ನಮಸ್ಕಾರ ಪ್ರಿಯ ವೀಕ್ಷಕರೆ, ಇಂದು ವಿಭೂತಿ ಬಗ್ಗೆ ತಿಳಿದುಕೊಳ್ಳೋಣ. ಆತ್ಮೀಯರೇ, ವಿಭೂತಿ ದೇವರ ಪೂಜೆಯಲ್ಲಿ ಉಪಯೋಗಿಸುವ ಒಂದು ರೀತಿಯ ವಸ್ತುವಾಗಿದೆ. ವಿಭೂತಿಯ ವೈಭವ ಮತ್ತು ಪವಿತ್ರತೆಯನ್ನು ಹೊಂದಿರುವ ಒಂದು ವಸ್ತುವಾಗಿದೆ. ವಿಭೂತಿಯನ್ನು ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಉಪಯೋಗಿಸುತ್ತಾರೆ. ಇದರ ಉಪಯೋಗವು ಬೇರೆ ಧರ್ಮಗಳಲ್ಲಿಯೂ ಇದೆ. ವಿಭೂತಿಯು ಲಿಂಗಾಯತ್ ಧರ್ಮದಲ್ಲಿ ಅತ್ಯಂತ ಪವಿತ್ರತೆಯನ್ನು ಹೊಂದಿದೆ. ಹಾಗೂ ಪೂಜೆಗಳಲ್ಲಿ ಹೆಚ್ಚು ಅಂಶದ ಪ್ರಾಮುಖ್ಯತೆಯನ್ನು ಹೊಂದಿರುವ ಪದಾರ್ಥವೆಂದು ಹೇಳಲಾಗಿದೆ.

WhatsApp Group Join Now
Telegram Group Join Now

ಹಿಂದೂ ಧರ್ಮದ ಪರಿಪಾಲಕರು ವಿಭೂತಿಯನ್ನು ಪರಮಾತ್ಮನಾದ ಶಿವನನ್ನು ಮೆಚ್ಚಿಸಲು ಹಚ್ಚಿಕೊಳ್ಳುತ್ತಾರೆ. ನಮ್ಮ ಸಂಪ್ರದಾಯವಾಗಿ ವಿಭೂತಿಯನ್ನು ನಮ್ಮ ಹಣೆಗಳ ಮೇಲೆ ಮೂರು ಗೆರೆಗಳನ್ನು ಹಚ್ಚಿಕೊಳ್ಳುತ್ತಿದ್ದರು, ಇದು ಉಬ್ಬುಗಳ ವರೆಗೆ ಹಚ್ಚಿಕೊಳ್ಳುವುದರಿಂದ ತ್ರಿಪುಂದ ಇಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ವಿಭೂತಿಯು ದೈವಾತ್ಮಕ ಅರ್ಥವನ್ನು ಹೊಂದಿದೆ ಹಾಗೂ ವಿಭೂತಿಗೂ ಶಿವನಿಗೆ ಹೊಂದಿರುವ ವಿಷಯ. ಒಂದು ನಂಬಿಕೆ ಏನೆಂದರೆ, ಪರಮಾತ್ಮನಾದ ಶಿವನು ತನ್ನ ಇಡೀ ದೇಹದ ಮೇಲೆ ವಿಭೂತಿಯನ್ನು ಹಚ್ಚಿಕೊಂಡಿರುವುದು .

ವಿಭೂತಿಯ ಬಣ್ಣವನ್ನು ಶಶಿವರ್ಣಂ ಎಂದು ಕರೆಯಲಾಗುತ್ತದೆ. ಎಂದರೆ ಶಿವನು ಪವಿತ್ರತೆ ಬೆಳಕು ಕತ್ತಲು ಎರಡನ್ನು ಹೊಂದಿರುವ ದೇವರು ಎಂದು, ಇದರ ಅರ್ಥವೇನೆಂದರೆ. ಶಿವನಲ್ಲಿ ಅನೇಕ ಶಕ್ತಿಗಳು ಇದ್ದು ಆತನಲ್ಲಿ ಹಲವು ರೀತಿಯ ಮಾಯಾ ಕೂಡ ಇದೆ ಎಂಬುದು ಒಂದು ನಂಬಿಕೆಯಾಗಿದೆ. ವಿಭೂತಿಯ ಬಳಕೆಯಲ್ಲಿ ಇನ್ನೊಂದು ಮುಖ್ಯವಾದ ಅರ್ಥವಿದೆ. ವಿಭೂತಿ ಧರಿಸುವುದರಿಂದ ಭಾವರೋಗ ನಿವಾರಣೆಯಾಗುವುದಲ್ಲದೆ, ಕಾಯ ಶಿವಮಯ ವಾಗುವುದು ಸಾವಿರಾರು ಜನರ ಮಧ್ಯ ನಿಂತರು ಎದ್ದು ಕಾಣುತ್ತದೆ.

ವಿಭೂತಿ ಹಚ್ಚಿಕೊಂಡವರ ಮುಖದಲ್ಲಿ ತೇಜಸ್ಸು ಮತ್ತು ರಜಕಳೆ ತುಂಬಿರುತ್ತದೆ. ಲಿಂಗ ವಿಭೂತಿ ರುದ್ರಾಕ್ಷಿ ನಮ್ಮ ನಮ್ಮ ಬದುಕಿನ ಸಂಪತ್ತು ಇದಕ್ಕೆ ಸರಿ ಸಮಾನದ ಯಾವ ಐಶ್ವರ್ಯ ಇಲ್ಲ. ಹುಟ್ಟಿನಿಂದ ಬಂದು ಸಾವಿನ ಮನೆ ಅಂದರೆ ಮಣ್ಣಲ್ಲಿ ಮಣ್ಣಾಗುವ ತನಕ ನಮ್ಮ ಜೊತೆಗೆ ಬರುವ ವಸ್ತು ಅಂದರೆ ಅದು ವಿಭೂತಿ. ನಮ್ಮ ಹಿಂದೂ ಧರ್ಮದ ಸಾಂಪ್ರದಾಯಗಳು ಮನೆಗೆ ಅಡಿಪಾಯವಾಗಿರಬೇಕು ಏಕೆಂದರೆ . ನಮ್ಮ ಬದುಕು ಕಟ್ಟಿಕೊಡುವುದು ನಮ್ಮ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಯಿಂದ ನಮ್ಮ ಪೂರ್ವಜರು ಎಲ್ಲಾ ಸಂಪ್ರದಾಯಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.

ನಾವು ಚಿಕ್ಕವರಿದ್ದಾಗ ಬೆಳಗ್ಗೆ ಎದ್ದ ತಕ್ಷಣ ಹೊರಗೆ ಬಂದು ನೋಡಿದರೆ ಪ್ರತಿಯೊಬ್ಬರ ಹಣೆಯ ಮೇಲೆ ವಿಭೂತಿ ಎದ್ದು ಕಾಣುತ್ತಿತ್ತು. ಮನೆಯ ಆಚಾರ ಹೇಗಿರುತ್ತಿತ್ತು ಎಂದರೆ ಬೆಳಿಗ್ಗೆ ಬೇಗ ಹೇಳಬೇಕು ಸ್ನಾನ ಮಾಡಿ ವಿಭೂತಿ ಹಚ್ಚಿಕೊಳ್ಳಬೇಕು ಪ್ರತಿಯೊಂದು ಮನೆ ಮನೆಗಳಲ್ಲಿ ಎಲ್ಲರ ಹಣೆ ಮೇಲೆ ವಿಭೂತಿ ನೋಡಿದಾಗ ಎಂತವರಿಗೂ ಭಕ್ತಿ ಮೂಡುತಿತ್ತು. ಒಬ್ಬರ ಮುಖ ಮತ್ತೊಬ್ಬರು ನೋಡುವುದರಿಂದ ಮುಂದೆ ಬರುವ ಕಂಟಕಗಳು ದೂರವಾಗುತ್ತಿದ್ದವು ನಂಬಿಕೆ. ಯಾವ ದುಷ್ಟ ಶಕ್ತಿಯು ಸನಿಹ ಸುಳಿಯುತ್ತಿರಲಿಲ್ಲ.

ಮನೆಯಿಂದ ಹೊರಗೆ ಯಾವ ಕೆಲಸಕ್ಕೆ ಹೋಗಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿಕೊಂಡು ಹಿಂದುಳಿಗಿ ಬರುತ್ತಿದ್ದರು, ಲಿಂಗ ಪೂಜೆ ಮಾಡಿಕೊಳ್ಳುವಾಗ ಮೈತುಂಬ ವಿಭೂತಿ ಹಚ್ಚಿಕೊಳ್ಳುವುದರಿಂದ ಯಾವ ರೋಗಗಳು ಬರುತ್ತಿರಲಿಲ್ಲ. ಕಾಯ ಸದೃಢವಾಗಿ ಇರುತ್ತಿತ್ತು. ರೋಗನಿರೋಧಕ ಶಕ್ತಿ ವರ್ಧಕ ಚಿಕಿತ್ಸೆ ಆದಾಗಿತ್ತು.
ಯಾವ ವೈರಸ್ ಮೈಯಿಗೆ ಸೋಕುತ್ತಿರಲಿಲ್ಲ .

ಅಷ್ಟೇ ಏಕೆ ಇಡೀ ದಿನ ಚೈತನ್ಯ ತುಂಬಿ ಮನಸು ಉಲ್ಲಾಸದಿಂದ ಕೂಡಿ ಅನ್ಯ ವಿಚಾರಗಳಿಗೆ ಆಸ್ಪದ ಇರುತ್ತಿರಲಿಲ್ಲ. ಹೀಗಾಗಿ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಶಕ್ತಿ ಇದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.