ಕೇವಲ 24 ಗಂಟೆಗಳಲ್ಲಿ ಹೊಲಿಗೆ ಕಲಿಬೇಕಾ?
ವಿಡಿಯೋದಲ್ಲಿ ನೀವು ಮೊದಲನೇ ಬಾರಿ ಹೊಲಿಗೆಯನ್ನು ಕಲಿಯಬೇಕು ಎಂದುಕೊಂಡಿದ್ದರೆ ನಿಮಗೆ ಹೊಲಿಗೆಯನ್ನು ಕಲಿಯಬೇಕು ಎಂಬ ಆಸೆ ಇದ್ದರೆ ನಾನು ಈ ವಿಡಿಯೋದಲ್ಲಿ ಒಂದರ ನಂತರ ಒಂದನ್ನು ಹೇಗೆ ಹೊಲಿಗೆ ಕಲಿಯಬೇಕು ಎಂದು ನಿಮಗೆ ಹೇಳಿಕೊಡುತ್ತಿದ್ದೇನೆ. ನಾನು ಹೇಳಿಕೊಡುತ್ತಿರುವ ಟಿಪ್ ಮತ್ತು ಟ್ರಿಕ್ ಇಂದ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಏನಪ್ಪಾ ಇದು ಹೊಲಿಗೆ ಎಂದರೆ ಈ ರೀತಿ ಇರುತ್ತದೆ ಎಂದು ಅನಿಸುವುದು ಇಲ್ಲ ತುಂಬಾ ಸುಲಭವಾಗಿ ಒಂದು ಅಥವಾ ಎರಡು ದಿನಗಳಲ್ಲಿ ತಕ್ಷಣದಲ್ಲಿ ಹೊಲಿಗೆಯನ್ನು ಕಲಿಯಬಹುದು. ಹಾಗಾದರೆ ಬನ್ನಿ ಅದರ ಸ್ಟೆಪ್ ಗಳನ್ನು ನೋಡೋಣ, ಮೊದಲು ಹೊಲಿಗೆಯ ಮಿಷನ್ ಇರುತ್ತದೆ, ನಾವು ಮೊದಲು ಏನು ಮಾಡಬೇಕೆಂದರೆ ನಾವು ಯಾವುದೇ ದಾರವನ್ನು ಹಾಕಬಾರದು.ಹಾಗೆ ಕೆಳಗಡೆ ಬಾಬಿನ್ ಪಾರ್ಟ್ ಇರುತ್ತದೆ ನೀಡಲನ್ನು ತೆಗೆಯಬೇಕು ಹಾಗೆ ಯಾವುದನ್ನು ಹಾಕಬಾರದು ಎಲ್ಲವನ್ನು ತೆಗೆಯಬೇಕು.

ಇದು ಮೇಲೆ ಇರುವ ರೌಂಡ್ ಪಾರ್ಟ್ ಇದು ಮತ್ತೆ ಕೆಳಗಡೆ ಇರುವ ದೊಡ್ಡ ವೀಲ್ನ ಇದನ್ನು ಸೇರಿಸಲು ಒಂದು ದೊಡ್ಡ ಬೆಲ್ಟ್ ಇರುತ್ತದೆ, ಆ ಬೆಲ್ಟ್ ಅನ್ನು ಸಹ ತೆಗೆಯಬೇಕು. ಮೊದಲ ಹಂತ ಏನು ಬರುತ್ತದೆ ಎಂದರೆ ಕೆಳಗಡೆ ಪೆಡಲ್ ಇರುತ್ತದೆ ಅದನ್ನು ಹೇಗೆ ತುಳಿಯಬೇಕು ಎನ್ನುವುದು ಸರಿಯಾಗಿ ತಿಳಿದುಕೊಳ್ಳಬೇಕು ಅದನ್ನು ನಾವು ಸರಿಯಾಗಿ ಕಲಿತಿದ್ದೆ ಆದರೆ ನಮಗೆ ಹೊಲೆಯಲು ತುಂಬಾ ಸುಲಭವಾಗುತ್ತದೆ. ನಾವು ಕಲಿಯಲು ಹೊಸಬರಾದಾಗ ನಮಗೆ ಪೆಡಲನ್ನು ತುಳಿಯಲು ತುಂಬಾ ಹೆಚ್ಚು ಎಂದು ಅನಿಸುತ್ತದೆ ನಾವು ಎಷ್ಟು ಅಭ್ಯಾಸ ಮಾಡುತ್ತಾ ಬರುತ್ತ ಬರುತ್ತೇವೋ ಅಷ್ಟು ನಮಗೆ ಸುಲಭವಾಗುತ್ತಾ ಬರುತ್ತದೆ.ನಿಮಗೆ ಇದು ಕಲಿಯುವಾಗ ತುಂಬಾ ಜಾಸ್ತಿ ಎಂದು ಅನಿಸುತ್ತದೆ ಆದರೆ ಅದು ಪ್ರಾರಂಭದಲ್ಲಿ ಮಾತ್ರ ಕಲಿಯುತ್ತಾ ಹೋದಾಗೆ ಅದು ನಿಮಗೆ ಸುಲಭ ಎಂದು ಅನಿಸುತ್ತದೆ.

WhatsApp Group Join Now
Telegram Group Join Now

ನಿಮ್ಮ ಮಿಷನ್ ಹೊಸದಾಗಿದ್ದರೆ ಪೆಡಲ್ ತುಂಬಾ ಗಟ್ಟಿಯಾಗಿರುತ್ತದೆ ಅದಕ್ಕೆ ನೀವು ಆಯಿಲ್ ಅನ್ನು ಹಾಕಿ ನಂತರ ಉಪಯೋಗಿಸಿ ಏಕೆಂದರೆ ಮೊದಲು ಯಾರು ಉಪಯೋಗಿಸಿರುವುದಿಲ್ಲ. ಪೆಡಲನ್ನು ತುಳಿಯಲು ಒಂದು ಪದ್ಧತಿ ಇದೆ ಎರಡು ಕಾಲನ್ನು ಒಂದೇ ಜಾಗದಲ್ಲಿ ಇರಿಸಿ ತುಳಿಯಬಾರದು ಒಂದು ಕಾಲು ಮೇಲೆ ಇದ್ದರೆ ಇನ್ನೊಂದು ಕಾಲು ಕೆಳಗಡೆ ಇರಬೇಕು ಎರಡು ಸಮನಾಗಿ ಇರಬಾರದು ಇದನ್ನು ನಾನು ಕೇವಲ ಹೊಸಬರಿಗೆ ಮಾತ್ರ ಹೇಳುತ್ತಿದ್ದೇನೆ ನಿಮಗೆ ಅಭ್ಯಾಸವಿದ್ದರೆ ಸಮವಾಗಿದ್ದರು ಏನು ತೊಂದರೆ ಇರುವುದಿಲ್ಲ. ಹಾಗಾಗಿ ಕೆಳಗೆ ಮತ್ತು ಮೇಲೆ ಇಡುವುದರಿಂದ ನಮಗೆ ಸಮನಾದ ಬ್ಯಾಲೆನ್ಸ್ ಸಿಗುತ್ತದೆ ಹಾಗೆ ನೀವು ಅದನ್ನು ನಿಧಾನವಾಗಿ ತುಳಿಯಬೇಕು. ನೀವು ಇದು ನಿಮಗೆ ಸುಲಭವೆನಿಸುತ್ತದೆ ಅನ್ನುವವರೆಗೂ ಇದನ್ನು ನೀವು ತುಳಿಯುತ್ತಲೇ ಇರಬೇಕು ಇದು ಯಾವಾಗ ನಿಮಗೆ ಅಭ್ಯಾಸವಾಯಿತು ಎನಿಸುತ್ತದೆಯೋ ಆನಂತರ ನೀವು ಮುಂದಿನ ಹಂತಕ್ಕೆ ಹೋಗಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.