ಎಲ್ಐಸಿ ಪಾಲಿಸಿ ಎಂಬ ವ್ಯರ್ಥ ಹಣ ಕಟ್ಟುವುದರ ಬಗ್ಗೆ ಪೂರ್ತಿ ವಿವರಣೆ :ಒಂದಾನೊಂದು ಕಾಲದಲ್ಲಿ ಎಲ್ಐಸಿ ಪಾಲಿಸಿ ಎಂದು ಹೆಸರು ಕೇಳಿದರೆ ಪ್ರತಿಯೊಬ್ಬರಿಗೂ ಗೊತ್ತು ಏಕೆಂದರೆ ಈಗಿನ ಕಾಲದ ಸಾಮಾಜಿಕ ಜಾಲತಾಣಗಳ ಹಾಗೆ ಹಿಂದೆ ನಮ್ಮ ತಂದೆ ಹಾಗೂ ತಾತನವರ ಕಾಲದಲ್ಲಿ ಎಲ್ಐಸಿ ಬಳಕೆ ತುಂಬಾ ಇತ್ತು ಮನೆಯಲ್ಲಿ ಅನೇಕರಿಗೆ ಈ ಎಲ್ಐಸಿ ಪಾಲಿಸಿಯನ್ನು ತೆಗೆದುಕೋ ಎಂದುಹೇಳಿರುತ್ತಾರೆ.ಒಬ್ಬರಲ್ಲೊಬ್ಬರು ಹೇಳಿರುತ್ತಾರೆ ನನ್ನ ತಂದೆಯು ಕೂಡ ನನಗೆ ಹೇಳಿದ್ದರು.ಆದರೆ ಇದು ಆ ಕಾಲಗಳಲ್ಲಿ ಸರಿ ಏಕೆಂದರೆ ಆಗ ಜನರಿಗೆ ಅಷ್ಟಾಗಿ ಇದರ ಬಗ್ಗೆ ಮಾಹಿತಿಯಾಗಲಿ ಹಾಗೂ ವಿವೇಚನೆಯಾಗಲಿ ತಿಳಿದಿರಲಿಲ್ಲ. ಈಗಿನ ಜಮಾನಕ್ಕೆ ಬಂದರೆ ಇದರ ಬಗ್ಗೆ ಪೂರ್ತಿ ವಿವರ ಕೂಡ ಪ್ರತಿಯೊಬ್ಬರಿಗೂ ಗೊತ್ತು ಏಕೆಂದರೆ ನನಗೆ ಇದನ್ನು ನಾವು ಅನೇಕ ಸಿನಿಮಾಗಳಲ್ಲೂ ಕೂಡ ನೋಡಿದ್ದೇವೆ ಹಾಗೂ ಕೆಲವರ ಅಭಿಪ್ರಾಯದ ಪ್ರಕಾರ ನಾವು ಬದುಕಿದ್ದಾಗ ದುಡಿದು ಹಣವನ್ನು ಅದರ ಮೇಲೆ ಇನ್ವೆಸ್ಟ್ ಮಾಡುವುದು ನಾವು ಸತ್ತ ಮೇಲೆ ಯಾರೋ ತಿನ್ನುವುದು ಈ ಮಾತು ಪ್ರತಿಯೊಬ್ಬರೂ ಹೇಳೇ ಹೇಳಿರುತ್ತಾರೆ.
ಏಕೆಂದರೆ ಇದು ನಿಜವೇ ಹೌದು ಉದಾಹರಣೆಗೆ ನಮ್ಮ ತಂದೆಯವರೇ ಸರಿ ಸುಮಾರು 2004ರಲ್ಲಿ ಅವರು ಮಾಡಿಕೊಂಡ ಅವಾಂತರ ಪಾಲಿಸಿಯನ್ನು ತೆಗೆದುಕೊಂಡರು ಅವರಿವರ ಮಾತುಗಳನ್ನು ಕೇಳಿ ಹಾಗೂ ತುಂಬಾ ಖುಷಿಯಿಂದ ಅಲ್ಲ ಎಲ್ಐಸಿ ಏಜೆಂಟ್ಗಳ ಒತ್ತಾಯದಿಂದ, ಏಕೆಂದರೆ ಆಗಿನ ಕಾಲದಲ್ಲಿ ಕೂಡ ಹಾಗೂ ಈಗಿನ ಕಾಲದಲ್ಲಿ ಕೂಡ ಆ ಪದ್ಧತಿ ಇನ್ನು ಹಾಗೆ ಇದೆ.ಎಲ್ಐಸಿ ಏಜೆಂಟ್ ಗಳು ಪಾಲಿಸಿ ಮಾಡಿಸಿಕೊಳ್ಳಿ ಎಂದು ಒತ್ತಾಯಿಸುತ್ತಿರುತ್ತಾರೆ.ಹಾಗಾಗಿ ಇದರಿಂದ ನೀವು ಸ್ವಲ್ಪ ಹಣವನ್ನು ವಾರ್ಷಿಕ ಕಟ್ಟಿದರೆ ನಿಮಗೆ ಸ್ವಲ್ಪ ವರ್ಷಗಳ ಕಳೆದ ನಂತರ ನೀವು ಊಹಿಸಲು ಸಾಧ್ಯವಾಗದಷ್ಟು ಹಣ ನಿಮಗೆ ಸೇರುತ್ತದೆ ಎಂದು ಆಸೆಯನ್ನು ಹುಟ್ಟಿಸುತ್ತಾರೆ ಇದರಿಂದ ಅವರಿಗೆ ಕಮಿಷನ್ಗಳು ಸಿಗುತ್ತದೆ ಅಂದ್ರೆ ಈಗಿನ ಕಾಲಕ್ಕೆ ಅನುಗುಣವಾಗಿ ಹೇಳಬೇಕೆಂದರೆ ಟಾರ್ಗೆಟ್ ಎಂದು ಹೇಳಬಹುದು. ಅನೇಕ ಕಂಪನಿಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ತಿಂಗಳಿಗೆ ಇಷ್ಟು ಟಾರ್ಗೆಟ್ ಎಂದು ಕೊಡುತ್ತಾರೆ.ಅದನ್ನು ಕಂಪ್ಲೀಟ್ ಮಾಡಿದರೆ ಮಾತ್ರ ಅವರಿಗೆ ಹಣ ಸಿಗುವಂತೆ ಆಗಿರುತ್ತೆ ಅದೇ ರೀತಿ ಆಗಿನ ಎಲ್ಐಸಿಯಲ್ಲಿ ಕೆಲಸ ಮಾಡುವವರ ಎಷ್ಟು ಟಾರ್ಗೆಟ್ ಗಳನ್ನು ಮುಗಿಸಬೇಕು ಇಷ್ಟು ಪಾಲಿಸಿಗಳನ್ನು ಜನರಿಗೆ ತಲುಪಿಸಬೇಕು ಎಂದು ಅವರಿಗೆ ಕೆಲಸ ಇರುತ್ತೆ.
ಇದರಿಂದ ಅವರು ಫೀಲ್ಡ್ ವರ್ಕ್ ಮಾಡಿ ಪಾಲಿಸಿಗಳನ್ನು ತೆಗೆದುಕೊಳ್ಳಲು ಪ್ರತಿಯೊಬ್ಬರಿಗೂ ಯತ್ನಿಸುತ್ತಿರುತ್ತಾರೆ.ಇದರಿಂದ ಮನೆಯಲ್ಲಿ ಒಬ್ಬರಾದರೂ ತೆಗೆದುಕೊಳ್ಳುತ್ತಾರೆ ಅದರ ಹಣವು ಕೂಡ ಕಡಿಮೆಯಿದ್ದೆ ಉದಾಹರಣೆಗೆ ನಮ್ಮ ತಂದೆಯವರು ತೆಗೆದುಕೊಂಡಿದ್ದು 2004ರಲ್ಲಿ ವರ್ಷಕ್ಕೆ 25,000 ಕಟ್ಟುವ ಹಾಗೆ ಅಂದರೆ ತಿಂಗಳಿಗೆ ಸರಿಸುಮಾರು ಎರಡರಿಂದ ಮೂರು ಸಾವಿರ ಪಟ್ಟುವಾಗಿ ಇದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಿ ಅವರಿಗೆ ಒತ್ತಾಯಿಸಿ ಪ್ರೀಮಿಯಂ ಅನ್ನು ಅವರ ತಲೆಯಲ್ಲಿ ಕೂರಿಸಿದ್ದಾರೆ.ಸರಿಸುಮಾರು 20 ವರ್ಷ ಕಳೆದ ನಂತರ ನಿಮಗೆ ಇದು ಬೋನಸ್ ಹಾಗೂ ಇಂಟರೆಸ್ಟ್ ಎಲ್ಲವು ಸೇರಿ ಒಂದು ದೊಡ್ಡ ಅಮೌಂಟ್ ಸಿಗುತ್ತದೆ ಎಂದು ಅವರಿಗೆ ಆಗ ಹೇಳಿದ್ದಾರೆ.ಅದು ದೊಡ್ಡ ಹಣವೆಂದು ತಿಳಿದಿರುತ್ತೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.