ಮೇಷ ರಾಶಿ :- ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನ ಪ್ರತಿಯೊಂದು ವಿಚಾರದಲ್ಲಿ ಬುದ್ದಿವಂತಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವಿರಿ ಕಚೇರಿಯಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು ದಿನನಿತ್ಯ ನೀವು ಬಳಸುತ್ತಿರುವ ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ. ಇಂದು ನಿಮಗೆ ಯಾವುದೇ ಸಮಸ್ಯೆಯು ತಾತ್ಕಾಲಿಕವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:30ರ ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಭಾವನಾತ್ಮಕವಾಗಿ ನೀವು ಇಂದು ಸ್ವಲ್ಪ ದುರ್ಬಲರಾಗಿರುತ್ತೀರಿ ಇಂದು ನೀವು ದುಃಖ ಮತ್ತು ನಿರಾಸೆಗೊಳ್ಳುವ ಸಮಯವಲ್ಲ ನಿಮ್ಮ ಎಲ್ಲಾ ಗಮನವನ್ನು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿದರೆ ಉತ್ತಮ. ಸಕಾರಾತ್ಮಕವಾಗಿರಿ ನಿಮ್ಮ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 5:15 ರಿಂದ 8:30ರ ವರೆಗೆ.

ಮಿಥುನ ರಾಶಿ :- ನಿಮ್ಮ ಜೀವನದಲ್ಲಿ ಏನಾದರೂ ಸಮಸ್ಯೆ ಇದ್ದರೆ ನಿಮ್ಮ ಆತ್ಮರಿಂದ ಸಹಾಯ ಪಡೆಯಲು ಹಿಂಜರಿಯಬಾರದು ಒಂಟಿಯಾಗಿ ಒತ್ತಡಕ್ಕೆ ಒಳಗಾಗುವುದರಿಂದ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ವ್ಯಾಪಾರಸ್ಥರು ಇಂದು ಉತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು. ಹೊಸದೊಂದು ಉತ್ತಮವಾದ ವ್ಯವಹಾರದ ಪ್ರಸ್ತಾಪವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.15 ರಿಂದ ಮಧ್ಯಾಹ್ನ 3ರವರೆಗೆ.

ಕರ್ಕಾಟಕ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ದೀರ್ಘಕಾಲದಲ್ಲಿ ಸಿಲುಕಿಕೊಂಡಿರುವಂತಹ ಕೆಲಸ ಹಿಂದು ಪೂರ್ಣಗೊಳ್ಳಬಹುದು ಹಣದ ಪರಿಸ್ಥಿತಿ ಚೆನ್ನಾಗಿರುತ್ತದೆ ಇಂದು ನೀವು ಆರ್ಥಿಕ ಒಪ್ಪಂದವನ್ನು ಕೂಡ ಮಾಡಿಕೊಳ್ಳಬಹುದು. ವೈವಹಿಕ ಜೀವನದ ಗೊಂದಲವನ್ನು ಸರಿಪಡಿಸಿಕೊಳ್ಳುವ ಮೊದಲು ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 6:35 ರಿಂದ 9 ರವರೆಗೆ.

ಸಿಂಹ ರಾಶಿ :- ಉದ್ಯೋಗಸ್ಥರು ಕೆಲಸದ ವಿಚಾರದಲ್ಲಿ ನಿರ್ಲಕ್ಷೆಯನ್ನು ವಹಿಸಬೇಡಿ ಇಂತಹ ಸಂದರ್ಭದಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನಹರಿಸಲು ಬೇಕಾಗುತ್ತದೆ ಪ್ರಗತಿಯನ್ನು ಬಯಸುತ್ತಿದ್ದರೆ ನಿಮ್ಮ ಅತ್ಯುತ್ತಮವಾಗುವುದನ್ನು ನೀಡಬೇಕಾಗುತ್ತದೆ. ವ್ಯಾಪಾರಸ್ಥರಿಗೆ ಇಂದು ಲಾಭದಾಯಕ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 12:35 ರಿಂದ 3:30 ರವರೆಗೆ.

ಕನ್ಯಾ ರಾಶಿ :- ಇಂದು ನಿಮ್ಮ ಮಾತಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು ಶುಲ್ಲಕ ವಿಚಾರಗಳೊಂದಿಗೆ ಇತರರೊಂದಿಗೆ ಮಾತನಾಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಮಾನಸಿಕ ಶಾಂತಿಯ ಮೇಲೆ ತೊಂದರೆಯಾಗಬಹುದು. ಯಾವುದೇ ಸಂದರ್ಭದಲ್ಲಿ ಕಷ್ಟಕರ ಕೆಲಸವನ್ನು ಸುಲಭವಾಗಿ ಮಾಡುವ ನಿಮ್ಮ ಸ್ವಭಾವದಿಂದಾಗಿ ನಿಮ್ಮ ಬಾಸ್ ಹೆಚ್ಚಿನ ಕೆಲಸದ ಹೊರೆಯನ್ನು ನೀಡಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಿಗ್ಗೆ 6.05 ರಿಂದ 9:30 ರವರೆಗೆ.

ತುಲಾ ರಾಶಿ :- ವೈಯಕ್ತಿಕ ಜೀವನದಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಉದ್ಯೋಗಸ್ಥರಿಗೆ ಇಂದು ಸಾಮಾನ್ಯ ದಿನವಾಗಲಿದೆ ನೀವು ಹೆಚ್ಚಿನ ಜಾಗೃತೆಯನ್ನು ವಹಿಸಬೇಕು ಕೆಲಸವಾಗಲಿ ಅಥವಾ ವ್ಯವಹಾರವಾಗಲಿ. ನಿಮ್ಮ ಎಲ್ಲ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6:15 ರವರೆಗೆ.

ವೃಶ್ಚಿಕ ರಾಶಿ :- ಹಣಕಾಸಿನ ವಿಚಾರದಲ್ಲಿ ಈ ದಿನ ಇಷ್ಟು ಉತ್ತಮವಾಗಿ ಇರುವುದಿಲ್ಲ ಹೆಚ್ಚಿನ ಖರ್ಚನ್ನು ಪರಿಶೀಲಿಸುವ ಮೂಲಕ ನಿಮ್ಮ ಹಣಕಾಸುಗಳ ಬಗ್ಗೆ ತಿಳಿದುಕೊಳ್ಳಬಹುದು ಭವಿಷ್ಯದಲ್ಲಿ ಯಾವುದೇ ಅಡೆತಡೆಗಳು ಉಂಟಾಗದಂತೆ ಆರ್ಥಿಕವಾಗಿ ನೀವು ಭದ್ರವಾಗಿರಬೇಕು. ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 6:30 ರಿಂದ ರಾತ್ರಿ 9 ರವರೆಗೆ.

ಧನಸು ರಾಶಿ :- ನಿಮ್ಮ ಜೀವನದಲ್ಲಿ ಸರಿಯಾದ ಆಲೋಚನೆ ಮತ್ತು ಸರಿಯಾದ ನಿರ್ಧಾರದಿಂದ ಮುಂದೆ ಬರುವ ದೊಡ್ಡ ಸಮಸ್ಯೆಯನ್ನು ತೆಗೆದು ಹಾಕುವ ಸಾಧ್ಯತೆ ಇದೆ ನಿಮ್ಮ ಸಂಬಂಧದಲ್ಲಿ ಪ್ರೀತಿ ಬೆಳೆಯುತ್ತದೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ. ನಿಮ್ಮ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗದಿದ್ದರೆ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ

ಮಕರ ರಾಶಿ :- ಇಂದು ವಿದ್ಯಾರ್ಥಿಗಳಿಗೆ ಶುಭದಿನ ವಾಗಲಿದೆ ಶಿಕ್ಷಣದ ಈ ಕ್ಷೇತ್ರದ ಯಾವುದೇ ಪ್ರಯತ್ನದಲ್ಲೂ ಕೂಡ ನೀವು ಯಶಸ್ಸನ್ನು ಪಡೆಯಬಹುದು ನಿಮ್ಮ ಆಸಕ್ತಿಗಳ ಬಗ್ಗೆ ಗಮನಹರಿಸಲು ಇಂದು ನಿಮಗೆ ಸಮಯ ಸಿಗುತ್ತದೆ. ನಿಮಗೆ ಉಲ್ಲಾಸ ಉಂಟು ಮಾಡುತ್ತದೆ ವ್ಯಾಪಾರಸ್ಥರು ಇಂದು ದೊಡ್ಡ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 7:35 ರಿಂದ 10 ರವರೆಗೆ.

ಕುಂಭ ರಾಶಿ :- ಇಂದು ನೀವು ದುಃಖಿತರಾಗಿರುತ್ತೀರಿ ಮನಸ್ಸಿನಲ್ಲಿ ಅನೇಕ ಗೊಂದಲಗಳಿರಬಹುದು ನಿಮ್ಮ ಮನಸ್ಸಿನಿಂದ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕಿ ಭವಿಷ್ಯದ ಕನಸುಗಳನ್ನು ಈಡೇರಿಸಲು ನೀವು ಪ್ರಯತ್ನಿಸಿ. ಇತರರ ಮಾತುಗಳಿಂದ ಹೆಚ್ಚು ಪ್ರಭಾವಿತರಾಗಬೇಡಿ ವೈಭವಿಕ ಜೀವನದಲ್ಲಿ ನೀವು ಶಾಂತ ರೀತಿಯಲ್ಲಿ ವರ್ತಿಸಿದರೆ ಜೀವನವು ಸುಂದರವಾಗಿರುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 15 ರಿಂದ 7:30ರ ವರೆಗೆ.

ಮೀನ ರಾಶಿ :- ಕುಟುಂಬದೊಂದಿಗೆ ನಿಮ್ಮ ಸಂಬಂಧವು ಬಲವಾಗಿರುತ್ತದೆ ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮನೆಯ ಸದಸ್ಯರೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತೀರಿ. ಆರ್ಥಿಕವಾಗಿ ಇಂದು ಬಲವಾಗಿರುತ್ತದೆ ನೀವು ಯಾವುದೇ ಅಮೂಲ್ಯ ವಸ್ತುಗಳನ್ನು ಖರೀದಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 15 ರವರೆಗೆ.

By god