ದಿನಾ 1 ಕಪ್ ಕುಡೀರಿ, ಆಸ್ಪತ್ರೆಯಿಂದ ದೂರ ಇರಿ ಶೀತ ಕಫ ಕೆಮ್ಮು ಕೈಕಾಲು ನೋವು ಗ್ಯಾಸ್ ಶುಗರ್ ಬಿಪಿ ರಕ್ತನಾಳ ಬ್ಲಾಕೆಜ್…… ಅದ್ಭುತವಾದಂತಹ ರುಚಿಯನ್ನು ಹೊಂದಿರುವ ಅಷ್ಟೇ ಆರೋಗ್ಯಕರವಾದ ಸುಕ್ಕ ಮಲ್ಲಿ ಕಾಫಿಯನ್ನು ಮಾಡುವುದನ್ನು ನೋಡೋಣ ಬನ್ನಿ ಇದೊಂದು ಸಾಂಪ್ರದಾಯಕ ಕಾಫಿಯಾಗಿದೆ.
ಇದನ್ನು ನಮ್ಮ ಅಜ್ಜ ಅಜ್ಜಿ ಎಲ್ಲಾ ಕುಡಿಯುತ್ತಿದ್ದರು,ಅದರಲ್ಲೂ ಈ ಮಳೆಗಾಲದಲ್ಲಿ ಚಳಿಗಾಲದಲ್ಲಂತೂ ಹೇಳಿಮಾಡಿಸಿದ ಕಾಫಿ ಆಗಿದೆ ಇದನ್ನು ಒಂದು ಕಪ್ ಕುಡಿದರೆ ಸಾಕು ಕಾಯಿಲೆಗಳೆಲ್ಲ ಓಡಿ ಹೋಗುತ್ತದೆ ನಮ್ಮ ಮೈಂಡ್ ಫ್ರೆಶ್ ಆಗುತ್ತದೆ ನಮಗೆ ಒಳ್ಳೆಯ ಉತ್ಸಾಹ ಬರುತ್ತದೆ ತಂಡಿ ಶೀತ ನೆಗಡಿ, ಕೆಮ್ಮು ಜ್ವರ ಕೈಕಾಲುಗಳ ನೋವು ಮೈ ನೋವಾಗುತ್ತಿದ್ದರು ಸಹ ಕಡಿಮೆಯಾಗುತ್ತದೆ.
ಅದರ ಜೊತೆಗೆ ಗ್ಯಾಸ್ ಅಸಿಡಿಟಿಯನ್ನು ಕಡಿಮೆ ಮಾಡಿ ನಮಗೆ ಜೀರ್ಣ ಶಕ್ತಿಯನ್ನು ಹೆಚ್ಚಿಸುವಂತಹ ಗುಣ ಈ ಸುಕ್ಕಮಲ್ಲಿ ಕಾಫಿಗೆ ಇದೆ ಇದನ್ನು ನೀವು ಒಂದು ಕಪ್ ಕುಡಿದು ನೋಡಿ ನೀವು ಎಷ್ಟು ಉತ್ಸಾಹಕಾರಾಗುತ್ತೀರಾ ಎಂದು.ಈಗ ಇದನ್ನು ತಯಾರಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ, ಇದಕ್ಕೆ ಮೊದಲ ಸಾಮಗ್ರಿ ಎಂದರೆ.
ಕೊತ್ತಂಬರಿ ಕಾಳು ಒಂದು 100 ಗ್ರಾಂನಷ್ಟು ಇದೆ ಒಂದು ಕಪ್ ತೆಗೆದುಕೊಂಡಿದ್ದೇನೆ ನಂತರ ಇದಕ್ಕೆ 50 ಗ್ರಾಂನಷ್ಟು ಒಣಶುಂಠಿ ತೆಗೆದುಕೊಂಡಿದ್ದೇನೆ ಒಣಶುಂಠಿ ತುಂಬಾ ನೀಟಾಗಿ ಒಣಗಿರಬೇಕು ಇದು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ನಂತರ ಇದಕ್ಕೆ ನಾವು ಮೆಣಸಿನಕಾಳನ್ನು ತೆಗೆದುಕೊಳ್ಳಬೇಕು ಒಂದು ಚಮಚದಷ್ಟು ನಾನು ಮೆಣಸಿನ ಕಾಳನ್ನು ತೆಗೆದುಕೊಂಡಿದ್ದೇನೆ.
ಮೆಣಸಿನಕಾಳನ್ನು ನೀವು ಕಪ್ಪು ಬಣ್ಣದನ್ನು ತೆಗೆದುಕೊಳ್ಳಬಹುದು ಅಥವಾ ಬಿಳಿ ಬಣ್ಣದ್ದು ಬರುತ್ತದೆ ಅದನ್ನು ಕೂಡ ತೆಗೆದುಕೊಳ್ಳಬಹುದು ಆಮೇಲೆ 12 ರಿಂದ 13 ಏಲಕ್ಕಿಯನ್ನು ತೆಗೆದುಕೊಂಡಿದ್ದೇನೆ ಇದರ ಜೊತೆಗೆ ತುಂಬಾ ಪ್ರಮುಖವಾಗಿ ಬೇಕಾಗಿರುವುದು ರುಚಿಯನ್ನು ಕೊಡುವ ಬೆಲ್ಲ ಇಲ್ಲಿ ನಾನು ಆರ್ಗ್ಯಾನಿಕ್ ಪೌಡರ್ ಬೆಲ್ಲವನ್ನು ತೆಗೆದುಕೊಂಡಿದ್ದೇನೆ.
ನೀವು ಕೂಡ ಆದಷ್ಟು ಆರ್ಗಾನಿಕ್ ಬೆಲ್ಲವನ್ನು ತೆಗೆದುಕೊಳ್ಳುವುದು ತುಂಬಾನೇ ಒಳ್ಳೆಯದು ಈಗ ನಾವು ಇದನ್ನೆಲ್ಲಾ ಒಂದರ ನಂತರ ಒಂದನ್ನು ಸ್ವಲ್ಪ ಮಟ್ಟಿಗೆ ಬಿಸಿ ಆಗುವ ತನಕ ಉರಿದುಕೊಳ್ಳಬೇಕು ಇದನ್ನು ಉರಿಯುವುದರಿಂದ ಇದರಲ್ಲಿರುವ ಹಸಿ ವಾಸನೆಯೂ ಕೂಡ ಹೋಗುತ್ತದೆ ಕೊತ್ತಂಬರಿ ಕಾಳಂತೂ ನಮ್ಮ ದೇಹದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಈ ಕೊತ್ತಂಬರಿ ಕಾಳಿನಲ್ಲಿ ವಿಟಮಿನ್ ಎ ಅಂಶ ಇದೆ.
ಇದು ದೇಹದ ರಕ್ತನಾಳಗಳಲ್ಲಿ ಬ್ಲಡ್ ಕಾಟ್ ಆಗದನ್ನು ತಡೆಯುತ್ತದೆ ಈ ಚಳಿಗಾಲದಲ್ಲಿ ಮಳೆಗಾಲದಲ್ಲಿ ತುಂಬಾನೇ ತಂಪಿನ ಗುಣ ಇರುತ್ತದೆ ವಾತಾವರಣ ತುಂಬಾ ತಣ್ಣಗಿರುತ್ತದೆ ಇಂತಹ ಸಮಯದಲ್ಲಿ ದೇಹವನ್ನ ಬೆಚ್ಚಗೆ ಇಡಲು ರಕ್ತಸಂಚಲನ ಸರಾಗವಾಗಿ ಆಗಲು ಈ ಕೊತ್ತಂಬರಿ ಕಾಳು ತುಂಬಾನೇ ಸಹಾಯಮಾಡುತ್ತದೆ.
ಇದು ಮೆದುಳಿಗೆ ಹೃದಯಕ್ಕೆ ತುಂಬಾ ಒಳ್ಳೆಯದು ಹಾಗೂ ಜೀರ್ಣಕ್ರಿಯೆಗೆ ಕೂಡ ಒಳ್ಳೆಯದು ಅದಲ್ಲದೆ ನಮ್ಮ ಇಮ್ಯೂನಿಟಿ ಬೂಸ್ಟ್ ಮಾಡುವಂತಹ ಶಕ್ತಿ ಈ ಕೊತ್ತಂಬರಿ ಕಾಳಿನಲ್ಲಿ ಇದೆ, ಕೊತ್ತಂಬರಿ ಕಾಳು ತುಂಬಾ ಚೆನ್ನಾಗಿ ಉರಿದಿದೆ ಇದನ್ನು ತೆಗೆಯೋಣ ನಂತರ ಅದನ್ನು ಒಂದು ತಟ್ಟೆಗೆ ಹಾಕಿಕೊಳ್ಳೋಣ.
ನಂತರ ನಾವು ಒಂದು ಸ್ಪೂನ್ ನಷ್ಟು ಮೆಣಸಿನ ಕಾಳನ್ನು ಹಾಕಿಕೊಳ್ಳೋಣ ಮೆಣಸಿನಕಾಳು ಈ ರೀತಿ ಸ್ವಲ್ಪ ಪ್ರಮಾಣದಲ್ಲಿ ದಪ್ಪ ಆಗುತ್ತದೆ ಈ ಮೆಣಸಿನ ಕಾಳು ತಂಡಿ ಶೀತ ಕೆಮ್ಮು, ನೆಗಡಿ ಕಫ ಇದಕ್ಕೆ ರಾಮಬಾಣವಾಗಿ ಕೆಲಸ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ