ಕೋಪ ಇರೋ ದರ್ಶನ್ ನನ್ನ ತಾಯಿಗೆ ಕಂಪೇರ್ ಮಾಡ್ತೀನಿ. ಯಾಕೆ ಗೊತ್ತಾ? ಜನಗಳ ತೀರ್ಪೆ ಜನಾರ್ಧನ ತೀರ್ಪು,ಅವರು ಹೇಗೆ ಅಂದುಕೊಳ್ಳುತ್ತಾರೋ ಹಾಗೆ ನಾವು ಯಾವುದಕ್ಕೂ ನಾವು ಹೋರಾಡುವುದಿಲ್ಲ. ಇದಕ್ಕೇನು ಅದಕ್ಕೇನು ಏನು ಮನೋಭಾವನೆ ಇಲ್ಲ ತಾಯಿ ಮಕ್ಕಳಿಗೆ ನಮಗೆ ನಮ್ಮ ತಾಯಿಯವರು ಕೋಟ್ಯಾಂತರ ರೂಪಾಯಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನೊಬ್ಬರು ಕೊಟ್ಟು ಮಾಡಿರುವುದಲ್ಲ ಅದು ಅವರ ಸ್ವಂತ ದುಡಿಮೆ ಅದಕ್ಕೆ ನಾನು ನನ್ನ ತಾಯಿಯನ್ನು ದರ್ಶನ್ ಅವರಿಗೆ ಹೋಲಿಸುತ್ತೇನೆ ಅರ್ಥ ಮಾಡಿಕೊಳ್ಳಿ.ಅವರಿಗೆ ಕೋಪ ಬರುತ್ತದೆ ಎಂದರೆ ಸುಮ್ಮನೆ ಬರುತ್ತದೆಯೇ ಎಷ್ಟು ಅನಿಸಿಕೊಂಡಿಲ್ಲ ಜೀವನದಲ್ಲಿ ಎಷ್ಟು ನೋವು ಪಟ್ಟಿಲ್ಲ ಅಂತ ಎಲ್ಲಿಂದಲೂ ನೆಮ್ಮದಿ ಇಲ್ಲ ಎಲ್ಲೂ ಸಿಗದೇ ಇರುವ ನೆಮ್ಮದಿ ದರ್ಶನವರಿಗೆ ನಾನು ಹೇಳುತ್ತೇನೆ ತಾಯಿಯವರ ಬಳಿ ಸಿಗುತ್ತದೆ ಎಂದು.ಸ್ವಲ್ಪ ನಿಧಾನವಾಗಿ ಯೋಚನೆ ಮಾಡಿ, ನೆಮ್ಮದಿ ಸಿಗಬೇಕು ಮನುಷ್ಯನಿಗೆ ಬೇರೆಯವರು ಕೊಡಲು ಸಾಧ್ಯವಿಲ್ಲ ತಾಯಿ ಮಾತ್ರ ಕೊಡಲು ಸಾಧ್ಯ.
ತುಂಬಾ ಸಣ್ಣ ವಿಷಯ ಕಾಲದಲ್ಲಿ ತಂದೆ ಯಾರು ಎಂದು ಕೇಳಿದಾಗ ನಮ್ಮಮ್ಮ ಹೇಳಿದರು ದೇವರೇ ನಿನ್ನ ತಂದೆ ಎಂದು ಹೇಳು ಎನ್ನುತ್ತಾರೆ. ಈಗ ಯಾರು ಎಂದು ಕೇಳಿದಾಗ ಪ್ರತಿಯೊಂದು ಸನ್ನಿವೇಶ ಸಂದರ್ಭ ಕೂಡಿಬಂದು ಅಭಿಮಾನಿಗಳೇ ಹೇಳುತ್ತಾರೆ.ನನ್ನನ್ನು ಏನು ಕೇಳುವುದು ಅಭಿಮಾನಿಗಳನ್ನೇ ಕೇಳಿ ಸರಿಯಾಗಿ ಅವರೇ ಹೇಳಿಬಿಡುತ್ತಾರೆ, ಏನು ಮಾತನಾಡುವುದಿಲ್ಲ ಅಷ್ಟು ನಂಬಿಕೆ ಇದೆ ಅಭಿಮಾನಿಗಳ ಮೇಲೆ. ಹಾಗೆ ಹೀಗೆ ವಿನೋದ್ ರಾಜ್ ಮತ್ತು ಲೀಲಾವತಿಯವರು ಜೀವನ ಮಾಡಿದ್ದಾರೆ ಇಂತಹ ಕಾಡಿನಲ್ಲಿ ಬಾಳಿ ಬದುಕಲು ಆಗುತ್ತಿತ್ತೆ.ಇಷ್ಟು ಜನರ ಮಧ್ಯೆ ಓಡಾಡುತ್ತಿರುತ್ತೇವೆ ದಿನ ತಮಿಳುನಾಡಿನಲ್ಲಿ ಇದ್ದೀವಿ ಇಲ್ಲೂ ಸಹ ಇದ್ದೀವಿ ನಮ್ಮ ನಡವಳಿಕೆಯಲ್ಲಿ ಚೂರು ವ್ಯತ್ಯಾಸ ಬಂದಿದ್ದರೆ ಜೀವನವನ್ನೇ ಮಾಡಲು ಆಗುತ್ತಿರಲಿಲ್ಲ.ನಿಮಗೇನ್ ಮಾಡಬೇಕು ಅದನ್ನು ಅಮ್ಮನವರು ಮಾಡಿಕೊಟ್ಟಿದ್ದಾರೆ ಪ್ರತಿಯೊಂದು ನಿಮಗೆ ಅದರಲ್ಲಿ ಅರ್ಥವಾಗುತ್ತದೆ. ದೃಷ್ಟಿಕೋನದಲ್ಲಿ ಅದನ್ನು ನೋಡಿ ಕುಳಿತುಕೊಂಡರೆ ನಿಮಗೆ ಅದು ತಿಳಿಯುತ್ತದೆ. ಏನಿದೆ ಎಂದರೆ ಕೊನೆಯವರೆಗೂ ಅಭಿಮಾನಿಗಳನ್ನ ನಾನು ಪ್ರೀತಿ ಮಾಡಬೇಕು. ಅವರು ನನ್ನನ್ನು ಹಾಗೆ ಪ್ರೀತಿಸಬೇಕು ಇದೇ ನಮ್ಮ ಕೊನೆಯ ಆಸೆ ನಮಗೆ ಬೇರೆ ಆಸೆಗಳೇನು ಕಣ್ಣ ಮುಂದೆ ಬರಲಿಲ್ಲ ನನಗೆ ಬರಲಿಲ್ಲ ಜನಗಳೆ ಮುಖ್ಯ ನಮ್ಮ ಸುತ್ತ ಓಡಾಡುತ್ತಿರುವ ಜನ ಒಂದು ಅಂತಕ್ಕೆ ದೇವರು ಎಲ್ಲವನ್ನೂ ಕೊಟ್ಟಿದ್ದಾರೆ.
ಇಂದು ಕಷ್ಟದಲ್ಲಿ ಇದ್ದೇವೆ ಎಂದರೆ ಅವರು ಅವಕಾಶ ಕೊಟ್ಟಿಲ್ಲ ಇವರು ಅವಕಾಶ ಕೊಟ್ಟಿಲ್ಲ ಎಂದು ಮಾತನಾಡುವುದು ಅದು ಬೇರೆಯ ವಿಷಯ.ನೆಮ್ಮದಿ ಇದೆಯಾ ಆ ನೆಮ್ಮದಿಗೆ ಬೇಕಾಗಿರುವುದು ಯಾವುದು ಎಂದರೆ ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಮಾತನಾಡಲು ಬೇಕಾಗಿರುವ ಒಳ್ಳೆಯ ಅಭಿಮಾನಿಗಳು ಅವರ ಬಳಿ ನಾವು ಮಾತನಾಡುತ್ತಾ ಒಂದಷ್ಟು ಕಾಲವನ್ನು ಕಳೆಯುವುದು.ಅವರಿಗೆ ಬೇಕಾದ ಹಾಗೆ ನಡೆದು ಕೊಳ್ಳುವುದು ಈ ಪ್ರಪಂಚವನ್ನು ಬಿಟ್ಟು ನಾವು ಹೋದಾಗ ಅಯ್ಯೋ ಹೋಗಬಿಟ್ಟರೆ ಅಂತ ಅವರು ಅತ್ತುಬಿಟ್ಟರೆ ಮಾಡಿರುವ ಇಷ್ಟು ವರ್ಷದ ಜನ್ಮವು ಸಾರ್ಥಕ ಇನ್ನೇನು ಇರುವುದಿಲ್ಲ, ಅದೇ ಆಸ್ಕರ್ ಅವಾರ್ಡ್ ಅದೇ ನ್ಯಾಷನಲ್ ಅವಾರ್ಡ್ ಎಲ್ಲಾ ಅದಕ್ಕೆ ಸೇರಿಬಿಡುತ್ತದೆ. ಹೆಚ್ಚಿನದಾಗಿ ತಿಳಿದುಕೊಳ್ಳಲು ಕೆಳಗಿನ ವಿಡಿಯೋವನ್ನು ವೀಕ್ಷಿಸಿ