ಸಿತಾಫಲ ಎಲ್ಲರಿಗೂ ಚಿರಪರಿಚಿತ ಹಣ್ಣು ಇದು ತಿನ್ನುವುದಕ್ಕೆ ಮಾತ್ರ ರುಚಿಯಾಗಿ ಅಷ್ಟೇ ಅಲ್ಲ ನಾನಾ ಕಾಯಿಲೆಗಳಿಗೆ ಇದು ಒಂದು ರಾಮಬಾಣ ಎನ್ನುವುದು ತುಂಬಾ ಜನರಿಗೆ ಗೊತ್ತಿಲ್ಲ. ಯಾಕೆ ಅಂದರೆ ಸಿತಾಫಲದಲ್ಲಿ ವಿಟಮಿನ್ ಸಿ,ಕೆರೋಟಿನ್ ,ಥೈಮೀನ್ ,ನಿಯೋಸಿನ್ ಈ ರೀತಿ ಎಷ್ಟೋ ಮುಖ್ಯವಾದ ವಿಟಮಿನ್ ಇರುತ್ತದೆ. ಹಾಗೆನೆ ಸಿತಾಪಲದಲ್ಲಿ ಪೈಬರ್ ಕೂಡ ತುಂಬಾ ಹೆಚ್ಚಾಗಿ ‌ಇರುತ್ತದೆ.ಅದು ಸಹ ಈ ಹಣ್ಣು ಚಳಿಗಾಲದಲ್ಲಿ ಕೇವಲ ಮೂರು ತಿಂಗಳು ಮಾತ್ರ ಸಿಗುತ್ತದೆ.ಈ ಹಣ್ಣಿನಲ್ಲಿ ಹಣ್ಣಿಗಿಂತ ಬೀಜಗಳು ತುಂಬಾ ಭಾರವಾಗಿ ಇರುತ್ತದೆ.ಇದು ಬರಿ ಬೀಜಾನೆ ಅಲ್ವ ತೆಗೆದು ಹಾಕಬೇಡಿ ಈ ಬೀಜಗಳು ಕೂಡ ದೊಡ್ಡ ಔಷಧೀಯ ರೀತಿಯಾಗಿ ಕೆಲಸ ಮಾಡುತ್ತದೆ‌.ಅಷ್ಟೇ ಯಾಕೆ ಬರಿ ಬೀಜಗಳು ಮಾತ್ರವಲ್ಲ ಈ ಗಿಡದ ಎಲೆಗಳು ಬೇರು ಕೊಂಬುಗಳು ಎಷ್ಟೋ ವಿಧವಾದಂತ ವ್ಯಾದಿಗಳನ್ನು ನಿವಾರಣೆ ಮಾಡುತ್ತದೆ.ಮುಖ್ಯವಾಗಿ ಹೇಳಬೇಕು ಅಂದರೆ ಈ ಸಿತಫಲ ನಮ್ಮ ಶರೀರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.ಯಾಕೆಂದರೆ ಈ ಹಣ್ಣಿನಲ್ಲಿ ತಣ್ಣಗೆ ಮಾಡುವಂತ ಗುಣಗಳು ಹೊಂದಿರುತ್ತವೆ.ಹಾಗಾಗಿ ನಮ್ಮ‌ ಶರೀರಕ್ಕೆ ಬೇಕಾಗುವಂತಹ ಪ್ರೋಟೀನ್ ಅನ್ನು ಒದಗಿಸುತ್ತದೆ.

ಇದರಲ್ಲಿರುವ ಮ್ಯಾಗ್ನೀಶೀಯಮ್ ನಮ್ಮ ಶರೀರದಲ್ಲಿ ಇರುವಂತಹ ಕಂಡಗಳಿಗೆ ವಿಶ್ರಾಂತಿಯನ್ನು ಕೊಡುತ್ತದೆ.ಹಾಗೆನೆ ನಮ್ಮ‌ಹೃದಯವನ್ನು ಸಹ ಆರೋಗ್ಯವಾಗಿ ಕಾಪಾಡುತ್ತದೆ.ಹಾಗೆನೆ ಮೂಳೆಗಳನ್ನ ದೃಢವಾಗಿ ಮಾಡುವಂತಹ ಕ್ಯಾಲ್ಷಿಯಂ ಈ ಹಣ್ಣಿನಲ್ಲಿ ಹೆಚ್ಚಾಗಿ ಇರುತ್ತದೆ.ಹಾಗೆನೆ ಪೈಬರ್ ಸಹ ಜಾಸ್ತಿಯಾಗಿ ಇರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರಿಗೆ ಇದು ಒಳ್ಳೆಯ ಔಷಧಿ ಹಾಗೆ ಖಂಡಗಳು ನರಗಳ‌ ಬಲಹೀನತೆ ಇರುವವರು ಕೂಡ ಈ ಹಣ್ಣನ್ನು ನೀವು ಬೆಳಿಗ್ಗೆ ತಿಂಡಿಯ ಜೊತೆಗೆ ತೆಗೆದುಕೊಂಡರೆ ತುಂಬಾನೆ ಒಳ್ಳೆಯದು ಮಹಿಳೆಯರಿಗೆ ಅದರೆ ಈ ಸಿತಾಫಲ ದೇವರು ಕೊಟ್ಟ ವರ ಅಂತಾನೆ ಹೇಳಬಹುದು ಏಕೆಂದರೆ ಪಿಸಿಒಡಿ ಇರುವಂತಹ ಮಹಿಳೆಯರಿಗೆ ಐರನ್ ತುಂಬಾ ಅವಶ್ಯಕ ಹಾಗೆ ಸಿತಾಫಲದಲ್ಲಿ ಐರನ್ ಕೂಡ ಜಾಸ್ತಿಯಾಗಿ ಇರುತ್ತದೆ. ಅದಕ್ಕಾಗಿ ಸೀಜನ್ ಬಂದ ಕೂಡಲೇ ಈ ಹಣ್ಣನ್ನು ಹೆಚ್ಚಾಗಿ ತಿನ್ನುವುದಕ್ಕೆ ಪ್ರಯತ್ನ ಮಾಡಿ.

WhatsApp Group Join Now
Telegram Group Join Now

ಇದರಿಂದ ನೀವು ಅನೀಮಿಯಾ ಸಮಸ್ಯೆಯನ್ನು ಸಹ ನಿವಾರಣೆ ಮಾಡಬಹುದು ಹಾಗೆನೆ ಸಂತಾನ ಇಲ್ಲದವರು ಸಹ ಈ ಹಣ್ಣನ್ನು ತಿನ್ನುವುದರಿಂದ ತುಂಬಾನೆ ಒಳ್ಳೆಯದು ಏಕೆಂದರೆ ಇದು ನಿಮ್ಮ‌ಹಾರ್ಮೋನ್ ಅನ್ನು ಬೆಲೆನ್ಸ್ ಮಾಡಿ ಹಿನ್ಪ್ಲೀನಿಟಿ ಸಮಸ್ಯೆಯನ್ನು ದೂರ ಮಾಡುತ್ತದೆ.ನೀವು ಒಂದು ವೇಳೆ ಡಿಪ್ರೆಶನ್ ಅಲ್ಲಿ ಇದ್ದರೆ ತುಂಬಾ ಸುಸ್ತು ಹಾಗುತ್ತ ಇದ್ದರೂ ಈ ಹಣ್ಣು ತಿಂದರೆ‌ ತಕ್ಷಣ ನಿಮ್ಮ ಮೂಡ್ ಬದಲಾಗುತ್ತದೆ.ಎಷ್ಟೋ ವಿಧವಾದ ಸಂಶೋಧನೆಯಲ್ಲಿ ರುಜುವಾಗಿದೆ ಕೇವಲ ಇದರ ಹಣ್ಣು ಮಾತ್ರವಲ್ಲ ಇದರ ಎಲೆಗಳು ಸಹ ಯಾವ ರೀತಿ ಉಪಯೋಗಕ್ಕೆ ಬರುತ್ತೆ ಅಂತ ಆರೋಗ್ಯಕ್ಕೆ ನೊಡೋಣ ಮುಖ್ಯವಾಗಿ ಈ ಎಲೆಯಲ್ಲಿ ಹೈಡ್ರೋಟಿಕ್ ಹ್ಯಾಸಿಡ್ ಅನ್ನೋದು ಜಾಸ್ತಿ ಇದೆ.

ಇದು ಚರ್ಮ ಸಂಬಂಧಿಸಿದ ಸಮಸ್ಯೆಗಳನ್ನು ತುಂಬಾ ಬೇಗನೆ ನಿವಾರಣೆ ಮಾಡುತ್ತದೆ.ನೀವು ಒಂದು ವೇಳೆ ಚರ್ಮ ಸಮಸ್ಯೆಗಳು ಅಂದರೆ ಕಜ್ಜಿ ತಮರ ತುರಿಕೆ ಈ ರೀತಿ ಆದಂತಹ ಸಮಸ್ಯೆಗಳಿಂದ ಬಾದೆ ಪಡುತ್ತಿದ್ದರೆ ಈ ಗಿಡದ ಎಲೆಗಳನ್ನು ಪೇಸ್ಟ್ ರೀತಿಯಾಗಿ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ಹರಿಶಿನವನ್ನು ಬೆರೆಸಿ ನಿಮಗೆ ವಾಸಿಯಾಗದ ಗಾಯಗಳಿಗೆ ಹಚ್ಚಿ.ಹಾಗೆನೆ ಇತ್ತೀಚಿನ ದಿನಗಳಲ್ಲಿ ತುಂಬಾ ತೊಂದರೆ ಕೊಡುವಂತಹ ಸಮಸ್ಯೆ ಬಂದು ಬೇಡವಾದ ಕೂದಲಿನ ತೊಂದರೆ ಅಂದರೆ ಮುಖದ ಮೇಲೆ ತುಟಿಯ ಮೇಲ್ಭಾಗದಲ್ಲಿ ಕೈಗಳ ಮೇಲೆ ಕಾಲುಗಳ ಮೇಲೆ ಕೂದಲು ಹೆಚ್ಚಾಗಿ ಬೆಳೆಯುವುದು.ಈ ರೀತಿಯಾದಂತಹ ಬೇಡದೆ ಇರುವ ಕೂದಲನ್ನು ತೆಗೆದು ಹಾಕಲು ಸಿತಾಫಲದ ಎಲೆಗಳು ಶಾಶ್ವತ ಪರಿಹಾರ ನೀಡುತ್ತದೆ.ಇದಕ್ಕಾಗಿ ನೀವು ಏನು ಮಾಡಬೇಕು ಅಂದರೆ ಸಿತಾಫಲದ ಎಲೆಗಳನ್ನು ನುಣ್ಣಗೆ ರುಬ್ಬಿಕೊಂಡು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ ಈ ಪೇಸ್ಟ್ ಅನ್ನು ನಿಮಗೆ ಬೇಡವಾದ ಕೂದಲು ಎಲ್ಲಿ ಹೆಚ್ಚಾಗಿ ಇದಿಯೊ ಆ ಜಾಗದಲ್ಲಿ ಹಾಕಬೇಕು ಅನಂತರ ಒಂದು ಮೂವತ್ತು ನಿಮಿಷಗಳ ಕಾಲ ಬಿಟ್ಟು ಅನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಂಡರೆ ಸಾಕು ಈ ರೀತಿಯಾಗಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡುತ್ತ ಬನ್ನಿ.ನಿಮ್ಮ ಬೇಡವಾದ ಕೂದಲು ಬೆಳವಣಿಗೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತದೆ.ಹಾಗೆನೆ ಸಿತಾಫಲದ ಎಲೆಗಳು ನಿಮ್ಮ ಡಯಾಬಿಟಿಸ್ ಅನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯಕಾರಿ ಹಾಗೆ ಶರೀರದಲ್ಲಿ ಹೆಚ್ಚಾಗಿರುವಂತಹ ತೂಕವು ಸಹ ಕಡಿಮೆ ಮಾಡುತ್ತದೆ.ಇದಕ್ಕಾಗಿ ನೀವು ಈ ಸಿತಾಫಲದ ಎಲೆಗಳನ್ನು ಕಷಾಯದ ರೀತಿಯಾಗಿ ತಯಾರಿಸಿಕೊಂಡು ಕುಡಿದರೆ ಸಾಕು.

ಹಾಗೆ ಇದರ ಕೊಂಬೆಯ ಗಿಡಗಳನ್ನು ಕತ್ತರಿಸಿ ಅದನ್ನು ಕಷಾಯದ ರೀತಿಯಾಗಿ ಕುದಿಸಿ ಕುಡಿಯುವುದರಿಂದ ಡಯೇರಿಯಾ ಸಮಸ್ಯೆ ಸಹ ನಿವಾರಣೆ ಆಗುತ್ತದೆ.ಇದರ ಎಲೆಯ ಕಷಾಯವನ್ನು ಕುಡಿಯುತ್ತ ಬಂದರೆ ಈ ಕಾಲದಲ್ಲಿ ಬರುವಂತಹ ಜ್ವರವು ಕೂಡ ಕಡಿಮೆ‌ ಆಗುತ್ತದೆ ಹಾಗೆ ಇದರ ಎಲೆಗಳನ್ನು ಜಜ್ಜಿ ಬೋರಿಂಗ್ ಪೌಡರ್ ಅನ್ನು ಬೆರೆಸಿ ಕುರ್ಚಿ ಮತ್ತು ಮಂಚಗಳ ಅಡಿಯಲ್ಲಿ ಇಟ್ಟರೆ ಮನೆಯಲ್ಲಿ ಸೊಳ್ಳೆಗಳು ಮತ್ತು ಜಿರಳೆಗಳು ಕಾಟ ಇರುವುದಿಲ್ಲ ಹಾಗೆ ಸಿತಾಫಲದ ಹಣ್ಣಿನ ಬೀಜಗಳನ್ನು ಒಣಗಿಸಿಕೊಂಡು ಅದರ ಪುಡಿಯನ್ನು ನಿಮ್ಮ‌ತಲೆಗೆ ಹಚ್ಚುತ್ತ ಬಂದರೆ ಹೇನುಗಳ ಸಮಸ್ಯೆ ಕೂಡ ನಿವಾರಣೆ ಮಾಡುತ್ತದೆ. ಆದರೆ ಇದನ್ನು ಕಣ್ಣಿನಲ್ಲಿ ಬೀಳದ ರೀತಿಯಾಗಿ ನೋಡಿಕೊಳ್ಳಬೇಕು.