ಬಾಹ್ಯಾಕಾಶದಲ್ಲಿ ಸಿಲುಕಿದ ಯಾತ್ರಿಕರು ಉಳಿದಿರಿವುದು ಕೆಲವೇ ಕ್ಷಣ ದೇವರೆ ಕಾಪಾಡಬೇಕು…ಸುನೀತಾ ವಿಲಿಯಮ್ಸ್ ಬದುಕಿ ಬರ್ತಾರ?
ನಿಮಗೆಲ್ಲ ಕಲ್ಪನಾ ಚಾವ್ಲಾ ಅವರ ಬಗ್ಗೆ ಗೊತ್ತಿರಬಹುದು, ಅವರು ಭಾರತದ ಹೆಮ್ಮೆಯ ಕುವರಿ. ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮಹಿಳೆ. ಕಲ್ಪನಾ ಚಾವ್ಲಾ ಎಂಬ ಈ ಮುದ್ದುಮುಖದ ಸುಂದರಿ ಯಾವತ್ತಿಗೂ ಭಾರತದ ಪಾಲಿಗೆ ನಕ್ಷತ್ರ ಇದ್ದಂತೆ, ಆದರೆ ಈ ನಕ್ಷತ್ರ ಈಗ ಆಕಾಶದ ನಕ್ಷತ್ರವಾಗಿಯೇ ಉಳಿದಿದೆ.
ಬಾಹ್ಯಾಕಾಶಕ್ಕೆ ಸಾವಿರ ಕನಸುಗಳನ್ನು ಹೊತ್ತು ಹಾರಿದ ಕಲ್ಪನಾ ಚಾವ್ಲಾ ಮತ್ತೆಂದು ಭೂಮಿಗೆ ಕಾಲಿಡಲೇ ಇಲ್ಲ. ಭೂಮಿಗೆ ಇಳಿಯುವ ಮುಂಚೆ ಪರಲೋಕ ಸೇರಿ ಬಿಟ್ಟರು, ಈ ದುರಂತವನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ.
ಇದೀಗ ಈ ದುರಂತದ ಬಗ್ಗೆ ಮತ್ತೊಮ್ಮೆ ನೆನಪಾಗುತ್ತಿದೆ ಅದಕ್ಕೆ ಕಾರಣ ಭಾರತೀಯ ಮೂಲದ ಸುನಿತಾ ವಿಲಿಯಂ ಬಾಹ್ಯಾಕಾಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಭೂಮಿಗೆ ವಾಪಸ್ ಬರಲು ಸಾಧ್ಯವಾಗದೆ ಅಂತರಿಕ್ಷದಲ್ಲಿ ಅಲೆದಾಡುತ್ತಿದ್ದಾರೆ, ಮತ್ತೊಂದು ಕಡೆ ಗಗನ ನೌಕೆಯ ಇಂಧನ ಕಡಿಮೆಯಾಗುತ್ತಾ ಬರುತ್ತಾ ಇದೆ. ಹೀಗಾಗಿ ಕ್ಷಣ ಕ್ಷಣಕ್ಕೂ ಭಯ ಆವರಿಸುತ್ತಿದೆ, ಸುನಿತಾ ವಿಲಿಯಂ ಅಂತರಿಕ್ಷದಲ್ಲಿ ಕಳೆದು ಹೋಗುವ ಭೀತಿ ಎದುರಾಗಿದೆ.
ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ವಾಪಸ್ ಕರೆಸಿಕೊಳ್ಳಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ನಾಸಾದ ಪ್ರಯತ್ನವೂ ಕೂಡ ಸಫಲವಾಗುತ್ತಿಲ್ಲ. ಹೀಗಾಗಿ ಮುಂದೆ ಏನಾಗುತ್ತೋ ಎಂದು ಭಯಾ ಶುರುವಾಗಿದೆ ಇನ್ನು ಕೆಲವೇ ದಿನಗಳಿಗೆ ಆಗುವಷ್ಟು ಮಾತ್ರ ಇಂಧನ ಬಾಕಿ ಇದೆ. ಹೀಗಾಗಿ ಆತಂಕ ಹೆಚ್ಚಾಗುತ್ತದೆ ಇಷ್ಟಕ್ಕೂ ಸುನಿತಾ ವಿಲಿಯಂ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು ಹೇಗೆ? ಇಂಧನ ಸಂಪೂರ್ಣ ಖಾಲಿಯಾದರೆ ಮುಂದಿನ ಕಥೆ ಏನು? ಕಲ್ಪನಾ ಚಾವ್ಲಾದ ದುರಂತದ ರೀತಿ ಮತ್ತೊಂದು ದುರಂತ ನಡೆದು ಬಿಡುತ್ತ! ಇದೇಲ್ಲದರ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ.
ಬಾಹ್ಯಾಕಾಶ ಮನುಷ್ಯನ ಪಾಲಿಗೆ ಅದೊಂದು ಕುತೂಹಲದ ಕಣಜ. ಹೀಗಾಗಿ ಬಾಹ್ಯಾಕಾಶದ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ ಗಗನ ಯಾತ್ರಿಗಳು ಅಂತರಿಕ್ಷಕ್ಕೆ ಹಾರಿ ಅಧ್ಯಯನ ಮಾಡಿ ವಾಪಸ್ ಬರುತ್ತಾರೆ, ಹೀಗೆ ಅಧ್ಯಯನ ಮಾಡುವ ವಾಪಸ್ ಬರುವ ಸಂದರ್ಭದಲ್ಲಿ ಕೆಲವೊಮ್ಮೆ ದುರಂತಗಳು ನಡೆದದ್ದು ಕೂಡ ಇವೆ. ಹೀಗಾಗಿ ಇಂಥದ್ದೇ ಒಂದು ಘಟನೆ ಮತ್ತೊಮ್ಮೆ ಬಾಹ್ಯಾಕಾಶದಲ್ಲಿ ನಡೆಯುತ್ತಾ ಇದೆ.
ಗಗನ ಯಾತ್ರಿಗಳು ಅಂತರಿಕ್ಷದಲ್ಲಿ ಸಿಲುಕಿಕೊಂಡು ಬಿಟ್ಟಿದ್ದಾರೆ, ಹೀಗೆ ಅಂತರಿಕ್ಷದಲ್ಲಿ ಸಿಲುಕಿಕೊಂಡಾ ಗಗನ ಯಾತ್ರಿಗಳ ಪೈಕಿ ಭಾರತೀಯ ಮೂಲದ ಸುನಿತಾ ವಿಲಿಯಂ ಕೂಡ ಒಬ್ಬರು. ಅಂದಹಾಗೆ ಜೂನ್ ಒಂದರಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ವಿಮಾನ ತಯಾರಿಕೆ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಬೋಯಿಂಗ್ ಸ್ಟಾರ್ ಲೈನರ್ ಎನ್ನುವ ಗಗನ ನೌಕೆ ಅಂತರಿಕ್ಷಕ್ಕೆ ಹಾರಿತ್ತು.
ಈ ಗಗನ ನೌಕೆಯಲ್ಲಿ ಇಬ್ಬರೂ ಗಗನ ಯಾತ್ರಿಗಳಿದ್ದರೂ ಒಬ್ಬರು ಬಚ್ಹುಲ್ ರವರಾದರೆ ಮತ್ತೊಬ್ಬರು ಸುನಿತಾ ವಿಲಿಯಂ ಹೀಗೆ ಭೂಮಿಯಿಂದ ಹಾರಿದ ಗಗನ ನೌಕೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕೂಡ ಹೋಗಿ ತಲುಪಿತ್ತು.
ಒಂದು ಗಗನ ನೌಕೆ ಬಾಹ್ಯಾಕಾಶಕ್ಕೆ ಹೋಗುತ್ತೆ ಎಂದರೆ ಅದು ವಾಪಸ್ ಬರುವುದು ಯಾವಾಗ ಎಂದು ಮೊದಲೆ ನಿರ್ಧಾರ ಮಾಡಿರುತ್ತಾರೆ. ಅಷ್ಟು ದಿನಕ್ಕೆ ಬೇಕಾಗುವ ಇಂಧನವನ್ನು ಕೂಡ ತುಂಬಿಸಿರುತ್ತಾರೆ . ಎಮರ್ಜೆನ್ಸಿ ಸಿಚುವೇಶನ್ ಗೆ ಇರಲಿ ಅಂತ ಹೆಚ್ಚಿನ ಪ್ರಮಾಣದ ಇಂಧನವನ್ನು ಕೂಡ ತುಂಬಿಸಿರುತ್ತಾರೆ.
ಅದೇ ರೀತಿ ಈ ಗಗನ ನೌಕೆ ಜೂನ್ ೧೪ ರಂದು ಭೂಮಿಗೆ ವಾಪಸ್ ಬರಬೇಕಿತ್ತು ಹೀಗೇ ಜೂನ್ ೧೪ ರಂದು ಭೂಮಿಗೆ ವಾಪಸ್ ಬರಬೇಕಿದ್ದ ಗಗನ ನೌಕೆ ಇಲ್ಲಿವರೆಗೆ ವಾಪಸ್ ಬರಲೇ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ