ ಮನೆಯಲ್ಲಿ ಹೊಗೆ ಹಾಕಿ ಗಾಳಿಯನ್ನು ಶುದ್ಧ ವಾಗುವಂತೆ ಮಾಡಬೇಕು, ಮನೆಯ ಸುತ್ತ ಗೋವಿನ ಸಗಣಿಯಿಂದ ಸಾರಿಸಿ ನೈರ್ಮಲ್ಯವಾಗಿಟ್ಟುಕೊಳ್ಳಬೇಕು, ಮೆದುಳು ತನ್ನ ಕ್ರಿಯಾಶಕ್ತಿಯನ್ನು ಕಳೆದುಕೊಳ್ಳುವ ಯಾವುದೇ ಮಾದಕ.

ವಸ್ತುಗಳನ್ನು ಉಪಯೋಗಿಸಬಾರದು, ನಿದ್ದೆ ಮಾತ್ರೆಗಳನ್ನು ಉಪಯೋಗಿಸಿದರೆ ಬೇಗ ಮರಣಕ್ಕೆ ಗುರಿಯಾಗ ಬೇಕಾಗುತ್ತದೆ, ವೈದ್ಯರ ಸಲಹೆ ಇಲ್ಲದೆ ಯಾವ ಔಷಧಿಗಳನ್ನು ಉಪಯೋಗಿಸಬಾರದು,ವಾರಕ್ಕೆ ಒಂದು ದಿನ ಉಪವಾಸ ಮಾಡುವುದನ್ನು ರೂಢಿಯಾಗಿಟ್ಟುಕೊಳ್ಳಬೇಕು, ತಮ್ಮ ಶರೀರಕ್ಕೆ ತೊಂದರೆ ಕೊಡುವ ಯಾವುದೇ ಆಹಾರ ಪದಾರ್ಥಗಳನ್ನು.

ತಿನ್ನಬಾರದು, ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಾಲಿಗೆ ಬಾಯಿಯನ್ನು ಶುಚಿ ಮಾಡಿಕೊಂಡು ಎರಡು ಲೋಟ ಶುದ್ಧವಾದ ನೀರನ್ನು ಕುಡಿಯಬೇಕು, ತಾಳೆ ಹಣ್ಣುಗಳನ್ನು ಮೊಸರಿನ ಜೊತೆಯಲ್ಲಿಯೂ ಬಾಳೆಹಣ್ಣುಗಳನ್ನು ಮಜ್ಜಿಗೆ ಜೊತೆಯಲ್ಲಿಯೂ ಹಾಲನ್ನು ಮಜ್ಜಿಗೆ ಮೊಸರಿನ ಜೊತೆಯಲ್ಲಿ.

ಉಪಯೋಗಿಸಬಾರದು, ತನ್ನ ವಯಸ್ಸಿಗೆ ತಕ್ಕಂತೆ ವ್ಯಾಯಾಮವನ್ನು ಮಾಡಬೇಕು, ದಿನಕ್ಕೆ ಎರಡು ವೇಳೆ ಆಹಾರವನ್ನು ಸೇವಿಸುವವನು ಎರಡು ಸಾರಿ ಮಲವಿಸರ್ಜನೆ ಮಾಡುವವನು 6 ಸಾರಿ ಮೂತ್ರ ವಿಸರ್ಜನೆ ಮಾಡುವವನು ಸದಾ ಎಡಗಡೆ ಮಲಗುವವನು ಚಿಂತೆಯ ದೂರ ಮಾಡುವ ಶಕ್ತಿಯನ್ನು.

ಪಡೆದಿರುವವನು ದೀರ್ಘಾಯುಷಿ ಆಗುವನು ನಾವು ಸೇವಿಸುವ ಆಹಾರದಲ್ಲಿ ವೋಟ್ ಧಾನ್ಯ ಮುಂತಾದ ಸತ್ವಯುತ ಆ ಪದಾರ್ಥಗಳು ಹಾಗೂ ನಾರಿನ ಪದಾರ್ಥಗಳು ಹಾಗೂ ನೀರಿನ ಪದಾರ್ಥಗಳು ರಾಗಿ ಕಾರ್ಬೋಹೈಡ್ರೇಡ್ ನಿಂದ ಕೂಡಿರುವ ಕಾಳುಗಳು ಇರಬೇಕು.

ಕರೆದ ಮಾಂಸ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು ಇದರಿಂದ ಶರೀರದಲ್ಲಿ ಕೊಬ್ಬು ಶೇಖರಣೆ ಕಡಿಮೆಯಾಗುವುದು.ಕೊಬ್ಬು ರಹಿತ ಮಾಂಸ ಅಥವಾ ಮೊಟ್ಟೆಯ ಬಿಳಿ ಭಾಗ ಅಥವಾ ಮೀನನ್ನು ಆಹಾರವಾಗಿ ಉಪಯೋಗಿಸುವುದು ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god