ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ…
ದೇವರ ಮನೆಯಲ್ಲಿ ಈ ಫೋಟೋ ಈ ದಿಕ್ಕಿಗೆ ಇಟ್ಟು ನೋಡಿ… ಮನುಷ್ಯನ ದೇಹದಲ್ಲಿ ಹೃದಯ ಎಂಬುದು ಎಷ್ಟು ಮುಖ್ಯನೋ ನಮ್ಮ ನಮ್ಮ ಮನೆಗಳಲ್ಲಿ ದೇವರ ಕೋಣೆ ಎಂಬುದು ಕೂಡ ಅಷ್ಟೇ ಮುಖ್ಯ ಪ್ರತಿಯೊಬ್ಬರ ಮನೆಯಲ್ಲೂ ವಿವಿಧ ರೀತಿಯಾದಂತಹ ದೇವರ ಫೋಟೋ ಅಥವಾ ವಿಗ್ರಹಗಳು ಇದ್ದೇ ಇರುತ್ತದೆ ಆದರೆ ದೇವರ ಕೋಣೆಯಲ್ಲಿ ಯಾವ ದೇವರ ಫೋಟೋ ಯಾವ ದಿಕ್ಕಿಗೆ ಇಟ್ಟರೆ ಆ ದೇವರ ಪ್ರಭಾವದಿಂದ ಮನೆಗೆ ಒಳ್ಳೆಯದಾಗುತ್ತದೆ.
ಅದೃಷ್ಟ ಕೂಡಿ ಬರುತ್ತದೆ ಎಂದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ ಜೊತೆಗೆ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನ ಮರೆತು ಕೂಡ ಇಡಬಾರದು ಎಂದು ಈಗ ತಿಳಿಯುತ್ತಾ ಹೋಗೋಣ. ಯಾವಾಗಲೂ ಪ್ರಧಾನ ದೇವರ ಫೋಟೋಗಳನ್ನ ಪೂರ್ವ ದಿಕ್ಕಿನಲ್ಲಿ ಇಡಬೇಕಾಗುತ್ತದೆ ದ್ವಾರ ಪಾಲಕರ ಫೋಟೋಗಳನ್ನು ಉತ್ತರ ದಿಕ್ಕಿನ ಕಡೆ ಅಥವಾ ದಕ್ಷಿಣ ದಿಕ್ಕಿನ ಕಡೆ ಇಡಬೇಕಾಗುತ್ತದೆ.
ಉದಾಹರಣೆಗೆ ಸೀತಾ ಮಾತ ಇರುವಂತಹ ಫೋಟೋವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇಡಬೇಕು ಆಂಜನೇಯ ಸ್ವಾಮಿ ಫೋಟೋ ಇತ್ತು ಎಂದರೆ ಮನೆಯಲ್ಲಿ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕಾಗುತ್ತದೆ ಅಂದರೆ ದ್ವಾರಪಾಲಕರ ಅಥವಾ ಅನುಚರ ದೇವರ ಫೋಟೋವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡಬೇಕಾಗುತ್ತದೆ ಉಳಿದ ದೇವರುಗಳ ಫೋಟೋವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕಾಗುತ್ತದೆ.
ಕುಟುಂಬಪೂರ್ತಿರುವಂತಹ ಫೋಟೋವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇಟ್ಟರೆ ಒಳ್ಳೆಯದು ಹಾಗೆಯೇ ಲಕ್ಷ್ಮೀನರಸಿಂಹಸ್ವಾಮಿ ರಾಧಾಕೃಷ್ಣ ಲಕ್ಷ್ಮೀನಾರಾಯಣರ ಚಿತ್ರಪಟವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಇಡಬೇಕಾಗುತ್ತದೆ ಗಣೇಶ ಒಂದೇ ಚಿತ್ರಪಟ ಇತ್ತು ಎನ್ನುವುದಾದರೆ ಗಣೇಶನ ಚಿತ್ರಪಟವನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಸುಬ್ರಮಣ್ಯ ಸ್ವಾಮಿಯ ಒಂದೇ ಒಂದು ಫೋಟೋ ಇದ್ದರೆ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಆ ಒಂದು ಫೋಟೋವನ್ನು ನೀವು ಏರ್ಪಾಡು ಮಾಡಿಕೊಳ್ಳಬಹುದು.
ಹಾಗೆ ಗುರುಗಳ ಸ್ವರೂಪವಾದಂತಹ ಯಾವುದೇ ಚಿತ್ರವನ್ನು ಕೂಡ ನೀವು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ಏರ್ಪಾಡು ಮಾಡಿಕೊಳ್ಳಬಹುದು. ಎಷ್ಟೋ ಜನರ ಮನೆಯಲ್ಲಿ ರಾಘವೇಂದ್ರ ಸ್ವಾಮಿ ಗಳ ಚಿತ್ರ ಪಟ ಅಥವಾ ವಿಗ್ರಹವನ್ನು ಇಟ್ಟಿರುತ್ತೀರಾ ಸಾಯಿಬಾಬಾ ಅವರ ವಿಗ್ರಹ ಅಥವಾ ಫೋಟೋಗಳನ್ನು ಮನೆಯಲ್ಲಿ ಇಟ್ಟಿರುತ್ತೀರಾ ಅಂತವರು ಉತ್ತರ ಹಾಗೂ ದಕ್ಷಿಣ ದಿಕ್ಕನ್ನು ತಪ್ಪದೇ ಪಾಲಿಸಬೇಕಾಗುತ್ತದೆ.
ಇದರ ಜೊತೆಗೆ ಒಂದೇ ದೇವರಿಗೆ ಸಂಬಂಧಿಸಿದಂತ ದೇವರ ಫೋಟೋವನ್ನು ಮನೆಯಲ್ಲಿ ಇಡಬಾರದು ಪರಿವಾರ ಸಮೇತವಾಗಿ ದೇವರ ಫೋಟೋವನ್ನು ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ದೇವರ ಕೋಣೆಯಲ್ಲಿ ಒಡೆದು ಹೋಗಿರುವಂತಹ ಭಿನ್ನವಾಗಿರುವಂತಹ ತುಂಡು ಆಗಿರುವಂತಹ ವಿಗ್ರಹಗಳು ಅಥವಾ ದೇವರ ಚಿತ್ರಪಟವನ್ನು ಯಾವುದೇ ಕಾರಣಕ್ಕೂ ಬಿಡಬಾರದು.
ಈ ರೀತಿ ಇಟ್ಟು ಪೂಜೆ ಮಾಡುವುದರಿಂದ ಪೂಜೆಯ ಕಲ ಪ್ರಾಪ್ತಿಯಾಗುವುದಿಲ್ಲ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ವೃದ್ಧಿಯಾಗುತ್ತಾ ಹೋಗುತ್ತವೆ ಉಗ್ರ ಸ್ವರೂಪವಾದಂತಹ ದೇವರ ಚಿತ್ರವನ್ನು ಅಥವಾ ವಿಗ್ರಹ ಮನೆಯಲ್ಲಿ ಇತ್ತು ಎನ್ನುವುದಾದರೆ ಆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲ ಹಾಗಾಗಿ ನಿತ್ಯ ಗ್ರಹಗಳು ಅಶಾಂತಿಯಿಂದ ನೆಮ್ಮದಿ ಅನ್ನುವುದು ಮನೆಯಲ್ಲಿ ನೆಲೆಸುವುದಿಲ್ಲ.
ಉದಾಹರಣೆಗೆ ಭೈರವೇಶ್ವರ ಶನಿದೇವರು ಕಾಳಿ ದೇವಿ ಈ ರೀತಿಯಾದಂತಹ ಉಗ್ರ ಸ್ವರೂಪವಾದಂತಹ ದೇವರುಗಳನ್ನು ಮನೆಯಲ್ಲಿ ಇಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.