ಗ್ಯಾಸ್ ಸಿಲಿಂಡರ್ ಬಳಸುವಾಗ ಎಚ್ಚರ..! ಈ ತಪ್ಪಿನಿಂದ ಜೀವಾನೆ ಹೋಗಬಹುದು ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ಸಾಮಾನ್ಯವಾಗಿ ಈಗ ಎಲ್ಲಾ ಮನೆಗಳಲ್ಲೂ ಗ್ಯಾಸ್ ಅನ್ನು ಬಳಸುತ್ತಾರೆ ಸಿಲಿಂಡರ್ ಗಳನ್ನು ಬಳಸುವಾಗ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಸಂಭವಿಸಿ ಬಿಡುತ್ತದೆ ತಾವು ಕೂಡ ಆಗಬಹುದು ಜೀವ ಸಹ ಹೋಗಬಹುದು ಹಾಗಾದರೆ ಸಿಲಿಂಡರ್ ಬಳಸುವಾಗ ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕು ಯಾವ ರೀತಿ ಇದನ್ನು ಉಪಯೋಗಿಸಬೇಕು ಇದು ಎಲ್ಲರಿಗೂ ಉಪಯೋಗ ವಾಗುವಂತಹ ಮಾಹಿತಿ ಸಂಪೂರ್ಣವಾಗಿ ಓದಿ ತಿಳಿಯಿರಿ.

ಮೊದಲನೆಯದಾಗಿ ನಾವು ಸಿಲಿಂಡರ್ ನ ಎಕ್ಸ್ಪರಿ ಡೇಟ್ ಅನ್ನ ಅಂದರೆ ಸಿಲಿಂಡರ್ ಬಳಕೆಯ ಕೊನೆಯ ದಿನಾಂಕವನ್ನು ಸರಿಯಾಗಿ ನೋಡಬೇಕು ಸಿಲಿಂಡರ್ ಕೂಡ ಕೊನೆಯ ದಿನಾಂಕವನ್ನು ಹೊಂದಿರುತ್ತದೆ ಮನೆಗೆ ತಂದಂತಹ ಸಿಲಿಂಡರನ್ನು ಮೊದಲು ಸರಿಯಾಗಿ ಕೊನೆಯ ದಿನಾಂಕವನ್ನು ನೋಡಿ ನಂತರ ಅಡುಗೆ ಮನೆಗೆ ಫಿಟ್ ಮಾಡಬೇಕು ಸಿಲಿಂಡರ್ ಮೇಲೆ ಒಂದು ನಂಬರ್ ಇರುತ್ತದೆ ಅದರಲ್ಲಿ ಎ,ಬಿ, ಸಿ,ಡಿ ಇರುತ್ತದೆ. ಎ ಎಂದರೆ ಜನವರಿಯಿಂದ ಮಾರ್ಚ್ ನ ವರೆಗೆ, ಬಿ ಎಂದರೆ ಏಪ್ರಿಲ್ ನಿಂದ ಜೂನ್ ತನಕ, ಸಿ ಎಂದರೆ ಜುಲೈ ನಿಂದ ಸೆಪ್ಟೆಂಬರ್ ವರೆಗೂ, ಡಿ ಎಂದರೆ ಅಕ್ಟೋಬರ್ ಇಂದ ಡಿಸೆಂಬರ್ವರೆಗೂ

ಅದರ ಪಕ್ಕದಲ್ಲಿ ನಂಬರನ್ನು ಸಹ ಕೊಟ್ಟಿರುತ್ತಾರೆ ಅದು ವರ್ಷವನ್ನು ಸೂಚಿಸುತ್ತದೆ ಎ 23 ಎಂದರೆ ಮಾರ್ಚ್ ನಿಂದ ಡಿಸೆಂಬರ್ ವರೆಗೆ ಇದರ ಅವಧಿ ಮುಗಿಯುತ್ತದೆ ಇನ್ನು 23 ಎಂದರೆ ವರ್ಷ ಒಂದು ವೇಳೆ ಸಿಲಿಂಡರ್ ನ ಅವಧಿ ಮುಗಿದಿದ್ದರೆ ಸಿಲಿಂಡರ್ ಸಿಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಜೊತೆಗೆ ಸಿಲಿಂಡರನ್ನು ಯಾವುದೇ ಕಾರಣಕ್ಕೂ ಅಡ್ಡವಾಗಿ ಮಲಗಿಸಬಾರದು ನೇರವಾಗಿ ನಿಲ್ಲಿಸಬೇಕು ಮತ್ತು ಸಿಲಿಂಡರ್ ಅನ್ನು ಸಮತಟ್ಟಾದ ಜಾಗದಲ್ಲಿ ಇಡಬೇಕು ಇನ್ನು ಸಿಲಿಂಡರ್ ಇರುವ ಜಾಗದಲ್ಲಿ ಬೆಳಕು ಮತ್ತು ಗಾಳಿ ಆಡುತ್ತಿದ್ದರೆ ಬಹಳ ಒಳ್ಳೆಯದು.

ಸಿಲಿಂಡರ್ ಫೀಲ್ ಆಗಿರುತ್ತದೆ ಆದರೂ ಸಹ ಅದು ಲೀಕ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದರಲ್ಲಿ ಗುಳ್ಳೆ ಬರುತ್ತಿದ್ದರೆ ಸಿಲಿಂಡರ್ ಹೊರ ಬರುತ್ತಿದೆ ಎಂದು ಅರ್ಥ ಗುಳ್ಳೆ ಬರುತ್ತಿಲ್ಲ ಎಂದರೆ ಸಿಲಿಂಡರ್ ಲೀಕ್ ಆಗುತ್ತಿಲ್ಲ ಎಂದರ್ಥ ಗ್ಯಾಸ್ ಪೈಪನ್ನು ರಬ್ಬರ್ ನಿಂದ ಮಾಡಿರುತ್ತಾರೆ ಅದನ್ನು ಪ್ರತಿದಿನ ನೋಡಿಕೊಳ್ಳುತ್ತಲೇ ಇರಬೇಕು ಕಾರಣ ಅದಕ್ಕೂ ಅವಧಿ ಇರುತ್ತದೆ ಅದು ಡ್ಯಾಮೇಜ್ ಸಹ ಆಗುತ್ತಿರುತ್ತದೆ ಇದರಿಂದ ಗ್ಯಾಸ್ ಲೀಕ್ ಆಗಬಹುದು ಹಾಗಾಗಿ ಪ್ರತಿದಿನ ಇದನ್ನು ಚೆಕ್ ಮಾಡಿಕೊಳ್ಳುತ್ತಿರಬೇಕು ಮತ್ತು ವರ್ಷಕ್ಕೆ ಒಂದು ಬಾರಿ ಆ ರಬ್ಬರನ್ನು ಬದಲಾಯಿಸಬೇಕು ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಬೇಡಿ.

ಅಡುಗೆ ಮನೆಯಲ್ಲಿ ಗ್ಯಾಸ್ ವಾಸನೆ ಬಂದರೆ ಒಂದು ಗಂಟೆಗಳ ಕಾಲ ಅಡುಗೆ ಮನೆಯ ಚಿಟಕಿ ಹಾಗೂ ಮನೆಯ ಬಾಗಿಲನ್ನು ತೆರೆದಿಡಬೇಕು ನಂತರ ಗ್ಯಾಸ್ ಸೋರಿಕೆಗೆ ಕಾರಣವೇನು ಎಂದು ಪರಿಶೀಲಿಸಿ ನಂತರ ಅದನ್ನು ರಿಪೇರಿ ಮಾಡಿಸಿ ನಂತರ ಗ್ಯಾಸ್ ಅನ್ನು ಬಳಸಬೇಕು ಇನ್ನು ಯಾವುದೇ ಕಾರಣಕ್ಕೂ ಸಿಲಿಂಡರ್ ಇಟ್ಟ ಜಾಗದಲ್ಲಿ ಸೀಮೆಎಣ್ಣೆ ಪೆಟ್ರೋಲನ್ನು ಇಡಬಾರದು ಇದು ಸ್ಪೋಟಕ್ಕೆ ಕಾರಣವಾಗಬಹುದು ಸಿಲಿಂಡರ್ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಈ ಸಿಲಿಂಡರ್ ಸ್ಫೋಟದಿಂದ ಎಷ್ಟೋ ಜನ ಮಕ್ಕಳನ್ನು ಮನೆಯನ್ನ ಕಳೆದುಕೊಂಡಿದ್ದಾರೆ ಹೀಗಾಗಿ ಸಿಲಿಂಡರ್ ಬಳಕೆಯ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು.

By god