ಊಟ ಮಾಡಿದ ಮೇಲೆ ಈ 6 ಕೆಲಸವನ್ನು ಮಾಡಲೇಬಾರದು ಗ್ಯಾಸ್ ಅಸಿಡಿಟಿ ಹಾಗೂ ಎದೆ ಉರಿಯುವುದು ಹೀಗೆ ಅನೇಕ ತೊಂದರೆಗಳು ಬರುತ್ತದೆ…ಸಾಮಾನ್ಯವಾಗಿ ಊಟ ಮಾಡಿದ ತಕ್ಷಣ ಅನೇಕರು ಚೆನ್ನಾಗಿ ನಿದ್ದೆ ಮಾಡಿ ಬಿಡುತ್ತಾರೆ ಹಾಗೂ ಸೋಫಾ ಮೇಲೆ ಕುಳಿತುಕೊಂಡು ಅನೇಕ ಸಮಯವನ್ನು ಕಳೆಯುತ್ತಾರೆ ಆದರೆ ಈ ರೀತಿ ಮಾಡುವುದು ತುಂಬಾ ತಪ್ಪು ಹಲವು ವೈದ್ಯರ ಸಲಹೆಯ ಮೇರೆಗೆ ಹೇಳುವುದಾದರೆ ಈ ರೀತಿ ಊಟ ಮಾಡಿದ ತಕ್ಷಣ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳ್ಳು ಬೀರುತ್ತವೆ.
ಊಟ ಮಾಡಿದ ನಂತರ ಧೂಮಪಾನ ಮಾಡಬಾರದು ಸಾಮಾನ್ಯವಾಗಿ ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ನೀವು ಧೂಮಪಾನವನ್ನು ಮಾಡುವುದರಿಂದ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತೀರಾ ಅದರಲ್ಲಿಯೂ ಊಟ ಮಾಡಿದ ನಂತರ ಧೂಮಪಾನ ಮಾಡುವುದು ಒಂದು ಸಿಗರೇಟ್ ನೀವು ಸೇದಿದರೆ ಅದು 10 ಸಿಗರೇಟ್ ಸೇದುವುದಕ್ಕೆ ಸಮ,ಏಕೆಂದರೆ ಸಿಗರೇಟ್ ನಲ್ಲಿ ನಿಕೋಟಿನ್ ಎಂಬ ಅಂಶ ಇರುತ್ತದೆ ನಿಕೋಟಿನ್ ನಿಮ್ಮ ದೇಹದಲ್ಲಿ ಸಂಚರಿಸೋ ಆಕ್ಸಿಜನ್ ಒಂದಿಗೆ ಮಿಶ್ರಣವಾಗಿ ಬಿಡುತ್ತದೆ.
ಮೊದಲಿಗೆ ಹೇಳಿದ ಹಾಗೆ ನೀವು ಊಟ ಮಾಡಿದ ನಂತರ ಜೀರ್ಣಕ್ರಿಯಾಗಲು ಆಕ್ಸಿಜನ್ ಬೇಕಾಗಿರುತ್ತದೆ ಹಾಗಾಗಿ ಅದೇ ಸಮಯದಲ್ಲಿ ನೀವು ಧೂಮಪಾನ ಮಾಡಿದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮವನ್ನು ಬೀರಿ ನಿಮ್ಮ ದೇಹ ಹಂತ ಹಂತವಾಗಿ ಹದಗೆಡಲು ಕಾರಣವಾಗುತ್ತದೆ. ಊಟ ಮಾಡಿದ ತಕ್ಷಣವೇ ನಿದ್ದೆ ಮಾಡಬಾರದು ಸಾಮಾನ್ಯವಾಗಿ ಊಟ ಮಾಡಿದ ನಂತರ ಸ್ವಲ್ಪ ಸಮಯ ನಿದ್ರೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅನೇಕರ ಭಾವನೆ ಹಾಗೂ ಅನೇಕರು ಮಾಡುತ್ತಿದ್ದಾರೆ ಆ ರೀತಿ ಮಾಡುವುದು ಕೂಡ ತಪ್ಪು ಏಕೆಂದರೆ ಆ ರೀತಿ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ನೀವು ತಿಂದ ಆಹಾರವನ್ನೆಲ್ಲ ಭೂಮಿಯಲ್ಲಿನ ಗ್ರಾವಿಟೇಷನಲ್ ನಿಮ್ಮ ಹಿಂಬದಿಯಲ್ಲಿ ಹಿಡಿದಿಟ್ಟುಕೊಳ್ಳುತ್ತದೆ ಇದರಿಂದ ಅಸಿಡಿಟಿ ಸಮಸ್ಯೆಯು ಬರುತ್ತದೆ.ಊಟ ಮಾಡಿದ ತಕ್ಷಣವೇ ಸ್ನಾನ ಮಾಡಬಾರದು ಒಂದು ವೇಳೆ ನೀವು ಸ್ನಾನ ಮಾಡಬೇಕೆಂಬ ಪರಿಸ್ಥಿತಿ ಬಂದರೆ ಊಟ ಮುಗಿಸಿದ ಅರ್ಧ ಗಂಟೆ ನಂತರ ಸ್ನಾನವನ್ನು ಮಾಡುವುದು ಉತ್ತಮ.
ನೀವು ತಿಂದ ಆಹಾರವನ್ನು ಜೀರ್ಣಕ್ರಿಯೆ ಮಾಡುವುದಕ್ಕೆ ನಿಮ್ಮ ಶರೀರಕ್ಕೆ ಹೆಚ್ಚು ಶಕ್ತಿ ಬೇಕು ನೀವು ಸ್ನಾನ ಮಾಡುವಾಗ ನಿಮ್ಮ ದೇಹವು ತಣ್ಣಗಾಗದೆ ದೇಹದಲ್ಲಿರುವ ರಕ್ತದ ಸಂಚಾರ ಕಡಿಮೆಯಾಗಿ ಹೋಗುತ್ತದೆ ಹಾಗಾಗಿ ಚೀರ್ಣಕ್ರಿಯೆ ಸಮಸ್ಯೆ ಕೂಡ ಬಂದೆ ಬರುತ್ತದೆ.ಊಟ ಮಾಡಿದ ನಂತರವೇ ಟೀಯನ್ನು ಕುಡಿಯಬಾರದು ಅನೇಕರು ಈ ತಪ್ಪನ್ನು ಮಾಡೇ ಇರುತ್ತಾರೆ ಆದರೆ ಈ ರೀತಿ ಮಾಡುವುದು ಸರಿಯಲ್ಲ ಟೀ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಐರನ್ ಅಂಶವನ್ನು ಹಿಡಿದಿಟ್ಟುಕೊಳ್ಳುವ ಸಮಯವು ನಿಂತುಹೋಗುತ್ತದೆ ಏಕೆಂದರೆ ಟೀ ನಲ್ಲಿ ಟ್ಯಾನಿಕ್ ಆಸಿಡ್ ಇರುತ್ತದೆ ಇದರಿಂದ ಐರನ್ ಹಾಗೂ ಪ್ರೋಟಿನ್ ಅಂಶಗಳನ್ನು ನಿಮ್ಮ ದೇಹ ತಡೆದುಕೊಳ್ಳುತ್ತದೆ ಹಾಗಾಗಿ ಜೀರ್ಣಕ್ರಿಯ ಸಮಸ್ಯೆ ಇದರಿಂದಲೂ ಕೂಡ ಬರುತ್ತದೆ ಇದರಿಂದ ನಿಮ್ಮ ದೇಹದಲ್ಲಿ 87% ಐರನ್ ಲೋಪ ಬರುತ್ತದೆ ಈ ಐರನ್ ಕೊರತೆಯ ಸಮಸ್ಯೆ ಆದರೆ ನಿಮ್ಮ ದೇಹದಲ್ಲಿ ಸುಸ್ತು ಹಾಗೂ ನಿಶಕ್ತಿ ಹೆಚ್ಚಾಗಿ ಕಂಡು ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.