ಕೊಪ್ಪಳ ಕೂದಲು ಕಾರ್ಖಾನೆ… ಕೊಪ್ಪಳದಲ್ಲಿ ಒಂದು ವಿಶೇಷ ವಿಡಿಯೋ ಮಾಡುತ್ತಿದ್ದೇವೆ ಅದಕ್ಕೆ ನಿಮಗೆ ಸ್ವಾಗತ,ನಮ್ಮ ತಾಯಂದಿರು ನಮ್ಮ ಮಡದಿಯರು ತಲೆಕೂದಲನ್ನು ಬಾಚುತ್ತಿರುತ್ತಾರೆ, ನೀವು ನೋಡಿರುತ್ತೀರಾ ಬಾಚಿದಾಗ ಬಾಚಣಿಗೆಯಲ್ಲಿ ಒಂದಷ್ಟು ಕೂದಲುಗಳು ಅಂಟಿಕೊಂಡಿರುತ್ತದೆ ಅದನ್ನ ಸುತ್ತಿ ಕೆಲವರು ಬಿಸಾಕುತ್ತಾರೆ ಇನ್ನು ಕೆಲವರು ಕಸಕ್ಕೆ.
ಹಾಕುತ್ತಾರೆ ಆದರೆ ಕೆಲವರು ಅದನ್ನು ನೀಟಾಗಿ ಒಂದು ಜಾಗದಲ್ಲಿ ಇಡುತ್ತಾರೆ ಮನೆಯ ಹತ್ತಿರ ಕೆಲವೊಬ್ಬರು ಬರುತ್ತಾರೆ ಅವರು ಅದನ್ನು ತೆಗೆದುಕೊಂಡು ಹೋಗುತ್ತಾರೆ ತೆಗೆದುಕೊಂಡ ಹೋದ ಕೂದಲನ್ನು ಅವರು ಏನು ಮಾಡುತ್ತಾರೆ ಅನ್ನುವ ಒಂದು ಕುತೂಹಲ ನನಗೆ ಇತ್ತು ಆದರೆ ಇವತ್ತು ನನಗೆ ಅದಕ್ಕೆ ಉತ್ತರ ಸಿಕ್ಕಿದೆ ಎಲ್ಲರಿಗೂ ಶ್ರೀನಿವಾಸ ಇಂಡಸ್ಟ್ರಿಗೆ ಸ್ವಾಗತ ಕೊಪ್ಪಳದ.
ಭಾಗ್ಯನಗರದಲ್ಲಿ ಇರುವ ಶ್ರೀನಿವಾಸ ಇಂಡಸ್ಟ್ರಿಗೆ ಸ್ವಾಗತ 500 ಜನರಿಗೆ ಉದ್ಯೋಗ ಕೊಟ್ಟಿರುವಂತಹ ಒಂದು ಕಾರ್ಖಾನೆ ಇದು ಹೆಣ್ಣು ಮಕ್ಕಳ ಬಾಚಿದ ಕೂದಲನ್ನ ನಂಬಿಕೊಂಡು ಬದುಕುತ್ತಿರುವ 500 ಜನರ ಬದುಕಿಗೆ ನಿಮಗೆ ಸ್ವಾಗತ ಇಲ್ಲಿ ಕೂದಲ ಪ್ರಕ್ರಿಯೆ ನಡೆಯುತ್ತದೆ ಕರ್ನಾಟಕದ ಎಲ್ಲಾ ಕಡೆಗಳಿಂದ ಬಂದ ಎಲ್ಲಾ ಕೂದಲಗಳು ಇಲ್ಲಿ ಸೇರಿ ಪ್ರಕ್ರಿಯೆ ಆಗುತ್ತದೆ ಅದು.
ಹೇಗೆ ಆಗುತ್ತದೆ ಏನು ಎಂದು ನಮ್ಮ ಸುರೇಶ್ ಸರ್ ಹೇಳುತ್ತಾರೆ ನಮಸ್ಕಾರ ಸರ್ ಇವರು ಇಲ್ಲಿನ ಉದ್ಯೋಗಿಗಳು ಹೇಗಿದ್ದೀರಾ ಸುರೇಶ್ ಸರ್, ಚೆನ್ನಾಗಿದ್ದೀನಿ ಸರ್ ಸರ್ ನಮಗೆ ನಿಮ್ಮ ಫ್ಯಾಕ್ಟರಿ ಪೂರ್ತಿ ತೋರಿಸಿಕೊಡಿ ಎಂದು ಒಂದು ಮನವಿ ಆಯ್ತು ಸರ್ ಬನ್ನಿ ತೋರಿಸಿಕೊಡುತ್ತೇನೆ.ಸರ್ ಇದು ಕೂದಲು ಫ್ಯಾಕ್ಟರಿ ಎಲ್ಲಿದೆ ಸರ್ ಇದು ಸರ್ ಇದು ಮೇನ್ ಬ್ರಾಂಚ್ ಇದು ಭಾಗ್ಯನಗರದಲ್ಲಿದೆ.
ಸರ್ ಈಗ ಕೂದಲನ್ನು ಯಾಕೆ ನೀವು ಕಲೆ ಹಾಕುತ್ತೀರಿ ಮತ್ತು ಹೇಗೆ ಅದನ್ನು ತಲೆ ಹಾಕುತ್ತಿರ ಸರ್ ಇದರ ರಾ ಮೆಟೀರಿಯಲ್ ಎಲ್ಲವನ್ನು ಕೋರಾರ್ ಅವರು ಕಲೆ ಹಾಕಿ ತಂದಿ ಕೊಡುತ್ತಾರೆ ಅದನ್ನು ಒಬ್ಬ ಮುಖ್ಯ ಮ್ಯಾನೇಜರ್ ತೆಗೆದುಕೊಳ್ಳುತ್ತಾರೆ ಅವರು 20 30 ಕೆಜಿ ಅಷ್ಟು ತಂದು ಕೊಡುತ್ತಾರೆ ಅವರು ಅದನ್ನು ತೆಗೆದುಕೊಂಡು ನಮ್ಮ ಸರ್ ಬಳಿ ತೆಗೆದುಕೊಂಡು ಬರುತ್ತಾರೆ.
ಅವರು ಒಂದು ಹಣವನ್ನು ನಿಗದಿಪಡಿಸಿ ತೆಗೆದುಕೊಳ್ಳುತ್ತಾರೆ ಸರ್ ಇಲ್ಲಿ ಬಹು ಮುಖ್ಯವಾಗಿ ಬರುವುದು ತಿರುಪತಿಯಿಂದ. ತಿರುಪತಿಯಿಂದ ಕೂದಲು ಬರುತ್ತದೆ ಮತ್ತು ಕಲ್ಕತ್ತಾ ಇಂದ ಹೆಚ್ಚಾಗಿ ಬರುವುದು ಅಂದರೆ ಅಲ್ಲಿ ಇವರ ಬಳಿಯೂ ಸಬ್ ಬ್ರಾಂಚ್ ಗಳಿಂದ ಕಲೆಹಾಕಿ ತರುತ್ತಾರೆ 50 ಕೆಜಿ 100 ಕೆಜಿ 500 ಕೆಜಿ ಈ ರೀತಿಯಾಗಿ ಕಲೆ ಹಾಕಿಕೊಂಡು ತೆಗೆದುಕೊಂಡು.
ಬರುತ್ತಾರೆ ಸರ್ 500 ಕೆಜಿ ಕೂದಲ ಹೌದು ಸರ್ ನೀವು ಬರುವುದು ಅರ್ಧ ಗಂಟೆ ಮುಂಚೆ 600 ಕೆಜಿ ಲಾರಿ ಬಂದಿತ್ತು ಕೂದಲು ತುಂಬಿದ ಲಾರಿ ಮಹಿಳೆಯರ ಕೂದಲು ಸರ್ ಪುರುಷರ ಕೂದಲು ಉಪಯೋಗಕ್ಕೆ ಬರುವುದಿಲ್ಲ ಸರ್ ಹಾಗಾದರೆ ನಮ್ಮ ಕೂದಲಿಗೆ ಬೆಲೆಯೇ ಇಲ್ಲವಾ ಆರು ಇಂಚ್ ಇದ್ದರೆ ಅದಕ್ಕೆ ಇನ್ನು.
ಜಾಸ್ತಿ ಸರ್ ಎಷ್ಟು ಇಂಚು ಹೋಗುತ್ತದೆ ಅಷ್ಟು ಹಣ ಹೆಚ್ಚಾಗುತ್ತದೆ 6 ಇಂಚು 8 ಇಂಚು 14 ಇಂಚು 15 ಇಂಚು ಕೂಡ ಬರುತ್ತದೆ ಸರ್ ಇದಕ್ಕೆ ಬ್ಲಾಕ್ ಗೋಲ್ಡ್ ಎನ್ನುತ್ತಾರೆ ಕರಿ ಬಂಗಾರ ಅಥವಾ ಕಪ್ಪು ಚಿನ್ನ ಎಂದರೆ ತಪ್ಪಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ