ಕಣ್ಣಿನ ಕೆಳಗೆ ತುಂಬಾ ಕಪ್ಪಾಗಿದೆಯಾ ಅಂಡರ್ ಐ ಡಾರ್ಕ್ ಸರ್ಕಲ್ ಗೆ ಸುಲಭವಾದ ಮನೆ ಮದ್ದು…ತುಂಬಾ ಜನರಿಗೆ ಕಣ್ಣಿನ ಕೆಳಗಡೆ ಕಪ್ಪಾಗಿರುತ್ತದೆ ಅದನ್ನು ಅಂಡರ್ ಐಡಾರ್ಕ್ ಎಂದು ಕರೆಯುತ್ತಾರೆ ಈ ರೀತಿಯ ಸಮಸ್ಯೆ ಇರುತ್ತದೆ ಇದಕ್ಕೆ ಮನೆ ಮದ್ದು ಇದೆಯಾ ಎಂದು ತುಂಬಾ ಜನ ಕೇಳುತ್ತಿದ್ದರು ಅವರಿಗೋಸ್ಕರ ಈ ವಿಡಿಯೋ ಮಾಡುತ್ತಿದ್ದೇನೆ.ಕಣ್ಣಿನ ಕೆಳಗಡೆ ಕಪ್ಪು ಹೋಗಿಸಲು ನಾವು ಮನೆಯಲ್ಲಿಯೇ ಮನೆಮದ್ದುಗಳನ್ನು.
ಮಾಡಿಕೊಂಡು ಅದನ್ನು ಕಮ್ಮಿ ಮಾಡಿಕೊಳ್ಳಬಹುದು ಅದು ಕಮ್ಮಿ ಆಗದೆ ಇರುವಂತಹ ಸಮಸ್ಯೆ ಏನು ಅಲ್ಲ ಇದು ನಮಗೆ ಯಾವ ರೀತಿಯಾಗಿ ಬಂದಿದ್ದು ಎನ್ನುವುದು ಮುಖ್ಯವಾಗಿರುತ್ತದೆ ಇದು ಏಕೆ ಬರುತ್ತದೆ ಎಂದರೆ ಕೆಲವರಿಗೆ ಜೀನ್ಸ್ ನಲ್ಲಿ ಬರುತ್ತದೆ ಅಂದರೆ ಕೆಲವರು ತಂದೆ ತಾಯಿಗಳಿಗೆ ಕಣ್ಣಿನ ಕೆಳಗಡೆ ಕಪ್ಪಾಗಿದ್ದರೆ ಅದು ನಮಗೂ ಕೂಡ ಬರುತ್ತದೆ ಅಂತಹದನ್ನು.
ಹೋಗಲಾಡಿಸುವುದು ತುಂಬಾ ಕಷ್ಟ ಅದನ್ನು ಬಿಟ್ಟು ಕೆಲವರಿಗೆ ಬಿಸಿಲಿನಲ್ಲಿ ಓಡಾಡುವುದರಿಂದ ಅವರಿಗೂ ಕೂಡ ಕಣ್ಣಿನ ಕೆಳಗಡೆ ಕಪ್ಪಾಗುವ ರೀತಿ ಆಗುತ್ತದೆ ಅಂತಹದನ್ನ ನಾವು ಕಮ್ಮಿ ಮಾಡಬಹುದು ಹಾಗೆ ಮೊಬೈಲ್ ಜಾಸ್ತಿ ನೋಡುವುದರಿಂದ ಲ್ಯಾಪ್ಟಾಪ್ ಜಾಸ್ತಿ ನೋಡುವುದರಿಂದ ಹಾಗೆ ನಿದ್ದೆ ಸರಿಯಾಗಿ ಮಾಡಿಲ್ಲದೆ ತುಂಬಾ ಟೆನ್ಶನ್ ಸರಿಯಾಗಿ ವಿಶ್ರಾಂತಿ.
ತೆಗೆದುಕೊಳ್ಳದಿದ್ದರೆ ಕೂಡ ಆಗುತ್ತದೆ ಏಜಾಗುತ್ತಾ ನಮ್ಮ ಕಣ್ಣಿನ ಕೆಳಗಿನ ಚರ್ಮದ ಬಣ್ಣ ಬದಲಾಗುತ್ತದೆ ಇಂತಹದವುಗಳನ್ನೆಲ್ಲ ನಾವು ಸುಲಭವಾಗಿ ಮನೆ ಮದ್ದು ಮಾಡುವುದರ ಮೂಲಕ ಕಮ್ಮಿ ಮಾಡಿಕೊಳ್ಳಬಹುದು ತುಂಬಾನೇ ಸುಲಭವಾಗಿ ರುವಂತಹ ಕೆಲವು ಮನೆಮದ್ದುಗಳನ್ನು ನಾನು ನಿಮಗೆ ಹೇಳಿಕೊಡುತ್ತಿದ್ದೇನೆ. ಮೊದಲನೆಯದಾಗಿ ತುಂಬಾನೇ ಸುಲಭವಾಗಿ ಎಲ್ಲರ.
ಮನೆಯಲ್ಲೂ ಇರುವಂತಹದ್ದು ಅಥವಾ ನೀವು ಉಪಯೋಗಿಸಿಲ್ಲವೆಂದರೆ ಹೊರಗಡೆಯಿಂದ ತರಬಹುದು ಅದು ಏನು ಎಂದರೆ ತೆಂಗಿನ ಹೆಣ್ಣೆ ಕಲಬೆರಕೆ ಇಲ್ಲದಂತಹ ತೆಂಗಿನ ಎಣ್ಣೆ ಸಿಕ್ಕರೆ ಅದನ್ನ ಕಣ್ಣಿನ ಕೆಳಭಾಗಕ್ಕೆ ಸ್ವಲ್ಪ ಹಚ್ಚಿಕೊಳ್ಳಬೇಕು ನೀವು ರಾತ್ರಿ ಮಲಗುವಾಗ ಹಚ್ಚಿಕೊಂಡು ಬೆಳಗ್ಗೆ ತೊಳೆಯಬೇಕು,ಈ ತೆಂಗಿನ ಎಣ್ಣೆಯಲ್ಲಿ ಚರ್ಮವನ್ನು ಹೊಳೆಯುವಂತೆ ಮಾಡುವ.
ಶಕ್ತಿ ಇರುತ್ತದೆ ಅದರಿಂದ ನಾವು ದಿನ ಇದನ್ನು ಅಚ್ಚುತ್ತಾ ಬಂದರೆ ನಮ್ಮ ಕಣ್ಣಿನ ಕೆಳಭಾಗದಲ್ಲಿ ಇರುವಂತಹ ಡಾರ್ಕ್ ಸರ್ಕಲ್ ದಿನ ಹೋಗುತ್ತಿದ್ದ ಹಾಗೆ ಕಡಿಮೆಯಾಗುತ್ತದೆ ಕಣ್ಣಿನ ಒಳಗೆ ಹಾಕಬಾರದು ಕಣ್ಣಿನ ಕೆಳಭಾಗದಲ್ಲಿ ಮಾತ್ರ ರಾತ್ರಿಯ ಸಮಯದಲ್ಲಿ ಅಚ್ಚಿ ನಾವು ಮಲಗಬೇಕು.ಎರಡನೆಯದು ಇದು ತುಂಬಾ ಜನಗಳಿಗೆ ಗೊತ್ತಿರುತ್ತದೆ ಅದು ಏನು ಎಂದರೆ.
ಸೌತೆಕಾಯಿ, ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಬಿಟ್ಟು ರೌಂಡ್ ಆಗಿ ಕಟ್ ಮಾಡಿ ನಿಮಗೆ ಗೊತ್ತಿರುತ್ತದೆ ಅದನ್ನು ಹೇಗೆ ಕಟ್ ಮಾಡಿಕೊಳ್ಳಬೇಕು ಎಂದು ಕಟ್ ಮಾಡಿದ ನಂತರ ಎರಡನ್ನು ಕಣ್ಣಿನ ಮೇಲೆ ಇಡಬೇಕು ಆದರೆ ಕಣ್ಣಿನ ಮೇಲೆ ಇಡುವುದಕ್ಕೂ ಮುಂಚೆ ಕತ್ತರಿಸಿದ ಸೌತೆಕಾಯಿಯನ್ನು ಅರ್ಧ ಗಂಟೆ ಮುಂಚೆಯೇ ಫ್ರಿಡ್ಜ್ ನಲ್ಲಿ ಇಡಬೇಕು ಏಕೆಂದರೆ ಕಣ್ಣನ್ನು ಜಾಸ್ತಿ.
ತಂಪಾಗಿ ಮಾಡಬೇಕು ಹಾಗೆ ಮಾಡಿದರೆ ಕಣ್ಣಿನ ಕೆಳಭಾಗದಲ್ಲಿ ಇರುವಂತಹ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತಾ ಹೋಗುತ್ತದೆ ಅದರಿಂದ ಸೌತೆಕಾಯಿಯನ್ನು ನೇರವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟರೆ ಕಡಿಮೆಯಾಗುತ್ತದೆ ಆದರೆ ನೀವು ಫ್ರಿಜ್ಜಿನಲ್ಲಿ ಇಟ್ಟು ಆಮೇಲೆ ಕಣ್ಣಿನ ಮೇಲೆ ಇಟ್ಟರೆ ಅದು ತುಂಬಾ ಉಪಯುಕ್ತ.
ಇದನ್ನು ದಿನಕ್ಕೆ ಎರಡು ಬಾರಿ ಮಾಡಬಹುದು ಹತ್ತು ನಿಮಿಷಗಳ ಕಾಲ ಎರಡು ಕಣ್ಣಿಗೂ ಎರಡು ಸೌತೆಕಾಯಿಗಳನ್ನು ಇಟ್ಟು 10 ನಿಮಿಷ ಆದ ನಂತರ ನೀವು ಮುಖ ತೊಳೆಯಬಹುದು ದಿನ ಈ ರೀತಿಯಾಗಿ ಮಾಡುತ್ತಾ ಬಂದರೆ ನಮ್ಮ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ