ಈ ನಾಲ್ಕು ಬಗೆಯ ಎಲೆ ಬಳಸಿ ನೋಡಿ ಮಂಡಿ ನೋವು ಬೆನ್ನು ನೋವು ಕುತ್ತಿಗೆ ನೋವು ನರಗಳ ಸೆಳೆತ ಮಾಂಸಖಂಡದ ಮೇಲೆ ನೋವು, ಕಾಲು ನೋವು ಗುಣಮುಖವಾಗುತ್ತದೆ,
ಈ ನಾಲ್ಕು ಬಗೆಯ ಎಲೆಗಳಿಂದ ಎಲ್ಲ ತೊಂದರೆಗಳಿಗೆ ಪರಿಹಾರವಿದೆ.ಸಾಮಾನ್ಯವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅದು ತಾತ್ಕಾಲಿಕವಾಗಿ ಕಡಿಮೆ ಆಗಿರುತ್ತೆ ಆದರೆ ಪೂರ್ತಿಯಾಗಿ ಗುಣವಾಗಿರುವುದಿಲ್ಲ ದೇಹದಲ್ಲಿ ಯಾವುದೇ ರೀತಿಯ ನೋವುಗಳಾಗಿದ್ದರು ಅಂದರೆ ಬೆನ್ನು ನೋವು ಮಾಂಸ ಖಂಡಗಳಲ್ಲಿ ನೋವು, ಕಾಲು ನೋವು ಹೀಗೆ ಮುಂತಾದವುಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ನಾಲ್ಕು ಬಗೆಯ ಎಲೆಗಳನ್ನು ಉಪಯೋಗಿಸಿ ಅದರಿಂದ ಮುಕ್ತಿ ಹೊಂದಲು ಹೇಗೆ ಎಂದು ತಿಳಿಯೋಣ, ಈ ಎಲೆಗಳ ಮುಖಾಂತರ ಈ ರೀತಿ ಮಾಡುವುದರಿಂದ ಪ್ಯಾರಲಿಸಿಸ್ ಮತ್ತು ನರಗಳಲ್ಲಿ ನೋವು ಮುಂತಾದವುಗಳನ್ನು ಈ ನಾಲ್ಕು ಬಗೆಯ ಎಲೆಗಳಿಂದ ಪರಿಹರಿಸಿಕೊಳ್ಳಬಹುದು.ಈ ಎಲೆಗಳು ಸಾಮಾನ್ಯವಾಗಿ ತಿರುಗಾಡುವ ರಸ್ತೆಯ ಬದಿಯಲ್ಲಿ ಇರುತ್ತದೆ ಹಾಗೂ ಸ್ವಲ್ಪ ಮನೆ ಮದ್ದನ್ನು ಸೇರಿಸಿ ಇದನ್ನು ತಯಾರಿಸಬೇಕು. ಮೊದಲಿಗೆ ಲಕ್ಕಿ ಸೊಪ್ಪು ಎಂದು ಕರೆಯುವ ಒಂದು ಎಲೆ ಅದನ್ನು ಆಡುಭಾಷೆಯಲ್ಲಿ ಲಿಂಗಡೇ ಎಲೆ ಎಂದು ಕರೆಯುತ್ತಾರೆ.
ಹರಳಲೆ ಮುಖ್ಯ ಪಾತ್ರವನ್ನು ಹೊಂದಿರುತ್ತದೆ ನಂತರ ಎಕ್ಕದ ಎಲೆ , ಕೊನೆಯದಾಗಿ ಹುಣಸೆ ಸೊಪ್ಪು ಅಂದರೆ ಹುಣಸೆಕಾಯಿ ಮರದಲ್ಲಿ ಬಿಡುವ ಆ ಸೊಪ್ಪು . ಈ ನಾಲ್ಕು ಎಲೆಗಳಿಂದ ಅನೇಕ ರೀತಿಯ ದೇಹದ ನೋವುಗಳು ಮಾಯವಾಗುತ್ತದೆ ಮೊದಲಿಗೆ ಈ ನಾಲ್ಕು ಸೊಪ್ಪುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಅನಂತರ ಸ್ವಲ್ಪವೂ ನೀರು ಇಲ್ಲದ ಹಾಗೆ ಒಣಗಿಸಿಕೊಳ್ಳಬೇಕು, ಒಂದು ಪಾತ್ರೆಯಲ್ಲಿ ಎಳ್ಳೆಣ್ಣೆಯನ್ನು ಜಾಸ್ತಿ ಪ್ರಮಾಣದಲ್ಲಿ ಹಾಕಿ ಆ ನಾಲ್ಕು ರೀತಿಯ ಎಲೆಗಳನ್ನು ಹದವಾಗಿ ಕತ್ತರಿಸಿ ಆ ಪಾತ್ರೆಯೊಳಗೆ ಹಾಕಬೇಕು ಹಾಗೂ ಅನಂತರ ಮೆಂತೆಕಾಳನ್ನು ಸಹ ಹಾಕಬೇಕು ಅದು ದೇಹದಲ್ಲಿರುವ ಮಾಂಸ ಖಂಡಗಳನ್ನು ಬಲವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.ಅದಾದ ನಂತರ ಅರ್ಧ ಚಮಚದಷ್ಟು ಕಲ್ಲುಪ್ಪನ್ನು ಹಾಕಬೇಕು ನಂತರ ಕತ್ತರಿಸಿಕೊಂಡಿದ್ದ ಎಲೆಗಳನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಕೊನೆಯದಾಗಿ ಒಂದು ಸಣ್ಣ ಪ್ರಮಾಣದ ನಿಂಬೆ ಹಣ್ಣನ್ನು ನಾಲ್ಕು ಭಾಗಗಳಾಗಿ ಸೇರಿಸಬೇಕು.
ಎಲೆಗಳು ಬೆಯ್ಯುವ ತನಕ ನೋಡಿಕೊಳ್ಳಬೇಕು ಸರಿಸುಮಾರು 20 ನಿಮಿಷಗಳ ಕಾಲ ಆದ ನಂತರ ಅದನ್ನು ತೆಗೆದು ಒಂದು ತೆಳುವಾದ ಅಂದರೆ ಕಾಟನ್ ಬಟ್ಟೆಯಲ್ಲಿ ನೀವು ಬೇಯಿಸಿದ ಆ ಎಲೆಗಳ ಮಿಶ್ರಣವನ್ನು ಹಾಕಿ ಗಂಟನ್ನು ಕಟ್ಟುವ ರೀತಿ ಕಟ್ಟಬೇಕು ನಂತರ ಒಂದು ದಾರವನ್ನು ಕಟ್ಟಬೇಕು.ಅದನ್ನು ನೀವು ಅಂದರೆ ನೀವು ಸಾಮಾನ್ಯವಾಗಿ ರೋಡ್ ಸೈಡ್ ನಲ್ಲಿ ಜಿಲೇಬಿ ಹಾಕುವುದನ್ನು ನೋಡಿರುತ್ತೀರಿ ಅದೇ ರೀತಿ ಇದನ್ನು ಕಟ್ಟಿಕೊಂಡು ಅನಂತರ ನಿಮಗೆ ಎಲ್ಲಿ ಅಂದರೆ ಯಾವ ಜಾಗದಲ್ಲಿ ನೋವು ಕಂಡುಬರುತ್ತಿದೆಯೋ ಆ ಜಾಗದಲ್ಲಿ ಮಸಾಜ್ ಮಾಡುವ ರೀತಿಯಲ್ಲಿ ಮಾಡುತ್ತಾ ಬಂದರೆ ಆ ಸ್ನಾಯುಗಳಲ್ಲಿ, ನರಗಳಲ್ಲಿ ಆ ಮಾಂಸ ಖಂಡಗಳಲ್ಲಿ ಅಡಗಿರುವ ನೋವುಗಳು ಸಲೀಸಾಗಿ ದೂರವಾಗುತ್ತದೆ ಮತ್ತು ಆ ನೋವುಗಳಿಂದ ನೀವು ಶಾಶ್ವತವಾಗಿ ಪರಿಹಾರವನ್ನು ಹೊಂದುತ್ತೀರಾ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.