ದುರ್ಗಾದೇವಿಯು ಸಿಂಹವಾಹನವನ್ನು ಚಲಿಸಲು ಕಾರಣ…ಅದೊಂದು ದಿನ ಶಿವ ಮತ್ತು ಪಾರ್ವತಿ ದೇವಿಯು ಸಂತೋಷವಾಗಿ ಸಮಯ ಕಳೆಯುತ್ತಿದ್ದ ವೇಳೆಯಲ್ಲಿ ಪಾರ್ವತಿ ದೇವಿಯ ಆ ರೂಪ ಕಂಡು ಇವನು ಕಾಳಿ ಎಂದು ಕರೆಯುತ್ತಾನೆ.ಪತಿಯ ಈ ಮಾತುಗಳನ್ನು ಕೇಳಿದಾಗ ಪಾರ್ವತಿ ದೇವಿಯು ಕೈಲಾಸವನ್ನು ತೊರೆದು ಮತ್ತೆ ತಪಸ್ಸನ್ನು ಮಾಡಲು ನಿರ್ಧರಿಸುತ್ತಾಳೆ.ಹೀಗೆ ತಾಯಿ ಪಾರ್ವತಿ ದೇವಿಯು ತಪಸ್ಸನ್ನು ಮಾಡುತ್ತಿರುವಾಗ ಸಿಂಹ ಒಂದು ತಾಯಿ ಹತ್ತಿರ ಬರುತ್ತಿರುತ್ತದೆ ಅದನ್ನು ಗಮನಿಸದೆ ತನ್ನ ತಪಸ್ಸಿನಲ್ಲಿ ಮುಳುಗಿರುತ್ತಾಳೆ. ಆದರೆ ಆ ಸಿಂಹವು ತಾಯಿ ತಪಸ್ಸನ್ನು ಮುಗಿಸಿದ ಮೇಲೆ ಅವಳನ್ನು ತಿನ್ನುವೆ ಎಂದು ಯೋಚಿಸುತ್ತಿರುತ್ತದೆ.ಆದರೆ ಸರಿಸುಮಾರು ವರ್ಷಗಳೇ ಕಳೆದರೂ ತಾಯಿ ತಪಸ್ಸಿನಿಂದ ಹೊರಗೆ ಬರಲೇ ಇಲ್ಲ.ಆದರೆ ಆ ಸಿಂಹವು ಕೂಡ ತಾಯಿಯ ಪಕ್ಕದಲ್ಲಿಯೇ ಕುಳಿತು ಕಾಯುತ್ತಿತ್ತು ಹೀಗೆ ವರ್ಷಗಳು ಕಳೆಯುತ್ತಾ ಕಳೆಯುತ್ತಾ ಶಿವನು ಪ್ರತ್ಯಕ್ಷನಾಗಿ ಪಾರ್ವತಿ ದೇವಿಗೆ ಗೌರಿ ಎಂದು ಹೊಸ ನಾಮಕರಣ ಮಾಡುತ್ತಾನೆ.

ಆಗಿನಿಂದ ತಾಯಿಯನ್ನು ಗೌರಿ ಎಂದು ಜಗತ್ತು ಕರೆಯುತ್ತದೆ ಶಿವ ಹೊರಟ ಮೇಲೆ ಪಾರ್ವತಿ ದೇವಿಯು ಹಿಂತಿರುಗಿ ನೋಡುತ್ತಾಳೆ.ಅವಳ ಪಕ್ಕದಲ್ಲಿಯೇ ಸಿಂಹ ಒಂದು ಅವಳನ್ನೆ ನೋಡುತ್ತಾ ಕುಳಿತಿರುತ್ತದೆ.ಇದನ್ನು ಗಮನಿಸಿದ ಪಾರ್ವತಿ ದೇವಿಯು ಅದನ್ನೇ ತನ್ನ ವಾಹನವನ್ನಾಗಿ ಮಾಡಿಕೊಳ್ಳುತ್ತಾಳೆ. ಏಕೆಂದರೆ ತಾಯಿ ಪಾರ್ವತಿ ದೇವಿಯೊಂದಿಗೆ ಕೂಡ ಆ ಸಿಂಹವು ಹಸಿವಿನ ಹೊಟ್ಟೆಯಿಂದಲೇ ಅವಳನ್ನು ತಿನ್ನುವ ಸಲುವಾಗಿ ಆದರೂ ಅವಳೊಂದಿಗೆ ತಪಸ್ಸಿನಲ್ಲಿ ತಲ್ಲಿಣಗೊಂಡಿತು.ಆದ್ದರಿಂದ ಅದನ್ನು ಅರಿತ ತಾಯಿ, ತನ್ನ ವಾಹನವನ್ನಾಗಿ ಸಿಂಹವನ್ನು ಆಹ್ವಾನಿಸಿ ಕೊಳ್ಳುತ್ತಾಳೆ.ಅನೇಕ ರಾಜ್ಯಗಳಲ್ಲಿ ಹಾಗೂ ಪಾರ್ವತಿ ದೇವಿ ತಾಯಿಯನ್ನು ಆರಾಧಿಸುವ ಹಲವು ಕಡೆಗಳಲ್ಲಿ ಸಿಂಹವನ್ನೇರಿದ ತಾಯಿಯನ್ನು ಆರಾಧಿಸುವ ಕೆಲವು ಜಾಗಗಳನ್ನು ಕೂಡ ನಾವು ಕಾಣಬಹುದು.

WhatsApp Group Join Now
Telegram Group Join Now

ಗುಜರಾತ್ನ ಜೋಡಾನ್ಗಣ ಎಂಬ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಗಿರೀಶ್ ಶ್ರೇಣಿಯ ತಳ ಭಾಗದಲ್ಲಿ ಅತ್ಯಂತ ಆಕರ್ಷಣೀಯಕವಾದ ನಯನ ಮನೋಹರವಾದ ಒಂದು ಅರಣ್ಯವಿದೆ ಅರಣ್ಯದಲ್ಲಿ ಕೆಲವು ನಿಯಮಗಳನ್ನು ಮಾಡಿಕೊಂಡಿದ್ದಾರೆ.ಈ ಜಾಗವನ್ನು ಗಿರಿ ಅರಣ್ಯ ಎಂದು ಕರೆಯುತ್ತಾರೆ. ಸರಿ ಸುಮಾರು ಐನೂರ ಐವತ್ತಕ್ಕೂ ಹೆಚ್ಚು ಸಿಂಹಗಳು ಇಲ್ಲಿ ವಾಸವಿದೆ ಹಾಗೆಯೇ ತಾಯಿ ದುರ್ಗಾ ಮಾತೆಯ ಪ್ರಾಚೀನವಾದ ಒಂದು ದೇವಸ್ಥಾನ ಕೂಡ ಇದೆ.ಇಂಕಮಾತೆ ಎಂಬ ಹೆಸರಿನಲ್ಲಿ ಅಲ್ಲಿನವರು ತಾಯಿ ದುರ್ಗಾ ಮಾತೇಯನ್ನು ಇನ್ನು ಪೂಜಿಸುತ್ತಾರೆ.

ಅಲ್ಲಿಗೆ ಹೋಗಲು ನೀವು ಬಯಸಿದರೆ ಗಿರಿ ಅರಣ್ಯದಲ್ಲಿ ಜೀಫ್ ಸಫಾರಿಯಲ್ಲೇ ಹೊರಡಬೇಕು.ಏಕೆಂದರೆ ಆರಣ್ಯದಲ್ಲಿ ಬೇರೆ ಯಾವುದೇ ರೀತಿಯ ಪ್ರಾಣಿಗಳು ಕಂಡುಬರುವುದಿಲ್ಲ.ಹೆಚ್ಚಾಗಿ ಸಿಂಹವೇ ತಿರುಗಾಡುತ್ತಿರುತ್ತದೆ ಹಾಗಾಗಿ ಜೀಫ್ ಸಫಾರಿ ಬಹು ಮುಖ್ಯ ಹೀಗೆ ಕಂಡು ಬರುವ ಈ ಸಿಂಹಗಳೇ ಒಂದಾನೊಂದು ಕಾಲದಲ್ಲಿ ತಾಯಿ ಪಾರ್ವತಿ ದೇವಿಯ ಮೂರ್ತಿಯನ್ನು ಕಲ್ಲು ಕಲ್ಲಾಗಿ ಆಯಿದು ದೇವಿಯ ಪ್ರತಿಮೆಯನ್ನು ನಿರ್ಮಿಸಿದವು ಎಂದು ಐತಿಹಾಸಿಕ ಹಿನ್ನೆಲೆಗಳಲ್ಲಿ ಇವೆ.ಇದಕ್ಕೆ ಸರಿ ಎಂದು ಹೋಲುವಂತೆಯೇ ತಾಯಿ ದುರ್ಗಾಮಾತೆಯ ದೇವಸ್ಥಾನಕ್ಕೆ ಸರಿ ಸುಮಾರು ರಾತ್ರಿ 12ರ ನಂತರ ಸಿಂಹಗಳು ಬಂದು ಹೋಗುತ್ತವೆ.ಎಂಬ ಮಾತುಗಳು ಕೇಳಿ ಬರುತ್ತಿವೆ ಅದು ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ.

ತಾಯಿ ಪಾರ್ವತಿಯು ದುರ್ಗಾಮಾತೆಯಾಗಿ ಬದಲಾಗಲು ಅನೇಕ ಕಾರಣಗಳಿವೆ ನಿಮಗೆ ತಿಳಿದಿರುವ ಹಾಗೆ ಪಾರ್ವತಿ ದೇವಿಯ ಪತಿಯಾದ ಶಿವನು ತಾಯಿಗೆ ನೀಡಿದ ವರ ಅದು ಯಾವಾಗ ಅಸುರರು ಘನಗೋರ ಪಾಪಗಳನ್ನು ಮಾಡುವಾಗ ಅವುಗಳನ್ನು ತಡೆಯಲು ತಾಯಿ ಪಾರ್ವತಿಗೆ ನೀಡಿದ ವರ ಆದರೆ ಶಿವ ಎಷ್ಟೇ ನಮಗೆಲ್ಲ ತಿಳಿದಿದ್ದರೂ ಕೂಡ ತಾಯಿ ಪಾರ್ವತಿ ಕೋಪವನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಮಗನಾದ ಗಣಪತಿಯ ಶಿರಕ್ಷೇಧನ ಮಾಡಿದಾಗ ತಾಯಿಯನ್ನು ಆ ರೂಪದಲ್ಲಿ ನೋಡಿದಾಗ ಶಿವನು ನಿಬ್ಬೆರಗಾಗುತ್ತಾನೆ‌.ಲೋಕವನ್ನೇ ಆಳಿದ ಶಿವಾ ಅವನು ಕೊಟ್ಟ ವರ ಅವನಿಂದಲೇ ಸುಧಾರಿಸಲು ಸಾಧ್ಯವಾಗುವುದಿಲ್ಲ ಎಂದು ಆದರೆ ತಾಯಿಯ ದುರ್ಗಾ ಶಕ್ತಿಯು ಎಷ್ಟು ಎಂದು ಲೋಕಕ್ಕೆ ತಿಳಿದು ಬರುತ್ತದೆ. ಹಾಗಾಗಿ ಹೆಣ್ಣಿನ ಮಹತ್ವವನ್ನು ಲೋಕಕ್ಕೆ ಸಾರುತ್ತಾರೆ ತಾಯಿ ಪಾರ್ವತಿ ‌.ನೀವುಗಳು ಒಂದು ವೇಳೆ ಗುಜರಾತ್ ಗೆ ಹೋದರೆ ಅಲ್ಲಿ ತಾಯಿ ದುರ್ಗಾ ಮಾತೆಯ ದರ್ಶನವನ್ನು ಪಡೆಯಿರಿ.