ಬದುಕುವ ರೀತಿ.. ಸದಾ ಆರೋಗ್ಯವಂತರಾಗಿ ಬಾಳಲು ಮಾರ್ಗದರ್ಶಿ, ಸೂಕ್ತಿಗಳು,,, ಪ್ರತಿದಿನವೂ ಒಂದೇ ಶಿಸ್ತು ಬದ್ಧ ದಿನಚರಿ ಇರುವಂತೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಪ್ರತಿದಿನ ಬೇಗ ಮಲಗಿ ಬೇಗ ಏಳಬೇಕು ಮಲಗುವಾಗ ಎಡಮೊಗ್ಗಲ ದಿಂದ ಮಲಗಿ ಬಲ ಮೊಗ್ಗಲಿನಿಂದಲೇ ಹೇಳಬೇಕು, ಮಲಗುವ ಹಾಸಿಗೆ ತುಂಬಾ ದಪ್ಪ ಇರಬಾರದು.
ತಲೆದಿಂಬು ತೆಳ್ಳಗೆ ಇರಬೇಕು ಮುಸುಕು ಹಾಕಿ ಮಲಗಬಾರದು, ಬೆಳಗ್ಗೆ ಎದ್ದ ತಕ್ಷಣ ಬಾಯಿ ತೊಳೆದು ಒಂದು ಲೋಟ ತಾಮ್ರದ ಪಾತ್ರೆಯಲ್ಲಿನ ನೀರು ಸೇವಿಸಬೇಕು ಸ್ತೂಲಕಾಯದವರು ಬಿಸಿ ನೀರು ಸೇವಿಸುವುದು ಉತ್ತಮ, ಮಲಮೂತ್ರ ವಿಸರ್ಜನೆಯ ನಂತರ ದೈಹಿಕ ವ್ಯಾಯಾಮ ಕಡ್ಡಾಯ, ಸ್ನಾನದ ಮೊದಲು ಆಹಾರ ಸೇವನೆ ಹಿತಕರವಲ್ಲ ಸ್ನಾನಕ್ಕೆ ಪ್ರಕೃತಿಗೆ ಅನುಗುಣವಾದ.
ಹದವಾದ ನೀರು ಒಳ್ಳೆಯದು ಸಾಬೂನು ಬದಲಾಗಿ ಧಾನ್ಯದ ಚೂರ್ಣ ತುಂಬಾ ಒಳ್ಳೆಯದು ವಾರಕ್ಕೆ ಒಂದು ಸಾರಿ ಅಭ್ಯಂಗ ಸ್ನಾನ ಅತ್ಯುತ್ತಮ, ನಾವು ಉಪಯೋಗಿಸುವ ವಸ್ತ್ರ ಹಾಗೂ ಧರಿಸುವ ಬಟ್ಟೆಗಳು ಹತ್ತಿಯಿಂದ ತಯಾರಿಸಿದ ಉಡುಗೆ ಆರೋಗ್ಯ ವೃದ್ಧಿಸುತ್ತವೆ, ಒತ್ತಡ ಕಡಿಮೆ ಮಾಡಿಕೊಳ್ಳಲು ಬೆಳಗ್ಗೆಯಿಂದ ರಾತ್ರಿಯವರೆಗೆ ಎಲ್ಲಾ ಕೆಲಸಗಳ ಯೋಜನೆ.
ಸಿದ್ಧಪಡಿಸಿಕೊಂಡು ಮಾಡಿ ಮುಗಿಸಬೇಕು, ಎಲ್ಲಾ ಕೆಲಸಗಳ ಮಧ್ಯೆ ಸಮಯಕ್ಕೆ ಸರಿಯಾಗಿ ಶಾಂತ ರೀತಿಯಿಂದ ಕುಳಿತು ಊಟ ಮಾಡುವುದು ಮೊದಲ ತುತ್ತನ್ನು ದೇಶಿ ಆಕಳ ತುಪ್ಪದೊಂದಿಗೆ ಸೇವಿಸುವುದು ಜೀರ್ಣಕ್ರಿಯೆಗೆ ಒಳ್ಳೆಯದು, ಊಟ ಮಾಡುವಾಗ ಹೆಚ್ಚು ನೀರು ಸೇವಿಸದೆ ಊಟದ ಒಂದು ಗಂಟೆಯ ನಂತರ ಹೆಚ್ಚು ನೀರು ಸೇವನೆ ತುಂಬಾ ಒಳ್ಳೆಯದು.
ಊಟದ ಮೊದಲು ಹಣ್ಣು ಸೇವಿಸುವುದು ಉತ್ತಮ ಊಟದಲ್ಲಿ ಶೇಕಡ 35ರಷ್ಟು ರಸ ಆಹಾರ ಇರುವುದು ಒಳ್ಳೆಯದು,ಅತ್ಯುತ್ತಮ ಆರೋಗ್ಯಕ್ಕಾಗಿ ರಾಸಾಯನಿಕ ಮುಕ್ತ ಆಹಾರ ಸೇವನೆ ಒಳ್ಳೆಯದು,ಹೆಚ್ಚು ಬೇಯಿಸಿದ ಆಹಾರ ತುಂಬಾ ಆರೋಗ್ಯಕ್ಕೆ ಒಳ್ಳೆಯದು.ನಿತ್ಯವೂ ಶರೀರ ವಿಶ್ರಾಂತಿಗೆ ನಿದ್ರೆ ಮನಸ್ಸಿನ ವಿಶ್ರಾಂತಿಗೆ ಧ್ಯಾನ ಕರುಳಿನ ವಿಶ್ರಾಂತಿಗೆ ಉಪವಾಸ.
ಬುದ್ಧಿಯ ವಿಶ್ರಾಂತಿಗೆ ತಸಂಗ ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು, ನೀರನ್ನು ಯಾವಾಗಲೂ 8 ಪದರ ಬಟ್ಟೆಯಲ್ಲಿ ಸೋಸಿ ಕುಡಿಯುವುದು ಉತ್ತಮ, ಬರೀ ನೆಲದಲ್ಲಿ ಕೂರುವುದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ತುಂಬಾ ಹಸಿವೆ ಆದಾಗ ಅಥವಾ ಊಟವಾದ ತಕ್ಷಣ ಶ್ರಮದ ಕೆಲಸ ಬೇಡ, ನಡೆಯುತ್ತ ಮಾತನಾಡುತ್ತಾ ಹಾಗೂ ನಗೆಯಾಡುತ್ತಾ.
ಭೋಜನವನ್ನು ಮಾಡಬಾರದು, ಅಪವಿತ್ರ ಅವಸ್ಥೆಯಲ್ಲಿ ಮತ್ತು ಎಂಜಲು ಬಾಯಿಯಿಂದ ಸ್ವಾದ್ಯಾಯ ಜಪ ಮಾಡಬಾರದು, ಜಗಳ ಮಾಡುತ್ತಾ ತಯಾರಿಸಿದ ಹಾಗೂ ಕಾಲಿನಿಂದ ದಾಟಿರುವ ಆಹಾರ ಸೇವಿಸಲು ಯೋಗ್ಯವಲ್ಲ, ಕುಳಿತುಕೊಳ್ಳುವಾಗ ಊಟ ಮಾಡುವಾಗ ನಿದ್ರಿಸುವಾಗ ಗುರು ಜನರಿಗೆ ಹೊಂದಿಸುವಾಗ ಪಾದರಕ್ಷೆ ಧರಿಸಿರಬಾರದು.
ಮಲಮೂತ್ರಾದಿಗಳನ್ನು ತಡೆಯುವುದರಿಂದ ಹಲವು ಕಾಯಿಲೆಗಳು ಬರುತ್ತವೆ, ಹೊಟ್ಟೆ ಬಿರಿಯುವಷ್ಟು ಊಟವು ಆರೋಗ್ಯವನ್ನು ಕೆಡಿಸುತ್ತದೆ, ಊಟ ಮಾಡುವಾಗ ದುಃಖ ಚಿಂತೆ ಭಯ ಆಕ್ರೋಶ ಖಿನ್ನತೆ ಆತುರ ಬೇಡ ದೂರದರ್ಶನ ಹಾಗೂ ಮೊಬೈಲ್ ಬಳಕೆ ಮಾಡಬಾರದು.
ಕೈ ಉಗುರುಗಳನ್ನು ಹಲ್ಲಿನಿಂದ ಕಚ್ಚಬಾರದು, ಬೆತ್ತಲೆಯಾಗಿ ಸ್ನಾನ ಮಾಡಬಾರದು.ಸ್ನಾನದ ನಂತರ ಒದ್ದೆ ಬಟ್ಟೆಯಲ್ಲಿ ಇರಬಾರದು ಮತ್ತು ಮೈಲಿಗೆ ಬಟ್ಟೆ ಧರಿಸಬಾರದು, ಅಶ್ಲೀಲ ಹಾಗೂ ದುರಾಲೋಚನೆ ಮಾಡುವುದರಿಂದ ಆರೋಗ್ಯ ಕೆಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.