ನಿರೂಪಕಿ ದಿವ್ಯಾ ವಸಂತ ಎಸ್ಕೇಪ್ ಪೋಲಿಸ್ರಿಂದ ದಿವ್ಯಾಗೆ ತೀವ್ರ ಹುಡುಕಾಟ..ಲಕ್ಷ ಲಕ್ಷ ಡೀಲ್ ಆಡಿಯೋ ಸಕತ್ ವೈರಲ್
ಪತ್ರಿಕೋದ್ಯಮ ಅಂದ್ರೆ ಒಂದಷ್ಟು ಮಂದಿಗೆ ಶ್ರೇಷ್ಠವಾದಂತಹ ವೃತ್ತಿ ದೇವರ ಸಮಾನ ಸಂಸ್ಥೆಯಿಂದ ಬರುವಂತಹ ಸಂಬಳದ ಹೊರತಾಗಿ ಎಲ್ಲೂ ಕೂಡ ಕೈಚಾಚುವುದಿಲ್ಲ. ಯಾರ ಮುಂದೆಯೂ ಕೂಡ ತಲೆಬಾಗುವುದಿಲ್ಲ ಕೊನೆಯವರೆಗೂ ಕೂಡ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಾರೆ.
ಆದರೆ ಇನ್ನೊಂದಷ್ಟು ಮಂದಿ ಈ ಪತ್ರಿಕೋದ್ಯಮವನ್ನ ದಂದೆಯಾಗಿ ಮಾಡಿಕೊಂಡು ಬಿಟ್ಟಿದ್ದಾರೆ ಬ್ಲಾಕ್ ಮೈಲ್ ಮಾಡೋದು ಆ ಮೂಲಕ ಹಣ ಮಾಡೋದು ಅದೇ ಒಂದಷ್ಟು ಮಂದಿಯ ಕಾಯಕ ಆಗಿಬಿಟ್ಟಿದೆ.
ತಲೆಯಲ್ಲಿ ಅಲ್ಪ ಜ್ಞಾನ ಇಲ್ಲದೆ ಇದ್ದರೂ ಕೂಡ ಪತ್ರಿಕೋದ್ಯಮದ ಗಂಧಗಾಳಿ ಗೊತ್ತಿಲ್ಲದೆ ಇದ್ದರೂ ಕೂಡ ಈ ಬ್ಲಾಕ್ ಮೈಲ್ ಮೂಲಕ ತಮ್ಮ ಬದುಕನ್ನ ಸಾಗಿಸುವಂತವರ ಸಂಖ್ಯೆ ಇತ್ತೀಚಿಗೆ ಜಾಸ್ತಿ ಆಗ್ತಾ ಇದೆ.

ಅಂತವರು ಒಂದು ರೀತಿಯಲ್ಲಿ ಈ ಪತ್ರಿಕೋದ್ಯಮಕ್ಕೆ ಕಳಂಕ ಕಪ್ಪು ಚುಕ್ಕೆ ಅಂದ್ರು ಕೂಡ ತಪ್ಪಾಗಲಿಕ್ಕಿಲ್ಲ ಏನ್ ಮಾಡೋದು ದುರಂತ ಅಂದ್ರೆ ಇತ್ತೀಚಿಗಂತೂ ಅಂತವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗ್ತಾ ಹೋಗ್ತಾ ಇದೆ ಬಂಧುಗಳೇ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡೋದಕ್ಕೆ ಕಾರಣ ಪತ್ರಿಕೋದ್ಯಮದಲ್ಲಿದ್ದಾರೆ.
ಮಾಧ್ಯಮದವರು ಅಂದ ಮಾತ್ರಕ್ಕೆ ಅವರು ಯಾರು ಬೃಹಸ್ಪತಿಗಳಲ್ಲ ನನ್ನನ್ನು ಸೇರಿ ಯಾರು ಕೂಡ ಮೇಲಿಂದ ಕೆಳಗೆ ಇಳಿದು ಬಂದಂತವರಲ್ಲ ಹೀಗಾಗಿ ಯಾರಾದರೂ ನಿಮ್ಮನ್ನ ಈ ಪತ್ರಿಕೋದ್ಯಮದ ಹೆಸರಲ್ಲಿ ಅಥವಾ ಮೀಡಿಯಾದ ಹೆಸರಲ್ಲಿ ಬ್ಲಾಕ್ ಮೈಲ್ ಮಾಡ್ತಾ ಇದ್ರೆ, ಹಣಕ್ಕೋಸ್ಕರ ಪೀಡಿಸ್ತಾ ಇದ್ರೆ, ಇನ್ನಿಲ್ಲದಂತಹ ಕಾಟವನ್ನು ಕೊಡ್ತಾ ಇದ್ರೆ ಅಥವಾ ಮಾಧ್ಯಮದ ಹೆಸರನ್ನು ಹೇಳಿಕೊಂಡು ಬೇಕಾದಂತಹ ಕೆಲಸವನ್ನ ಮಾಡ್ತಾ ಇದ್ರೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಕ್ಕೆ ಹೋಗಬೇಡಿ ತಕ್ಷಣವೇ ಪೊಲೀಸರಿಗೆ ದೂರನ್ನ ಕೊಡಿ.
ಪೊಲೀಸರು ಕಾನೂನು ರೀತಿಯಲ್ಲಿ ಏನು ಕ್ರಮವನ್ನು ತೆಗೆದುಕೊಳ್ಳಬೇಕು ಅದನ್ನ ತೆಗೆದುಕೊಳ್ಳುತ್ತಾರೆ. ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ಇವತ್ತು ಒಂದು ಘಟನೆ ಸಾಕಷ್ಟು ಸದ್ದು ಮಾಡ್ತಾ ಇದೆ.
ನಾನು ಸಾಕಷ್ಟು ಯೋಚನೆ ಮಾಡಿದೆ ಈ ವಿಚಾರವನ್ನ ನಿಮ್ಮ ಮುಂದೆ ಇಡಬೇಕಾ ಬೇಡವಾ ಏನು ಅಂತ ಹೇಳಿ ಆದರೆ ನನಗೆ ಅನಿಸ್ತು ಇಂತಹ ಸಂಗತಿಯನ್ನ ನಿಮ್ಮ ಮುಂದೆ ತರಬೇಕು ಯಾಕಂದ್ರೆ ಎಲ್ಲಾ ವಿಚಾರಗಳು ಕೂಡ ಗೊತ್ತಾಗಬೇಕಾಗುತ್ತೆ.
ಪ್ರತಿ ಕ್ಷೇತ್ರದ ಹುಳುಕನ್ನು ಕೂಡ ಸಾರ್ವಜನಿಕರು ತಿಳಿದುಕೊಳ್ಳಬೇಕಾಗುತ್ತೆ ಈ ಘಟನೆ ಏನಪ್ಪಾ ಅಂದ್ರೆ ಇದೇ ಮಾಧ್ಯಮದ ಹೆಸರನ್ನು ಹೇಳಿಕೊಂಡು ಬ್ಲಾಕ್ ಮೈಲ್ ಮಾಡ್ತಾ ಇದ್ದಂತಹ ಒಂದಷ್ಟು ಮಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಅದರಲ್ಲೂ ಕೂಡ ಓರ್ವ ಆಂಕರ್ ಇದೀಗ ಎಸ್ಕೇಪ್ ಆಗಿದ್ದಾರೆ ಅಥವಾ ತಲೆಮರಿಸಿ ಸಿಕೊಂಡಿದ್ದಾರೆ ಆ ವಿಚಾರ ಇದೀಗ ಸಾಕಷ್ಟು ಸದ್ದು ಮಾಡ್ತಾ ಇದೆ ಯಾಕೆ ಅವರ ವಿಚಾರ ಹೆಚ್ಚು ಸದ್ದು ಮಾಡ್ತಿದೆ ಅಂದ್ರೆ.
ಇತ್ತೀಚಿಗೆ ಒಂದಷ್ಟು ಖಾಸಗಿ ವಾಹಿನಿಯಲ್ಲಿ ಈ ಮನರಂಜನ ಕಾರ್ಯಕ್ರಮದಲ್ಲಿ ತಮ್ಮನ್ನು ತೊಗರಿಸಿಕೊಂಡಿದ್ದರು ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಮಟ್ಟಿಗೆ ನೇಮು ಫೇಮು ಇದ್ದಂತವರು ಹೀಗಾಗಿ ಅವರ ಹೆಸರು ಹೆಚ್ಚು ಸದ್ದು ಮಾಡ್ತಾ ಇದೆ.
ಅವರ ಹೆಸರು ಖಾಸಗಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಂತಹ ದಿವ್ಯ ವಸಂತ ಅಂತ ಹೇಳಿ ಇದೀಗ ದಿವ್ಯ ವಸಂತ ಮತ್ತವರ ಗ್ಯಾಂಗ್ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿ ಬಂದಿದೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಜನರನ್ನ ಅರೆಸ್ಟ್ ಮಾಡಲಾಗಿದೆ ವಸಂತ ಸೇರಿ ಒಂದಷ್ಟು ಮಂದಿ ತಲೆಮರೆಸಿಕೊಂಡಿದ್ದಾರಂತೆ ಹಾಗಾದ್ರೆ ಅಪ್ಡೇಟ್ ಏನು ಅದನ್ನ ಗಮನಿಸುತ್ತಾ ಹೋಗೋಣ.
ಬಂಧುಗಳೇ ಇತ್ತೀಚಿಗೆ ಒಂದು ಸ್ಪಾ ಸೆಂಟರ್ ಎಲ್ಲಿ ಅಂದ್ರೆ ಇಂದಿರಾನಗರದಲ್ಲಿ ಇರುವಂತಹ ಒಂದು ಸ್ಪಾ ಸೆಂಟರ್ ಅದರ ವ್ಯವಸ್ಥಾಪಕರಿಗೆ ನಿರಂತರವಾಗಿ ಈ ಗ್ಯಾಂಗ್ ಬ್ಲಾಕ್ ಮೈಲ್ ಮಾಡ್ತಾ ಇತ್ತಂತೆ 15 ಲಕ್ಷ ರೂಪಾಯಿ ಹಣ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ