ಹೀಗೆ ಮಾಡಿದರೆ ನೀರಿನಲ್ಲಿ ಮುಳುಗಿದ ಕಾರಿನಿಂದ ಹೊರಗೆ ಬರಬಹುದು:ಸಾಮಾನ್ಯವಾಗಿ ಇತ್ತೀಚಿಗಷ್ಟೇ ರೇಣುಕಾಚಾರ್ಯ ಅವರ ಸಂಬಂಧಿ ಈ ರೀತಿ ಅವಘಡದಿಂದ ಸಾವನಪ್ಪಿದ್ದಾರೆ ಈ ಕಾರಿನಲ್ಲಿ ಮುಳುಗಿಕೊಂಡಾಗ ಅದರಿಂದ ಹೊರಗೆ ಬರಲು ಮಾರ್ಗಗಳು ಇವೆ ಕಾರು ನೀರಿಗೆ ಬಿದ್ದಾಗ ಬ್ರೇಕ್ ಮತ್ತು ಕ್ಲಚ್ ಕಂಟ್ರೋಲ್ ಕಳೆದುಕೊಳ್ಳುತ್ತದೆ ಕಾರು ಮುಳುಗಲು ಶುರುವಾಗುತ್ತದೆ ಎರಡು ನಿಮಿಷದ ನಂತರ ನೀರು ಕಾರಿನ ಒಳಗೆ ಬರಲು ಶುರುವಾಗುತ್ತದೆ ಐದಾರು ನಿಮಿಷದ ಒಳಗೆ ಕಾರಿನಲ್ಲಿ ಪೂರ್ತಿಯಾಗಿ ನೀರು ಆವರಿಸಿಕೊಂಡುಬಿಡುತ್ತದೆ. ಹೀಗಾಗಿ ಕಾರು ನೀರಿಗೆನಲ್ಲಿ ಮುಳುಗಿದಾಗ ಕೆಲವು ಅಂಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಎರಡು ರೀತಿಯ ಮಾರ್ಗವನ್ನು ಅನುಸರಿಸಬಹುದು ಪ್ಲಾನ್ ಎ ಕಾರು ನೀರಲ್ಲಿ ಮುಳುಗಿದ ತಕ್ಷಣ ಏನು ಮಾಡಬೇಕು ಎಂದರೆ ಸೀಟ್ ಬೆಲ್ಟ್ ಅನ್ನು ಮೊದಲಿಗೆ ತೆಗೆದು ಹಾಕಬೇಕು ಎರಡು ನಿಮಿಷದ ಒಳಗೆ ಈ ಮಾರ್ಗವನ್ನು ಕಂಡುಕೊಂಡರೆ ಒಳ್ಳೆಯದು ಕಾರಿನ ಗ್ಲಾಸನ್ನು ನಿಧಾನವಾಗಿ ತೆಗೆದು ಅದರಿಂದ ಹೊರಗೆ ಹೋಗಿ ಜೀವ ಉಳಿಸಿಕೊಳ್ಳಬಹುದು.
ಸಾಮಾನ್ಯವಾಗಿ ಗಡಿಬಿಡಿಯಲ್ಲಿ ಕಾರಿನ ಬಾಗಿಲನ್ನು ತೆಗೆಯಲು ಹೋದಾಗ ಅದು ನಿಮಗೆ ಕೆಟ್ಟ ರೀತಿಯಲ್ಲಿ ತಿರುಗುತ್ತದೆ ಏಕೆಂದರೆ ನೀವು ಕಾರಿನಲ್ಲಿ ಬಿದ್ದ ನಂತರ ನಿಮ್ಮ ಮೆದುಳು ಅಷ್ಟಾಗಿ ಸಮಾಧಾನಕರವಾಗಿ ಇರುವುದಿಲ್ಲ ಹಾಗಾಗಿ ಕಾರಿನ ಬಾಗಿಲನ್ನು ತೆಗೆಯಲು ಯತ್ನಿಸಿ, ಕಾರಿನ ಒಳಗೆ ಫುಲ್ಲಾಗಿ ಆ ನಿಮಿಷವೇ ನೀರು ತುಂಬಿ ನೀವು ಕೂಡ ಪ್ರಾಣ ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ, ಒಂದು ವೇಳೆ ಆ ಸಮಯದಲ್ಲಿ ಕಿಟಕಿಯು ತೆರೆಯದಿದ್ದರೆ ಕಾರಿನ ಒಳಗೆ ಇರುವ ಯಾವುದಾದರು ಒಂದು ಲೋಹದ ವಸ್ತುವನ್ನು ತೆಗೆದು ಆ ಕಿಟಕಿಯನ್ನು ಹೊಡೆಯಲು ಯತ್ನಿಸಬೇಕು, ಹಾಗಾಗಿ ಮೊದಲು ಕಾರಿನ ಕಿಟಗಕಿಯನ್ನು ತೆಗೆದು ನಂತರ ಹೊರಗೆ ಹೋಗಿ ಜೀವವನ್ನು ಉಳಿಸಿಕೊಳ್ಳಬಹುದು. ಕಾರುಗಳಲ್ಲಿ ಮಕ್ಕಳು ಇದ್ದರೆ ಏನು ಮಾಡಬೇಕು ಸಾಮಾನ್ಯವಾಗಿ ಒಬ್ಬರೇ ಇದ್ದರೆ ಮೊದಲು ಸಿಟ್ ಬೆಲ್ಟ್ ಅನ್ನು ತೆಗೆದು ನಂತರ ಕಿಟಕಿಯನ್ನು ಹೊಡೆದು ನೀವು ಹೊರಗೆ ಹೋಗಬಹುದು ಆದರೆ ಮಕ್ಕಳಿದ್ದರೆ ಮೊದಲು ಆ ಮಕ್ಕಳನ್ನು ಕಿಟಕಿ ತೆಗೆದು ಮಕ್ಕಳನ್ನು ರಕ್ಷಿಸಿ ನಂತರ ನೀವು ಹೋಗಬೇಕು.
ಪ್ಲಾನ್ ಬಿ ಸಾಮಾನ್ಯವಾಗಿ ಕಾರಿನ ಕಿಟಕಿಯನ್ನು ಹೊಡೆಯಲು ಸಾಧ್ಯವಾಗಲಿಲ್ಲ ಮತ್ತು ಕಾರು ಬೇಗನೆ ಮುಳಗಲು ಆರಂಭಿಸಿತು ಈ ಸಂದರ್ಭದಲ್ಲಿ ಕಾರು ಮುಕ್ಕಾಲ್ ಭಾಗ ನೀರು ತುಂಬಿಸುವವರೆಗೂ ಕಾಯಬೇಕು ಕಾರು ನೀರಿನಲ್ಲಿ ಮುಳುಗಿದ ಕೆಲವು ಸಮಯದಲ್ಲಿ ನೀವು ಕಾರಿನ ಬಾಗಿಲನ್ನು ತೆಗೆಯಲು ಸಾಧ್ಯವಾಗುವುದಿಲ್ಲ ಯಾಕೆಂದರೆ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ ಹಾಗಾಗಿ ಕಾರು ಇನ್ನೇನು ಮುಳುಗುವ ಸಂದರ್ಭ ಬಂತು ಎಂದು ತಿಳಿದಾಗ ನೀವು ಕಾಲಿನಿಂದ ಕಾರನು ಒದ್ದು ಆ ಸಮಯದಲ್ಲಿ ಆ ಬಾಗಿಲನ್ನು ತೆಗೆದು ನಂತರ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು, ನೀವು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಈ ಮಾರ್ಗವನ್ನು ಬಳಸಿದರೆ ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.