ಆಸ್ಪತ್ರೆಗೆ ಕರೆದೊಯ್ಯುವಾಗ ಅಪ್ಪು ಕಾರಿನಲ್ಲಿ ಆಗಿದ್ದೆ ಬೇರೆ.. ಅವತ್ತು ಭಜರಂಗಿ 2 ಸಿನಿಮ್ಮ ರಿಲೀಸ್ ಆಗಿದ್ದರಿಂದ ನಮ್ಮ ಟೀಮಿನ ಎಲ್ಲ ಜನರು ಹಾಗೂ ಸ್ನೇಹಿತರು ಎಲ್ಲರೂ ಸಿನಿಮಾವನ್ನು ನೋಡಲು ಹೋಗಿದ್ದರು ಹಾಗಾಗಿ ಮನೆಯಲ್ಲಿ ಯಾರು ಇರಲಿಲ್ಲ ನಾವು ಮಾತ್ರ ಇದ್ದವು ಮನೆಯಿಂದ ಆಚೆ.
ಬಂದು ಹಾಗೆ ಮಾತನಾಡಿಕೊಂಡು ಅವರು ಬಂದ ತಕ್ಷಣ ನಮಗೇನು ಎಂದರೆ ಮೇಡಮ್ ಆಗಲಿ ಬಾಸ್ ಆಗಲಿ ಬಂದರೆ ನಾವು ಆಫೀಸ್ ನಲ್ಲಿ ಕುಳಿತುಕೊಂಡಿರುತ್ತೇವೆ ಹೊರಗಡೆ ಬಂದರು ಯಜಮಾನರು ಎಂದ ತಕ್ಷಣ ನಾವೆಲ್ಲರೂ ಎದ್ದು ಹೋಗುತ್ತೇವೆ ಅವರು ಯಾವ ಕಾರು ತೆಗೆದುಕೊಂಡು.
ಹೋಗುತ್ತಾರೆ ಯಾರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಅವರು ಈಚೆ ಬಂದು ಹೋಗಬೇಕಾದರೆ ಹೇಳುತ್ತಿದ್ದರು ಎಲ್ಲರೂ ಅದಕ್ಕಾಗಿ ತಯಾರಿಸುತ್ತಿದ್ದರು ಡ್ರೈವರ್ ಗಳಾಗಲಿ ನಾವಾಗಲಿ ಅವರು ಬಂದ ತಕ್ಷಣ ಅವರು ಹೇಳಿದ ತಕ್ಷಣ ನಾವು ಅವರ ಜೊತೆ ಹೋಗುತ್ತಿದ್ದವು ಅಣ್ಣ ನೀವು ಇಲ್ಲೇ ಇರಿ ನಾನು.
ಹೋಗಿ ಬರುತ್ತೇನೆ ಎಂದು ಹೇಳಿದರು ನಾನು ಅಂದುಕೊಂಡೆ ಶುಕ್ರವಾರ ಬೆಳಗ್ಗೆ ಮೇಡಂ ಜೊತೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ ಮತ್ತೆ ಸುಮ್ಮನೆ ಹಾಗೆ ತಿರುಗಾಡಲು ಮೇಡಂ ಜೊತೆ ಹೋಗುತ್ತಿದ್ದರು ಆ ಸಮಯದಲ್ಲೆಲ್ಲ ನನ್ನನ್ನು ಕರೆದುಕೊಂಡು ಹೋಗುವುದಿಲ್ಲ ನಾನು ಸಾಮಾನ್ಯವಾಗಿ ಹಾಗೆ.
ಅಂದುಕೊಂಡೆ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ ಶುಕ್ರವಾರ ಬೆಳಗ್ಗೆ ಎಂದು ಹೋಗಿ ಒಂದು ಅರ್ಧ ಗಂಟೆಯ ನಂತರ ಮೇಡಂ ಫೋನ್ ಮಾಡಿದರು ಚಲಪತಿ ನನ್ನ ಕಾರನ್ನು ತಂದು ಬಿಡಿ ನಾವು ವಿಕ್ರಮ್ ಆಸ್ಪತ್ರೆಗೆ ಹೋಗಬೇಕು ಸ್ವಲ್ಪ ಬೇಗ ಬನ್ನಿ ಎಂದರು ಸರಿ ನಾನು ಎಲ್ಲಿದ್ದಾರೆ ಎಂದು ಕೇಳಿಕೊಳ್ಳುವುದಕ್ಕೂ ನಮಗೆ.
ಆಗಲಿಲ್ಲ ಮತ್ತೆ ನಾನು ನಮ್ಮ ಭೀಮಾ ಡ್ರೈವರ್ ಮತ್ತೊಬ್ಬರು ಇದ್ದರು ಭೀಮ ಗಾಡಿ ತೆಗೆದುಕೊಳ್ಳೋ ಮೇಡಂ ಫೋನ್ ಮಾಡಿದರೂ ಆಸ್ಪತ್ರೆಯ ಹತ್ತಿರ ಹೋಗೋಣ ಎಂದು ನಾವೇನು ಅಂದು ಕೊಂಡವಿ ಆಸ್ಪತ್ರೆ ಹತ್ರ ಹೋಗುತ್ತಿದ್ದಾರೆ ಎಂದರೆ ಯಾರಿಗೋ ಏನೋ ಎಮರ್ಜೆನ್ಸಿ ಇರಬೇಕು ಅಥವಾ ಬೇರೆ.
ಯಾರನ್ನು ನೋಡುವುದಕ್ಕೆ ಹೋಗುತ್ತಿದ್ದಾರೆ ಇನ್ನು ಅಲ್ಲಿಗೆ ಹೋದರೆ ಅಲ್ಲಿ ಜಾಸ್ತಿ ಜನ ಇರುತ್ತದೆ,ಬಾಸ್ ಹತ್ತಿರ ನಾವು ಹೋಗಬೇಕು ಅದಕ್ಕೆ ಮೇಡಂ ಕರೆಯುತ್ತಿದ್ದಾರೆ ಎಂದು ನಾವು ಅಂದುಕೊಂಡು ಇನ್ನೊಂದು ಗಾಡಿ ತೆಗೆದುಕೋ ಅಂದೆ, ಆಮೇಲೆ ಬಾಸ್ ಜೊತೆಯಲ್ಲಿ ಹೋಗಿದ್ದ ಡ್ರೈವರ್ ಬಾಬಣ್ಣ ಅವರು.
ಫೋನ್ ಮಾಡಿದರು ಎಲ್ಲಿದ್ದೀರ ಛಲಪತಿ ಎಂದರು ಮನೆಯಿಂದ ಬರುತ್ತಿದ್ದೇನೆ ಗಣಪತಿ ದೇವಸ್ಥಾನದ ಬಳಿ ಎಂದೆ ಗಣೇಶ ದೇವಸ್ಥಾನದ ಹತ್ತಿರವೇ ಸೈಡಿಗೆ ಹಾಕಿಕೊಳ್ಳಿ ನಾವು ಬರುತ್ತೇವೆ ಇಬ್ಬರು ಸೇರಿ ಒಟ್ಟಿಗೆ ಹೋಗೋಣ ಎಂದರು ಅವರು ಹೇಳಿದ ಫೋನ್ ಕಾಲ್ನಲ್ಲಿ ಯಜಮಾನರಿಗೆ ಎಮರ್ಜೆನ್ಸಿ ಎಂದು ಮೇಡಂ ಹೇಳಲಿಲ್ಲ ಮತ್ತು ಬಾಬಣ್ಣ ಕೂಡ ಹೇಳಲಿಲ್ಲ ನಮಗೂ ಕೂಡ.
ಅಂತಹ ಮನಸ್ಸು ಇಲ್ಲ ಏಕೆಂದರೆ ಯಜಮಾನರಿಗೆ ಏನಾದರೂ ಆ ರೀತಿ ಸುಸ್ತು ಎಂದು ಗೊತ್ತಿದ್ದರೆ ತಾನೇ ನಮಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ನಾವು ಅಂದುಕೊಳ್ಳುವುದಕ್ಕೆ ಏನು ಇಲ್ಲ ನಾವು ದಿನ ಯಾವ ರೀತಿ ನೋಡುತ್ತಿದ್ದೆವು ಅದೇ ರೀತಿ ಅವತ್ತಿನ ಬೆಳಗ್ಗೆ ಕೂಡ ಯಜಮಾನರನ್ನು ನೋಡಿರುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.