ಪ್ರೀತಿಸಿದವನೇ ತೋರಿಸಿದ್ದ ನರಕ.. ಮಗಳ ಜೊತೆ ಮನೆ ಬಿಟ್ಟು ಬಂದಿದ್ದ ರೆಮೋ..
ಶ್ರೀಮತಿ ರೇಖಾ ಮೋಹನ್ ತಟ್ಟನೆ ಈ ಹೆಸರನ್ನ ಕೇಳಿದರೆ ಬಹುತೇಕರಿಗೆ ಇವರು ಯಾರು ಎನ್ನುವುದೇ ತಿಳಿಯುವುದಿಲ್ಲ ಆದರೆ ರೆಮೋ ಎಂದರೆ ಕೂಡಲೇ ನೆನಪಾಗುವುದು ಅದೊಂದು ಮುಖ ಅದೊಂದು ದೇಹ ಅದೊಂದು ಚಟುವಟಿಕೆಯ ವ್ಯಕ್ತಿ ಅದೊಂದು ಸುಶ್ರಯಾಸ ಧ್ವನಿ ಕಲರ್ಸ್ ಕನ್ನಡದಲ್ಲಿ ಸೌಂಡ್ ಪೊಲ್ಲ್ಯೂಷನ್ ಅಂತಲೇ ಹೆಸರಾಗಿದ್ದ ಸಾರಥಿ ಇದೆ ರೆಮೋ ಅಲಿಯಾಸ್ ರೇಖಾ ಮೋಹನ್ ಯಾವಾಗಲೂ ನಗು ನಗುತ್ತಾ ಇರುವ ತನ್ನ ಜೊತೆಗೆ ಇದ್ದವರನ್ನು ನಗಿಸೊ ಗುಣ ಇರುವ ರೆಮೋ ನಾ ಬಾಳಲ್ಲಿ ಅದೆಷ್ಟೋ ನೋವಿನ ಪುಟಗಳಿವೆ ಐದು ವರ್ಷದ ಮಗಳ ಜೊತೆ ಮನೆ ಬಿಟ್ಟು ಬಂದ ಹೆಣ್ಣುಮಗಳು ಒಬ್ಬಳು ಈ ಮಟ್ಟಿಗೆ ಬೆಳೆದು ನಿಂತಿದ್ದೆ ರೋಚಕ,ರೆಮೋ ಬದುಕಿನ ರೋಚಕ ಕಥೆಯನ್ನು ಹೇಳುತ್ತಾ ಹೋಗುತ್ತೇವೆ. ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದೆ ಇರುತ್ತದೆ ವಾರದ ದಿನಗಳಲ್ಲಿ ಜನಪ್ರಿಯ ಧಾರವಾಹಿಗಳ ಮೂಲಕ ವಾರಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಒಂದನ್ನು ಪರಿಚಯಿಸಿದೆ.
ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸೂಪರ್ ಕ್ವೀನ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ ಈ ಕಾರ್ಯಕ್ರಮದಲ್ಲಿ ಕಂಟೆಸ್ಟ್ ಆಗಿ ಭಾಗವಹಿಸುತ್ತಿರುವ ಮಜಾ ಟಾಕೀಸ್ ರೆಮೋ ತನ್ನ ಮಗಳಿಗಾಗಿ ಬದುಕು ಕಟ್ಟಿಕೊಂಡ ನೋವಿನ ದಿನಗಳ ಕಣ್ಣೀರ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ರೆಮೋ ಬದುಕಿನ ದುರಂತ ಅಧ್ಯಾಯದ ಬಗ್ಗೆ ಹೇಳುವುದರ ಮುನ್ನ ಈಕೆಯ ಸಾಧನೆಯ ಬಗ್ಗೆ ತಿಳಿಯೋಣ ಏನು ಇಲ್ಲದೆ ಕೈಯಲ್ಲಿ ಬಿಡಿಗಾಸು ಇಲ್ಲದೆ ಹೆಣ್ಣು ಮಗಳೊಬ್ಬಳು ಈ ಮಟ್ಟಕ್ಕೆ ಬೆಳೆದಿದ್ದು ಸಾಮಾನ್ಯ ಮಾತಲ್ಲ ಗಾಯನ ಕ್ಷೇತ್ರಕ್ಕೆ ರಿಮೋ ಕಾಲ್ ಇಟ್ಟಿದ್ದು ತೀರಾ ಚಿಕ್ಕ ವಯಸ್ಸಿನಲ್ಲಿ ಬಹುತೇಕರಿಗೆ ಇನ್ನೂ ತಿಳಿದಿಲ್ಲ ಚಿನ್ನಾರಿ ಮುತ್ತ ಚಿತ್ರಕ್ಕೆ ರೆಕ್ಕೆ ಇದ್ದರೆ ಸಾಕೆ, ಎಷ್ಟೊಂದು ಜನ ಇಲ್ಲಿ ಯಾರು ನನ್ನವರು ಎನ್ನುವ ಈ ಎರಡು ಎವರ್ ಗ್ರೀನ್ ಆಡನ್ನು ಹೇಳಿದ್ದು ಬೇರೆ ಯಾರು ಅಲ್ಲ ಇದೇ ರೆಮೋ ಅಲಿಯಾಸ್ ರೇಖಾ ತಮ್ಮ ಮೂರನೇ ವಯಸ್ಸಿನಲ್ಲಿ ಹಾಡುಗಾರಿಕೆ ಆರಂಭಿಸಿದ ರೇಖಾ.
ಮಕ್ಕಳೇ ಸಾಕ್ಷಿ ರಕ್ಷಕರೇ ಭಕ್ಷಕರು ಹೃದಯ ಬಂಧನ ಮುಂತಾದ ಚಲನಚಿತ್ರಗಳಲ್ಲಿ ಸೋಲೋ ಹಾಡುಗಳು ಹೇಳಿ ಸೈ ಅನ್ನಿಸಿಕೊಂಡವರು ಇವರ ಗಾಯನಗಳನ್ನು ಕೇಳಿ ನೀರೇರಿದವರು ಮಹಾನ್ ಸಂಗೀತ ಸಾಧಕರಾದ ಎಸ್ ಜಾನಕಿ,ಎಸ್ ಬಿ ಬಾಲಸುಬ್ರಮಣ್ಯಂ ಆದರೆ ರೇಖಾ ತಮ್ಮ ಗಾಯನ ಕಲಿಕೆಯ ಪ್ರಧಾನ ಗುರು ಎಂದು ಭಾವಿಸಿದ್ದು ಮಾತ್ರ ಸಾಹಿತ್ಯ ಬ್ರಹ್ಮ ಸಂಗೀತ ವಿರಾಟ ಹಂಸಲೇಖ ರನ್ನ ಪ್ರಸಿದ್ಧ ಹಿನ್ನೆಲೆ ಸಂಗೀತಗಾರ ಇಳಿಯರಾಜ ಆರ್ ಬಿ ಪಟ್ನಾಯಕ್ ಮುಂತಾದವರ ಜೊತೆಯಲ್ಲಿ ಕೊರಸ್ ನೊಂದಿಗೆ ಹಾಡಿರುವ ಹೆಗ್ಗಳಿಕೆ ರೇಖಾಗೆ ಸಲ್ಲುತ್ತದೆ. ರೆಮೋ ತನ ಜೀವನದಲ್ಲಿ ಹಾಡನ್ನೇ ಬಂಡವಾಳ ಮಾಡಿಕೊಂಡು ಬದುಕಿದವರು ಮಜಾ ಟಾಕೀಸ್ ನಲ್ಲಿ ನಗುವಿನ ಜೊತೆ ಆಡನ್ನು ಹಾಡುತ್ತಾ ಕನ್ನಡಿಗರ ಮನಸ್ಸು ಗೆದ್ದಿದ್ದವರು ಈ ರೆಮೋ ರೆಮೋ ಎಂದರೆ ಹಾಡು ಅಲ್ಲಿ ನಗುವಿಗೆ ಕೊರತೆ ಇಲ್ಲ ಬಿಡಿ ಆದರೆ ಎಲ್ಲರನ್ನೂ ನಗು-ನಗಿಸುವ ರೆಮೋ ಬಾಳಿನಲ್ಲಿ ಅದೊಂದು ಕಾಲದಲ್ಲಿ ಬಿರುಗಾಳಿ ಎದ್ದಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ