ಪಾರ್ವತಿ ದೇವಿ ಶಿವನನ್ನು ಕೇಳಿದ 3 ಪ್ರಶ್ನೆಗಳು..ಯಾವ ಹೆಣ್ಣು ಬೇಗನೆ ವಿಧವೆ ಆಗ್ತಾಳೆ.ಯಾವ ಹೆಣ್ಣಿಗೆ ಎಲ್ಲಾ ಇದ್ದರೂ ಸುಖ ಇರೋದಿಲ್ಲ.
ಪಾರ್ವತಿ ಶಿವನನ್ನು ಕೇಳಿದ ಈ ಮೂರು ಪ್ರಶ್ನೆಗಳು ಪ್ರತಿ ಹೆಣ್ಣಿಗೂ ಅನ್ವಯಿಸುತ್ತದೆ… ಒಂದು ಬಾರಿ ಪಾರ್ವತಿ ದೇವಿ ಪರಮೇಶ್ವರರನ್ನ ಈ ರೀತಿ ಕೇಳುತ್ತಾರೆ ಸ್ವಾಮಿ ನಾನು ಭೂಲೋಕದಲ್ಲಿ ಮೂರು ಜನ ಪ್ರಾಣ ಸ್ನೇಹಿತೆಯರನ್ನು ನೋಡಿದೆ ಅವರಲ್ಲಿ ಇಬ್ಬರು ವಿಧವೆಯರು ಒಬ್ಬಳು ಮಾತ್ರ ಗಂಡನೊಂದಿಗೆ ತುಂಬಾ ಸಂತೋಷವಾಗಿ ಬದುಕುತ್ತಿದ್ದಾಳೆ ಅವರನ್ನು ನೋಡಿದ ಮೇಲೆ ನನಗೆ ಮೂರು ಸಂದೇಹಗಳು ಮೂಡಿತು.
ಒಂದು ಯಾವ ಹೆಣ್ಣು ಚಿಕ್ಕ ವಯಸ್ಸಿಗೆ ವಿಧವೆಯಾಗುತ್ತಾಳೆ ಎರಡು ಯಾವ ಹೆಣ್ಣು ಸಂತೋಷವಾಗಿ ಬದುಕುವುದಿಲ್ಲ ಮೂರು ಗಂಡ ಕೇಳಿದರೂ ಕೊಡಬಾರದ ವಸ್ತು ಏನು ಈ ಮೂರು ಸಂದೇಹಗಳನ್ನು ನೀವೇ ಬಗೆಹರಿಸಿ ಎಂದು ಕೇಳಿದರು ಪಾರ್ವತಿ ದೇವಿ ಆಗ ಪರಮೇಶ್ವರ ಈ ರೀತಿ ಹೇಳಿದರೂ ದೇವಿ ನಾನು ಈಗ ನಿನಗೆ ಒಂದು ಚಿಕ್ಕ ಕಥೆಯನ್ನು ಹೇಳುತ್ತೇನೆ ಆ ಕಥೆ ಕೇಳಿದ ಮೇಲೆ ನಿನ್ನ ಮೂರು ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
ಒಂದು ರಾಜ್ಯದಲ್ಲಿ ಮಹಾರಾಜನಿಗೆ ಒಬ್ಬ ಸ್ನೇಹಿತ ಇದ್ದ ಆತ ಅದೇ ಮಹಾರಾಜನಿಗೆ ಅರಮನೆಯಲ್ಲಿ ಸೇವಕನಾಗಿ ಕೆಲಸ ಮಾಡುತ್ತಾ ಇದ್ದ ರಾಜ ಹಾಗೂ ಆ ಸೇವಕನ ಸ್ನೇಹ ನೋಡಿ ಎಲ್ಲರೂ ಕೂಡ ಅಸೂಯೆ ಪಡುತ್ತಾ ಇದ್ದರು ಒಂದು ದಿನ ಮಹಾರಾಜ ಮಹಾರಾಡಿಯನ್ನ ಒಂದು ವಿಚಾರವಾಗಿ ಹೊಗಳಿದ ಅದೇ ಸಮಯದಲ್ಲಿ ಈ ಸೇವಕ ಅವನ ಹೆಂಡತಿಯ ಬಗ್ಗೆ ಈ ರೀತಿ ಹೇಳಿದ ರಾಜ ನನ್ನ ಹೆಂಡತಿ ಮಹಾಪತಿವ್ರತೇ ಅವಳು ನನಗೋಸ್ಕರ ಪ್ರಾಣ ಬೇಕಾದರೂ ಕೊಡುತ್ತಾಳೆ.
ಅವಳು ಯಾವತ್ತೂ ಕೂಡ ಪತಿ ವ್ರತ ಧರ್ಮಕ್ಕೆ ದ್ರೋಹ ಬಗೆಯುವುದಿಲ್ಲ ಅವಳಂತಹ ಪತಿವ್ರತೆಯನ್ನ ನಾನು ಎಲ್ಲಿಯೂ ಕೂಡ ನೋಡಿಲ್ಲ ಎಂದು ಹೇಳಿದ ಸೇವಕ ಮಂತ್ರಿಗೆ ಎಂದಿನಿಂದಲೂ ಆ ಸೇವಕ ಹಾಗೂ ರಾಜನ ಸ್ನೇಹ ನೋಡಿ ಅಸೂಯೆ ಇತ್ತು ಇದೇ ಸರಿಯಾದ ಸಮಯ ಎಂದುಕೊಂಡು ಮಂತ್ರಿ ಈ ರೀತಿ ಹೇಳಿದ ಸ್ವಾಮಿ ಈ ಸೇವಕ ಹೇಳುತ್ತಿರುವುದನ್ನು ನೋಡಿದರೆ ಇವನ ಹೆಂಡತಿ ಬಿಟ್ಟರೆ ಬೇರೆ ಯಾವ ಹೆಣ್ಣು ಮಕ್ಕಳು ಪತಿವ್ರತೆ ಅಲ್ಲ ಎನ್ನುವ ರೀತಿ ಇದೆ.
ಇವನು ಹೇಳುವ ಪ್ರಕಾರ ನೋಡಿದರೆ ಮಹಾರಾಣಿಗೂ ಕೂಡ ಕಳಂಕ ಬರುವ ರೀತಿಯಲ್ಲಿ ಇದೆ ನಾನು ಇವನ ಹೆಂಡತಿ ಪತಿವ್ರತೆ ಅಲ್ಲ ಎಂದು ಸಾಬೀತುಪಡಿಸುತ್ತೇನೆ ಆಗ ಇವನು ಏನು ಮಾಡುತ್ತಾನೆ ಎಂದು ನೋಡೋಣ ಎಂದ ಅದಕ್ಕೆ ಆ ಸೇವಕ ಮಂತ್ರಿ ನನ್ನ ಹೆಂಡತಿಯ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ ನೀನು ಅವಳ ಪತಿ ವ್ರತ ಧರ್ಮವನ್ನು ಹಾಳು ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.
ಒಂದು ವೇಳೆ ಅವಳು ಪತಿವ್ರತೆ ಅಲ್ಲ ಎಂದು ನೀನು ಸಾಬೀತುಪಡಿಸಿದರೆ ಆ ಕ್ಷಣವೇ ನಾನು ಗಲ್ಲು ಶಿಕ್ಷೆ ಅನುಭವಿಸುತ್ತೇನೆ ಎಂದ ಆ ಸೇವಕ ಆಗ ಮಂತ್ರಿ ನಿನ್ನ ಪತ್ನಿ ಪತಿವ್ರತೆ ಅಲ್ಲ ಎಂದು ಹೇಳುವುದಕ್ಕೆ ಯಾವ ಆಧಾರವನ್ನು ನಾನು ಶೇಖರಣೆ ಮಾಡಿ ತರಬೇಕು ಎಂದು ಕೇಳಿದ ಅದಕ್ಕೆ ಸೇವಕ ಮಂತ್ರಿ ಮೊದಲ ರಾತ್ರಿ ಎಂದು ನಾನು ನನ್ನ ಹೆಂಡತಿಗೆ ಒಂದು ಚಿನ್ನದ ಹಾರವನ್ನು ಕಾಣಿಕೆಯಾಗಿ ಕೊಟ್ಟಿದೆ ಅದನ್ನು ಅವಳು ಯಾವಾಗಲೂ ಕೊರಳಿನಲ್ಲಿ ಹಾಕಿಕೊಂಡಿರುತ್ತಾಳೆ.
ಅದನ್ನ ಅವಳು ಯಾರಿಗೂ ಕೂಡ ತೋರಿಸುವುದಿಲ್ಲ ಇದುವರೆಗೂ ಅವಳು ಹಾಗೂ ನನ್ನನ್ನು ಹೊರತುಪಡಿಸಿ ಆ ಹಾರವನ್ನು ಯಾರು ಕೂಡ ಮುಟ್ಟಿಲ್ಲ ಒಂದು ವೇಳೆ ನೀನು ಹಾರವನ್ನು ತಂದರೆ ಆಗ ನಾನು ನನ್ನ ಹೆಂಡತಿ ಪತಿವ್ರತೆ ಅಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.