ದಯವಿಟ್ಟು ದಯವಿಟ್ಟು ಎಲ್ಲರೂ ಈ ವಿಡಿಯೋವನ್ನು ನೋಡಿ ಯಾರು ಕೂಡ ಮಿಸ್ ಮಾಡಬೇಡಿ!ಈ ವಿಡಿಯೋನ ನಾನ್ ಯಾಕ್ ಮಾಡ್ತಾ ಇದೀನಿ ಅಂದ್ರೆ ನಿಮ್ಮೆಲ್ಲರಿಗೂ ತುಂಬಾ ಇಂಪಾರ್ಟೆಂಟ್ ಆದ ವಿಡಿಯೋನ ಮಾಡ್ತಾ ಇದೀನಿ. ಒಂದ್ ವಿಷಯವನ್ನು ಕೂಡ ನಿಮ್ಮತ್ರ ಶೇರ್ ಮಾಡ್ತಾ ಇದೀನಿ ಏನ್ ವಿಷಯ ಅಂತ ಅಂದ್ರೆ ನಂತರ ಯಾರೂ ಮೋಸ ಹೋಗಬಾರದು ಅನ್ನೋ ಕಾರಣಕ್ಕೆ ಈ ವಿಡಿಯೋ ಮಾಡ್ತಾ ಇದೀನಿ.ಯಾಕಂದ್ರೆ ಓನಾಗಿ ನಮಗೆ ಎಕ್ಸ್ಪೀರಿಯನ್ಸ್ ಆದಾಗ ನಮ್ಮಂತ ಬಡವರು ಇನ್ನು ಕೆಲವು ಜನ ಇರ್ತಾರೆ ಅವರಿಗೆ ಏನು ಆಗಬಾರದು ಅನ್ನೋ ಕಾರಣಕ್ಕೆ ಈ ವಿಡಿಯೋ ನ ಮಾಡ್ತಾ ಇದೀನಿ. ವಿಷಯ ಏನಂದರೆ ಲಾಸ್ಟ್ ಸಂಡೆ 11:30ಗೆ ನನಗೆ ಒಂದು ಮೆಸೇಜ್ ಬರುತ್ತೆ ಅನ್ನೋನ್ ನಂಬರ್ ಇಂದ ಆ ಮೆಸೇಜ್ ಏನು ಅಂತ ನಾನು ನಿಮಗೆ ಹೇಳ್ತೀನಿ ಅದಕ್ಕೂ ಮುಂಚೆ ನಿಮ್ಮತ್ರ ನಾನ್ ಒಂದ್ ರಿಕ್ವೆಸ್ಟ್ ಮಾಡ್ಕೊಂತೀನಿ ನಿಮ್ಮ ಮೊಬೈಲ್ ನಲ್ಲಿ ಇನ್ಬಾಕ್ಸ್ ಅಂತ ಒಂದು ಆಪ್ಷನ್ಸ್ ಇರುತ್ತೆ ಅದರಲ್ಲಿ ನಿಮಗೆ ಇನ್ಬಾಕ್ಸ್ ಅಲ್ಲಿ ಒಂದು ಮೆಸೇಜ್ ಬರುತ್ತೆ ನಿಮಗೆ ಲೋನ್ ಸಿಗುತ್ತೆ, ನಿಮ್ಮ ಖಾತೆಗೆ ಅಮೌಂಟ್ ಬರುತ್ತೆ ಎಂದು ಕೆಳಗಡೆ ಇರುವ ಲಿಂಕನ್ನ ಒತ್ತಿ ನಿಮ್ಮ ಖಾತೆಗೆ ಹಣ ಜಮಾವಾಗುತ್ತದೆ ಎಂದು ಮೆಸೇಜ್ ಕಳ್ಸಿರ್ತಾರೆ.
ಯಾವುದೇ ತಿಳಿಯದ ನಂಬರಿಂದ ಬಂದ ಮೆಸೇಜ್ ಆಗಲಿ ಅಥವಾ ನಿಮಗೆ ಗೊತ್ತಿರುವರೆ ಕಳ್ಸಿರೋದು ಆಗಲಿ ನೀವು ಯಾವುದೇ ಕಾರಣಕ್ಕೂ ಆ ಲಿಂಕ್ ನ ಓಪನ್ ಮಾಡಬೇಡಿ.ಇವಾಗ ಫ್ರಾಡ್ ಮಾಡ್ತಾ ಇರೋರು ಎಲ್ಲೋ ಕೂತ್ಕೊಂಡು ಬೇರೆ ಬೇರೆ ನಂಬರ್ ಗಳಿಂದ ಕೆಲವೊಂದು ಲಿಂಕ್ಗಳ್ನ ಕಳಿಸ್ತಾರೆ.ಅದನ್ನ ನೀವು ಯಾವುದೇ ಕಾರಣಕ್ಕೂ ಓಪನ್ ಮಾಡೋಕ್ ಹೋಗ್ಬೇಡಿ ನೀವೇನಾದ್ರೂ ಅದನ್ನ ಓಪನ್ ಮಾಡಿದ್ದರೆ ಅವರು ನಿಮ್ಮ ಇಡೀ ಕಾಂಟಾಕ್ಟ್ ಅನ್ನ ಅವರು ಯೂಸ್ ಮಾಡಿ ಅವರು ಹ್ಯಾಕ್ ಮಾಡ್ಕೋತಾರೆ ಹಾಗಾಗಿ ಇನ್ಬಾಕ್ಸ್ ನಲ್ಲಿ ನಿಮಗೆ ಮೆಸೇಜ್ ಮಾಡಿದ್ರೆ ಯಾರು ಕೂಡ ಆಪ್ ನ ಇನ್ಸ್ಟಾಲ್ ಮಾಡಕ್ ಹೋಗ್ಬೇಡಿ ಮತ್ತೆ ಲಿಂಕನ್ನು ಕೂಡ ಓಪನ್ ಮಾಡಕ್ ಹೋಗ್ಬೇಡಿ ನೀವು ಅವರಿಗೆ ನಿಮ್ಮ ನಂಬರ್ ಆಗ್ಲಿ ಓಟಿಪಿ ಯಾಗಲಿ ಕೂಡ ಕೊಡುದು ಬೇಡ ಅವರು ಕಳಿಸಿರೋ ಲಿಂಕ್ ನ ಓಪನ್ ಮಾಡಿದ್ರೆ ಸಾಕು ನಮ್ಮ ಎಲ್ಲಾ ಡೀಟೇಲ್ಸ್ ಹ್ಯಾಕ್ ಮಾಡುತ್ತಾರೆ.ಹೀಗೆ ನಮ್ಮ ಹಸ್ಬೆಂಡ್ ಗು ಕೂಡ ಆಗಿದೆ.ಅವರು ಮೊದಲು ಏನ್ ಮಾಡ್ತಾರೆ ಅಂದ್ರೆ ನಾವು ಬೇಡ ಅಂದ್ರು ಕೂಡ ನಮ್ಮ ಅಕೌಂಟ್ಗೆ ಜಮಾ ಮಾಡ್ತಾರೆ.ಅವರು ಸ್ವಲ್ಪ ಅಮೌಂಟ್ ಅಂದ್ರೆ ಈಗ ನಮ್ಮ ಹಸ್ಬೆಂಡ್ ಅಕೌಂಟಿಗೆ 7000 ಹಾಕಿದ್ರು ಇವರು ಬೇಡ ಬೇಡ ಅಂದ್ರು ಅವ್ರ್ ಅಮೌಂಟ್ ಹಾಕಿದ್ರು.
ಯಾಕಂದ್ರೆ ಅವರ ಮೈಂಡ್ ಸೆಟ್ ಬೇರೆ ಇರುತ್ತೆ ಆ 7000 ಅಮೌಂಟ್ ನ ನನ್ ಹಸ್ಬೆಂಡ್ ಸೇಫಾಗಿ ಎತ್ತಿಟ್ಟಿದ್ರು.ನನ್ನ ಹಸ್ಬೆಂಡ್ ನಂಗೆ ಹೇಳ್ತಾರೆ ಅದನ್ನ ಓಪನ್ ಮಾಡಿದ ತಕ್ಷಣ 7000 ಅಮೌಂಟ್ ಬಂದಿದೆ ಅದಾದ್ಮೇಲೆ ಅವ್ರು ನಮ್ ಗ್ಯಾಲರಿ ನಮ್ ಫೋಟೋಸ್ ಇದನ್ನೆಲ್ಲಾ ಹ್ಯಾಕ್ ಮಾಡ್ತಾರೆ. ಅಕೌಂಟ್ ನಂಬರ್ ಕೂಡ ಕೊಡೋದು ಬೇಡ ಹಾಗೆ ಅಮೌಂಟ್ ಬರುತ್ತೆ ಅವರು 7000 ಅಮೌಂಟ್ ಹಾಕಿ ಸ್ವಲ್ಪ ದಿನ ಟೈಮ್ ಕೊಡುತ್ತಾರೆ.ಆಮೇಲೆ ಅವರು ಕೇಳಷ್ಟು ಅಮೌಂಟ್ ನ ಡಬಲ್ ಅಮೌಂಟ್ ನಾವು ಕೊಡಬೇಕು ಅವರು ಹೇಳಿದ ಟೈಮ್ ಅಥವಾ ದಿನಕ್ಕಾಗಾಗಲಿ ನಾವ್ ಏನಾದ್ರು ಅಮೌಂಟ್ ಕೊಡಲಿಲ್ಲ ಅಂತ ಅಂದ್ರೆ ಅವರು ನಮ್ಮ ಫೋಟೋಸ್ನ ತೊಗೊಂಡು ನಮ್ಮ ಫೋಟೋಸ್ ಕೆಳಗಡೆ ಫೋನ್ ನಂಬರ್ ಮತ್ತೆ ಅದರ ಮೇಲ್ಗಡೆ ಇವನು ಕಳ್ಳ ಸಾಲ ತಗೊಂಡು ಓಡೋಗಿದ್ದಾರೆ. ಇನ್ನು ಕೆಲವು ಬರೆದು ನಮನ ಬ್ಲಾಕ್ ಮೇಲ್ ಮಾಡ್ತಾರೆ.ಏನಕ್ಕೆ ಅಂತ ಅಂದ್ರೆ ಅವರು ಕೇಳಿದ ಅಮೌಂಟ್ ಕೊಡಲ್ಲ ಅಂತ ಅಂದ್ರೆ ಇದನ್ನೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀವಿ.ನೀವ್ ಇತರ ಎಲ್ಲ ಮೋಸ ಮಾಡಿದಿರಾ ಅಂತ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾರೆ.ಅದು ಮೊದ್ಲು ನನ್ಗೆ ಬರುತ್ತೆ ನಾನು ಹಾಕಿರೋ ಡಿಪಿ ನನ್ನ ನಂಬರ್ ಮತ್ತೆ ನಂತರ ನಮ್ ಹಸ್ಬೆಂಡ್ ಫೋಟೋ ಇದನ್ನು ಅವರು ತಮಿಳು ಲ್ಯಾಂಗ್ವೇಜ್ ನಲ್ಲಿ ಹಾಕಿದ್ರು ಸೋ ನನಗೆ ತಮಿಳ್ ಬರಲ್ಲ ನನಗೆ ತಮಿಳ್ ಬರದೆ ಇರೋದ್ರಿಂದ ಅರ್ಥ ಆಗದೆ ಇರೋದರಿಂದ ನನ್ನ ತಮ್ಮನ ಹೆಂಡತಿನ ಕೇಳ್ತೀನಿ.ಈ ಅನ್ನೋನ್ ನಂಬರ್ ನಮಗೆ ರಾಜಸ್ಥಾನದಿಂದ ಬಂದಿದೆ ಅವರು ಎಲ್ಲೋ ಕುತ್ಕೊಂಡು ನಮ್ಮ ನಂಬರ್ ನ ಹ್ಯಾಕ್ ಮಾಡ್ತಾರೆ ಅಂತ.
ಅಂದ್ರೆ ನಾವು ತುಂಬಾ ಹುಷಾರಾಗಿರಬೇಕು ಅವರು ಏನಂತ ಹಾಕಿದ್ರು ಅಂದ್ರೆ ಅವರು ತುಂಬಾ ಬ್ಯಾಡ್ ವರ್ಡ್ಸ್ ಅಲ್ಲಿ ಇವನು ಸಾಲ ತಗೊಂಡು ಓಡಿ ಹೋಗಿದ್ದಾನೆ. ಇನ್ನು ಕೆಲವೊಂದು ತುಂಬಾ ಬ್ಯಾಡ್ ಬ್ಯಾಡ್ ವರ್ಡ್ಸ್ ಅಲ್ಲಿ ಹಾಕಿದ್ರು ಅಕ್ಟೋಬರ್ 5 ವಾಟ್ಸಪ್ಲಿ ನನಗೆ ಎರಡು ಮೆಸೇಜ್ ಮಾಡ್ತಾರೆ.ನಾನು ನೋಡಿದ್ ತಕ್ಷಣ ಆ ಮೆಸೇಜ್ ಡಿಲೀಟ್ ಮಾಡ್ಬಿಡ್ತಾರೆ ಅದಾದ್ಮೇಲೆ ಅವರಿಗೆ ಕಾಲ್ ಕೂಡ ಟ್ರೈ ಮಾಡಿದೆ ಬಟ್ ಅದಕ್ಕೆ ಕನೆಕ್ಟ್ ಆಗಿಲ್ಲ ನನಗೆ ಮೆಸೇಜ್ ಬರುತ್ತೆ ಆನಂತರ ನನ್ನ ಹಸ್ಬೆಂಡ್ ನಾ ಕೇಳ್ತೀನಿ ಮಾಡಿಲ್ಲ ಏನು ಇಲ್ಲ ಅಂತ ಹೇಳುತ್ತಾರೆ. ನನಗೆ ಬಂದ ಅರ್ಧ ಗಂಟೆ ನಂತರ ನಮ್ಮ ಹಸ್ಬೆಂಡ್ ಗು ಕೂಡ ಇದೆ ಮೆಸೇಜ್ ಬರುತ್ತೆ ತುಂಬಾ ಬ್ಯಾಡಗಿ ಬರೆದಿರುತ್ತಾರೆ.ನಾವಿದುನ್ನ ಯಾರತ್ರ ಕೂಡ ಶೇರ್ ಮಾಡ್ಕೊಳಕ್ ಆಗ್ತಿರ್ಲಿಲ್ಲ ನಾವೇನ್ ಮಾಡೋದು ಅಂತ ಯೋಚನೆ ಮಾಡ್ತಾ ಇರಬೇಕಾದರೆ ಅವರು ಇಷ್ಟು ಅಮೌಂಟ್ ಹಾಕಿದ್ರಲ್ಲ ಅದಕ್ಕೆ ಇನ್ನ ಅಮೌಂಟ್ ಸೇರಿಸಿ ಕೊಡಿ ಅಂತ ಮೆಸೇಜ್ ಮಾಡಿದ್ರು.ನನ್ನ ಹಸ್ಬೆಂಡ್ ನನ್ನತ್ರ ಇಲ್ಲ ಅಂತ ಹೇಳಿದಾಗೋ ಅವರು ಸರಿ ನೀನು ಕೊಡಲಿಲ್ಲ ಅಂತ ಅಂದ್ರೆ ಇನ್ನೂ ಕೆಟ್ಟದಾಗಿ ಆಗ್ತಿವಿ ಅಂತ ಬ್ಲಾಕ್ ಮೇಲ್ ಮಾಡ್ತಾರೆ ನಮ್ ಯಜಮಾನ್ರು ಹೆದ್ರುಕೊಂಡು ಅವರು ಕೇಳಿದಷ್ಟು ಅಮೌಂಟ್ನ ಅವರ ಅಕೌಂಟಿಗೆ ಹಾಕ್ಬಿಟ್ರು ಅವರ ಹಾಕಿದ್ 7000 ಪ್ಲಸ್ ನನ್ ಹಸ್ಬೆಂಡ್ ಹತ್ರ ಅವರು 5000 ಎಕ್ಸ್ಟ್ರಾ ಅಮೌಂಟ್ ಕೇಳಿ ಟೋಟಲ್ 12000 ಅಮೌಂಟ್ನ ಹಾಕಿಸ್ಕೊತಾರೆ.ನಮಗೆ ಇದು ಹೇಗ್ ಗೊತ್ತಾಯ್ತು ಅಂತ ಅಂದ್ರೆ ನಮ್ಮ ಯಜಮಾನ್ರು 12,000 ಪೆ ಮಾಡಿದಿನಿ ಅಂತ ನೋಡಿ ಅಂತ ಕೇಳ್ಬೇಕಾದ್ರೆ ಅವರು ಇನ್ಸ್ಟೆಂಟ್ ಆಪ್ ಅಲ್ಲಿ ಚೆಕ್ ಮಾಡಿ ಅಂತ ಹೇಳಿದಾಗ ಅವರು ಹಿಂದಿಯಲ್ಲಿ ಮಾತಾಡಿದ್ದಾರೆ.ನಮಗೆ ಅಮೌಂಟ್ ಬಂದಿದೆ ಅಂತ ನಾವು ಸಮಾಜಕ್ಕೆ ಹೆದ್ರುಕೊಂಡು ನಾವು ಮಾಡದೇ ಇರೋ ತಪ್ಪಿಗೆ ಭಯಪಟ್ಟುಕೊಂಡು ಅವರು ಕೇಳಿದ್ರು ಅಂತ ನಾವು 12000 ಹಾಕಿದ್ವಿ ಅವರು ಮತ್ತೆ ಏನು ಹೇಳಿದರು ಅಂತ ಅಂದ್ರೆ ಮತ್ತೆ ನಿಮಗೆ ಅಮೌಂಟ್ ಬರುತ್ತೆ, ಅಂತ ಹಿಂದಿಯಲ್ಲಿ ಹೇಳಿದರೆ ನಾವು ಇತರ ಫ್ರಾಡ್ ಮಾಡೋ ರಿಂದ ಬಚಾವಾಗ್ಬೇಕ ಎಚ್ಚರಿಕೆಯಿಂದ ಇರಬೇಕು.
ಯಾವುದೇ ಒಂದು ಅನ್ನೋನ್ ನಂಬರಿಂದ ಕಾಲ್ ಬಂದ್ರು ಮೆಸೇಜ್ ಬಂದ್ರು ನಾವದನ್ನ ರಿಪ್ಲೇ ಮಾಡಕ್ ಹೋಗ್ಬಾರ್ದು.ನಮಗೀಗಾಗಿರೋದ್ರಿಂದ ಬೇರೆ ಯಾರಿಗೂ ಈ ತರ ಆಗ್ಬಾರ್ದು ಅಂತ ನಾನು ಈ ವಿಡಿಯೋನ ಮಾಡ್ತಾ ಇದೀನಿ. ಇವಾಗ ನಮ್ ಹಸ್ಬೆಂಡ್ ಏನ್ ಹೇಳ್ತಾ ಇದ್ದಾರೆ ಅಂತ ಅಂದ್ರೆ ಅವರು ನನಗೆ ಮತ್ತೆ ಅಮೌಂಟ್ ನ ಹಾಕ್ತೀನಿ ಅಂತ ಹೇಳಿದ್ದಾರೆ ಇವಾಗ ನಾನು 5000 ನ ಕಳ್ಕೊಂಡಿದ್ದೀನಿ. ಮತ್ತೆ ಯಾಕ್ ನಾನು ಅವರಿಗೆ ಅಮೌಂಟ್ ಕೊಡ್ಲಿ ಅಂತ ಹೇಳ್ತಾ ಇದ್ದಾರೆ ಇವಾಗ ನಾನು ಆ ನಂಬರ್ನ ಚೇಂಜ್ ಮಾಡಿದೀನಿ ಈಗ ಬೇರೆ ನಂಬರ್ ತಗೊಂಡಿದೀನಿ ನಮ್ ಯಜಮಾನ್ರು ಕೂಡ ಅವರೇನಾದ್ರೂ ಅಮೌಂಟ್ ಹಾಕಿದ್ರೆ ನಾನು ಕೂಡ ನನ್ನ ಅಮೌಂಟ್ ನ ತಗೊಂಡು ಈ ನಂಬರ್ನ ಚೇಂಜ್ ಮಾಡ್ತೀನಿ ಅಂತ ಹೇಳಿದ್ದಾರೆ. ಹೀಗಾಗಿ ಈತರ ಆಗಿರೋದು ನಮಗೆ ಮಾತ್ರ ಗೊತ್ತಿರುತ್ತೆ ನನ್ ನಿಮ್ ಹತ್ರ ಏನ್ ಬೇಡ್ಕೊಂತಿನಿ. ಅಂತ ಅಂದ್ರೆ ಯಾರೇ ಕೂಡ ಇನ್ಬಾಕ್ಸ್ ನಲ್ಲಿ ಇನ್ಸ್ಟಂಟ್ ಆಗಿ ಅಮೌಂಟ್ ಕೊಡ್ತೀವಿ ಅಥವಾ ಅಮೌಂಟ್ ಬರುತ್ತೆ ಡೌನ್ಲೋಡ್ ಮಾಡಿ ಅಂತ ಯಾರೇ ಎಷ್ಟೇ ನಿಮ್ನ ಕೇಳಿದರು ಕೂಡ ನೀವು ಮಾಡಕ್ ಹೋಗ್ಬೇಡಿ.ನಮಗೆ ಮೋಸ ಆಗಿರೋದೆ ಸಾಕು ನನ್ನ ಹಾಗೆ ನೀವು ಯಾರು ಕೂಡ ಮೋಸ ಹೋಗಕ್ಕೆ ಹೋಗಬೇಡಿ ನನಿ ವಿಡಿಯೋ ನಂತರ ಮಿಡಲ್ ಕ್ಲಾಸ್ ಅವರಿಗೆ ಹೆಲ್ಪ್ ಆಗ್ಲಿ ಯಾರು ಕೂಡ ಮೋಸ ಹೋಗಬಾರದು ಅನ್ನೋ ಕಾರಣಕ್ಕೆ ಮಾಡಿದೀನಿ.ನಾನು ಕೊನೆದಾಗಿ ನಿಮಗೊಂದು ವಿಷಯ ಶೇರ್ ಮಾಡಕ್ ಇಷ್ಟಪಡ್ತೀನಿ ನಾವೀಗ ಕಳಿಸಿರೋ ಅಮೌಂಟ್ನ ಅವರು ಯಾವುದೇ ಒಂದು ಪ್ರೂಫ್ ನ ಕೂಡ ಇಟ್ಟುಕೊಳ್ಳಲ್ಲ.ನಾವೇನಾದ್ರೂ ಆ ಅಮೌಂಟ್ ನ ಪೇ ಮಾಡಿರುವುದನ್ನು ಸ್ಕ್ರೀನ್ಶಾಟ್ ತೆಗೆದಿಟ್ಟುಕೊಂಡರೆ ನಮಗೆ ಸೇಫ್ಟಿ ಈಗ ನಮ್ಮ ಯಜಮಾನ್ರು ತೋರಿಸಿದರು ನಾನು 12 ಸಾವಿರ ಅಮೌಂಟ್ ನ ಪೇ ಮಾಡಿದೀನಿ ನಾನ್ ಸ್ಕ್ರೀನ್ಶಾಟ್ ತೆಗೆದಿಟ್ಟುಕೊಂಡಿದ್ದೀನಿ.ಇವಾಗ ಆಪ್ ನ ಓಪನ್ ಮಾಡಿ ನೋಡಿದರೆ ಅಲ್ಲಿ ನಾನು ಅಮೌಂಟ್ ಕಳಿಸಿದೀನಿ ಅಂತ ಯಾವುದೇ ಪ್ರೂಫ್ ಇಲ್ಲ ಹಾಗಾಗಿ ಎಲ್ಲರೂ ಅನ್ನೋನ್ ನಂಬರ್ ಇಂದ ಬರುವ ಕಾಲ್ ಅಥವಾ ಮೆಸೇಜ್ ಅವಾಯ್ಡ್ ಮಾಡ್ತಾ ಹುಷಾರಾಗಿರಿ ಅಂತ ಹೇಳೋಕೆ ಇಷ್ಟಪಡ್ತೀನಿ.