ಎಲ್ಲಾ ಹೆಣ್ಣು ಮಕ್ಕಳು ನೋಡಲೇಬೇಕಾದ ಸ್ಟೋರಿ… ನಾನು ಅವತ್ತು ಮಾಡಿದ್ದ ಆ ಒಂದು ತಪ್ಪು ನನ್ನ ಜೀವನವನ್ನು ನಿರ್ಧರಿಸ ಬೇಕಿತ್ತಾ ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಅಲ್ಲವಾ ನಾವು ಮಾಡಿದ್ದು ತಪ್ಪು ಎಂದು ಗೊತ್ತಾಗಿ ಅದರ ಬಗ್ಗೆ ಯೋಚಿಸಿಕೊಂಡು ಪಶ್ಚಾತಾಪ ಪಟ್ಟು ಕೂತಿಕೊಳ್ಳಬೇಕಾ ಇಲ್ಲ ಅದನ್ನು ಬದಲಿಸಲು ಏನಾದರೂ ನಿರ್ಧಾರವನ್ನು.
ತೆಗೆದುಕೊಳ್ಳಬೇಕ? ನನ್ನ ಹೆಸರು ರಮ್ಯಾ ಕೃಷ್ಣ ಎಂದು ನಾನು ಸಿಂಗಲ್ ಪೇರೆಂಟ್ ನನಗೆ 9 ವರ್ಷದ ಮಗ ಇದ್ದಾನೆ ಅವನ ಜೊತೆ ನಾನು ಬೆಂಗಳೂರಿನಲ್ಲಿ ವಾಸವಿದ್ದೇನೆ ನಾನು ತುಂಬಾ ಜನಕ್ಕೆ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಇಲ್ಲವೆಂದರೆ ಫಿಟ್ನೆಸ್ ಇನ್ಸ್ಟ್ರಕ್ಚರ್ ಇಲ್ಲವೆಂದರೆ ಒಂದು ಬಿಕ್ನಿ ಅಥ್ಲೆಟಿಕ್ ಆಗಿ ಗೊತ್ತಿರಬಹುದು ಆದರೆ ನಾನು ಹೇಗೆ ಮೇಕಪ್ ಆರ್ಟಿಸ್ಟ್ ಆದೆ.
ಇಲ್ಲ ಫಿಟ್ನೆಸ್ ಅಥ್ಲೆಟಿಕ್ ಆದೆ ಎಂದು ತುಂಬಾ ಜನಗಳಿಗೆ ಗೊತ್ತಿರುವುದಿಲ್ಲ.ನಾನು ಹುಟ್ಟಿದ್ದು ಬೆಳೆದಿದ್ದೆಲ್ಲ ಕೊಡಗು ಜಿಲ್ಲೆಯ ಕೆದಿಕಲ್ ಎಂಬ ಚಿಕ್ಕ ಗ್ರಾಮದಲ್ಲಿ, ನನ್ನ ತಂದೆ ತಾಯಿ ಇಬ್ಬರು ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು ಅದರಿಂದ ನನಗೆ ಚಿಕ್ಕ ವಯಸ್ಸಿನಲ್ಲಿ ಒಳ್ಳೆ ಅನುಭವಗಳು ಇಲ್ಲ ಯೋಚನೆಯಲ್ಲಿಟ್ಟುಕೊಳ್ಳುವಂತಹ ಒಳ್ಳೆಯ ನೆನಪುಗಳು.
ಯಾವುವು ಇಲ್ಲ ಸ್ಕೂಲ್ ನಲ್ಲಿ ಸಿಗುವ ರಜೆ ದಿನಗಳಲ್ಲಿ ಸಂಬಂಧಿಕರ ಮನೆಗೆ ಹೋಗುವುದಾಗಲಿ ಅಥವಾ ಹೊರಗಡೆ ಹೋಗುವುದಾಗಲಿ ಆ ರೀತಿಯಾಗಿ ಎಲ್ಲೂ ಹೋಗಿಲ್ಲ ನಾನು ರಜೆ ಸಿಗುವಾಗಲೆಲ್ಲಾ ನನ್ನ ತಾಯಿ ಜೊತೆ ಕಾಫಿ ತೋಟದಲ್ಲಿ ಹೋಗಿ ಕೆಲಸ ಮಾಡುತ್ತಿದ್ದೆ ನನಗೆ ಓದಬೇಕಾದರೆ ನಾನು ದೊಡ್ಡವಳಾದ ಮೇಲೆ ಇದೇ ಆಗಬೇಕು ಹಾಗೆ ಇರಬೇಕು ಎಂಬ ಯಾವುದೇ.
ಕನಸು ಇರಲಿಲ್ಲ ಆದರೆ ಒಂದು ವಿಷಯ ಮಾತ್ರ ಗೊತ್ತಿತ್ತು ನಾನು ಓದಬೇಕು ಓದಿ ಏನಾದರೂ ಕೆಲಸ ಮಾಡಬೇಕು ಎಂದು ಹೀಗೆ ಇರಬೇಕಾದರೆ ನನಗೆ 17 ವರ್ಷಕ್ಕೆ ಮದುವೆಯಾಗುತ್ತದೆ ಅದು ಲವ್ ಮ್ಯಾರೇಜ್ ನನ್ನ ಮನೆಯಲ್ಲಿ ಗೊತ್ತಾಗುತ್ತದೆ ಈ ರೀತಿಯಾಗಿ ಇಷ್ಟಪಡುತ್ತಿದ್ದೇವೆ ಎಂದು ನಮ್ಮ ಮನೆಯಲ್ಲಿ ಒಪ್ಪಿಕೊಳ್ಳುವುದಿಲ್ಲ ಆಗ ನಾನು ಕೂಡ ಬೇಡ ಎಂದು.
ಮನೆಯವರ ಮಾತು ಕೇಳಿ ಇರುತ್ತೇನೆ ಆ ಸಮಯದಲ್ಲಿ ಈ ಹುಡುಗ ಅವರ ತಂದೆ ತಾಯಿಯನ್ನ ನನ್ನ ಸ್ಕೂಲಿನ ಬಳಿ ಕರೆದುಕೊಂಡು ಬಂದು ಸುಯಿಸೈಡ್ ನೋಟ್ಸ್ ಗಳನ್ನು ತೋರಿಸಿ ನನ್ನ ಮದುವೆ ಮಾಡಿಲ್ಲ ಎಂದರೆ ಸತ್ತು ಹೋಗುತ್ತೇನೆ ನಿನ್ನ ಇಷ್ಟಪಡುತ್ತಿದ್ದೇನೆ ನಿನಗೆ ಏನು ಬೇಕು ಎಲ್ಲಾ ನೋಡಿಕೊಳ್ಳುತ್ತೇನೆ ಓದಿಸುತ್ತೇನೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ.
ಒತ್ತಾಯ ಮಾಡಿ ಮನೆಗೆ ಕರೆದುಕೊಂಡು ಹೋಗುತ್ತಾರೆ ನಮ್ಮ ಮನೆಯವರು ಅವರಿಗೆ ನೆ ಮದುವೆ ಮಾಡಿ ಕೊಟ್ಟರು ನನ್ನ ಮನೆಯಲ್ಲಿ ಸಿಗದೇ ಇರುವಂತಹ ಪ್ರೀತಿ ವಿಶ್ವಾಸ ಒಂದು ಕಡೆಯಿಂದ ಸಿಕ್ಕಿದಾಗ ನಾನು ನನ್ನ ಜೀವನ ಚೆನ್ನಾಗಿ ಹೋಗುತ್ತದೆ ಮುಂದೆ ನಾನು ಅಂದುಕೊಂಡಿರುವ ಹಾಗೆ ಆಗುತ್ತದೆ ಎಂದು ನಂಬಿ ಆ ಮನೆಗೆ ಹೋದರೆ ಅಲ್ಲಿ ನಡೆದಿದ್ದೇ ಬೇರೆ.
ಮೊದಲು ನನ್ನ ಅತ್ತೆಯವರು ನಮ್ಮ ಮನೆಯಿಂದ ವರದಕ್ಷಣೆಯನ್ನು ಕೊಡಲಿಲ್ಲ ಎಂದು ಕಿರುಕಳ ಶುರುಮಾಡಿದರು ಆ ಮನೆಯಲ್ಲಿ ಎಲ್ಲರೂ ನನ್ನ ಒಬ್ಬ ಕೆಲಸದವಳ ಹಾಗೆ ನೋಡುತ್ತಿದ್ದರು ಬೆಳಗ್ಗೆ 3 ಗಂಟೆಗೆ ಎದ್ದರೆ ರಾತ್ರಿ 10 ಗಂಟೆಯ ತನಕ ಅಡುಗೆ ಮನೆ ಮನೆಯ ಕೆಲಸ ಇದೇ ಆಗಿತ್ತು ನನ್ನ ಲೋಕ.
ಹೀಗೆ ಇರಬೇಕಾದರೆ ನನ್ನ ಗಂಡನ ಬಳಿ ಹೋಗಿ ಯಾವಾಗಾದರೂ ನಾನು ಓದಬೇಕು ಏನಾದರೂ ಮಾಡಿ ನನ್ನನ್ನು ಡಿಗ್ರಿ ಗೆ ಸೇರಿಸಿ ಅಥವಾ ಯಾವುದಾದರೂ ಒಂದು ಕೋರ್ಸ್ ಗೆ ಸೇರಿಸಿ ಎಂದು ಕೇಳಿದರೆ ಜಗಳ ಮಾಡುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ