ಕಾಂತರಾ 2ಗೆ ಅಪ್ಪಣೆ ಕೊಟ್ಟ ಅಣ್ಣಪ್ಪ ಪಂಜುರ್ಲಿ…..ಕನ್ನಡ ಚಿತ್ರರಂಗದಲ್ಲಿ ಅತಿ ಕಡಿಮೆ ಹಣದಲ್ಲಿ ತಯಾರಾದ ಸಿನಿಮಾ ಪ್ರಪಂಚದಾದ್ಯಂತ ದೊಡ್ಡ ಮಟ್ಟದಲ್ಲಿ ಗಳಿಕೆಯನ್ನು ಕಂಡಿರುವ ಚಿತ್ರ ಕಾಂತಾರ ಈ ಸಿನಿಮಾವನ್ನು ನೋಡಿ ರೋಮಾಂಚನಗೊಂಡಿರುವ ಅಭಿಮಾನಿಗಳು ಈ ಚಿತ್ರದ ಎರಡನೇ ಭಾಗಕ್ಕಾಗಿ ಕಾಯುತ್ತಿದ್ದಾರೆ ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರ್ಗಂಧವ ಅವರು ಮಂಗಳೂರಿನಲ್ಲಿ ಅಣ್ಣಪ್ಪನಿಗೆ ಪೂಜೆಯನ್ನು ಸಲ್ಲಿಸಿದ್ದಾರೆ ಆ ಜಾಗದಲ್ಲಿ ಕೃಷ್ಣ ಎಂಬುವರ ಅಧ್ಯಕ್ಷತೆಯಲ್ಲಿ ಆ ಕೋಲವು ನಡೆದಿತ್ತು ಆ ಸಂದರ್ಭದಲ್ಲಿ ಕಾಂತರಾ ಭಾಗ ಎರಡು ಮಾಡಲು ಅನುಮತಿಯನ್ನು ಕೇಳಿದ್ದಾರೆ,ಆಗ ಅದೈವವೋ ಈ ರೀತಿ ಹೇಳಿದೆ ನೀವು ಸಿನಿಮಾವನ್ನು ಪ್ರಾರಂಭಿಸಬಹುದು ನಾನು ನಿಮ್ಮ ಒಟ್ಟಿಗೆ ಇರುತ್ತೇನೆ ಹಾಗೂ ಮೊದಲ ಭಾಗ ಮಾಡಿದಷ್ಟೇ ಶುದ್ದಿಯಿಂದ ಭಾಗ ಎರಡರ ಚಿತ್ರೀಕರಣವನ್ನು ಅಷ್ಟೇ ಶ್ರದ್ಧೆ ನಿಷ್ಠೆಯಿಂದ ಮಾಡಬೇಕು ಚಿತ್ರದ ಕಾವಲಿಗೆ ಸದಾ ಇರುತ್ತೇನೆ ಎಂದು ದೈವ ನುಡಿಯುತ್ತದೆ ಹಾಗೂ ಎಚ್ಚರಿಕೆಯಿಂದ ಇರಬೇಕು ಎಂದು ಸಹ ಹೇಳುತ್ತದೆ.

ಇದರ ಮುಂದಿನ ಭಾಗಕ್ಕಾಗಿ ಅನೇಕರು ಕಾಯುತ್ತಿದ್ದಾರೆ ಹಾಗೂ ನಮ್ಮ ಚಿತ್ರರಂಗ ಅಲ್ಲದೆ ಪರಭಾಷೆ ಚಿತ್ರರಂಗವು ಕೂಡ ಇದಕ್ಕೆ ಹೆಚ್ಚು ಕಾತುರತೆಯಿಂದ ಕಾಯುತ್ತಿದೆ ವ್ಯಾಪಾರ ರೀತಿಯಲ್ಲೂ ಸಹ ಹೊಂಬಾಳೆ ಫಿಲಂಸ್ ಅವರು ಕೆಜಿಎಫ್ ಅನ್ನು ನಿರ್ಮಾಣ ಮಾಡಿ ನಂತರ ಕೆಜಿಎಫ್ ಟು ನಿರ್ಮಾಣ ಮಾಡಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ ಅದೇ ತರಹ ಚಿತ್ರ ಪ್ರದರ್ಶನವಾಗಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಇಡೀ ವಿಶ್ವವೇ ಈ ಚಿತ್ರದ ಬಗ್ಗೆ ಮಾತನಾಡುವಷ್ಟು ದಾಖಲೆಗಳನ್ನು ಮಾಡಿದೆ ಹಾಗಾಗಿ ಈ ಚಿತ್ರದ ಎರಡನೇ ಭಾಗಕ್ಕೆ ಅನೇಕ ಬೇಡಿಕೆಗಳು ಹಾಗೂ ಕುತೂಹಲಗಳು ಹೆಚ್ಚಾಗಿವೆ. ಈ ಚಿತ್ರದ ಆರಂಭದ ಹಾಗೂ ಅಂತ್ಯ ಎರಡರಲ್ಲೂ ಇದು ಒಂದು ಹೋರಾಟಕ್ಕೆ ಸಂಬಂಧಪಟ್ಟ ವಿಷಯವನ್ನು ತೆರೆಯ ಮೇಲೆ ತೋರಿಸಿದ್ದಾರೆ ಕಾಡಿನಲ್ಲಿ ವಾಸವಾಗಿರುವ ಜನರು ಅವರ ಹಕ್ಕನ್ನು ಹಾಗೂ ಅವರ ಪ್ರಾಚೀನ ಜಾಗವನ್ನು ಅವರಿಗೆ ಸಿಗುವಂತೆ ತೋರಿಸುವಲ್ಲಿ ರಿಷಬ್ ಶೆಟ್ಟಿ ಅವರ ಛಾಯಾಗ್ರಹಣ ಮತ್ತು ಇದರಲ್ಲಿ ಒಂದು ಮುಖ್ಯ ಪಾತ್ರವನ್ನು ಹೊಂದಿದೆ.

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಆಶ್ಚರ್ಯಕರ ಸಂಗತಿ ಇದು ಕೇವಲ 15 ಕೋಟಿ ಬಂಡವಾಳವನ್ನು ಹಾಕಿ 400 450 ಕೋಟಿಯಷ್ಟು ತೆಗೆದ ಈ ಸಿನಿಮಾ,ಭಾಗ ಎರಡು ಸಿನಿಮಾ ಪ್ರದರ್ಶನಕೊಂಡರೆ ಇನ್ನು ಎಷ್ಟು ಹಣವನ್ನು ಗಳಿಸಬಹುದು ಎಂದು ಈಗಿನಿಂದಲೇ ಗಾಂಧಿನಗರದ ಪಂಡಿತರು ಯೋಚಿಸುತ್ತಿದ್ದಾರೆ ಹಾಗಾಗಿ ಈ ಚಿತ್ರದ ಎರಡನೇ ಭಾಗಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಹಾಗೂ ಈ ಸಿನಿಮಾದಲ್ಲಿ ಇನ್ನೂ ಹಲವು ವಿಷಯಗಳ ಬಗ್ಗೆ ತೋರಿಸುತ್ತಾರೆ ಎಂದು ಜನರಿಗೆ ನಂಬಿಕೆ ಇದೆ ಮೊದಲಿಗೆ ದೈವದ ಹತ್ತಿರ ಅಪ್ಪಣೆಯನ್ನು ಕೇಳಿ ಚಿತ್ರತಂಡ ಸಿನಿಮಾವನ್ನು ಶುರು ಮಾಡಲು ಹೊರಟಿದೆ ಈ ಸಿನಿಮಾ ತಂಡಕ್ಕೆ ಯಶಸ್ವಿಯಾಗಲಿ ಹಾಗೂ ಕಾಂತರಾ ಭಾಗ ಎರಡು ಕೂಡ ಈ ಚಿತ್ರಕ್ಕಿಂತ ಹೆಚ್ಚು ಪ್ರಸಂಶೆಯನ್ನು ಗಳಿಸಲಿ ಎಂದು ಪ್ರತಿಯೊಬ್ಬರ ಆಸೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ