ಆಸ್ತಿ ವಿಭಾಗದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೆ ಏನಾಗುತ್ತೆ ತಿಳಿಯಿರಿ..ಈಗ ಒಟ್ಟು ಕುಟುಂಬದ ಆಸ್ತಿ ಇರುತ್ತದೆ ಆಸ್ತಿಯ ವಿಭಾಗದ ಸಂದರ್ಭದಲ್ಲಿ ಗಂಡು ಮಕ್ಕಳು ಮಾತ್ರ ಪಾರ್ಟಿಶನ್ ಅನ್ನು ಮಾಡಿಕೊಂಡಿರುತ್ತಾರೆ ಹೆಣ್ಣು ಮಕ್ಕಳು ಕೂಡ ಅಕ್ಕುದಾರರಾಗಿರುತ್ತಾರೆ ಆದರೆ ಅವರನ್ನು ಕಾಣಿಸದೆ ಗಂಡು ಮಕ್ಕಳು ಆಸ್ತಿಯನ್ನ ಪಾಲು ಮಾಡಿಕೊಂಡು.

WhatsApp Group Join Now
Telegram Group Join Now

ಅನುಭವಿಸುತ್ತಿರುತ್ತಾರೆ ತುಂಬಾ ವರ್ಷಗಳ ನಂತರ ಹೆಣ್ಣು ಮಕ್ಕಳು ನಮಗೂ ಪಾಲಿದೆ ಹಾಸ್ತಿಯಲ್ಲಿ ಹಕ್ಕು ಕೊಡಿ ಎಂದು ಕೇಳುತ್ತಾರೆ ಆಗ ಏನು ಮಾಡಬೇಕು ಮೊದಲು ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೋಡಬೇಕಾಗುತ್ತದೆ ಆಸ್ತಿ ಯಾವ ರೀತಿಯಾಗಿ ಬಂದಿದ್ದು ತಂದೆಯ ಸ್ವಯಾರ್ಜಿತ ಆಸ್ತಿಯೋ ಅಥವಾ ತಂದೆಗೆ ಪಿತ್ರಾರ್ಜಿತವಾಗಿ ಬಂದಿರುವಂತಹ ಆಸ್ತಿಯ.

ಎಲ್ಲವನ್ನು ನೋಡಬೇಕಾಗುತ್ತದೆ ತಂದೆಯ ಸ್ವಯಾರ್ಜಿತ ಆಸ್ತಿಯಾಗಿದ್ದು ಅವರು ವಿಲ್ಲನ್ನು ಅಂದರೆ ಮರಣ ಶಾಸನವನ್ನು ಮಾಡದೆ ಆಸ್ತಿಯನ್ನ ಹಾಗೆ ಬಿಟ್ಟು ಮರಣಿಸಿದ್ದರೆ ಹಿಂದೂ ಸಪ್ಸಿಕ್ಷನ್ ಆಕ್ಟ್ ಎಂಟರ ಪ್ರಕಾರ ಎಲ್ಲಾ ವಾರಸುದಾರರು ಕೂಡ ಹಕ್ಕುದರಗಿರುತ್ತಾರೆ ಅವರು ಗಂಡು ಮಕ್ಕಳೇ ಆಗಿರಲಿ ಅಥವಾ ಹೆಣ್ಣು ಮಕ್ಕಳೇ ಆಗಿರಲಿ ತುಂಬಾ ಜನಗಳಿಗೆ ಗೊತ್ತೇ.

ಇರುವುದಿಲ್ಲ 2005ರ ನಂತರ ಮಾತ್ರ ಹೆಣ್ಣು ಮಕ್ಕಳಿಗೆ ಹಕ್ಕು ಬಂದಿದೆ ಎಂದುಕೊಂಡಿರುತ್ತಾರೆ ಆದರೆ ಹಿಂದೂ ಉತ್ತರಾದಿ ಕಾಯ್ದೆ ಪ್ರಕಾರ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ತಂದೆಯ ಮರಣದ ನಂತರ ಎಲ್ಲಾ ಮಕ್ಕಳು ಕೂಡ ಹಕ್ಕುದಾರರಾಗುತ್ತಾರೆ ಈಗ ಬೌತಿ ಖಾತೆಯಿಂದ ಯಾರಾದರೂ ಒಬ್ಬರ ಹೆಸರಿಗೆ ಅಂದರೆ ಮನೆಯಲ್ಲಿ ಯಾರಾದರೂ ಹಿರಿಯರಾಗಿರುವ ತಾಯಿಯ.

ಹೆಸರಿಗೋ ಅಥವಾ ಅಣ್ಣನ ಹೆಸರಿಗೋ ಖಾತೆ ಬದಲಾವಣೆಯಾಗಿದ್ದರೆ ಅವರೇ ಓನರ್ ಎಂದು ಹೇಳಲು ಆಗುವುದಿಲ್ಲ ಏಕೆಂದರೆ ಕರ್ನಾಟಕ ಲ್ಯಾಂಡ್ ರೆವೆನ್ಯೂ ಆಕ್ಟ್ 1964 ಅಡಿಯಲ್ಲಿ ಟ್ಯಾಕ್ಸನ್ನು ಯಾರಿಂದ ತೆಗೆದುಕೊಳ್ಳಬೇಕು ಎನ್ನುವುದಕ್ಕೆ ಮಾತ್ರ ಖಾತೆಯನ್ನು ಏರಿಸಿರುತ್ತಾರೆ ಈಗ ಯಾರ ಹೆಸರಿಗೆ ಖಾತೆಯನ್ನು ಏರಿಸಿರುತ್ತಾರೋ ಅವರೇ ಅದರ.

ಯಜಮಾನ ಎಂದು ಹೇಳುವುದಕ್ಕೆ ಆಗುವುದಿಲ್ಲ ತಾಯಿ ಇದ್ದರೆ ತಾಯಿ ಹೆಸರಿಗೆ ಖಾತೆಯನ್ನು ಏರಿಸಿದ್ದರೆ ತಾಯಿ ಮಾತ್ರ ಹಕ್ಕುಧರರು ಎಂದು ಹೇಳುವುದಕ್ಕಾಗುವುದಿಲ್ಲ ಏಕೆಂದರೆ ತಾಯಿ ಮತ್ತು ಮಕ್ಕಳು ಎಲ್ಲರೂ ಕೂಡ ಸಮಾನ ಹಕ್ಕುದಾರರು ಆಗಿರುತ್ತಾರೆ ಇದು 2005ರ ಮೊದಲಿಂದಲೂ ಇದೆ 2005ರ ತಿದ್ದುಪಡಿಯ ಪ್ರಕಾರ ಪಿತ್ರಾರ್ಜಿತ ಆಸ್ತಿಯ ವಿಷಯಕ್ಕೆ ಬಂದರೆ.

2005ರ ನಂತರ ಹೆಣ್ಣು ಮಕ್ಕಳಿಗೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನದಂತಹ ಹಕ್ಕು ಬಂದಿದೆ 2005ರ ಮೊದಲ ಪಾರ್ಟಿಶನ್ ಆಗಿದ್ದರೆ ಆಗ ಹೆಣ್ಣು ಮಕ್ಕಳು ಹಕ್ಕನ್ನ ಕೇಳುವುದಕ್ಕೆ ಬರುವುದಿಲ್ಲ ಅದೇ ತಂದೆಯ ಸ್ವಯಾರ್ಜಿತ ಆಸ್ತಿ ಹಾಗಿದ್ದರೆ ಹಕ್ಕನ ಅವರು ಯಾವಾಗ ಬೇಕಾದರೂ ಕೇಳಬಹುದು ಉದಾಹರಣೆಗೆ 2005ರ ಮೊದಲು ಒಂದು ಕುಟುಂಬದಲ್ಲಿ .

ದಂಪತಿಗಳಿಗೆ ಎಂಟು ಜನ ಮಕ್ಕಳಿರುತ್ತಾರೆ ನಾಲ್ಕು ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ತಂದೆಯ ಮರಣದ ನಂತರ ಆಸ್ತಿಯನ್ನ ತಾಯಿ ಮತ್ತು 8 ಮಕ್ಕಳು ಸಮಾನವಾಗಿ ಹಂಚಿಕೊಳ್ಳ ಬೇಕಾಗುತ್ತದೆ ಅದೇ ತಂದೆಗೆ ಪಿತ್ರಾರ್ಜಿತವಾಗಿ ಅಂದರೆ ತಾತ ಮುತ್ತಾತನ ಕಡೆಯಿಂದ ಆಸ್ತಿ ಬಂದಿದ್ದರೆ ಆಗ ಮಾತ್ರ 4 ಜನ ಗಂಡು ಮಕ್ಕಳು ಮತ್ತು ತಾಯಿ ಮಾತ್ರ.

ಹಕ್ಕುದಾರರಾಗಿರುತ್ತಾರೆ ಹೆಣ್ಣು ಮಕ್ಕಳಿಗೆ ಆಗ ಹಕ್ಕು ಇರಲಿಲ್ಲ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕು ಇರಲಿಲ್ಲ ಪಿತ್ರಾಜಿತ ಎಂದರೆ ತಂದೆಗೆ ತಂದೆಯಿಂದ ಅಂದರೆ ತಂದೆಯ ತಂದೆಯಿಂದ ಅಜ್ಜನಿಂದ ಮುತ್ತಜ್ಜರ ಕಾಲದಿಂದ ಬಂದಿದ್ದರೆ ಹೆಣ್ಣು ಮಕ್ಕಳಿಗೆ ಹಕ್ಕಿರಲಿಲ್ಲ.

ಅದಕ್ಕೆ ಗಂಡು ಮಕ್ಕಳು ಆಸ್ತಿಯನ್ನ ವಿಭಾಗ ಮಾಡಿಕೊಂಡು ಅನುಭವಿಸುತ್ತಿರುತ್ತಾರೆ ಅದು ರಿಜಿಸ್ಟರ್ ಪಾರ್ಟಿಶನ್ ಆಗಿರುತ್ತದೆ 2005ರ ಒಳಗೆ ಆಸ್ತಿ ವಿಭಜನೆ ಆಗಿರುತ್ತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god