ಮೇಷ ರಾಶಿ :- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಕನಸು ಸಾಧ್ಯವಾಗುವ ಸಾಧ್ಯವಾಗುತ್ತದೆ ಅವಧಿಯಲ್ಲಿ ನಿಮ್ಮ ಒಳಗೆ ಹೊಸ ಶಕ್ತಿಯನ್ನು ಅನುಭವಿಸುತ್ತೀರಿ. ಸಕಾರಾತ್ಮಕ ಶಕ್ತಿಯು ನಿಮ್ಮನ್ನು ಸುತ್ತುವರೆಯುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 7:00ವರೆಗೆ.
ವೃಷಭ ರಾಶಿ :- ಇಂದು ನಿಮಗೆ ಬೇಸರವಾದ ದಿನವಾಗಿರಬಹುದು ಹಾಗಾಗಿ ನಿಮ್ಮ ಆಸಕ್ತಿಗಳ ಬಗ್ಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು ದೊಡ್ಡ ವ್ಯಾಪಾರಿಗಳು ಹೂಡಿಕೆ ಮಾಡಲು ಬಯಸುತ್ತಿದ್ದರೆ ನಿಮ್ಮ ಎಲ್ಲಾ ಅಂಶಗಳನ್ನು ಕೂಲಂಕುಲವಾಗಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಇಂದು ನೌಕರಸ್ಥರಿಗೆ ಸಾಮಾನ್ಯವಾಗಿ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ 11 ಗಂಟೆಯವರೆಗೆ.
ಮಿಥುನ ರಾಶಿ :- ಈ ದಿನ ಕೆಲಸದಲ್ಲಿ ತುಂಬಾ ಒತ್ತಡವಿರುತ್ತದೆ ಕೆಲಸದಲ್ಲಿ ಇಂದು ತುಂಬಾನೇ ಕಾರ್ಯನಿರತ ದಿನವಾಗಿರುತ್ತದೆ ನಿಮ್ಮ ಬಾಸ್ ನಿಮಗೆ ಕೆಲವು ಜವಾಬ್ದಾರಿಗಳನ್ನು ನೀಡಬಹುದು ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8 ಯಿಂದ ಮಧ್ಯಾಹ್ನ 12:30 ವರೆಗೆ.
ಕಟಕ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ತುಂಬಾ ಕಷ್ಟಕರ ದಿನವಾಗಿರುತ್ತದೆ ಹಣಕಾಸಿನ ಪ್ರಯತ್ನಗಳು ಇಂದು ವಿಫಲವಾಗಬಹುದು ಇಂದು ನೀವು ಪಡೆಯುವ ಲಾಭವನ್ನು ಮುಂದೂಡಬಹುದು ಆದರೆ ನೀವು ಭರವಸೆಯನ್ನಿಟ್ಟುಕೊಳ್ಳಬೇಕು. ಶೀಘ್ರದಲ್ಲೇ ಎಲ್ಲ ವಿಷಯವು ನಿಮ್ಮ ಪರವಾಗಿಯೇ ತಿರುಗುತ್ತದೆ ಅದೃಷ್ಟದ ಸಂಖ್ಯೆ -8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಸಿಂಹ ರಾಶಿ :- ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯ ಪ್ರೀತಿ ಬೆಂಬಲ ಸಿಗುತ್ತದೆ ಕೌಟುಂಬಿಕ ಜವಾಬ್ದಾರಿಗಳು ಒಟ್ಟಾಗಿ ಪೂರೈಸುತ್ತೀರಿ ಕೆಲಸದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು ಅದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಇಂದು ನಿಮಗೆ ಅತ್ಯುತ್ತಮವಾಗಿ ನೀಡಲು ಸಾಧ್ಯವಾಗದೇ ಇರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ.
ಕನ್ಯಾ ರಾಶಿ :- ಈ ದಿನ ನಿಮಗೆ ತುಂಬಾ ಒಳ್ಳೆಯ ದಿನವಾಗಿರುತ್ತದೆ ಉದ್ಯೋಗದಲ್ಲಿ ಉತ್ತಮವಾದ ಅವಕಾಶ ಪಡೆಯುವ ಬಲವಾದ ಸಾಧ್ಯತೆ ಇದೆ ನೀವು ಚಿಂತೆಯಿಂದ ಮುಕ್ತರಾಗಿರುತ್ತೀರಿ ಇದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಕುಟುಂಬದ ಪ್ರೀತಿಯಿಂದ ನಿಮಗೆ ಯಾವುದೇ ದೊಡ್ಡ ಸಮಸ್ಯೆಗಳಿರುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.
ತುಲಾ ರಾಶಿ :- ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿ ಚಿಂತೆ ಮಾಡುವ ಸಾಧ್ಯತೆ ಇರುವುದಿಲ್ಲ ಹೊಸ ಮನೆ ಖರೀದಿಸಲು ಅಥವಾ ಬಾಕಿ ಇರುವ ಸಾಲವನ್ನು ತೀರಿಸಲು ಇಂದು ಸಾಧ್ಯವಾಗುತ್ತದೆ. ಕೆಲವು ಸಮಯದವರೆಗೆ ನೀವು ಅನಗತ್ಯದ ಒತ್ತಡವನ್ನು ಅನುಭವಿಸುತ್ತಿದ್ದರೆ ಇಂದು ಅದು ಪರಿಹಾರವಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 12:30 ರವರೆಗೆ.
ವೃಶ್ಚಿಕ ರಾಶಿ :- ಯಾರಿಗೆ ವಿವಾಹವಾಗಿರುವುದಿಲ್ಲ ಅವರಿಗೆ ಇಂದು ವಿಶೇಷವಾದ ದಿನವಾಗಿರುತ್ತದೆ ಇದಕ್ಕಿದಂತೆ ವಿವಾಹ ಪ್ರಸ್ತಾಪವಾಗುವ ಸಾಧ್ಯತೆ ಇದೆ ಆತ್ಮ ಸಂಗಾತಿಯ ಹುಡುಕಾಟ ಇಂದು ಕೊನೆಗೊಳ್ಳಬಹುದು ಇಂದು ಮನೆಯ ವಾತಾವರಣ ತುಂಬಾ ಚೆನ್ನಾಗಿರುತ್ತದೆ. ಒಡಹುಟ್ಟಿದವರೊಂದಿಗೆ ಸಂಪೂರ್ಣವಾದ ಬೆಂಬಲವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 1:00 ಯಿಂದ ಮಧ್ಯಾಹ್ನ 3 ಗಂಟೆವರೆಗೆ.
ಧನಸು ರಾಶಿ :- ಕೆಲಸ ಮತ್ತು ವ್ಯವಹಾರದಲ್ಲಿ ಇಂದು ಸಾಮಾನ್ಯವಾಗಿರುತ್ತದೆ ಉದ್ಯಮಿಗಳಾಗಿದ್ದರೆ ಇಂದು ಯಾವುದೇ ವಿಶೇಷ ಲಾಭವನ್ನು ಪಡೆಯುವುದಿಲ್ಲ ಆದರೆ ನೀವು ಕೆಲವು ಹೊಸ ಯೋಜನೆಗಳನ್ನು ನೋಡಬಹುದು ದುಡಿಯುವ ಜನರು ನಿಮ್ಮ ಬಾಸ್ ಒಂದಿಗೆ ಉತ್ತಮವಾದ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ.
ಮಕರ ರಾಶಿ :- ಆರ್ಥಿಕ ಪರಿಸ್ಥಿತಿಯಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯದಿದ್ದರೆ ನಮ್ಮ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡಿಕೊಂಡರು ಉತ್ತಮ ಹಾಗೂ ಈ ಸಂದರ್ಭಗಳಲ್ಲಿ ನಿಮ್ಮ ಯೋಚನೆ ಮತ್ತೆ ಪರಿಗಣಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಈ ದಿನ ಸಾಮಾನ್ಯವಾಗಿರುತ್ತದೆ ಇಂದು ನೀವು ಹೆಚ್ಚು ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 7:30 ರಿಂದ ರಾತ್ರಿ 9:00 ವರೆಗೆ.
ಕುಂಭ ರಾಶಿ :- ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಳ್ಳಿ ಯಾವುದೇ ವಿಷಯದಲ್ಲಿ ಟೀಕಿಸುವುದು ಸರಿಯಲ್ಲ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮ್ಮ ವಿರೋಧಿಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕಾರ್ಯಗಳನ್ನು ತಡೆಯುವ ಸಾಧ್ಯತೆ ಇದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12:30 ವರೆಗೆ.
ಮೀನ ರಾಶಿ :- ಈ ದಿನ ನಿಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಅವರ ಜೊತೆ ನೀವು ಹೊರಗಡೆ ಹೋಗಿ ಬನ್ನಿ ಅವರಿಗೆ ಸಾಕಷ್ಟು ಸಂತೋಷ ನೀಡುತ್ತದೆ ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಪರಸ್ಪರ ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತೀರಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗಿಳಿ ಬಣ್ಣ ಸಮಯ – ಬೆಳಗ್ಗೆ 7 ರಿಂದ 10 ಗಂಟೆಯವರೆಗೆ.