ದೇವರ ಕೋಣೆಯಲ್ಲಿ ಕಡ್ಡಿ ಪೊಟ್ಟಣ ಇಡುವಂತಹ ಮಹಿಳೆಯರು ಖಂಡಿತ ಈ ವಿಡಿಯೋವನ್ನು ನೋಡಿರಿ…..
ವಾಸ್ತು ಶಾಸ್ತ್ರದ ಅನುಸಾರವಾಗಿ ದೇವರ ಕೋಣೆಯು ಭವನದ ಎಲ್ಲಕ್ಕಿಂತ ಮುಖ್ಯವಾದ ಸ್ಸ್ಥಾನ ಆಗಿರುತ್ತದೆ ಇದೇ ಸ್ಥಾನದಿಂದ ನಮಗೆ ಸಕಾರಾತ್ಮಕ ಶಕ್ತಿಯು ಸಿಗುತ್ತದೆ. ಹಾಗಾಗಿ ಮನೆಯಲ್ಲಿ ದೇವರ ಕೋಣೆಯನ ನಿರ್ಮಿಸುವ ಸಮಯದಲ್ಲಿ ವಾಸ್ತು ಶಾಸ್ತ್ರದಲ್ಲಿ ತಿಳಿಸಿದಂತಹ ಮಹತ್ವಪೂರ್ಣವಾದ ನಿಯಮಗಳನ್ನು ನಾವು ಪಾಲಿಸಬೇಕು. ದೇವರಕೋಣೆಯನ್ನ ನಾವು ನಮ್ಮ ಪದ್ಧತಿಗಳ ಮೂಲಕ ನಾವು ಶೃಂಗಾರ ಮಾಡುತ್ತೇವೆ ಅಲಂಕರಿಸುತ್ತೇವೆ. ಅಲ್ಲಿ ನಾವು ನಮ್ಮ ಆರಾಧ್ಯ ದೇವರ ದೇವತೆಗಳ ಫೋಟೋ ಮೂರ್ತಿಗಳನ್ನ ಇಡುತ್ತೇವೆ ಒಂದು ವೇಳೆ ಕುಟುಂಬ ಏನಾದರೂ ದೊಡ್ಡದಾಗಿದ್ದರೆ ಇಲ್ಲಿ ಖಂಡಿತವಾಗಿ ಎಲ್ಲರಿಗೂ ತಮ್ಮದೇ ಆದ ಪ್ರಿಯ ದೇವರು ದೇವತೆಗಳು ಇರುತ್ತಾರೆ ಮತ್ತು ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಜನರಿಗೂ ತಮ್ಮ ಪ್ರಿಯ ದೇವರ ಫೋಟೋ ಅಥವಾ ಮೂರ್ತಿಗಳನ್ನ ಹುಡುಕಿಕೊಂಡು ತಂದು ದೇವರ ಮನೆಯಲ್ಲಿ ಇಡುತ್ತಾರೆ ಇದರಿಂದ ದೇವರ ಕೋಣೆಯಲ್ಲಿ ದೇವರ ಫೋಟೋಗಳಾಗಲಿ ಮೂರ್ತಿಯಾಗಲಿ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ.

ಆದರೆ ಇದು ಒಂದು ತಪ್ಪಾದ ವಿಷಯ ದೇವರ ಕೋಣೆಯಲ್ಲಿ ದೇವಾನುದೇವತೆಗಳ ಫೋಟೋವಾಗಲಿ ಅಥವಾ ವಿಗ್ರಹಗಳಾಗಲಿ ಕಡಿಮೆ ಸಂಖ್ಯೆಗಳಲ್ಲಿ ಇರಬೇಕು ಇದರಿಂದ ಪೂಜೆ ಮಾಡಲು ಸಹ ನಿಮಗೆ ಸುಲಭವಾಗುತ್ತದೆ. ಇಲ್ಲಿ ಕೆಲವು ಯಾವ ರೀತಿಯ ತಪ್ಪುಗಳು ಇವೆ ಎಂದರೆ, ಗೊತ್ತಿಲ್ಲದೆ ನಮ್ಮಿಂದ ಆ ತಪ್ಪುಗಳು ನಡೆಯುತ್ತವೆ ನಿರಂತರವಾಗಿ ಅವುಗಳನ್ನು ನಾವು ನಿರ್ಲಕ್ಷ್ಯ ಮಾಡುತ್ತೇವೆ. ಆಗ ನಮಗೆ ಪೂಜೆ ಪಾಠದಲ್ಲಿ ಸರಿಯಾದ ಫಲ ಸಿಗುವುದಿಲ್ಲ, ಹಾಗಾಗಿ ದೇವರ ಕೋಣೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ನಾವು ಖಂಡಿತವಾಗಿ ತಿಳಿದುಕೊಂಡಿರಬೇಕು. ಈ ರೀತಿಯಾದಾಗ ನಮಗೆ ಪೂಜೆಯ ಸರಿಯಾದ ಫಲ ನಮಗೆ ಸಿಗುತ್ತೆ. ಹಾಗಾದರೆ ಬನ್ನಿ ದೇವರ ಕೋಣೆಗೆ ಸಂಬಂಧಿಸಿದಂತಹ ಕೆಲವು ಮಹತ್ವಪೂರ್ಣವಾದ ವಾಸ್ತು ನಿಯಮವನ್ನು ತಿಳಿದುಕೊಳ್ಳೋಣ, ಎಲ್ಲಕ್ಕಿಂತ ಮೊದಲನೆಯದಾಗಿ ದೊಡ್ಡದಾಗಿರುವ ತಪ್ಪು ಒಂದು ನಮ್ಮೆಲ್ಲರಿಂದ ನಡೆದ ಬಿಡುತ್ತದೆ ಅದು ದೇವರ ಕೋಣೆಯನ ಅಸ್ವಚ್ಚವಾಗಿ ಇಡುವುದು. ದೇವರ ಕೋಣೆಯಲ್ಲಿ ಎಲ್ಲಿ ನೀವು ದೇವರನ್ನ ಸ್ಥಾಪನೆ ಮಾಡಿರುತ್ತೀರೋ ಯಾವತ್ತಿಗೂ ಅಲ್ಲಿ ಅಸ್ವಚ್ಚತೆಯಾಗಿ ಇಡಬಾರದು.

WhatsApp Group Join Now
Telegram Group Join Now

ಜೊತೆಗೆ ನಾವೆಲ್ಲರೂ ಸಹ ಪೂರ್ತಿಯಾಗಿ ಸ್ವಚ್ಛಗೊಂಡ ನಂತರವೇ ಸ್ನಾನದಿಗಳನ್ನೆಲ್ಲ ಮಾಡಿಕೊಂಡ ನಂತರವೇ ದೇವರ ಮನೆಯೊಳಗೆ ಹೋಗಬೇಕು. ಚಪ್ಪಲಿಗಳನ್ನ ಧರಿಸಿಕೊಂಡಾಗಲಿ ಅಥವಾ ಗಲಿಜಾದ ಪಾದಗಳಿಂದ ನಾವು ದೇವರ ಕೋಣೆಯ ಒಳಗೆ ಪ್ರವೇಶವನ್ನು ಮಾಡಬಾರದು. ಎರಡನೆಯದಾಗಿರುವ ಬಹಳ ಮುಖ್ಯ ವಿಷಯವೇನೆಂದರೆ ಯಾವುದೇ ಕಾರಣಕ್ಕೂ ದೇವರು ಮನೆಯ ಬಾಗಿಲುಗಳನ್ನ ದಕ್ಷಿಣ ಭಾಗದಲ್ಲಿ ತೆರೆಯಬಾರದು ದಕ್ಷಿಣ ದಿಕ್ಕು ಮೃತ್ಯುದೇವರಾದ ಯಮರಾಜರ ದಿಕ್ಕು ಎಂದು ತಿಳಿಯಲಾಗಿದೆ. ಈ ದಿಕ್ಕಿನಲ್ಲಿ ದೇವರಿಗೆ ಹಚ್ಚಿದ ದೀಪವು ಸಹ ಇರಬಾರದು, ಇದೇ ರೀತಿಯಾಗಿ ದೇವಾನುದೇವತೆಗಳ ಮುಖವು ಸಹ ದಕ್ಷಿಣ ದಿಕ್ಕಿಗೆ ಇರಬಾರದು ಜೊತೆಗೆ ಈ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ದೇವಾನು ದೇವತೆಗಳ ಫೋಟೋ ಆಗಲಿ ಅಥವಾ ಮೂರ್ತಿಗಳು ಎದುರು ಬದರಿನಲ್ಲಿ ಇರಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.