ಈ ಮಂತ್ರವನ್ನು ಬೆಳಗ್ಗೆ 3 ಬಾರಿ ಸಂಜೆ 3 ಬಾರಿ ಹೇಳಿಕೊಳ್ಳಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುತ್ತೆ…ಮನೆಯಲ್ಲಿ ಎಲ್ಲರೂ ಸುಖವಾಗಿ ನೆಮ್ಮದಿಯಾಗಿ ಇರಬೇಕು ಎಂದರೆ ನಾವು ಈ ಪ್ರಾರ್ಥನೆಯನ್ನ ಮಾಡಿದರೆ ಸಾಕು ಮನೆಯಲ್ಲಿ ನಿಮಗೆ ಹಣಕಾಸಿನ ತೊಂದರೆ ದೂರ ಆಗುತ್ತೆ ನೀವು ನೆಮ್ಮದಿಯಾಗಿ ಇರಬಹುದು ನೀವು ಏನೇ ಕೆಲಸ ಮಾಡಲು ಹೋದರು.

WhatsApp Group Join Now
Telegram Group Join Now

ಅಡೆತಡೆಗಳು ಆಗುತ್ತಿದೆ ಎಂದರೆ, ಅದೆಲ್ಲವೂ ದೂರವಾಗಿ ನೆಮ್ಮದಿಯಾಗಿ ಇರುತ್ತೀರ ನಾವು ಈ ಒಂದು ಪ್ರಾರ್ಥನೆಯನ್ನು ಮಾಡುವುದರಿಂದ ಎಲ್ಲಾ ವನ್ನು ಪಡೆದುಕೊಳ್ಳಬಹುದು ಅದಕ್ಕೆ ಅತ್ಯಂತ ಪ್ರಮುಖವಾದುದು ಎಂದರೆ ಪ್ರಾರ್ಥನೆ ಆದರೆ ನಮಗೆ ಏನು ಪ್ರಾರ್ಥನೆ ಮಾಡಿಕೊಳ್ಳಬೇಕು ಹೇಗೆ ಮಾಡಬೇಕೆಂದು ಗೊತ್ತಿಲ್ಲದೆ ಇರುವ ಕಾರಣ ನಾವು ನಮಸ್ಕಾರ ಮಾಡುವುದು.

ಅಂದರೆ ದೇವಸ್ಥಾನಕ್ಕೆ ಹೋದಾಗ ನಮಸ್ಕಾರ ಮಾಡಿ ಸಂಕಲ್ಪ ಮಾಡಿಸುತ್ತೀರಿ ಹೀಗೆ ಒಂದು ಪ್ರಾರ್ಥನೆ ಮಾಡಿಕೊಳ್ಳುವುದರಿಂದ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಭಗವಂತ ನನ್ನ ಪರಿಶುದ್ಧವಾಗಿ ಪ್ರೇಮಪೂರ್ವಕವಾಗಿ ಕಣ್ತುಂಬಿ ಪ್ರಾರ್ಥನೆ ಮಾಡುವುದರಿಂದ ಖಂಡಿತ ವಾಗಿ ನಮ್ಮ ಕೋರಿಕೆಗಳು ಬೇಗನೆ ಈಡೇರುತ್ತದೆ ಎಂದು ಹೇಳಬಹುದು ನಾವು ಏನು ಪ್ರಾರ್ಥನೆ.

ಮಾಡಿಕೊಳ್ಳಬೇಕು ಬೆಳಗ್ಗೆ ಪೂಜೆ ಮಾಡಬೇಕಾದರೆ ಮೂರು ಬಾರಿ ಈ ಮಂತ್ರವನ್ನು ಹೇಳಿಕೊಳ್ಳಬೇಕು ಸಾಯಂಕಾಲ ಪೂಜೆ ಮಾಡುವ ಸಂದರ್ಭದಲ್ಲಿ ದೇವರ ಮುಂದೆ ಕೂತು ಈ ಮಂತ್ರವನ್ನು ಮೂರು ಬಾರಿ ಹೇಳಬೇಕು ಇಲ್ಲ ನಿಮಗೆ ಮಧ್ಯಾಹ್ನ ವಾಗುತ್ತೆ ಎಂದರೆ ಮಧ್ಯಾಹ್ನ ಕೂಡ ಈ ಮಂತ್ರವನ್ನು ಹೇಳಿಕೊಳ್ಳುವುದರಿಂದ ತುಂಬಾನೇ ಬೇಗ ಒಳ್ಳೆಯದಾಗುತ್ತದೆ.

ಹಾಗಾದರೆ ಈ ಮಂತ್ರ ಹೇಗಿದೆ ಎಂದು ನೋಡೋಣ ಸುವರ್ಣ ವೃಷ್ಟಿಮ್ ಕುರು ಮೇ ಗೃಹೇ ಶ್ರೀಮ್ | ಸುಧಾನ್ಯವೃದ್ಧಿಂ ಕುರು ಮೇ ಗೃಹೇ ಶ್ರೀಮ್ | ಕಲ್ಯಾಣವೃದ್ಧಿಂ ಕುರು ಮೇ ಗೃಹೇ ಶ್ರೀಮ್ |ವಿಭೂತಿವೃದ್ಧಿಂ ಕುರು ಮೇ ಗೃಹೇ ಶ್ರೀಮ್ || ಪ್ರಮುಖವಾಗಿ ಈ ನಾಲ್ಕನ್ನು ಹೇಳಿಕೊಳ್ಳಬೇಕು ಏಕೆಂದರೆ ನಮ್ಮ ಬಯಕೆಗಳು ಕೋರಿಕೆಗಳು ಬಹಳಷ್ಟು ಇದೆ ಇದನ್ನು ಹೇಗೆ.

ತಿಳಿದುಕೊಳ್ಳಬೇಕೆಂದರೆ ಸುವರ್ಣವೃಷ್ಟಿಮ್ ಕುರು ಮೇ ಗೃಹೇ ಶ್ರೀಮ್ ಎಂದರೆ ಅಮ್ಮ ನನ್ನ ಮನೆಯಲ್ಲಿ ಯಾವಾಗಲೂ ಸುವರ್ಣವೃಷ್ಟಿಮ್ ಯನ್ನ ಅಂದರೆ ಹಣಕಾಸಿಗೆ ಯಾವುದೇ ತೊಂದರೆ ಇಲ್ಲದ ಹಾಗೆ ಮಾಡು. ಸುಧಾನ್ಯ ವೃದ್ಧಿಂ ಕುರು ಮೇ ಗೃಹೇ ಶ್ರೀಮ್ ಎಂದರೆ ನನ್ನ ಮನೆಯಲ್ಲಿ ಧಾನ್ಯ ತುಂಬಿ ಇರುವ ಹಾಗೆ ಅಂದರೆ ಹೊಟ್ಟೆ ಬಟ್ಟೆಗೆ ಯಾವುದೇ ತೊಂದರೆ ಆಗದ ಹಾಗೆ.

ಮಾಡು ಅಮ್ಮ ಎಂದರ್ಥ.ಕಲ್ಯಾಣವೃದ್ಧಿಂ ಕುರು ಮೇ ಗೃಹೇ ಶ್ರೀಮ್ ಎಂದರೆ ಕಲ್ಯಾಣವೆಂದರೆ ಮದುವೆ ಎಲ್ಲಾ ನಮ್ಮ ಸಮಸ್ಯೆಗಳು ಪಟ್ಟಿ ಇರುತ್ತದೆ ಹಾಗೆ ಮಗನಿಗೆ ಕೆಲಸ ಸಿಗುತ್ತಿಲ್ಲ ಮಗಳಿಗೆ ಮದುವೆಯಾಗುತ್ತಿಲ್ಲ ಯಜಮಾನರಿಗೆ ಹುಷಾರಿಲ್ಲ ವ್ಯವಹಾರ ಚೆನ್ನಾಗಿ ಆಗುತ್ತಿಲ್ಲ ಅಥವಾ ನಾವು ಕೊಟ್ಟಿರುವ ಸಾಲ ಹಿಂತಿರುಗಿ ಬರುತ್ತಿಲ್ಲ ನಾವು ಕೊಡುವವರು ಬಂದು ನಮ್ಮ.

ಪ್ರಾಣ ಹಿಂದುತ್ತಿದ್ದಾರೆ ಅಥವಾ ಮನೆ ಕಟ್ಟುವುದಾಗಲಿ ಸೈಟು ತೆಗೆದುಕೊಳ್ಳುವುದಕ್ಕಾಗಲಿ ಈ ರೀತಿಯ ನೂರೆಂಟು ಸಮಸ್ಯೆಗಳ ನಮ್ಮ ಪಟ್ಟಿಯೇ ಇರುತ್ತದೆ ಇದನ್ನೆಲ್ಲ ಸೇರಿಸಿ ನಮ್ಮ ಋಷಿಮುನಿಗಳು ಒಂದೇ ಪದ ಬಳಸಿದ್ದಾರೆ ಅದುವೇ ಕಲ್ಯಾಣ ವೃದ್ಧಿಂ ಕುರು ಮೇ ಗೃಹೇ ಶ್ರೀಮ್ ಅಮ್ಮ ನನ್ನ ಮನೆಯಲ್ಲಿ ಕಲ್ಯಾಣವನ್ನು ಉಂಟುಮಾಡು ಗೃಹೇ ಶ್ರೀಮ್ ಶ್ರೀಮ್ ಎಂದರೆ.

ಲಕ್ಷ್ಮಿಯ ಬೀಜಾಕ್ಷರ ಕಲ್ಯಾಣವೆಂದರೆ ಎಲ್ಲವನ್ನು ಸೇರಿಸಿ ಮಾಡಿಸುವುದು.ವಿಭೂತಿ ವೃದ್ಧಿಂ ಕುರು ಮೇ ಗೃಹೇ ಶ್ರೀಮ್ ಎಂದರೆ ಆಯಸ್ಸು ಆರೋಗ್ಯ ಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಮನಸ್ಸಿಗೆ ನೆಮ್ಮದಿ ಶಾಂತಿ ಬೇಕು ಅದಕ್ಕೋಸ್ಕರ ವಿಭೂತಿ ವೃದ್ಧಿಂ ಕುರು ಮೇ ಗೃಹೇ ಶ್ರೀಮ್ ಅನೇಕ ತೊಂದರೆಗಳು ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ