ಒಳ್ಳೆಯವರಿಗೆ ಯಾಕೆ ಯಾವಾಗ್ಲೂ ಕೆಟ್ಟದ್ದೆ ಆಗುತ್ತದೆ. ಇಲ್ಲಿದೆ ಉತ್ತರ……ಬುದ್ಧನ ಜೀವನದಲ್ಲಿ ನಡೆದ ಈ ಕಥೆ. ನೆಮ್ಮದಿಯಾಗಿ ಜೀವನ ನಡೆಸಬೇಕು ಎಂದುಕೊಳ್ಳುವವರಿಗೆ ಬಹಳ ಮುಖ್ಯವಾದ ಪಾಠ ಹೇಳಿಕೊಡುತ್ತದೆ. ಆದರೆ ಕೆಲವು ಜನರು ಆ ವ್ಯಕ್ತಿಯ ಶಾಂತ ಸ್ವಭಾವದ ಪ್ರಯೋಜನವನ್ನು ಹೆಚ್ಚಾಗಿ ಪಡೆಯುವ ಪ್ರಯತ್ನ ಮಾಡುತ್ತಾರೆ. ಈ ಕಥೆಯನ್ನು ಅರ್ಥ ಮಾಡಿಕೊಳ್ಳಲು ಪೂರ್ತಿಯಾಗಿ ಈ ವಿಡಿಯೋ ನೋಡಿ. ಒಂದಾನೊಂದು ಕಾಲದಲ್ಲಿ ಗೌತಮ ಬುದ್ಧ ತಮ್ಮ ಶಿಷ್ಯರ ಜೊತೆಗೆ ಕುಳಿತ್ತಿದ್ದರು. ಅದೇ ಸಮಯದಲ್ಲಿ ಮಹಾರಾಜ ಅಜಾತಶತ್ರು ಗೌತಮ ಬುದ್ಧ ಇರುವಲ್ಲಿಗೆ ಬಂದರು. ” ಗುರುಗಳೇ, ನಾನು ನಿಮ್ಮ ಹಿಂಬಾಲಕನಾದ ಬಳಿಕ. ಎಲ್ಲರೂ ನನ್ನ ತಾಳ್ಮೆಯ ಅನಗತ್ಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ನಾನು ನಿಮ್ಮ ಹಿಂಬಾಲಕನಾಗುವ ಮೊದಲು ಬಹಳ ಕ್ರೂರಿಯಾಗಿದೆ ಎಲ್ಲರೂ ನನ್ನನ್ನು ಕಂಡರೆ ಭಯ ಪಡುತ್ತಿದ್ದರು. ಆಗ ನಾನು ಯಾರಿಗಾದರೂ ಮರಣದಂಡನೆ ವಿಧಿಸಲು ಹಿಂದೆ ಮುಂದೆ ಯೋಚನೆ ಮಾಡುತ್ತಿರಲಿಲ್ಲ. ಆದರೆ ನಿಮ್ಮ ಹಿಂಬಾಲಕನಾದ ಬಳಿಕ ಯಾರಿಗೂ ಶಿಕ್ಷೆ ಕೊಡಬೇಕು ಅನಿಸುವುದಿಲ್ಲ. ಕೋಪ ಕೂಡ ಬರುತ್ತಿಲ್ಲ ನಾನು ತುಂಬಾ ನೆಮ್ಮದಿಯಾಗಿದ್ದೇನೆ ಎಲ್ಲರನ್ನು ಸಹಾನುಭೂತಿಯಿಂದ ನೋಡುತ್ತೇನೆ.
ಆದರೆ ಕೆಲವರು ನನ್ನ ತಾಳ್ಮೆಯ ಸ್ವಭಾವದ ಅನಗತ್ಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನನ್ನ ರಾಜ್ಯದ ಜನರು ಸಹ ಯಾವುದೋ ಒಂದು ರೀತಿಯ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ.ಇದರಿಂದಾಗಿ ನನ್ನ ರಾಜ್ಯದ ಆಡಳಿತದಲ್ಲಿ ನಾನು ತುಂಬಾ ಕಷ್ಟ ಅನುಭವಿಸುತ್ತಿದ್ದೇನೆ. ನಾನೀಗ ಏನು ಮಾಡಬೇಕೆಂದು ದಯವಿಟ್ಟು ಹೇಳಿ..” ಎಂದು ಬುದ್ಧರಲ್ಲಿ ಕೇಳಿಕೊಳ್ಳುತ್ತಾರೆ.ಮಹಾರಾಜ ಬುದ್ಧರು ಈ ಮಾತುಗಳನ್ನು ಕೇಳಿ ಅವರಿಗಾಗಿ ಒಂದು ಕಥೆ ಹೇಳುತ್ತಾರೆ.ಆ ಕಥೆ ಹೇಗಿತ್ತು.. ಒಂದಾನೊಂದು ಕಾಲದಲ್ಲಿ ಒಂದು ದೊಡ್ಡ ಮರದ ಕೆಳಗಿರುವ ಬಿಲದಲ್ಲಿ ಒಂದು ವಿಷಪೂರಿತ ಹಾಗೂ ವಾಸವಾಗಿತ್ತು. ಅ ಮರವು ಹಳ್ಳಿಯ ಒಂದು ಬಯಲಿನ ಮೂಲೆಯಲ್ಲಿತ್ತು. ಒಂದು ಸಣ್ಣ ಪ್ರಚೋದನೆ ಆದರೂ ಸಹ ಆ ಹಾವು ಜನಗಳ ಮೇಲೆ ದಾಳಿ ಮಾಡುತ್ತಿತ್ತು ಹಾವು ಕಚ್ಚಿದ ಕಾರಣ ಹಲವು ಜನರು ಸಾವನ್ನಪ್ಪಿದ್ದರು. ಹಾವು ಇದೆ ಎನ್ನುವ ಭಯದಿಂದ ಜನರು ಆ ಮರದ ಬಳಿಗೆ ಹೋಗಲು ಎದುರುತ್ತಿದ್ದರು. ಒಂದು ದಿನ ಒಬ್ಬ ಸನ್ಯಾಸಿ ಆ ಊರನ್ನು ದಾಟಿ ಹೋಗುವಾಗ ಈ ಸುಂದರವಾದ ಮರವನ್ನು ಕಂಡರು ಅಲ್ಲಿಂದ ಮುಂದಕ್ಕೆ ಹೋಗುವ ಮೊದಲು ಮರದ ಕೆಳಗೆ ಕುಳಿತು ಧ್ಯಾನ ಮಾಡಬೇಕು ಎಂದು ನಿರ್ಧಾರ ಮಾಡಿದರು.
ತಮ್ಮ ಹಸುಗಳನ್ನು ಹಳ್ಳಿಗೆ ಕರೆದೊಯ್ಯುತ್ತಿದ್ದ ಜನರು ಸನ್ಯಾಸಿಯನ್ನು ನೋಡಿ ಆ ಮರದ ಬಳಿ ಹಾವು ಇರುವ ಬಗ್ಗೆ ಸನ್ಯಾಸಿಯವರಿಗೆ ಎಚ್ಚರಿಕೆ ನೀಡಿದರು.ಆ ಹಾವು ಬಹಳ ಅಪಾಯಕಾರಿಯಾಗಿದೆ ಯಾರೇ ಅದರ ಬಳಿ ಹೋದರು ಅವರನ್ನು ಕಚ್ಚಿಬಿಡುತ್ತದೆ ಎಂದು ಹಳ್ಳಿಯ ಜನರು ಹೇಳುತ್ತಾರೆ. ಆದರೆ ಸನ್ಯಾಸಿ ಅವರ ಮಾತಿಗೆ ಸಣ್ಣದಾಗಿ ನಕ್ಕು, ಮರದ ಕಡೆಗೆ ನಡೆದು ಹೋಗುತ್ತಾರೆ. ಸನ್ಯಾಸಿ ಮರದ ಕೆಳಗೆ ಕುಳಿತು ಧ್ಯಾನ ಶುರುವಾಗ, ತನ್ನ ಜಾಗದಿಂದ ಕೋಪದಿಂದ ಬಸುಕಗುಟ್ಟುತ್ತಾ ಬಂದ ಹಾವು ಸನ್ಯಾಸಿಯನ್ನು ಕಚ್ಚಲು ಸಿದ್ಧವಾಗಿ ನಿಂತಿತ್ತು.ಮಾವಿನ ಹಣ್ಣನ್ನು ನೇರವಾಗಿ ನೋಡುತ್ತಾ ಒಂದು ಮಂತ್ರವನ್ನು ಹೇಳಿದರು. ಅದೊಂದು ಅದ್ಭುತ ಎನ್ನುವ ಹಾಗೆ ಅವು ಅವರ ಜೊತೆಗೆ ಮಾತನಾಡಲು ಶುರು ಮಾಡಿತು. ಹೆಚ್ಚಿನದಾಗಿ ತಿಳಿಯಲು ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ