ಒಬ್ಬ ಒಳ್ಳೆಯ ವ್ಯಕ್ತಿಯಾಗಲು ಯಾವ ರೀತಿ ಬೆಳೆಸಬೇಕು…ಗಂಡು ಮಕ್ಕಳಿರಲಿ ಹೆಣ್ಣು ಮಕ್ಕಳಿರಲಿ ಬೆಳೆಸುವ ರೀತಿಯಲ್ಲಿ ಅಂತ ಯಾವ ದೊಡ್ಡ ವ್ಯತ್ಯಾಸವಿರುವುದಿಲ್ಲ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಇನ್ನೂ ಬುದ್ಧಿವಂತರಾಗಿರುತ್ತಾರೆ ಮತ್ತು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ ಅದನ್ನು ಬಿಟ್ಟರೆ ಬೇರೆ ಯಾವ ವ್ಯತ್ಯಾಸವಿರುವುದಿಲ್ಲ, ಮಕ್ಕಳು 5 ವರ್ಷದ ತನಕ ಅವರ.

WhatsApp Group Join Now
Telegram Group Join Now

ಸಮಯವನ್ನು ಇರಲು ಬಿಡಬೇಕು ಅವರ ಬಾಲ್ಯವನ್ನು ಹೆತ್ತವರು ಕಿತ್ತುಕೊಳ್ಳಬಾರದು ಮತ್ತು ಅವರಿಗೆ ತುಂಬಾ ಎದುರಿಸುವುದು ಅಥವಾ ಭಯ ತೋರಿಸುವುದು ಈ ರೀತಿ ಕೆಲಸಗಳನ್ನು ಮಾಡಬಾರದು ಮಕ್ಕಳಲ್ಲಿ ಮಕ್ಕಳಾಗಿ ತಂದೆ ತಾಯಿಗಳು ಅವರೊಂದಿಗೆ ಬದಲಾಗಬೇಕು, ವಾಸ್ತವವಾಗಿ ಮಕ್ಕಳು ಹುಟ್ಟಿದ ಆ ಸಮಯದಿಂದಲೇ ತಂದೆ ತಾಯಿ ಎಂದು ಪಟ್ಟಅವರಿಗೆ.

ಸಿಗುವುದು ಅಂದರೆ ಮಗು ಹುಟ್ಟಿದ ಸಮಯದಲ್ಲೇ ತಂದೆ ತಾಯಿಯರು ಮರು ಜೀವವನ್ನು ಪಡೆಯುತ್ತಾರೆ, ಆ ಕಾರಣದಿಂದಲೇ ಮಕ್ಕಳಲ್ಲಿ ಮಕ್ಕಳಾಗಿ ತಂದೆ ತಾಯಿಯರು ಬದಲಾಗಬೇಕು, ಗರಿಷ್ಠ ಮೂರು ವರ್ಷಗಳ ತನಕ ಮಕ್ಕಳಿಗೆ ತಂದೆ ತಾಯಿಯರೇ ತಿನ್ನಿಸಬೇಕು ಆಹಾರವನ್ನು ನಂತರ ಅವರಿಗೆ ತಿನ್ನಲು ಬಿಡಬೇಕು ಅವರು ಮೂಗಿನ ಮೇಲೆ.

ಹಾಕಿಕೊಳ್ಳುತ್ತಾರೋ ಅಥವಾ ಬಾಯೆಲ್ಲ ಮಡಗಿಕೊಳ್ಳುತ್ತಾರೋ ಅಥವಾ ಚೆಲ್ಲಿಕೊಂಡು ತಿನ್ನುತ್ತಾರೋ ಅದು ಅವರ ಇಷ್ಟ ಒಟ್ಟಿನಲ್ಲಿ ಅವರು ಕುಳಿತುಕೊಂಡು ಆಹಾರವನ್ನು ತಿನ್ನಬೇಕು ಅಷ್ಟೇ, ಸ್ನಾನ ದ ವಿಷಯದಲ್ಲಿ 4-5 ವರ್ಷಗಳ ನಂತರ ಅವರೇ ಸ್ನಾನ ಮಾಡಿಕೊಳ್ಳುವ ಹಾಗೆ ನೀವು ರೂಢಿ ಮಾಡಿಸಬೇಕು, ಅವರ ಅಗತ್ಯವನ್ನು ಸಾಧ್ಯವಾದಷ್ಟು ನೀವು ಪೂರೈಸಬೇಕು.

ಮತ್ತು ಅವರು ಆಸೆ ಪಡುವ ಎಲ್ಲವನ್ನು ಕ್ಷಣಮಾತ್ರದಲ್ಲಿ ನೀವು ಅವರ ಕೈಗೆ ಸಿಗುವಂತೆ ಮಾಡಬಾರದು ಆ ಒಂದು ಮನೋಭಾವ ಅವರಿಗೆ ಬರಬಾರದು ಇದು ಕೂಡ ತುಂಬಾ ಮುಖ್ಯ, ಆ ವಯಸ್ಸಿನಯವರಿಗೆ ತುಂಬಾ ಒತ್ತಡವನ್ನು ಹಾಕಬಾರದು. ಅವರನ್ನು ಅವರ ಅಕ್ಕ ಅಣ್ಣಂದಿರ ಜೊತೆ ಮತ್ತು ಮನೆಯ ಪಕ್ಕದ ಅವರ ವಯಸ್ಸಿನ ಮಕ್ಕಳ ಜೊತೆ ಆಟವಾಡಲು.

ಬಿಡಬೇಕು, ಐದು ವರ್ಷದಿಂದ 15 ವರ್ಷದ ಒಳಗೆನ ಅವಧಿ ಒಂದು ಮಗುವಿನ ಜೀವನ ಭವಿಷ್ಯ ನಿರ್ಧಾರವಾಗುವ ಕಾಲ ಆ ವಯಸ್ಸಿನಲ್ಲಿ ಮಕ್ಕಳು ಅವರಿಗೆ ಏನೆಲ್ಲಾ ಬೇಕು ಎಂದು ಅವರು ತಿಳಿದುಕೊಳ್ಳಬೇಕು ಮತ್ತು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರ್ಧ ಭಾಗದಷ್ಟು ಅರ್ಥ ಮಾಡಿಕೊಂಡಿರಬೇಕು ಸಾಮಾನ್ಯವಾಗಿ ಮಕ್ಕಳು ನಾವು ಏನು ಹೇಳಿ ಕೊಡುತ್ತೇವೆ.

ಅದನ್ನು ಕಲಿಯುವುದಿಲ್ಲ ನಾವುಗಳು ಏನು ಮಾಡುತ್ತೇವೆ ಅವುಗಳನ್ನು ನೋಡಿ ಅವರು ಕಲಿಯುತ್ತಾರೆ ಮತ್ತು ಅದನ್ನೇ ಮಾಡುತ್ತಾರೆ ಹಾಗಾಗಿ ನಮ್ಮ ನಡೆ ನುಡಿ ಎಲ್ಲವೂ ತುಂಬಾ ಶುದ್ದಿಯಾಗಿರಬೇಕು ಮತ್ತು ನಮ್ಮ ಸಂಸ್ಕಾರ ಅಷ್ಟು ಭದ್ರತೆ ಇಂದ ಇರಬೇಕು, ನಾವುಗಳು ಮಕ್ಕಳ ಎದುರಿಗೆ ಹೇಗೆ ಮಾತನಾಡುತ್ತೇವೆ ಮತ್ತು ಯಾವ ಕೆಲಸಗಳನ್ನು ಹೇಗೆ ಮಾಡುತ್ತೇವೋ ಅದೇ ರೀತಿ.

ಮಕ್ಕಳು ಕೂಡ ಕಲಿಯುತ್ತಾರೆ ಹಾಗಾಗಿ ನಾವುಗಳು ಸರಿಯಾಗಿ ಇರಬೇಕು ನಂತರ ಮಕ್ಕಳಿಗೆ ಬುದ್ಧಿಯನ್ನು ಹೇಳಬೇಕು,ಹಾಗಾಗಿ ನಾವು ಎಷ್ಟು ಗಂಭೀರವಾಗಿರಬೇಕು ಎಂದರೆ ತುಂಬಾ ಇರಬೇಕು ಮತ್ತು ನಾವು ಮಕ್ಕಳ ಎದುರು ಕೆಟ್ಟ ಮಾತುಗಳನ್ನು ಆಡಬಾರದು ಮತ್ತು ಕೆಟ್ಟ ನಡತೆಯ ರೀತಿ ನಡೆದುಕೊಳ್ಳಬಾರದು ಅದು ಕೂಡ.

ಅವರ ಮುಂದಿನ ಜೀವನದ ವಿಷಯಗಳಲ್ಲಿ ತುಂಬಾ
ಪರಿಣಾಮವನ್ನು ಬೀರುತ್ತದೆ, ಕೆಟ್ಟ ವಿಷಯವನ್ನು ಮಕ್ಕಳು ಬಹುಬೇಗ ಅರ್ಥ ಮಾಡಿಕೊಳ್ಳುತ್ತಾರೆ ಹಾಗಾಗಿ ನಾವು ಆ ರೀತಿ ಒಂದು ಕೆಲಸವನ್ನು ಮಾಡುತ್ತಿದ್ದೇವೆ ಎಂದರೆ ಅದನ್ನು ಮಕ್ಕಳು ಅರಿತುಕೊಳ್ಳುತ್ತಿಲ್ಲ ಅಥವಾ ಅದನ್ನು ಕೊಂಡುಕೊಳ್ಳುವುದಿಲ್ಲ.

ಎಂದರೆ ಅದು ದೊಡ್ಡ ತಪ್ಪು ಮಕ್ಕಳು ತುಂಬಾ ಗಮನಿಸುತ್ತಾರೆ ಮತ್ತು ತುಂಬಾ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ನಂತರ ಅದೇ ರೀತಿ ನಡೆದುಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god