ದೆವ್ವಗಳನ್ನೇ ಬೇಟೆಯಾಡುತ್ತಿದ್ದ ಭಾರತದ ಟಾಪ್ ಗೋಸ್ಟ್ ಹಂಟರ್ ಆದ ಈತನ ಸಾವು! ಕೊನೆಗಳಿಗೆಯಲ್ಲಿ ಎಷ್ಟು ಭೀಕರ ಹಾಗೂ ನಿಗೂಢವಾಗಿತ್ತು ಗೊತ್ತಾ?ವೀಕ್ಷಕರೆ ಗೌರವ್ ದಿವಾಳಿ.ಈ ಒಂದು ಹೆಸರು ನಮ್ಮ ದೇಶದಲ್ಲಿ ಹಲವರಿಗೆ ಗೊತ್ತಿಲ್ಲ ಆದರೆ ಆಸ್ಟ್ರೇಲಿಯಾದಲ್ಲಿ ಈ ಒಂದು ಹೆಸರು ತುಂಬಾನೇ ಫೇಮಸ್, ಓದಿನಲ್ಲಿ ಬಹಳಾನೇ ಚುರುಕಾಗಿದ್ದ ಗೌರವ್ ಫ್ಲೋರಿಡಾದಲ್ಲಿ ತನ್ನ 21ನೇ ವಯಸ್ಸಿನಲ್ಲಿಯೇ 2007ರಲ್ಲಿ ಕಮರ್ಷಿಯಲ್ ಏರ್ ಪೈಲೆಟ್ ಟ್ರೈನಿಂಗ್ ಅನ್ನ ತೆಗೆದುಕೊಂಡಿದ್ದರು. ಪೈಲೆಟ್ ಆಗಬೇಕು ಎಂಬ ಆಶಯವಿದ್ದ ಗೌರವ್ ದೆಹಲಿಯ ಉನ್ನತವಾದ ಕಾಲೇಜಿನಲ್ಲಿ ಓದಿ ಫ್ಲೋರಿಡಾದ ಏರ್ ಈವಿಯೇಷನ್ ಅಕಾಡೆಮಿಯಲ್ಲಿ ಸೇರಿಕೊಂಡಿದ್ದರು.ಆದರೆ ವೀಕ್ಷಕರೆ ಆ ಒಂದು ರಾತ್ರಿ ಗೌರವ್ವನ ಬದುಕನ್ನೇ ತಿರುಗಿಸುವಂತಹ ಘಟನೆಯೊಂದು ಜರಗಿತ್ತು.ಆವತ್ತು ಫ್ಲೋರಿಡಾದ ತನ್ನ ಅಪಾರ್ಟ್ಮೆಂಟ್ ನಲ್ಲಿ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ತಂಗಿದಂತಹ ಗೌರವ್ ಮಧ್ಯರಾತ್ರಿ ಮೀರಿದ್ದರಿಂದ ತಾನು ನಿದ್ರೆಗೆ ಜಾರಿದರು.ಅದು ಮಾರ್ಚ್ ತಿಂಗಳು ಆವತ್ತು ಏಕಾಏಕಿ ತಡರಾತ್ರಿ ಒಂದು ಗಂಟೆಯ ನಂತರ ಎದ್ದಂತಹ ಗೌರವ್ ನ ಸ್ನೇಹಿತ ಬಲವಂತದಿಂದ ಗೌರವ್ನನ್ನು ಎಬ್ಬಿಸುತ್ತಾ.
ನಿನಗೆ ಏನಾದರೂ ಶಬ್ದ ಕೇಳಿಸಿತ ಎಂದು ಗಾಬರಿಯಿಂದ ವಿಚಾರಿಸುತ್ತಾನೆ. ಆದರೆ ಗೌರವ್ಗೆ ಅಂತಹ ಯಾವುದೇ ವಿಧವಾದ ಶಬ್ದವು ಕೇಳಿಸಿರುವುದಿಲ್ಲ ಆದರೆ ಗೌರವನಾ ಸ್ನೇಹಿತ ತನಗೇನು ಶಬ್ದವಾಯಿತು ಎಂದು ಹೇಳುತ್ತಾ ಗಾಬರಿಗೆ ಒಳಗಾಗಿದ್ದ ಅವನ ಸ್ಥಿತಿಯನ್ನು ನೋಡಿದಾಗ ಗೌರವ ಅವನಿಗೆ ಸಮಾಧಾನ ಮಾಡುತ್ತಾನೆ. ಆ ರೀತಿಯಲ್ಲ ಏನೂ ಇಲ್ಲ ನಾವು ವಿಜ್ಞಾನವನ್ನು ಓದಿದವರು ನಾವೇ ಈ ರೀತಿಯಾಗಿ ಹೆದರಿಕೊಂಡರೆ ಹೇಗೆ ಎಂದು ಸ್ನೇಹಿತನನ್ನು ನಾನಾ ವಿಧದಲ್ಲಿ ಸಮಾಧಾನಗೊಳಿಸಿ ಮಲಗಿಸುತ್ತಾನೆ. ಆದರೆ ಇಷ್ಟೆಲ್ಲಾ ರೀತಿಯಲ್ಲಿ ಸಂತಹಿಸಿದ ಗೌರವ್ ಗೆ ತನ್ನ ಸ್ನೇಹಿತನಿಗೆ ಆದಂತಹ ವಿಚಿತ್ರ ಅನುಭವದ ಬಗ್ಗೆ ಕುತೂಹಲ ಮೂಡುತ್ತದೆ. ಆತ ಕೂಡ ರಾತ್ರಿ ಒಂದು ಗಂಟೆಯ ಬಳಿಕ ಏನು ಶಬ್ದ ಕೇಳಿಸುತ್ತದೆ ಎಂದು ತಿಳಿಯಲು ಮರುದಿನ ಸಿದ್ದನಾಗಿ ನಿಂತಿರುತ್ತಾನೆ. ಅವನ ನಿರೀಕ್ಷೆ ಹಾಗೆ ಆ ದಿನ ಕೂಡ ಮಧ್ಯರಾತ್ರಿ ಒಂದು ಗಂಟೆಯ ನಂತರ ತಾನು ಇದ್ದ ಪ್ಲಾಟ್ನಲ್ಲಿ ಯಾರೊಂದು ಹೆಜ್ಜೆ ಸಪ್ಪಳ ಕೇಳಿ ಬಂದಂತಾಗುತ್ತದೆ.
ಇದು ಏನು ಎಂದು ತಿಳಿದುಕೊಳ್ಳಲು ನಿರ್ಧಾರ ಮಾಡಿದಾ ಗೌರವ್ ಮರುದಿನ ಒಂದು ಲಾಂಗ್ ಶಾರ್ಟ್ ಸ್ಪಿರಿಟ್ ಗ್ರಾಸ್ ಪಿನ್ ಕ್ಯಾಮರಾ ಒಂದನ್ನು ಖರೀದಿಸಿ ತನ್ನ ಸ್ನೇಹಿತನನ್ನು ಜೊತೆಗೆ ಮಾಡಿಕೊಂಡು ತಾನು ವಾಸವಿದ್ದ ಅಪಾರ್ಟ್ಮೆಂಟ್ನ ಕೆಲವೊಂದು ಕೋಣೆಗಳನ್ನು ತಡಾ ರಾತ್ರಿಯ ಬಳಿಕ ಸೆರೆ ಹಿಡಿಯಲಿಕ್ಕೆ ಯೋಜನೆ ಮಾಡಿಕೊಳ್ಳುತ್ತಾನೆ.ಆದರೆ ಅವನ ಸ್ನೇಹಿತ ಇದಕ್ಕೆ ಭಯಪಟ್ಟು ಬೇಡವೆಂದು ಒತ್ತಾಯ ಮಾಡಿದರು ಗೌರವ್ ಅವತ್ತು ತಡ ರಾತ್ರಿಯವರೆಗೂ ಕಾದು ತನ್ನ ಸ್ನೇಹಿತನಿಗೊಂದು ಕ್ಯಾಮೆರಾವನ್ನು ಕೊಟ್ಟು ತಾನೂ ಖರೀದಿ ಮಾಡಿದ ಹೊಸ ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಅಪಾರ್ಟ್ಮೆಂಟ್ನ ಕೆಲವು ಸ್ಥಳಗಳನ್ನ ಕ್ಲಿಕ್ಕಿಸಿದ. ಬೆಳಗ್ಗೆ ಕಾಫಿಯನ್ನು ಕುಡಿಯುತ್ತಾ ರಾತ್ರಿ ತಾವು ಸೆರೆ ಹಿಡಿದ ಚಿತ್ರಗಳನ್ನು ಪರಿಶೀಲನೆ ಮಾಡುವಾಗ ಅವುಗಳಲ್ಲಿ ಕೆಲವೊಂದರಲ್ಲಿ ಯಾವುದೋ ಅಪರಿಚಿತ ಹುಡುಗಿಯ ಬಿಂಬ ಕಾಣಿಸುವಂತಹಾಗುತ್ತದೆ ಇದನ್ನ ನೋಡಿದ ಸ್ನೇಹಿತ ಹೆದರಿಕೊಳ್ಳುತ್ತಾನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.