ದೇವರನ್ನ ಬೇಕಾದ್ರೆ ಧರೆಗೆಳಿಸಬಹುದು ಸ್ವಾಮಿ ಕನ್ಯಾ ಹುಡುಕೋದು ಕಷ್ಟ ಇದೆ!!… ಮೊದಲು ಕನ್ಯಾಸರೆ ಬಿಡಿಸಿ ಎನ್ನುವುದು ಇತ್ತು ಆದರೆ ಈಗ ವರಸರೆ ಬಿಡಿಸಿ ಎನ್ನುವುದು ಆಗಿಬಿಟ್ಟಿದೆ ಉಲ್ಟಾ ಆಗಿಬಿಟ್ಟಿದೆ ಕಾಲ ಇದನ್ನು ಮಾಡಲು ಹೋಗಿ ಅಸಾಧ್ಯವಾದ ಕೆಲಸವಾಗಿಬಿಟ್ಟಿದೆ ಬಹಳ ಕಷ್ಟ ಈ ವಾಗ ವಧು ವರರನ್ನು ತೋರಿಸುವುದು ಭಗವಂತನನ್ನು ಬೇಕಾದರೆ.
ಪ್ರತ್ಯಕ್ಷ ಮಾಡಿ ಧರೆಗಿಳಿಸಿಕೊಳ್ಳಬಹುದು ಆದರೆ ವಧು-ವರರನ್ನು ಕೂಡಿ ಹಾಕುವುದು ಅಷ್ಟು ಕಷ್ಟವಾಗಿದೆ. ನನಗೆ ಈಗ 78 ವರ್ಷ ವಯಸ್ಸು ನನ್ನ ಬುದ್ಧಿ ಶಕ್ತಿ ಎಲ್ಲವನ್ನು ಖರ್ಚು ಮಾಡುತ್ತೇನೆ ಆದರೂ ಒಂದು 200ನ್ನು ಕೂಡಿಸಿದ್ದೇನೆ ಈಗಾಗಲೇ 200 ವಧು-ವರರನ್ನು ಕೂಡಿ ಹಾಕಿದ್ದೇನೆ ಇನ್ನು ಸಾವಿರಾರು ಇದೆ ಸೇವೆ ಮಾಡಲು ನಿಂತಿದ್ದೇವೆ ಆ ಸೇವೆಯನ್ನ ಮನಃಪೂರ್ತಿಯಾಗಿ.
ಮಾಡುತ್ತಿದ್ದೇವೆ ಅದರೊಳಗೆ ಯಾವುದೇ ವಂಚನೆ ಇಲ್ಲ ಯಾವುದೇ ಆಮೀಷಗಳು ಇಲ್ಲ ಆಮಿಷ ಎಂದರೆ ಏನು ದುಡ್ಡು ಆಗಲಿ ಬಳುವಳಿಗಳಾಗಲಿ ಏನನ್ನು ತೆಗೆದುಕೊಳ್ಳುವುದಿಲ್ಲ ಅವರ ಬಳಿ ಒಂದು ಲೋಟ ಕಾಫಿಯನ್ನು ಕುಡಿಯುವುದಿಲ್ಲ ಮದುವೆಗೆ ಬನ್ನಿ ಎಂದು ಬಹಳಷ್ಟು ಪ್ರೀತಿಸುತ್ತಾರೆ ನಾನು ಬಂದು ನಿಮ್ಮ ಮನೆಯ ಅನ್ನ ತಿಂದರೆ ನನ್ನ ಋಣ ತೀರಿಹೋಗುತ್ತದೆಯಾ.
ನಿಮ್ಮ ಮೇಲಿನ ಋಣವನ್ನು ಹೊತ್ತಿಕೊಳುವ ಹಾಗೆ ಆಗುತ್ತದೆ.ನಾವು ಋಣ ವರದೆ ಹಾಗೆ ಈ ಕೆಲಸವನ್ನು ಮಾಡಬೇಕು ನಮ್ಮ ಆತ್ಮಸಾಕ್ಷಿ ಪೂರ್ತಿಯಿಂದಲೇ ಭಗವಂತ ಬಿಕ್ಷ ಎಂದು ಈ ಕೆಲಸವನ್ನು ಮಾಡಬೇಕು ಅದರಿಂದ ನಾನು ಈ ಕಾರ್ಯವನ್ನು ಕೈಗೊಂಡಿದ್ದೇನೆ. ನನಗೆ ಇತ್ತೀಚಿಗಂತೂ ಕನ್ಯಾ ಹುಚ್ಚು ಹಿಡಿದು ಬಿಟ್ಟಿದೆ ಈ ಮದುವೆಯಾಗದ ಹುಡುಗರಿಗೆ ಮದುವೆ.
ಮಾಡಬೇಕೆಂದು ಹುಚ್ಚು ಹಿಡಿದು ಬಿಟ್ಟಿದೆ ಹಾಗಾಗಿ ಎಲ್ಲೆಲ್ಲಿ ಹೋಗುತ್ತೇನೆ ಇಂಥವರನ್ನು ಒಬ್ಬರನ್ನು ಹಿಡಿದು ಹಿಡಿದುಕೊಳ್ಳುತ್ತೇನೆ ಎಲ್ಲರನ್ನು ಕೇಳುತ್ತೇನೆ ಏಕೆಂದರೆ ಬಹಳ ಹಿಂದೆ ಹೀಗೆ ಮನೆಗೆ ಹಿರಿಯರು ಇರುತ್ತಿದ್ದರು ಅವರವರ ಜವಾಬ್ದಾರಿಯಿಂದ ಮನೆಯಲ್ಲಿ ಕನ್ಯಾ ವರ ಹುಡುಕಿ ಮದುವೆ ಮಾಡುತಿದ್ದರು ಹೀಗೆ ಕನ್ಯಾ ಸಮಸ್ಯೆ ಇರುತ್ತೀರಲಿಲ್ಲ ಇತ್ತೀಚಿಗೆ.
ಏನಾಗಿದೆ ಎಂದರೆ ನಾವು ಒಂಟಿಯಾಗಿ ಹೋಗುತ್ತಾ ಹೋಗುತ್ತಾ ಸಂಬಂಧಗಳನ್ನು ಕಳೆದುಕೊಂಡಿದ್ದೇವೆ ಸಂಬಂಧಿಕರೆಂತು ದೂರ ಹಾಗೆ ಬಿಟ್ಟರು ಹೀಗಾದರೆ ಸಂಬಂಧವನ್ನು ಎಲ್ಲಿ ಹುಡುಕುತ್ತೀರಾ ನೀವು ಆಗ ಇಂಥವರು ನಮಗೆ ನೆನಪಾಗುತ್ತಾರೆ.ಇಲ್ಲಿ ನಮಗೆ ಯಾರು ಸಿಕ್ಕಿದ್ದಾರೆ ಎಂದರೆ ನಾನು ತುಮಕೂರಿನಲ್ಲಿ ಇದ್ದೇನೆ ತುಮಕೂರಿನಿಂದ 10 ಕಿ.ಮೀ ದೂರ ಬಂದರೆ ತುಮಕೂರ್.
ಡಿಸ್ಟಿಕ್ ತುಮಕೂರ್ ತಾಲೂಕು ಮಲ್ಲಸಂದ್ರ ರೋಡು ಮಲ್ಲಸಂದ್ರ ಎಂದ ತಕ್ಷಣ ಅಲ್ಲಿಯ ಒಂದು ರೈಲ್ವೆ ಸ್ಟೇಷನ್ ಇದೆ ಅದರಿಂದ ಸ್ವಲ್ಪ ಮುಂದೆ ಹೋದರೆ ನಿಮಗೆ ಒಂದು ಕೆಎಂಎಫ್ ತುಮಕೂರು ಡೈರಿ ಸಿಗುತ್ತದೆ ಮಲ್ಲಸಂದ್ರ ಹಾಲಿನ ಡೈರಿ ಸಿಗುತ್ತದೆ ಅದರ ಪಕ್ಕದಲ್ಲಿ ನೀವು ಹೋಗಿ ಬಿಟ್ಟರೆ ಒಂದು ಐದು ಕಿಲೋಮೀಟರ್ ಆಗುತ್ತದೆ ಮೇನ್ ರೋಡ್ ಇಂದ.
ಆ ಐದು ಕಿಲೋಮೀಟರ್ ಅಲ್ಲಿ ಆರಾಮಾಗಿ ಅದ್ಭುತ ದೃಶ್ಯ ನೀವು ಬಹಳ ಎಂಜಾಯ್ ಮಾಡಿಕೊಂಡು ಬರುತ್ತಿರಿ ಕಲ್ಪತರ ನಾಡು ಎಂದು ಯಾಕೆ ಹೇಳುತ್ತಾರೆಂದು ಈ ರೋಡಿಗೆ ಬಂದರೆ ನಿಮಗೆ ಗೊತ್ತಾಗುತ್ತದೆ. ಎಷ್ಟು ಚೆನ್ನಾಗಿದೆ ಎಂದು ಹೇಳುತ್ತೀರಾ ಎಡಕ್ಕೆ ತೆಂಗು ಬಲಕ್ಕೆ ಅಡಕ್ಕೆ ತುಂಬಾ ಅದ್ಭುತ ಇದು ನಾನಂತೂ ಬಹಳ ದಿನವಾಗಿತ್ತು ಇಂತಹದನ್ನು ನೋಡಿ ನೀವು ಕೂಡ ನೋಡಿ ಹೇಗಿದೆ.
ಊರು ಎಂದು ಯಾವ ಊರಿಗೆ ಹೋಗುತ್ತಿದ್ದೇನೆ ಎಂದರೆ ಕಾಡ್ಗೆರೆ ಗೆ ಹೊರಟಿದ್ದೇನೆ ಅಲ್ಲಿ ಒಬ್ಬರು ಚಂದ್ರಶೇಖರ್ ಎಂಬುವರು ಇದ್ದಾರೆ ಅವರು ಯಂಗ್ ಸ್ಟಾರ್ ಇನ್ನ ಅವರ ವಯಸ್ಸನ್ನು ನೀವು ಕೇಳಲು ಹೋಗಬೇಡಿ ಅವರನ್ನೇ ಮಾತನಾಡಿಸುತ್ತೇನೆ ಬಹಳ ಚೆನ್ನಾಗಿ ಮಾತನಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ