ಗೆಳೆಯ ದರ್ಶನ್ ಪರವಾಗಿ ನಿಂತ ಸುದೀಪ್ | ನಮ್ಮ ನಾಡು,ನುಡಿ,ಸಂಸ್ಕೃತಿ ಎಲ್ಲವೂ ನಿಂತಿರೋದೆ ಪ್ರೀತಿ ಮತ್ತು ಗೌರವಗಳ ಮೇಲೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ,ಮತ್ತು ಪ್ರತಿಯೊಂದು ಪರಿಹಾರಕ್ಕೂ ಹಲವಾರು ಮಾರ್ಗಗಳಿವೆ.ಆ ಮಾರ್ಗದಲ್ಲಿ ಹೋಗಿ ಪರಿಹರಿಸಬಹುದಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಘನತೆ ಇರುತ್ತದೆ.

WhatsApp Group Join Now
Telegram Group Join Now

ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ನಡೆಸಿಕೊಳ್ಳಲು ಅರ್ಹನಾಗಿರುತ್ತಾನೆ. ಶಾಂತಿ ಹಾಗೂ ತಾಳ್ಮೆಯಿಂದಲೇ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು ನಾನು ನೋಡಿದ ಆ ವಿಡಿಯೋ ತುಂಬಾ ಆಘಾತಕಾರಿಯಾಗಿತ್ತು ಅಲ್ಲಿ ಅನೇಕರಿದ್ದರು ಸಿನಿಮಾದ ಹೀರೋಯಿನ್ ಕೂಡ ಅಲ್ಲೇ ಇದ್ದರು, ಪಕ್ಕದಲ್ಲಿ ನಿಂತಿದ್ರು ಈ ಘಟನೆಗೆ ಸಂಬಂಧಿಸಿದ ಅಲ್ಲಿ.

ಆ ಯೋಜನೆಗೊಂಡಿದ್ದ ಕಾರ್ಯಕ್ರಮಕಷ್ಟೆ ಸಂಬಂಧ ಹೊಂದಿದವರು ನಿಂತಿದ್ದರು. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದನ್ನು ಕಂಡಾಗ ನ್ಯಾಯ ಸಮ್ಮತವಲ್ಲದ ಪ್ರತಿಕ್ರಿಯೆಗಳನ್ನು ಯಾವತ್ತು ನೀಡದ ಕನ್ನಡಿಗರ ಈ ರೀತಿ ಪ್ರತಿಕ್ರಿಯಿಸಿದ್ದು. ಅನ್ನೋ ಪ್ರಶ್ನೆ ಮೂಡುತ್ತೆ.ಇನ್ನು ದರ್ಶನ್ ವಿಚಾರಕ್ಕೆ ಬರುವುದಾದರೆ….

ದರ್ಶನ್ ಹಾಗೂ ಪುನೀತ್ ಫ್ಯಾನ್ಸ್ ನಡುವೆ ಭಿನ್ನಾಭಿಪ್ರಾಯಗಳು ಇದ್ದಿರಬಹುದು.ಆದರೆ ಪುನೀತ್ ಸ್ವತಹ ಇಂತಹ ಪ್ರತಿಕ್ರಿಯೆಯನ್ನ ಮೆಚ್ಚುತ್ತಿದ್ದರ…? ಬೆಂಬಲಿಸುತ್ತಿದ್ದರ.? ಇದಕ್ಕೆ ಉತ್ತರ ಪುನೀತ್ ತುಂಬಾನೆ ಪ್ರೀತಿಸುತ್ತಿದ್ದ ಅಭಿಮಾನಿಗಳಿಗೆ ಗೊತ್ತು.ಗುಂಪಿನಲ್ಲಿದ ಯಾರೋ ಒಬ್ಬ ಮಾಡಿದ ಸಿಲ್ಲಿ ಕೆಲಸ, ಪುನೀತ್ ಅಭಿಮಾನಿ ಬಳಗ ಹೊಂದಿದ್ದ ಅಪಾರ ಪ್ರೀತಿ,ಗೌರವ, ಘನತೆಯನ್ನು.

ಹಾನಿ ಮಾಡಬಾರದು ದರ್ಶನ್ ಈ ಇಂಡಸ್ಟ್ರಿಗೆ ನಮ್ಮ ಭಾಷೆ ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನನ್ನ ಹಾಗೂ ದರ್ಶನ್ ನಡುವೆ ಏನೇ ಭಿನ್ನಾಭಿಪ್ರಾಯ ಇರಬಹುದು ಆದರೆ ಈ ಘಟನೆ ಕುರಿತು ನನಗೆ ಏನನಿಸಿದೆ ಅಂತ ಹೇಳೋದನ್ನ ನಾನು ನಿಲ್ಲಿಸುವುದಿಲ್ಲ. ನನಗನಿಸಿದ್ದನ್ನು ನಾನು ಹೇಳುತ್ತಿದ್ದೇನೆ. ನಿಜವಾಗಿಯೂ ದರ್ಶನ್ ಇಂತಹ ಪ್ರತಿಕ್ರಿಯೆಯನ್ನು ಡಿಸರ್ವ ಮಾಡಿರಲಿಲ್ಲ.

ಇದು ನನ್ನನ್ನು ಡಿಸ್ಟರ್ಬ್ ಮಾಡಿದೆ. ಕನ್ನಡ ಚಿತ್ರೋದ್ಯಮ ಮತ್ತು ನಮ್ಮ ನಾಡಿನ ಜನತೆ ಒಳ್ಳೆಯ ಕಾರಣಗಳಿಗಾಗಿ ಹೆಸರುವಾಸಿ. ಇದೇ ಕಾರಣಕ್ಕೆ ಕರ್ನಾಟಕ ಬೇರೆಲ್ಲ ರಾಜ್ಯಗಳಿಗೂ ಭಿನ್ನವಾಗಿ ನಿಲ್ಲುತ್ತೆ ಹಾಗೂ ಕನ್ನಡಿಗರು ಗೌರವಿಸಲ್ಪಡುತ್ತಾರೆ. ನಾವು ಇಂತಹಾ ಘಟನೆಗಳಿಂದ ಈ ಗೌರವ ಕಳೆದುಕೊಳ್ಳಬಾರದು… ಯಾವುದೇ ಪರಿಸ್ಥಿತಿಗೂ ಹೀಗೆ ಪ್ರತಿಕ್ರಿಯಿಸುವುದು.

ದಂಗೆ ಹೇಳುವುದೇ ಉತ್ತರವಲ್ಲ. ಇರಬಹುದು ನಟರ ನಡುವೆ ನಟರ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಇರಬಹುದು. ಅದರ ಮಧ್ಯೆ ಬರಲು ಅದರ ಬಗ್ಗೆ ಮಾತನಾಡಲು ನಾನ್ಯಾರು ಅಲ್ಲ.ಆದರೆ ನಾನು ಪುನೀತ್ ಹಾಗೂ ದರ್ಶನ್ ಇಬ್ಬರಿಗೂ ಆಪ್ತನಾಗಿದ್ದವನು.ಇಬ್ಬರ ಬದುಕಿನ ಭಾಗವಾಗಿದ್ದವನು. ಆದ್ದರಿಂದ ಇದನ್ನೆಲ್ಲಾ ಬರೆಯುವ ಸಲುಗೆ ತೆಗೆದುಕೊಂಡಿದ್ದೇನೆ,

ನಾನೇನಾದ್ರೂ ತಪ್ಪು ಮಾತನಾಡಿದರೆ ಕ್ಷಮಿಸಿಬಿಡಿ. 27 ವರ್ಷ ಈ ಸಿನಿಮ ಇಂಡಸ್ಟ್ರಿಯಲ್ಲಿ ಪಯಾಣಿಸಿದ್ದೇನೆ ನಂಗೆ ಒಂದು ವಿಷಯ ಅರ್ಥವಾಗಿದೆ ಇಲ್ಲಿ ಯಾವುದು ಶಾಶ್ವತವಲ್ಲ, ಯಾರು ಶಾಶ್ವತರಲ್ಲ. ಪ್ರೀತಿಯನ್ನು ಹಂಚೋಣ ಪ್ರತಿಯೊಬ್ಬರಿಗೂ ಗೌರವ ನೀಡೋಣ ಅದನ್ನೇ ವಾಪಸ್ಸು ಪಡೆಯೋಣ..ಎಲ್ಲಾ ಪರಿಸ್ಥಿತಿಯನ್ನು ಎಲ್ಲರನ್ನ ಗೆಲ್ಲಲು ಇರುವುದು ಅದೊಂದೇ ಮಾರ್ಗ….. ನಿಮ್ಮ ಕಿಚ್ಚ…!