ತುಂಬೆ ಹೂವು ತಿಂದರೆ ಏನಾಗುತ್ತೆ ಗೊತ್ತ?? ತುಂಬೆ ಹೂ ಹಾಗೂ ಗಿಡದ ಔಷಧ ಗುಣಗಳು….. ಇವತ್ತಿನ ವಿಡಿಯೋದಲ್ಲಿ ತುಂಬೆ ಗಿಡದ ಅಥವಾ ತುಂಬೆ ಹೂವಿನ ಔಷದ ಗುಣಗಳ ಬಗ್ಗೆ ನೋಡೋಣ ಬಹಳಷ್ಟು ಜನಗಳಿಗೆ ತಿಳಿದಿರುವುದಿಲ್ಲ ಇದು ತುಂಬಾ ಉಪಯುಕ್ತವೆಂದು ಮನೆ ಮುಂದೆ ಬೆಳೆದಿದ್ದರೆ ಇದನ್ನು ಕಿತ್ತು ಹಾಕುತ್ತಾರೆ.ಈ ವಿಡಿಯೋದ ಮೂಲಕ ಇದರ ಔಷದ ಗುಣಗಳನ್ನು ನಾನು ನಿಮಗೆ ತಿಳಿಸುತ್ತೇನೆ.ಇದು ನೆಲದಿಂದ ಒಂದು ಎರಡು ಅಡಿ ಎತ್ತರದಲ್ಲಿ ಬೆಳೆಯುತ್ತದೆ.ಈ ಗಿಡವು ಶಿವನಿಗೆ ತುಂಬಾ ಇಷ್ಟವೆನ್ನುತ್ತಾರೆ ಕೇವಲ ತುಂಬೆ ಹೂ ಅಲ್ಲ ತುಂಬೆ ಗಿಡ ಎಂದರೆ ಇಷ್ಟ. ಏಕೆಂದರೆ ಶಿವನ ದೇಹದಲ್ಲಿ ವಿಷವಿರುವುದು ನಿಮಗೆ ತಿಳಿದಿರುವುದು ಆ ವಿಷವನ್ನು ಗುಣಪಡಿಸುವ ಶಕ್ತಿ ಈ ತುಂಬೆ ಗಿಡ ಅಥವಾ ಈ ತುಂಬೆ ಹೂವಿಗೆ ಇದೆ ಎಂದು ಹೇಳಬಹುದು. ಶಿವನು ಇದನ್ನು ಸೇವಿಸಿದಾಗ ಔಷಧಿ ರ್ಸೆಂಟೇಜ್ ಕಡಿಮೆ ಆಗಿದ್ದರಿಂದ ಶಿವನಿಗೆ ಈ ಗಿಡವೆಂದರೆ ಇಷ್ಟವೆನ್ನುತ್ತಾರೆ. ಬಹಳಷ್ಟು ಜನ ಶಿವರಾತ್ರಿಯಲ್ಲಿ ಈ ಹೂವಿನಿಂದಲೇ ಶಿವನಿಗೆ ಪೂಜೆ ಮಾಡಬೇಕೆಂದು ಹುಡುಕುತ್ತಿರುತ್ತಾರೆ ಶಿವನಿಗೆ ಇಷ್ಟವಾದ ಈ ತುಂಬೆ ಹೂವನ್ನು ರುದ್ರ ಪುಷ್ಪ ಎಂದು ಕನ್ನಡದಲ್ಲಿ ಕರೆಯುತ್ತಾರೆ.ಅಂದರೆ ಸಂಸ್ಕೃತದಲ್ಲಿ ದ್ರೋಣ ಪುಷ್ಪ ಎನ್ನುತ್ತಾರೆ.

ದೇಹದ ಯಾವುದೇ ಅಂಗದಲ್ಲಿ ನಮಗೆ ಊತ ಇರುವುದಾದರೆ ಅಥವಾ ನೋವು ಇರುವುದಾದರೆ ಈ ತುಂಬೆ ಗಿಡದ ಹೂ ಅಥವಾ ಗಿಡ ಬಹಳಷ್ಟು ಕೆಲಸ ಮಾಡುತ್ತದೆ.ಚರ್ಮದ ಅಲರ್ಜಿ ಇದ್ದರೆ ಈ ತುಂಬೆ ಗಿಡದ ಎಲೆಗಳು ಮತ್ತು ಹೂ ಅನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಅಲರ್ಜಿ ಅಥವಾ ಎಲ್ಲಾದರೂ ಊತವಿದ್ದರೆ,ಮೈ ಕೈ ನೋವು ಇವೆಲ್ಲವೂ ಕಡಿಮೆಯಾಗುತ್ತದೆ. ತುಂಬೆ ಗಿಡದ ಹೂವು ಉಸಿರಾಟದ ತೊಂದರೆಗೆ ತುಂಬಾ ಉಪಯುಕ್ತವಾದದ್ದು. ಈ ಗಿಡದ ಕಷಾಯವನ್ನು ನಾವು ಕುಡಿಯಬಹುದು ಹೂವನ್ನು ಹಾಕಬಹುದು ಈ ಗಿಡದ ಎಲೆಗಳನ್ನು ಸಹ ಆಕಬಹುದು ಸ್ವಲ್ಪ ಜೇನುತುಪ್ಪ ಹಾಕಿ ತುಂಬೆ ಹೂವಿನ ರಸವನ್ನು ಊಟಕ್ಕಿಂತ ಮೊದಲು ಸೇವಿಸುವುದರಿಂದ ಕಫ ಮತ್ತು ಉಸಿರಾಟದ ತೊಂದರೆಯು ಕಡಿಮೆಯಾಗುತ್ತದೆ. ಹೊಟ್ಟೆಯಲ್ಲಿ ಉರಿಯಾದಾಗ ಗ್ಯಾಸ್ಟ್ರಿಕ್ ಆದಾಗ ಈ ತುಂಬೆ ಗಿಡವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪೇ ಸ್ವಲ್ಪ ಉಪ್ಪು ಹಾಕಿಕೊಂಡು ಅದನ್ನು ಸೇವಿಸುವುದರಿಂದ ಅಜೀರ್ಣಕ್ಕೆ ಉಂಟಾದ ತೊಂದರೆಗಳೆಲ್ಲವೂ ವಾಸಿಯಾಗುತ್ತದೆ.

WhatsApp Group Join Now
Telegram Group Join Now

ಅಜೀರ್ಣಕ್ಕೆ ಇದು ರಾಮಬಾಣ ಎಂದು ಹೇಳಬಹುದು.ನಮ್ಮ ದೇಹದಲ್ಲಿರುವ ಮುಖ್ಯ ಭಾಗವೆಂದರೆ ಅದು ಕಣ್ಣು ಕೆಲವರಿಗೆ ಕಣ್ಣು ಉರಿಯುತ್ತಿರುತ್ತದೆ ಹಾಗೂ ಕೆಲವೊಮ್ಮೆ ಕೆಂಪಗಾಗಿರುತ್ತದೆ. ತುಂಬಾ ಒತ್ತಡದಲ್ಲಿ ಇದ್ದಾಗ ಕಣ್ಣಿನ ಸುತ್ತಲೂ ಕಪ್ಪಗಾಗಿರುತ್ತದೆ ಅದು ಮಹಿಳೆಯರು ಹಾಗೂ ಪುರುಷರಲ್ಲೂ ಕಂಡು ಬರುತ್ತದೆ, ಇದಕ್ಕೆ ಏನು ಮಾಡಬೇಕೆಂದರೆ ತುಂಬೆ ಗಿಡದ ರಸವನ್ನು ಹಾಲಿನಲ್ಲಿ ಬೆರೆಸಿ ಮುಖ ತೊಳೆಯುವುದರಿಂದ ಕಣ್ಣು ಉರಿತ ಕಣ್ಣಿನ ಕೆಂಪು ಹಾಗೂ ಕಣ್ಣಿನ ಸುತ್ತ ಇರುವ ಕಪ್ಪು ಕಲೆಯನ್ನು ದೂರ ಮಾಡಿಕೊಳ್ಳಬಹುದು. ತುಂಬೆ ಗಿಡವನ್ನು ಸೂರ್ಯನ ಕಿರಣದಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಂಡು ಅದರಲ್ಲಿ ಕಷಾಯ ಮಾಡಿ ಆಗಾಗ ಸೇವಿಸುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.