ನೀವು ಬಯಸಿದ್ದೆಲ್ಲ ಸಿಗಬೇಕು ಎಂದರೆ ಈ ಮೂರು ವನ್ನು ತಪ್ಪದೇ ಮಾಡಬೇಕು….ಕೆಲವೊಮ್ಮೆಪರಿಸ್ಥಿತಿಗೆ ತಕ್ಕಂತೆ ನಿಮಗೆ ಮಾತನಾಡುವುದಕ್ಕೆ ಆಗದಿದ್ದರೆ ಸಣ್ಣ ನಗೆಯನ್ನು ಬೀರಿ ಸುಮ್ಮನೆ ಆಗಿಬಿಡಿ ಎಲ್ಲರೂ ಹೇಳುತ್ತಾರೆ ಮನುಷ್ಯ ಖಾಲಿ ಕೈಯಲ್ಲಿ ಬರುತ್ತಾನೆ ಖಾಲಿ ಕೈಯಲ್ಲಿ ಹೋಗುತ್ತಾನೆ ಎಂದು ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ.

WhatsApp Group Join Now
Telegram Group Join Now

ಹೋಗುವಾಗ ಕರ್ಮದ ಫಲಕೊಂಡು ಹೋಗುತ್ತಾನೆ ದೇವರು ತಡ ಮಾಡಿದರು ನ್ಯಾಯವನ್ನೇ ಮಾಡುತ್ತಾನೆಯೇ ಹೊರತು ಅನ್ಯಾಯವಂತೂ ಮಾಡುವುದಿಲ್ಲ ತಡ ಆಗುವುದರ ಹಿಂದೆ ಅದ್ಭುತಗಳು ನಡೆಯುತ್ತವೆ ಕಾದು ನೋಡಬೇಕು ಅಷ್ಟೇ ನೀವು ಜೀವನದಲ್ಲಿ ನೀವು ಬಯಸಿದ್ದೆಲ್ಲಾ ನಿಮಗೆ ಸಿಗಬೇಕಾದರೆ ಈ ಮೂರು ಕೆಲಸಗಳನ್ನು ತಪ್ಪದೆ ಮಾಡಬೇಕು.

ಮೊದಲನೆಯದು ಬೆಳಗ್ಗೆ ಬೇಗ ಎದ್ದು ನಿಮ್ಮದಿನಚರಿಯನ್ನು ಶುರು ಮಾಡಬೇಕು ಪ್ರತಿದಿನ ಬೆಳಗ್ಗೆ ಬೇಗ ಎದ್ದು ನಿಮ್ಮದಿನಚರಿಯನ್ನು ಆರಂಭಿಸಿದರೆ ನಿಮ್ಮ ಮನಸ್ಥಿತಿ ಶಾಂತವಾಗಿರುತ್ತದೆ.ಯಾರ ಕಿರಿಕಿರಿಯೂ ಇರೋದಿಲ್ಲ ಪ್ರಶಾಂತವಾದ ವಾತಾವರಣದಲ್ಲಿ ಒಮ್ಮೆನೀವು ಶಾಂತಿಯಿಂದ ದೇವರಿಗೆ ಪ್ರಾರ್ಥಿಸಿ.

ವ್ಯಾಯಾಮ ಮಾಡಿ ನಿತ್ಯ ಕರ್ಮಗಳನ್ನು ಮುಗಿಸಿ ನಿಮ್ಮ ಕೆಲಸವನ್ನು ಶುರು ಮಾಡಿ. ಎರಡನೆಯದು ಆಗಿ ಹೋಗಿರುವುದರ ಬಗ್ಗೆ ಯಾವತ್ತೂ ಚಿಂತೆ ಮಾಡಬಾರದು ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಘಟನೆಗಳು ನಡೆದು ಹೋಗಿರುತ್ತವೆ,ಅದರಿಂದ ಕೆಲವು ಕಷ್ಟ ಕೂಡ ಆಗಿರುತ್ತದೆ ಆದರೆ ಅದು ಮುಂದಿನ ಒಳ್ಳೆಯದಕ್ಕೆ ಆಗಿರುತ್ತದೆ.

ಅನ್ನೋದನ್ನ ಮರೆಯಬಾರದು,ಆಗಿ ಹೋಗಿರುವುದರ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಮುಂದೆ ಆಗುವ ಕೆಲಸಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕೃತ ಮಾಡಬೇಕು.ಮೂರನೆಯದಾಗಿ ನಿಮ್ಮ ರಹಸ್ಯಗಳನ್ನು ಯಾರಿಗೂ ಹೇಳಬಾರದು, ನಿಮ್ಮ ರಹಸ್ಯಗಳನ್ನು ಬೇರೆಯವರ ಹತ್ತಿರ ಹೇಳಿಕೊಂಡು ಸಹಾಯಕ್ಕಾಗಿ ಯಾರ ಹತ್ತಿರವು ಕೈ ಚಾಚಬೇಡಿ.

ಯಾಕೆಂದರೆ ಈ ಸಮಾಜದಲ್ಲಿ ನಿಮ್ಮ ಸಹಾಯಕ್ಕೆ ಯಾರು ಬರುವುದಿಲ್ಲ ಬದಲಾಗಿ ನಿನ್ನ ಕಾಲು ಎಳೆಯುವ ಜನರೇ ತುಂಬಿರುವ ಈ ಪ್ರಪಂಚದಲ್ಲಿ ನಿನ್ನ ಆಸೆಗಳನ್ನ ಅವರ ಉಪಯೋಗಕ್ಕಾಗಿ ಲಾಭ ಮಾಡಿಕೊಳ್ಳುತ್ತಾರೆ ಆದ್ದರಿಂದ ಯಾರ ಹತ್ತಿರವೂ ನಿಮ್ಮ ರಹಸ್ಯಗಳನ್ನು ಹೇಳಬೇಡಿ,ಯಾರು ಯಾರನ್ನು ಉದ್ದಾರ ಮಾಡೋದಕ್ಕೂ ಆಗಲ್ಲ.

ಯಾರು ಯಾರನ್ನು ಹಾಳು ಮಾಡುವುದಕ್ಕೂ ಆಗುವುದಿಲ್ಲ, ಅವರ ಯೋಚನೆ ಅವರ ಉದ್ಧಾರಕ್ಕೆ ಹಾಗೂ ಹಾಳಾಗೋದಕ್ಕೂ ಮೂಲ ಕಾರಣವಾಗುತ್ತದೆ. ಈ ಜೀವನ ಇರುವುದೇ ಎರಡು ದಿನ ಒಂದು ನಿನ್ನ ಪರವಾದ ದಿನ ಮತ್ತೊಂದು ನಿನ್ನ ವಿರುದ್ಧವಾದ ದಿನ, ಪರವಾದ ದಿನದಲ್ಲಿ ಅಹಂಕಾರ ತೋರಬೇಡ ವಿರುದ್ಧವಾದ ದಿನದಲ್ಲಿ ತಾಳ್ಮೆಯನ್ನು ಕಳೆದುಕೊಳ್ಳಬೇಡ.

ಒಳ್ಳೆಯದು ಮತ್ತು ಕೆಟ್ಟದ್ದು ಎರಡು ನಮ್ಮಲ್ಲಿಯೇ ಇದೆ ನಾವು ಯಾವುದನ್ನ ಬಳಸುತ್ತೇವೆಯೋ ಅದು ಹೊರ ಬರುತ್ತೆ ಮತ್ತು ಅದೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.ಸುಳ್ಳು ಮೋಸ ದ್ರೋಹ ವಂಚನೆ ದೇವರ ಬಳಿ ಸಾಲ ಮಾಡಿದಂತೆ ಒಂದಲ್ಲ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು,ಸತ್ಯ ಧರ್ಮ ನ್ಯಾಯ ಮತ್ತು ನೀತಿಯು ದೇವರ ಉಳಿತಾಯ ಖಾತೆಗೆ ಜಮಾ ಮಾಡಿದಂತೆ.

ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದೇ ಬರುತ್ತದೆ.ಯಾರ ಜೊತೆ ಎಷ್ಟರ ಮಟ್ಟಿಗೆ ಇರಬೇಕು ಅಷ್ಟರ ಮಟ್ಟಿಗೆ ಮಾತ್ರ ಇರಬೇಕು ಎಲ್ಲರೂ ನಮ್ಮವರೇ ಎಂದುಕೊಂಡು ಒಳ್ಳೆಯತನಕ್ಕೋಸ್ಕರ ಏನಾದರೂ ಮಾಡಿದರೆ ಕೊನೆಗೆ ನಾವೇ ಕೆಟ್ಟವರಾಗುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ