ಜಗತ್ತಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ ಕುಂಭಮೇಳಕ್ಕೆ ಪ್ರಯಾಗ್ರಾಜ್ 45 ದಿನದ ಕಾರ್ಯಕ್ರಮ 45 ಕೋಟಿ ಜನಗಳ ನಿರೀಕ್ಷೆಯನ್ನ ಪಟ್ಟಿದೆ ಇದಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಗುತ್ತದೆ ಹಾಗೂ ಕೋಟಿ ಕೋಟಿ ಹಣವನ್ನು ಆದಾಯದ ರೂಪದಲ್ಲಿ ಗಳಿಸಲಾಗುತ್ತದೆ ಸಾಧು, ಸಂತರು, ಅಗೋರಿಗಳು, ನಾಗ ಸಾಧುಗಳು, ಇವರೆಲ್ಲರೂ ತಂಡಗಳಾಗಿ ಬಂದು ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ ಗಂಗಾ ಯಮುನಾ ನದಿಗಳ ಸಂಗಮದ ಸ್ಥಳ ಗುಪ್ತಗಾಮಿನಿ ಸರಸ್ವತಿ ಸಹ ಆಗಮಿಸುತ್ತಾಳೆ ಎಂಬ ಪ್ರಕೃತಿ ಇದೆ ಆ ಒಂದು ಸ್ಥಳದಲ್ಲಿ ಪುಣ್ಯ ಸ್ನಾನವನ್ನು ಮಾಡಲಾಗುತ್ತಿದೆ ಈ ಬಾರಿಯ ಮಹಾಕುಂಭ ಮೇಳಕ್ಕೆ ವಿಶೇಷವಾದ ವ್ಯವಸ್ಥೆಯನ್ನ ಮಾಡಿಕೊಡಲಾಗುತ್ತದೆ ಸುಮಾರು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಕ್ರಮವೆಂದರೆ ಬಹಳ ದೊಡ್ಡದಾಗಿಯೇ ಇರುತ್ತದೆ.
ಕುಂಭಮೇಳದಲ್ಲಿ ಪೂರ್ಣ ಕುಂಭಮೇಳ ಮಹಾಕುಂಭಮೇಳ ಎಂದು ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ ಇದು ನಾಲ್ಕು ವರ್ಷಕ್ಕೊಮ್ಮೆ ಆರು ವರ್ಷಕ್ಕೊಮ್ಮೆ 12 ವರ್ಷಕ್ಕೊಮ್ಮೆ ನಡೆಯುತ್ತದೆ ಇನ್ನು ಕೊನೆಯದಾಗಿ 144 ವರ್ಷಗಳಿಗೊಮ್ಮೆ ನಡೆಯುವಂತಹ ಮಹಾಕುಂಭಮೇಳವಾಗಿರುತ್ತದೆ ಈಗ ನಡೆಯುತ್ತಿರುವ ಅಂತಹ ಮಹಾಕುಂಭಮೇಳ 144 ವರ್ಷಕ್ಕೊಮ್ಮೆ ನಡೆಯುವಂತಹ ವಿಶೇಷವಾದಂತಹ ಧಾರ್ಮಿಕ ಕಾರ್ಯಕ್ರಮ ಈ ಕಾರಣಕ್ಕಾಗಿಯೇ ಈ ಒಂದು ಕಾರ್ಯಕ್ರಮಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನ ಮಾಡಲಾಗಿದೆ ಜೊತೆಗೆ ಈ ಒಂದು ಕಾರ್ಯಕ್ರಮಕ್ಕೆ ಇಡೀ ಜಗತ್ತು ಈ ಒಂದು ಕಾರ್ಯಕ್ರಮವನ್ನು ಬಹಳ ವಿಶೇಷವಾಗಿ ಗಮನಿಸುತ್ತಿದೆ ಹಾಗಾದರೆ ಈ ಕುಂಭಮೇಳದ ಹಿನ್ನೆಲೆಯನ್ನ ನೋಡುವುದಾದರೆ ಹಸುರವ್ರು ಹಾಗೂ ದೇವತೆಗಳ ನಡುವೆ ಸಮುದ್ರ ಮಂಥನ ನಡೆಯುತ್ತದೆ ಆ ಸಂದರ್ಭದಲ್ಲಿ ಎಲ್ಲರಿಗೂ ತಿಳಿದಂತೆ ಅಮೃತ ಸಿಗುತ್ತದೆ ಆ ಕೆಲವು ಅಮೃತದ ಹನಿ ಭೂಮಿಗೆ ಬೀಳುತ್ತದೆ ಪ್ರಯಾಗ, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿ ಈ ನಾಲ್ಕು ಭಾಗಗಳಲ್ಲಿ ಪುಣ್ಯ ಸ್ನಾನವನ್ನು ಮಾಡಿದರೆ ನಮಗೆ ವಿಶೇಷವಾದ ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಆ ಸ್ಥಳಗಳಲ್ಲಿ ವಿಶೇಷವಾಗಿ ಕುಂಭಮೇಳ ನಡೆಯುತ್ತದೆ ಇದು ಕುಂಭಮೇಳದ ಸಣ್ಣ ಹಿನ್ನೆಲೆ.
ಕುಂಭಮೇಳದಲ್ಲಿ ಸಾಮಾನ್ಯವಾಗಿ ಗಮನ ಸೆಳೆಯುವವರು ನಾಗಸಾಧುಗಳು ಈ ನಾಗ ಸಾಧುಗಳು ನಿಗೂಢವಾಗಿ ನಮ್ಮೆಲ್ಲರಿಗೂ ಕಾಣಿಸಿಕೊಳ್ಳುತ್ತಾರೆ ಜೊತೆಗೆ ಕುಂಭಮೇಳದ ಸಂದರ್ಭದಲ್ಲಿ ಲಕ್ಷ ಮಂದಿಗಳು ಮಾಯವಾಗುತ್ತಾರೆ. ಸಾಮಾನ್ಯ ಜನರ ವಾಸ ಸ್ಥಳದಲ್ಲಿ ಇವರು ಕಾಣಿಸುವುದು ಬಹಳ ಕಡಿಮೆ ಧಾರ್ಮಿಕ ಪ್ರದೇಶದಲ್ಲಿ ಅಥವಾ ಧಾರ್ಮಿಕ ಕ್ಷೇತ್ರಗಳಲ್ಲಿಯೂ ಸಹ ಇವರು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ ಹೀಗಾಗಿ ಎಲ್ಲರಿಗೂ ಸಹ ಇವರ ಬಗ್ಗೆ ಕುತೂಹಲವಿದೆ ಯಾರು ಈ ನಾಗ ಸಾಧುಗಳು ಎಲ್ಲಿ ಜೀವಿಸುತ್ತಾರೆ ಎಲ್ಲಿಯೂ ಕಾಣಿಸದ ಇವರು ಕುಂಭಮೇಳದ ಸಂದರ್ಭದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಜೊತೆಗೆ ಅವರ ವೇಷ ಭೂಷಣ ವಿಚಿತ್ರವಾಗಿ ಇರುತ್ತದೆ ಕೆಲವೊಂದು ಜನ ಉದ್ದವಾದ ಕೂದಲನ್ನು ಬಿಟ್ಟಿರುತ್ತಾರೆ. ಕೆಲವೊಂದಷ್ಟು ಜನ ಉದ್ದವಾದ ಉಗುರನ್ನು ಬಿಟ್ಟಿರುತ್ತಾರೆ ಮತ್ತು ಕೆಲವೊಂದುಷ್ಟು ಮಂದಿ ಕೈಗಳನ್ನ ಎತ್ತಿಕೊಂಡಿರುತ್ತಾರೆ ಆ ಕೈಗಳನ್ನು ಎಂದಿಗೂ ಸಹ ಕೆಳಗೆ ಇಳಿಸುವುದೇ ಇಲ್ಲ ಮತ್ತು ಕೆಲವೊಂದಷ್ಟು ಜನರು ಒಂಟಿ ಕಾಲಿನಲ್ಲಿ ನಡೆಯುತ್ತಿರುತ್ತಾರೆ ಜೊತೆಗೆ ವಿಶಿಷ್ಟವಾದ ಆಚರಣೆ ಎಲ್ಲವನ್ನು ಸಹ ಅನುಸರಿಸುತ್ತಿರುತ್ತಾರೆ ಕೆಲವೊಂದಷ್ಟು ನಾಗ ಸಾಧುಗಳು ಸಂಪೂರ್ಣವಾಗಿ ನಗ್ನರಾಗಿರುತ್ತಾರೆ ಕೆಲವೊಂದು ಅಷ್ಟು ಜನರು ತುಂಡು ಬಟ್ಟೆಯನ್ನು ಧರಿಸಿರುತ್ತಾರೆ ಕೈಯಲ್ಲಿ ತ್ರಿಶೂಲ ದಂಡ ಯಾವುದಾದರೂ ಒಂದು ಆಯುಧ ಅವರ ಬಳಿ ಸದಾ ಇದ್ದೇ ಇರುತ್ತದೆ.
ಕೆಲವೊಂದು ಅಷ್ಟು ನಾಗ ಸಾಧುಗಳು ರೌದ್ರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಕೆಲವೊಂದಿಷ್ಟು ಜನರು ಸಾಧು ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಕುಂಭಮೇಳದಲ್ಲಿ ಇವರಿಗೆ ವಿಶೇಷವಾದ ಅವಕಾಶವನ್ನು ಮಾಡಿಕೊಡಲಾಗುತ್ತದೆ ಶಾಹಿ ಸ್ನಾನ ಅಥವಾ ಪವಿತ್ರ ಸ್ನಾನ ಪವಿತ್ರವಾದ ಮೊದಲನೇ ಸ್ನಾನವನ್ನು ಇವರು ಮಾಡುತ್ತಾರೆ ನಂತರ ಉಳಿದವರು ಆ ಪವಿತ್ರ ಸ್ನಾನವನ್ನು ಮಾಡಲಾಗುತ್ತದೆ ಇವರು ಯಾರು? ಇವರು ಹೇಗೆ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ ಇವರು ಎಲ್ಲಿ ವಾಸಿಸುತ್ತಾರೆ ಎನ್ನುವುದನ್ನ ಸ್ವಲ್ಪ ಮಟ್ಟಿಗೆ ಮಾಹಿತಿಯನ್ನ ತಿಳಿಸಿಕೊಡುತ್ತೇವೆ ಎಂದರೆ ಕೇವಲ ಪುರುಷರು ಮಾತ್ರ ಇರುವುದಿಲ್ಲ ಇದರಲ್ಲಿ ಮಹಿಳೆಯರು ಸಹ ಇರ್ತಾರೆ ಇಲ್ಲಿ ಮಹಿಳೆಯರನ್ನ ಸಾದ್ವಿಗಳು ಎಂದು ಕರೆಯಲಾಗುತ್ತದೆ ಮೊದಲೆಲ್ಲಾ ನಾಗಸಾಧುಗಳು ಎಂದರೆ ಇವರು ಹೆಚ್ಚಾಗಿ ಓದಿಕೊಂಡಿರಲಿಲ್ಲ ಹಾಗೂ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ ಇವರು ಎಂದು ಅಂದುಕೊಂಡಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಓದಿಕೊಂಡಿದ್ದವರು ಹಾಗೂ ಒಳ್ಳೆಯ ಕೆಲಸದಲ್ಲಿ ದು ಕೈ ತುಂಬಾ ಸಂಬಳವನ್ನು ಪಡೆಯುತ್ತಿದ್ದವರು ಸಹ ನಾಗು ಸಾಧುಗಳಾಗಿ ದೀಕ್ಷೆಯನ್ನು ಪಡೆದಿದ್ದಾರೆ ಬಣ್ಣದ ಬದುಕಿನಿಂದ ದೂರವಾಗಿ ನಾಗಸಾಧುಗಳಾಗಿ ದೀಕ್ಷೆಯನ್ನು ಬಹಳಷ್ಟು ಮಂದಿ ಪಡೆದಿದ್ದಾರೆ ಜೊತೆಗೆ ಅವರು ಕುಂಭಮೇಳದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಾಗಸಾಧುಗಳ ಹಿನ್ನೆಲೆ ಏನೆಂದರೆ ಎಂಟನೇ ಶತಮಾನದ ಶಂಕರಾಚಾರ್ಯರ ಕಾಲದಲ್ಲಿ ಇಂದು ಸಮುದಾಯಕ್ಕೆ ಯಾವುದಾದರೂ ತೊಂದರೆಯಾದಂತಹ ಸಂದರ್ಭದಲ್ಲಿ ಅಥವಾ ಸನಾತನ ಸಂಸ್ಕೃತಿಗೆ ಯಾವುದಾದರೂ ತೊಂದರೆಯಾದ ಸಂದರ್ಭದಲ್ಲಿ ಹೋರಾಡುವುದಕ್ಕೆ ಬೇಕು ಎಂದು ಈ ಸೈನ್ಯವೊಂದನ್ನ ತಯಾರು ಮಾಡಲಾಗಿತ್ತು ಎನ್ನುವ ಉಲ್ಲೇಖವಿದೆ ಅಂದರೆ ಇಲ್ಲಿ ಶಂಕರಾಚಾರ್ಯರು ನಾಲ್ಕು ಮೂಲೆಗಳಿಗೆ ನಾಲ್ಕು ಅವರ ಶಿಷ್ಯರನ್ನು ಕಳಿಸುತ್ತಾರೆಅದರಲ್ಲಿ ಶೃಂಗೇರಿ ಸಹ ಒಂದು ಈ ರೀತಿಯಾಗಿ ಹೋದಂತಹ ಶಿಷ್ಯಂದರು ತಮ್ಮದೇ ಆದ ರೀತಿಯಲ್ಲಿ ತನ್ನ ತಂಡವನ್ನು ರಚನೆ ಮಾಡಿಕೊಳ್ಳುತ್ತಾರೆ ನಂತರ ಅವರು ನಾಗಸಾಧುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದರೆ ಅವರಿಗೆ ಶಾಸ್ತ್ರವೂ ಗೊತ್ತಿರಬೇಕು ಹಾಗೂ ಶಸ್ತ್ರವೂ ಗೊತ್ತಿರಬೇಕು ಎನ್ನುವಂತೆ ಅಂದರೆ ಆಧ್ಯಾತ್ಮ ಲೋಕದ ಪರಿಚಯು ಇರಬೇಕು ಜೊತೆಗೆ ಶಾಸ್ತ್ರದ ಬಗ್ಗೆಯೂ ಸಹ ತಿಳಿದಿರಬೇಕು ಜೊತೆಗೆ ಶತ್ರುವನ್ನು ಹಿಡಿದು ಹೋರಾಡುವ ಶಕ್ತಿಯನ್ನು ಸಹ ಹೊಂದಿರಬೇಕು, ಆದರೆ ಇನ್ನೊಂದು ಉಲ್ಲೇಖವೇನೆಂದರೆ ಅದಾಗಲೇ ಇದ್ದಂತಹ ಸಾಧುಗಳು ಅವರನ್ನು ಒಗ್ಗೂಡಿಸಿ ನಾಗಸಾಧುಗಳನ್ನಾಗಿ ಮಾಡಿದರು ಶಂಕರಾಚಾರ್ಯರು ಎಂಬ ಉಲ್ಲೇಖವಿದೆ ಕೆಲವೊಂದಷ್ಟು ಜನರು ಹೇಳುತ್ತಾರೆ ಶಂಕರಾಚಾರ್ಯರು ನಾಗಸಾಧುಗಳಿಗಾಗಿ ಉಲ್ಲೇಖ ಮಾಡುವ ಮೊದಲೇ ನಾಗಸಾಧುಗಳು ಇದ್ದರು ಎಂದು ಸಹ ಕೆಲವೊಂದು ನೀಡಿದ್ದಾರೆ ಹೀಗಾಗಿ ನಾಗ ಸಾಧುಗಳ ಉಲ್ಲೇಖ ಸುಮಾರು ಎಂಟು ವರ್ಷಗಳ ಹಿಂದೆಯೇ ಇದೆ ಎಂಬುದು ಎಲ್ಲರಿಗೂ ಸಹ ತಿಳಿದು ಬಂದಿದೆ
ನಾಗ ಸಾಧುಗಳ ಜೀವನ ಶೈಲಿ ಯಾವ ರೀತಿ ಇರುತ್ತದೆ ಎಂದರೆ ಮೊದಲನೆಯದಾಗಿ ದೇಹದ ಮೇಲೆ ಸಂಪೂರ್ಣವಾಗಿ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಬಿಟ್ಟಿರುತ್ತಾರೆ ಆಸ್ತಿ ಮಾಡುವುದು ಮದುವೆಯಾಗುವುದು ಯಾವ ಆಸೆಯೂ ಇರುವುದಿಲ್ಲ ಬ್ರಹ್ಮಚಾರಿಯನ್ನ ಪರಿಪಾಲಿಸುತ್ತಾರೆ ಆ ಒಂದು ಕಠಿಣ ಕ್ರಮವನ್ನು ಕೈಗೊಳ್ಳುತ್ತಾರೆ ಜೊತೆಗೆ ದೇಹದ ಮೇಲೆ ಸಣ್ಣ ಆಸೆಯು ಸಹ ಇರಬಾರದು ಹಾಗಾಗಿ ಬಹುತೇಕ ಜನರು ಒಂದು ಸಣ್ಣ ಬಟ್ಟೆಯನ್ನು ಸಹ ಧರಿಸುವುದಿಲ್ಲ ಆದರೆ ಇತ್ತೀಚಿಗೆ ಜನ ವಸತಿ ಪ್ರದೇಶಕ್ಕೆ ಬರುವ ಕಾರಣದಿಂದಾಗಿ ಒಂದು ಸಣ್ಣ ಬಟ್ಟೆ ತುಂಡನ್ನ ಹಾಕಿಕೊಳ್ಳುತ್ತಾರೆ ನಾಗ ಸಾಧುಗಳು ದೀಕ್ಷೆ ಪಡೆಯುವುದು ಸಾಮಾನ್ಯವಲ್ಲ ಅತ್ಯಂತ ಕಠಿಣ ಪರಿಶ್ರಮವಾಗಿರುತ್ತದೆ ನಾಗು ಸಾಧುಗಳಾಗಿ ದೀಕ್ಷೆಯನ್ನು ಪಡೆಯಬೇಕೆಂದರೆ ಮೊದಲು ಗುರುಗಳ ಬಳಿ ಹೋಗುತ್ತಾರೆ ನಂತರ ಗುರುಗಳು ಇವರಿಗೆ ಅಪ್ಪಣೆಯನ್ನು ನೀಡಬೇಕು ನಂತರ ಗುರುಗಳು ಒಪ್ಪಿದರೆ ಅವರು ಹೇಳಿದ ಕೆಲವು ವರ್ಷಗಳ ಕಾಲ ಬ್ರಹ್ಮಚಾರ್ಯ ಜೀವನವನ್ನ ಪಾಲಿಸಬೇಕು ಒಂದು ಗುರುಗಳ ಆಶ್ರಮದಲ್ಲಿ ಇರಬಹುದು ಅಥವಾ ಪ್ರಪಂಚದಾದ್ಯಂತ ಪರಿಯಟನೆ ಮಾಡುತ್ತೇನೆ ಎಂದರೆ ಪರ್ಯಟನೆಗೆ ಹೋಗಬಹುದು ಹೊರಟಂತವರು ಯಾವುದೇ ಕಾರಣಕ್ಕೂ ಕಾಮ ಮೋಹ ಇದಕ್ಕೆ ಆಕರ್ಷಿತರಾಗಬಾರದು ಇದರಿಂದ ಸಂಪೂರ್ಣವಾಗಿ ದೂರ ಉಳಿಯಬೇಕು ಇದೆಲ್ಲಾ ಆದ ನಂತರ ಗುರುಗಳ ಬಳಿ ಬರುತ್ತಾರೆ ಗುರುಗಳು ತಮ್ಮದೇ ಆದ ರೀತಿಯಲ್ಲಿ ಅವರನ್ನು ಪರೀಕ್ಷೆ ಮಾಡುತ್ತಾರೆ ನಂತರ ಅವರಿಗೆ ಹಂತ ಹಂತವಾಗಿ ಪರೀಕ್ಷೆಯು ಕೂಡ ಆರಂಭವಾಗುತ್ತದೆ ಗುರುಗಳು ನಂತರ ಅವರಿಗೆ ವಿಶೇಷವಾದ ದಂಡನೆಯನ್ನು ನೀಡುತ್ತಾ ಹೋಗುತ್ತಾರೆ ಅಂದರೆ ಬೆಳಿಗ್ಗೆ ಹೇಳುವುದು ರಾತ್ರಿ ಮಲಗುವುದು ಗುರುಗಳ ಆಜ್ಞೆಯಂತೆ ಇರುತ್ತದೆ ಕೆಲವೊಂದು ಶಿಕ್ಷೆಗಳನ್ನು ಸಹ ಅನುಭವಿಸಬೇಕಾಗುತ್ತದೆ ಅವರು ನೀಡುವ ಕಠಿಣ ಕೆಲಸವನ್ನ ಚಾಚು ತಪ್ಪದೇ ಮಾಡಬೇಕಾಗುತ್ತದೆ ಅವರು ನೀಡಿದ ಪ್ರತಿಯೊಂದು ಕೆಲಸ ದಂಡನೆಗಳನ್ನ ಮಾಡುವುದಕ್ಕೆ ಸುಮಾರು ಆರರಿಂದ ಎಂಟು ವರ್ಷ ಸಮಯ ತೆಗೆದುಕೊಳ್ಳುತ್ತದೆ ಅವರು ನೀಡುವ ದಂಡನೆಗಳು ಯಾವ ರೀತಿ ಎನ್ನುವುದಾದರೆ ಅದನ್ನು ಊಹೆ ಮಾಡಲು ನಾವು ಸಾಧ್ಯವಾಗುವುದಿಲ್ಲ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.