ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಇನ್ನಿಲ್ಲ – ಯಾರು ಈ ಸ್ವಾಮೀಜಿ??ಶತಮಾನದ ಸಂತ ನಡೆದಾಡುವ ದೇವರು ಆಧುನಿಕ ದೇವಮಾನವ ಎರಡನೇ ವಿವೇಕಾನಂದ ಸಿದ್ದೇಶ್ವರ ಸ್ವಾಮೀಜಿಗಳನ್ನು ಕಳೆದುಕೊಂಡಿದ್ದೇವೆ, ಭಕ್ತ ಸಾಗರದಲ್ಲಿ ಅನಾಥ ಪ್ರಜ್ಞೆ ಮೂಡಿದೆ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳು ಎಂದರೆ ಎಲ್ಲಿಯವರೆಗೆ ಬಂದಿದೆ ಎಂದರೆ ಪ್ರಚಾರವನ್ನು ಬಯಸುವಂಥವರು, ಜೊತೆಗೆ ರಾಜಕೀಯ ನಾಯಕರು ಜೊತೆ ಬಕೆಟ್ ಹಿಡಿದುಕೊಂಡು ಪ್ರಚಾರ ಮಾಡುವಂಥವರು

WhatsApp Group Join Now
Telegram Group Join Now

ಕೇವಲ ತಮ್ಮ ಸಮುದಾಯದ ಬಗ್ಗೆ ಮಾತ್ರ ಮಾತನಾಡುವಂಥವರು ಜೊತೆಗೆ ಮಠದ ಆಸ್ತಿ ವ್ಯಾಮೋಹಕ್ಕೆ ಒಳಗಾದಂತವರು! ಕಾವಿ ದಾರಿಗಳು ಎಂದರೆ ನಂಬಿಕೆಗೆ ಅರ್ಹರಲ್ಲ ಅದರಲ್ಲೂ ಕೂಡ ಶ್ರೀಮುರುಗ ಮಠದ ಶಿವಮೂರ್ತಿಯವರ ಕಿರಾತಕ ಕೃತ್ಯದ ನಂತರ ಎಲ್ಲರಿಗೂ ಕೂಡ ಸ್ವಾಮೀಜಿಗಳ ಬಗ್ಗೆ ಅಸಹ್ಯ ಮೂಡುವಂತಹ ಪರಿಸ್ಥಿತಿಗೆ ಬಂದಿದೆ ಆದರೆ ಅದರ ನಡುವೆ ಸ್ವಾಮೀಜಿಗಳು ಎಂದರೆ ಹೀಗಿರಬೇಕು ಎಂದು ಮಾದರಿಯಾಗಿ ತೋರಿಸಿಕೊಟ್ಟಂತವರು.

ನಮ್ಮೆಲ್ಲರ ಪ್ರೀತಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು! ಕೆಲವೊಬ್ಬರು ಸಿದ್ದೇಶ್ವರ ಸ್ವಾಮೀಜಿಗಳ ಹೆಸರನ್ನು ಕೇಳಿರಬಹುದು ಅಥವಾ ಕೆಲ ಜನ ಕೇಳಿರದೇ ಇರಬಹುದು ಆದರೆ ಉತ್ತರ ಕರ್ನಾಟಕದ ಪ್ರತಿ ಮನೆ ಮನೆಯಲ್ಲಿಯೂ ಕೂಡ ದೇವರಂತೆ ಪೂಜಿಸಲ್ಪಡು ತ್ತಾರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆದರೆ ದಕ್ಷಿಣ ಕರ್ನಾಟಕದ ಕೆಲವೊಂದಷ್ಟು ಮಂದಿಗೆ ಇವರು ಗೊತ್ತಿಲ್ಲದೇ ಇರಬಹುದು ಅದಕ್ಕೆ ಕಾರಣ ಏನು ಗೊತ್ತಾ.

ಇವರು ಯಾವತ್ತಿಗೂ ಕೂಡ ಪ್ರಚಾರವನ್ನು ಬಯಸಿ ದಂತವರಲ್ಲ ಯಾವುದೇ ಮಾಧ್ಯಮಗಳ ಮುಂದೆ ಬಂದಂತವರಲ್ಲ ತಾವು ಜೀವಂತ ಇರುವವರೆಗೂ ಕೂಡ ದಿನಪತ್ರಿಕೆಗಳಲ್ಲೇ ಆಗಲಿ ಇನ್ಯಾವುದೇ ಬೇರೆ ಕಡೆಯಾಗಲಿ ಅವರ ಬಗ್ಗೆ ಒಂದೇ ಒಂದು ಆರ್ಟಿಕಲ್ ಬರೆಯುವುದಕ್ಕೂ ಕೂಡ ಶ್ರೀ ಸಿದ್ದೇಶ್ವರ ಸ್ವಾಮಿಗಳು ಬಿಟ್ಟಿರಲಿಲ್ಲ ಯಾವುದೇ ರಾಜಕೀಯ ನಾಯಕರ ಸಹವಾಸವನ್ನು ಮಾಡಿದಂಥವರಲ್ಲ ರಾಜಕೀಯ ನಾಯಕರ ಜೊತೆ ಬಕೆಟ್ ಹಿಡಿದು ಜಯಕಾರವನ್ನು ಹಾಕಿದಂಥವರಲ್ಲ.

ಮಠದ ಅಸ್ತಿಪಾಸ್ತಿ ಜಾಸ್ತಿ ಮಾಡಿ ಸುವಂತಹ ಪ್ರಯತ್ನ ವನ್ನು ಪಟ್ಟಂತವರಲ್ಲ ಸರ್ಕಾರದ ಮುಂದೆ ಕೈಹೊಡ್ಡಿ ದಂತವರಲ್ಲ ಯಾವುದೇ ವಿಚಾರ ಇಟ್ಟುಕೊಂಡು ಯಾರನ್ನು ಕೂಡ ಹೊಗಳಿದಂತವರು ಕೂಡ ಅಲ್ಲವೇ ಅಲ್ಲ ಇದೇ ಕಾರಣಕ್ಕಾಗಿ ಒಂದಷ್ಟು ಜನರಿಗೆ ಇವರ ಬಗ್ಗೆ ಗೊತ್ತೇ ಇಲ್ಲ ಬದಲಿಗೆ ಅವರು ಸತ್ತ ನಂತರ ಅವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಶುರು ಮಾಡಿದ್ದಾರೆ.

ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರನ್ನು ಕಳೆದುಕೊಂಡು ಯಾವ ಒಂದು ವಿಚಾರಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ ಅಂತಹ ಕೆಲಸ ಏನು ಮಾಡಿದ್ದಾರೆ ಎಂದು ನೋಡುವು ದಾದರೆ ಅವರ ಮಾತುಗಳಿಂದ ಪ್ರತಿಯೊಬ್ಬರೂ ಕೂಡ ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದ್ದಾರೆ ಜೊತೆಗೆ ಪ್ರತಿಯೊಬ್ಬರಿಗೂ ಒಳ್ಳೆಯ ಮಾದರಿಯಂತೆ ನಡೆದಾಡುವ ದೇವರು ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.