ಸಿನಿಮಾ ಧಾರವಾಹಿಗಳಲ್ಲಿ ನಟಿಯಾಗಿದ್ದರೂ ಸಹ ಹೈವೇ ಪಕ್ಕದಲ್ಲಿ ಕ್ಯಾಂಟೀನ್ ತೆರೆದರುಸಿನಿಮಾ ಜಗತ್ತು ನಾವು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದನ್ನು ಎಷ್ಟೋ ಅನುಭವಿ ನಟ ನಟಿಯರು ಒಂದಿಲ್ಲೊಂದು ವಿಷಯಗಳ ಮೂಲಕ ನಮಗೆ ಮನದಟ್ಟು ಮಾಡಲು ಯತ್ನಿಸುತ್ತಿರುತ್ತಾರೆ. ಸಿನಿಮಾ ಕ್ಷೇತ್ರವೆಂದರೆ ಕೋಟಿ ಕೋಟಿ ಹಣ ಅಂತಸ್ತು ಸುಖ ನೆಮ್ಮದಿ ಜೀವನ ಒಮ್ಮೆ ಚಾನ್ಸ್ ಸಿಕ್ಕರೆ ಸಾಕು ಎಂದು ನಾವು ಏನೇನೋ ಅಂದುಕೊಳ್ಳುತ್ತೇವೆ. ಆದರೆ ಒಮ್ಮೆ ಅದೇ ಸಿನಿಮಾ ಕ್ಷೇತ್ರ ಕೈ ಬಿಟ್ಟರೆ ಎಂತಹ ಸ್ಥಿತಿ ಬರುವುದು ಒಮ್ಮೆ ಯೋಚಿಸಿದ್ದೇವೆಯೇ..? ಹೌದು ಸಿನಿಮಾದಲ್ಲಿ ಫೇಮಸ್ ಆದ ಯಾರೇ ಆದರೂ ಸಹ ಇನ್ನೊಮ್ಮೆ ಸಿನಿಮಾ ಕ್ಷೇತ್ರದಿಂದ ಅವಕಾಶ ವಂಚಿತರಾದರೆ ಎಂತಹ ಸ್ಥಿತಿ ಬರುತ್ತದೆ ಎಂಬುದನ್ನು ನಾವು ಅರಿತಿದ್ದೆವೆಯೇ..?
ಏಕೆಂದರೆ ಸಮಾಜದಲ್ಲಿ ಒಮ್ಮೆ ನಾವು ವಿಶೇಷವಾಗಿ ಗುರುತಿಸಿಕೊಂಡು ಬಿಟ್ಟರೆ ಮುಗಿಯಿತು ನಮಗೆ ಎಂತಹ ಕಷ್ಟವೇ ಇದ್ದರೂ ಸಹ ಜನ ಮಾತನಾಡಿಕೊಳ್ಳುವ ರೀತಿ ಹಾಗೂ ನಮ್ಮ ಮನಸಿನಲ್ಲಿಯೇ ಮೂಡುವ ಭಾವನೆಗಳಿಂದ ಬದುಕುವ ಛಲವನ್ನೇ ಕಳೆದುಕೊಳ್ಳುವಷ್ಟು ಹಂತಕ್ಕೆ ಹೋಗುತ್ತೇವೆ. ಇಂತಹ ಸ್ಥಿತಿಗಳನ್ನು ಎದುರಿಸಿ ಸ್ವಾಭಿಮಾನದ ಬದುಕನ್ನು ನಡೆಸುವ ಮಂದಿ ಇಂದು ಬಹಳ ಕಡಿಮೆ. ಆದರೆ ಮಲಯಾಳಂ ನ ಖ್ಯಾತ ಸಿನಿಮಾ ಹಾಗೂ ಸೀರಿಯಲ್ ನಟಿ ಕವಿತಲಕ್ಷ್ಮಿ ಅವರು ಮಮ್ಮೂಟ್ಟಿ ಮೋಹನ್ ಲಾಲ್ ರಂತಹ ದಿಗ್ಗಜ ನಟರ ಜೊತೆಗೆ ನಟಿಸಿದ್ದ ನಟಿ ಇಂದು ತಮ್ಮ ಸ್ವಾಭಿಮಾನ ಛಲದ ಪ್ರಭಾವದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ. ಸಿನಿಮಾದಲ್ಲಿ ವರ್ಣರಂಜಿತ ಆಗಿರುವಷ್ಟು ಈ ಕವಿತಾಲಕ್ಷ್ಮಿ ಅವರ ನಿಜ ಜೀವನದಲ್ಲಿ ಇರದೇ ಆರ್ಥಿಕವಾಗಿ ಹಿಂದೆ ಬಿದ್ದು ತನ್ನ ಇಬ್ಬರು ಮಕ್ಕಳನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಿ ವಿದ್ಯಾವಂತರನ್ನಾಗಿ ಮಾಡಲು ಅನೇಕ ಕಷ್ಟದ ಸ್ಥಿತಿಗಳನ್ನು ಎದುರಿಸುತ್ತಿದ್ದಾರೆ.
15 ವರ್ಷಗಳ ಹಿಂದೆಯೇ ಕಾರಣಾಂತರಗಳಿಂದ ತನ್ನ ಪತಿಗೆ ವಿಚ್ಚೇದನ ನೀಡಿದ್ದ ಕವಿತಾಲಕ್ಷ್ಮಿ ತನ್ನ ಇಬ್ಬರು ಮಕ್ಕಳನ್ನು ತಾನೇ ಸಾಕುವುದಾಗಿ ತಮ್ಮಲ್ಲೇ ಉಳಿಸಿಕೊಂಡು ಇಂದು ಸಿನಿಮಾ ಕ್ಷೇತ್ರಗಳಲ್ಲಿ ಹೆಚ್ಚು ಅವಕಾಶಗಳು ಸಿಗದ ಕಾರಣ ಇಂದು ಹೈವೇ ಪಕ್ಕದಲ್ಲಿ ಕ್ಯಾಂಟೀನ್ ಒಂದನ್ನು ತೆರೆದು ರುಚಿಯಾದ ದೋಸೆ ಇಡ್ಲಿ ಮಾಡಿ ಮಾರುತ್ತಾ ಜೀವನ ನಡೆಸುತ್ತಿದ್ದಾರೆ. ಸಿನಿಮಾ ಸೂಟಿಂಗ್ ಇದ್ದರೆ ಬೆಳಿಗ್ಗೆ ಹಾಗೂ ರಾತ್ರಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿ ತಮ್ಮ ಜೀವನವನ್ನು ನಡೆಸುತ್ತಾ ತಮ್ಮ ಮಕ್ಕಳ ಭವಿಷ್ಯ ಸುಗಮವಾಗಿ ಸಾಗಲಿ ಎನ್ನುವ ದೃಷ್ಟಿಯಿಂದ ಇಂದು ಸಾಕಷ್ಟು ಜನರಿಗೆ ಮಾದರಿಯಾಗಿ ಸಿನಿಮಾ ಜಗತ್ತು ಎಷ್ಟು ಹರಿತವೋ ಅಷ್ಟೇ ಬೇಗ ಮೊಂಡಾಗಿ ಜೀವನವನ್ನು ಹೇಗೆ ಆಟ ಆಡಿಸುತ್ತದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.