ಕೂದಲು ಉದುರುವಿಕೆ | ದೂರ ದೃಷ್ಟಿ ಹತ್ತಿರ ದೃಷ್ಟಿ | ಮೂಗಿನ ದುರ್ಮಾಂಸ | ಕಣ್ಣಿನ ಸಮಸ್ಯೆ | ಇವತ್ತಿನ ವಿಷಯ ಗ್ರೀನ್ ಟೀ ಒಂದೊಂದು ಕಾಯಿಲೆಗೆ ಒಂದೊಂದು ಗ್ರೀನ್ ಟೀ ಗಳನ್ನು ಬಳಕೆ ಮಾಡಿ ಹಲವಾರು ವ್ಯಾದಿಗಳನ್ನು ದೂರ ಮಾಡಲು ಸಾಧ್ಯ ಅಥವಾ ಬರದ ಹಾಗೆ ನಿಮ್ಮನ್ನ ನೀವು ರಕ್ಷಿಸಿಕೊಳ್ಳಲು ಸಾಧ್ಯ ಆ ಒಂದು ಶೀರ್ಷಿಕೆ ಯಾಡಿ ಇವತ್ತು ವಿಸ್ತೃತವಾದ ಮಾಹಿತಿಯನ್ನು.
ಮೂರು ಹಂತಗಳಲ್ಲಿ ಕೊಡಲು ಇಚ್ಛೆ ಪಡುತ್ತೇನೆ ಹೇಗೆ ಎಂದರೆ ಊರ್ದ್ವ ಚತ್ರುಗತ ವ್ಯಾಧಿಗಳು ಎಂದೇ ಬೇರೆ ಇದೆ ಉದರ ರೋಗಗಳು ಅಂತ ಬೇರೆ ಇದೆ ಸೊಂಟದ ಕೆಳಭಾಗ ಸಂಸ್ಕೃತದಲ್ಲಿ ಹೇಳುತ್ತಾ ಹೋದರೆ ನಿಮಗೆ ಅರ್ಥ ಆಗುವುದಿಲ್ಲ ನಮ್ ಸಂಸ್ಕೃತ ನಮ್ಮ ಆಯುರ್ವೇದಕ್ಕೆ ತಳಪಾಯ ಎನ್ನುತ್ತಾರೆ ಚತ್ರುಗತಿ ವ್ಯಾಧಿಗಳು ಎಂದರೆ ಚತ್ರು ಎಂದರೆ.
ಭುಜದ ಮೇಲಿರುವಂತಹ ಎಲ್ಲ ವ್ಯಾಧಿಗಳು ಈ ಎರಡು ಭುಜದ ಮೇಲೆ ಇರುವಂತಹ ಅಂಗ ಪ್ರತ್ಯಂಗಗಳಿಗೆ ಬರುವಂತಹ ವ್ಯಾಧಿಗಳಿಗೆ ಊರ್ದ್ವ ಚತ್ರುಗತ ವ್ಯಾದಿ ಎನ್ನುತ್ತಾರೆ ಇಲ್ಲಿ ಏನು ಬರುತ್ತವೆ ಎಂದರೆ ಗಂಟಲಿಗೆ ಸಂಬಂಧಪಟ್ಟರುವಂತಹದು ನಾಲಿಗೆ ಬಾಯಿ ಮೂಗು ಕಣ್ಣು ಕಿವಿ ಕೆನ್ನೆ ಮೆದಳು ಕೂದಲು ಇತ್ಯಾದಿ ಇತ್ಯಾದಿಗಳೆಲ್ಲ ಊರ್ದ್ವ ಚತ್ರುಗತ ಅಂಗಗಳು.
ಈ ಅಂಗಗಳಿಗೆ ಬರುವಂತಹ ವ್ಯಾದಿಗಳೇ ಊರ್ದ್ವ ಚತ್ರು ಗತ ವ್ಯಾಧಿಗಳು ಇವುಗಳಲ್ಲಿ ಬ್ರೈನ್ ಟಾನಿಕ್ ಗ್ರೀನ್ ಟೀ ಯಾವುದು ಎಂದರೆ ಬ್ರಾಹ್ಮಿ ಎಂದು ಸಿಗುತ್ತದೆ ಮಲೆನಾಡಿನಲ್ಲಿ ಬಹಳಷ್ಟು ಲಭ್ಯ ನಮ್ಮ ದಾವಣಗೆರೆಯ ಭಾಗದಲ್ಲಿ ಸಿಗುವುದು ಕಷ್ಟ ಬ್ರಾಹ್ಮಿ ಚೂರ್ಣ ಸಿಗುತ್ತದೆ ಆಧಾರ ಕಷಾಯವನ್ನು ಮಾಡಿಕೊಂಡು ಗ್ರೀನ್ ಟೀ ರೂಪದಲ್ಲಿ ಬೆಳಗ್ಗೆ ಸಾಯಂಕಾಲ ಕುಡಿದಿದ್ದೇ ಆದರೆ ಅದು.
ಬ್ರೈನ್ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಕೂದಲು ಉದುರುತ್ತದೆಯಾ ಶಂಕಪುಷ್ಪಿ ಅದರ ಚಿತ್ರವನ್ನು ತೋರಿಸುತ್ತಾ ಇದ್ದೇವೆ ಅದು ನಿಮ್ಮ ಹತ್ತಿರ ಎಲ್ಲಾದರೂ ಸಿಗುತ್ತದ ನೋಡಿ ಅದರ ಒಂದು ಚಿಗುರು ಎಲೆಗಳನ್ನ ತಂದು ಅದರ ಕಷಾಯವನ್ನು ಮಾಡಿಕೊಂಡು ಕುಡಿದರೆ ಕೂದಲು ಉದುರುವುದು ನಿಲ್ಲುತ್ತದೆ. ನಂತರ ಕಣ್ಣಿಗೆ ಸಂಬಂಧಪಟ್ಟರುವಂತಹದ್ದು.
ಕಣ್ಣು ಉರಿ ಸಮಸ್ಯೆ ಇದ್ದವರು ಚಂದನ ಶ್ರೀಗಂಧದ ಚಿಗುರು ಎಲೆಗಳನ್ನ ಗ್ರೀನ್ ಟೀ ರೂಪದಲ್ಲಿ ಕಷಾಯ ಮಾಡಿಕೊಂಡು ಕುಡಿದರೆ ಕಣ್ಣಿನ ಸಮಸ್ಯೆಗಳು ದೂರ ಆಗುತ್ತವೆ ಬಾಯಲ್ಲಿ ಹುಣ್ಣು ಆಗುವುದು ಜೇಷ್ಠ ಮಧು ಎಂದು ಸಿಗುತ್ತದೆ ಅದರ ಕಷಾಯವನ್ನು ಗ್ರೀನ್ ಟೀ ರೂಪದಲ್ಲಿ ಮಾಡಿಕೊಂಡು ಕುಡಿದರೆ ಬಾಯಲ್ಲಿ ಆಗುವಂತಹ ಹುಣ್ಣುಗಳು ಮಾಯವಾಗುತ್ತವೆ.
ಮೂಗಿನ ಸಮಸ್ಯೆ ಮೂಗಿನಲ್ಲಿ ಇದ್ದಕ್ಕಿದ್ದ ಹಾಗೆ ರಕ್ತ ಸೋರುತ್ತದೆ ಮೂಗು ಬಿಚ್ಚಿಕೊಳ್ಳುವುದು ಎಂದು ಕೆಲವು ಕಡೆ ಹೇಳುತ್ತಾರೆ ಹೀಗೆ ಆದರೆ ದೂರವರಸ ಅಂದರೆ ದೂರವಾ ಎಂದರೆ ಗರಿಕೆ ಗರಿಕೆಯ ಚಿಗುರನ್ನ ತಂದು ಅದರ ಕಷಾಯವನ್ನು ಮಾಡಿ ಏಳು ದಿನ ಕುಡಿದರೆ ಸಾಕು ಮೂಗಿನಲ್ಲಿ ರಕ್ತ ಬರುವಂತಹ ಸಮಸ್ಯೆ ಮೂಗು ಬೆಚ್ಚಿಕೊಳ್ಳುವ ಸಮಸ್ಯೆ ಮಾಯವಾಗುತ್ತದೆ.
ಮೂಗು ಕಟ್ಟಿಕೊಳ್ಳುವುದು ಬಾಯಿಂದ ಉಸಿರಾಡುತ್ತಾರೆ ಅದು ಕಷ್ಟ ಮೂಗಿನಲ್ಲಿ ದುರ್ಮಾಂಸ ಬೆಳೆದಿದೆ ಎಂದು ಹೇಳುತ್ತಾರೆ ಇತ್ಯಾದಿ ಇತ್ಯಾದಿ ಸಮಸ್ಯೆಯಾಗಿದೆ ಆಪರೇಷನ್ ಮಾಡಬೇಕು ಎಂದು ಹೇಳುತ್ತಾರೆ ಅಂತದಕ್ಕೆ ದ್ರೋಣ ಪುಷ್ಪಿ ರಸ ದ್ರೋಣ ಪುಷ್ಪಿ ಎಂದರೆ ಅದು ಬಾರಿ ಕಷ್ಟದ್ದಲ್ಲ ಅದೇನು ಹಿಮಾಲಯದಲ್ಲಿ ತರಬೇಕು ಎಂದು ಏನಿಲ್ಲ ತುಂಬೆ.
ತುಂಬೆ ಗಿಡವನ್ನು ನೀವು ನೋಡಿರುತ್ತೀರಾ ಇದನ್ನು ಶಿವನಿಗೆ ಶಿವರಾತ್ರಿಯ ಸಮಯದಲ್ಲಿ ಅರ್ಪಿಸುತ್ತಾರೆ ಆ ತುಂಬೆಯ ಎಲೆಯ ಚಿಗುರುಗಳನ್ನ ತಂದು ಅದರ ಕಷಾಯವನ್ನು ಮಾಡಿಕೊಂಡು ಕುಡಿದರೆ ಮೂಗು ಕಟ್ಟುವುದು ಮಾಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ