ತುಂಬೆ ಹೂ ತಿಂದರೆ ಏನಾಗುತ್ತೆ ಗೊತ್ತಾ?
ಸಾಮಾನ್ಯವಾಗಿ ತುಂಬೆ ಹೂ ತಿಂದರೆ ಆಗುವ ಒಳ್ಳೆಯ ಪರಿಣಾಮಗಳು ಹಾಗೂ ಇದರಲ್ಲಿರುವ ಔಷಧೀಯ ಗುಣಗಳು ಅನೇಕರಿಗೆ ತಿಳಿದಿಲ್ಲ, ಇದನ್ನು ಮನೆ ಮುಂದೆ ಬೆಳದರೆ ಕಿತ್ತು ಹಾಕಿಬಿಡುತ್ತಾರೆ ಅದರ ಔಷಧಿ ಗುಣ ತಿಳಿಯದೆ ಈ ರೀತಿ ಮಾಡುತ್ತಾರೆ, ಇದು ಕೇವಲ ಒಂದರಿಂದ ಎರಡು ಅಡಿ ಅಷ್ಟು ಬೆಳೆಯುವ ಗಿಡ ಶಿವನಿಗೆ ಈ ಹೂ ಎಂದರೆ ತುಂಬಾ ಇಷ್ಟ ಏಕೆಂದರೆ ಶಿವನು ವಿಷವನ್ನು ಸೇವಿಸಿದಾಗ ಅದರಿಂದ ವಿಮುಕ್ತಿ ಹೊಂದಲು ಈ ಹೂವನ್ನು ತಿಂದರು ಎಂದು ಪುರಾಣದಲ್ಲಿ ಇದೆ ಹಾಗಾಗಿ ಶಿವನಿಗೆ ಅತ್ಯಂತ ಪ್ರಮುಖ,ಹಾಗಾಗಿ ಬಹಳಷ್ಟು ಜನ ಶಿವರಾತ್ರಿ ಎಂದು ಶಿವನಿಗೆ ಈ ಹೂವಿನಿಂದಲೇ ಪೂಜೆ ಮಾಡಬೇಕು ಎಂದು ಈ ಹೂವನ್ನು ತೆಗೆದುಕೊಂಡು ಹೋಗುತ್ತಾರೆ ಶಿವನಿಗೆ ಇಷ್ಟವಾದ ಈ ಹೂವನ್ನು ರುದ್ರ ಪುಷ್ಪ ಎಂದು ಕನ್ನಡದಲ್ಲಿ ಕರೆಯುತ್ತಾರೆ ಇದಕ್ಕೆ ಇರುವ ಇನ್ನೊಂದು ಹೆಸರೇ ಇದು, ಸಾಮಾನ್ಯವಾಗಿ ದೇಹದಲ್ಲಿ ಚರ್ಮರೋಗದಂತಹ ತೊಂದರೆ ನಿಮಗೆ ಇದ್ದರೆ ಈ ಹೂವು ಮತ್ತು ಎಲೆಯನ್ನು ನೀರಲ್ಲಿ ನೆನೆಯಲು ಬಿಟ್ಟು.
ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ಈ ರೀತಿ ಚರ್ಮದ ರೋಗ ನಿರ್ಮೂಲನೆ ಯಾಗುತ್ತದೆ ಈ ಹೂವು ಮತ್ತು ಎಲೆಯಿಂದ ಉಸಿರಾಟದ ತೊಂದರೆಯು ಕೂಡ ದೂರವಾಗುತ್ತದೆ ಈ ಎಲೆ ಮತ್ತು ಹೂವನ್ನು ಸ್ವಲ್ಪ ಮಟ್ಟಿಗೆ ಕುದಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ಊಟಕ್ಕೆ ಮುಂಚೆ ರಾತ್ರಿ ಸಮಯದಲ್ಲಿ ಸೇವಿಸುತ್ತಾ ಬಂದರೆ ಕಫ ಆದಂತಹ ತೊಂದರೆ ದೂರವಾಗುತ್ತದೆ ಮತ್ತು ಹೊಟ್ಟೆ ಉರಿಯುವುದು ಹಾಗೂ ಗ್ಯಾಸ್ಟಿಕ್ ರೀತಿಯ ಸಮಸ್ಯೆ ಬಂದಾಗ ಈ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿದರೆ ಈ ಸಮಸ್ಯೆ ದೂರವಾಗುತ್ತದೆ, ನಮ್ಮ ದೇಹದಲ್ಲಿ ಅತ್ಯಂತ ಮುಖ್ಯವಾದದ್ದು ಎಂದರೆ ಕಣ್ಣು ಕೆಲವರಿಗೆ ಕಣ್ಣು ಉರಿಯುವುದು ಹೆಚ್ಚಾಗಿ ಇರುತ್ತದೆ ಇಂದಿನವರು ಮೊಬೈಲ್ ಅನ್ನು ಉಪಯೋಗ ಮಾಡುವುದರಿಂದ ಕಣ್ಣು ಉರಿಯುವುದು ಹಾಗೂ ಕಣ್ಣಿನ ಕೆಳಭಾಗ ಕಪ್ಪಾಗುವುದು ಈ ರೀತಿ ತೊಂದರೆ ಇದ್ದರೆ ತುಂಬೆ ಗಿಡದ ಎಲೆಯನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಅದರಿಂದ ಮುಖವನ್ನು ತೊಳೆಯುವುದರಿಂದ ಈ ತೊಂದರೆಯಿಂದ ಕೂಡ ಅಭಿವೃದ್ಧಿ ಹೊಂದಬಹುದು.
ತುಂಬೆ ಗಿಡದ ಎಲೆಯನ್ನು ಸೂರ್ಯನ ಕಿರಣಗಳಿಂದ ಚೆನ್ನಾಗಿ ಒಣಗಿಸಿ ಅದನ್ನು ಪುಡಿ ಮಾಡಿಕೊಂಡು ಅದನ್ನು ಕಷಾಯದ ರೀತಿಯಲ್ಲಿ ಪ್ರತಿದಿನ ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿರುವ ರಕ್ತದ ಉತ್ಪತ್ತಿ ಒಳ್ಳೆಯ ರೀತಿಯಲ್ಲಿ ಸಾಗುತ್ತದೆ ಹಾಗೂ ರಕ್ತ ಕೆಡುವ ಸಮಸ್ಯೆ ಕೂಡ ಬರುವುದಿಲ್ಲ, ಒಂದು ವೇಳೆ ನಿಮಗೆ ಹಾವು ಕಚ್ಚಿದರೆ ಆ ಜಾಗದಲ್ಲಿ ಈ ತುಂಬೆ ಗಿಡದ ರಸವನ್ನು ಹಾಕಿದರೆ ಆ ಉರಿ ಮತ್ತು ವಿಷ ಏರುವುದು ಕಡಿಮೆಯಾಗುತ್ತದೆ, ಈ ರೀತಿ ಅನೇಕ ಸಮಸ್ಯೆಗೆ ಈ ತುಂಬೆ ಹೂ ಹಾಗೂ ಇದರ ಎಲೆಗಳು ರಾಮಬಾಣವಾಗಿ ಇದೆ.ಇದು ನಮ್ಮ ಸುತ್ತಮುತ್ತಲಿನಲ್ಲೇ ಸಿಗುತ್ತದೆ ಹಾಗಾಗಿ ಇದಕ್ಕಾಗಿ ನಾವು ಹೆಚ್ಚು ಹಣವನ್ನು ಖರ್ಚು ಮಾಡುವುದು ಹಾಗೂ ದೊಡ್ಡ ದೊಡ್ಡ ಆಸ್ಪತ್ರೆಗೆ ತೋರಿಸುವ ಅಗತ್ಯ ಇರುವುದಿಲ್ಲ ಈ ರೀತಿ ನಮ್ಮ ಸುತ್ತಮುತ್ತಲೇ ಇರುವ ಔಷಧಿಯ ಗುಣವುಳ್ಳ ಎಲೆ ಹಾಗೂ ಹೂವನ್ನು ಸರಿಯಾದ ಕ್ರಮದಲ್ಲಿ ತೆಗೆದುಕೊಂಡರೆ ನಾವು ಸಾಯುವವರೆಗೂ ರೋಗರುಜಿನಗಳಿಂದ ದೂರವಿರಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ