ಇತ್ತೀಚಿಗೆ ಸ್ವಂತ ವಿಮಾನ ಖರೀದಿಸಿದ ಕನ್ನಡದ ಖ್ಯಾತ ನಟಿ.. ಯಾರು ಗೊತ್ತಾ?ಸಾಮಾನ್ಯ ಜನಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಮೋಡಗಳ ಮೇಲೆ ತೇಲುತ್ತಾ ಇರುವಾಗ ಅದರ ಫೀಲಿಂಗ್ ಹಾಗೂ ಅನುಭವ ಪಡೆದುಕೊಳ್ಳಬೇಕು ಅಂತ ಅಂದುಕೊಳ್ಳುತ್ತೇವೆ.ಆದ್ರೆ ನಮ್ಮ ಸ್ವಂತಕ್ಕೆ ಎಂದು ವಿಮಾನವಿದ್ದರೆ ಎಂದೆನಿಸಿ ವಿಮಾನವನ್ನು ಖರೀದಿ ಮಾಡಬೇಕೆಂದುಕೊಂಡರೆ ಅದು ಸುಲಭದ ಮಾತಲ್ಲ ಕಾರಣ ಅದರ ಬೆಲೆ ತುಂಬಾ ದುಬಾರಿಯಾಗಿರುತ್ತದೆ.ಅದಾಗಿಯೂ ನಮಗೆ ಅತ್ಯವಶ್ಯಕ ಎನಿಸಿದ ಕಾರಣ ಈ ಟಾಪ್ ನಟಿ ವಿಮಾನ ಖರೀದಿ ಮಾಡಿದ್ದಾರೆ.ಅಷ್ಟಕ್ಕೂ ಈ ನಟಿ ಯಾರೆಂದರೆ ಉಡುಪಿ ಜಿಲ್ಲೆಯ ಮಂಜುನಾಥ ಹೆಗ್ಡೆ ಹಾಗು ಲತಾ ಹೆಗ್ಡೆ ಅವರ ಮುದ್ದಿನ ಮಗಳು ಪೂಜಾ ಹೆಗ್ಡೆ.
ಪ್ರಾರಂಭದಲ್ಲಿ ಅಷ್ಟಾಗಿ ಸಕ್ಸಸ್ ಕಾಣದೆ ಇದ್ದರೂ ಆನಂತರ ಸಖತ್ ಶೈನಾಗಿ ನಟನಾ ಕಲೆಯನ್ನು ಕಲಿತು ಇಂದು ಬಾರಿ ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ.ಈ ಕಡೆ ತೆಲುಗಿನಲ್ಲಿ ಟಾಪ್ ನಟಿ ಆ ಕಡೆ ಬಾಲಿವುಡ್ ನಲ್ಲಿ ಬೇಡಿಕೆ ನಟಿ ಬೆಳಗ್ಗೆ ಹೈದರಾಬಾದ್ ನಲ್ಲಿ ಶೂಟಿಂಗ್ ಇದ್ದರೆ ಮಧ್ಯಾಹ್ನ ಜೈಪುರ್ ನಲ್ಲಿ ಶೂಟಿಂಗ್ ಹೀಗೆ ಸಕ್ಸಸ್ ಆದಿಯಲ್ಲಿ ಇರುವ ನಟಿ ಪೂಜಾ ಹೆಗ್ಡೆಗೆ ವಿಮಾನವಿಡಿದು ಸರಿಯಾದ ಸಮಯದಲ್ಲಿ ಶೂಟಿಂಗ್ ಹೋಗಲು ತುಂಬಾ ಕಷ್ಟ ಆಗಿರುವುದರಿಂದ ಸ್ವಂತ ಜಟ್ ಫ್ಲೈಟ್ ಖರೀದಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಇನ್ನು ಸ್ವಂತ ವಿಮಾನವನ್ನು ಎಲ್ಲಿ ನಿಲ್ಲಿಸುತ್ತಾರೆ ಎಂಬ ಡೌಟ್ ಬರುವುದು ಸಹಜ ಸಾಮಾನ್ಯವಾಗಿ ಹತ್ತಿರದ ವಿಮಾನ ನಿಲ್ದಾಣದಲ್ಲಿ ಪ್ರೈವೇಟ್ ಜಟ್ ಗಳನ್ನ ನಿಲ್ಲಿಸಲಾಗುತ್ತದೆ ಅಲ್ಲಿರುವ ಕಂಪನಿಗಳು ಜಟ್ ನಿರ್ವಹಣೆಯನ್ನು ನಿರ್ವಹಿಸುತ್ತದೆ. ಅವರು ಎಲ್ಲಿಯಾದರೂ ಪ್ರಯಾಣ ಮಾಡಬೇಕಾದರೆ ಅಲ್ಲಿರುವ ಸಿಬ್ಬಂದಿಗೆ ವಿಷಯವನ್ನು ತಿಳಿಸಿದರೆ ಅವರು ಎಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಾರೆ.ಉಡುಪಿಯ ಹುಡುಗಿ ವಿಮಾನವನ್ನು ಖರೀದಿಸುವ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದು ಖುಷಿಯ ವಿಷಯ ಎಷ್ಟೇ ಪ್ರಸಿದ್ಧಿ ಗಳಿಸಿದರು. ಯಾವುದೇ ಕಿರಿಕ್ ಮಾಡಿಕೊಳ್ಳದೆ ಸಾಗುತ್ತಿರುವ ನಟಿ ಪೂಜಾ ಹೆಗ್ಡೆ ಯವರ ಗುಣವನ್ನು ಮೆಚ್ಚಲೇಬೇಕು.