ಮುಂಜಾನೆ ಎದ್ದ ತಕ್ಷಣ ಈ ಸಣ್ಣ ಮಾತುಗಳನ್ನು ಮೂರು ಬಾರಿ ಹೇಳಿಕೊಂಡರೆ ಆ ದಿನ ನೀವು ಅನೇಕ ಸಿಹಿ ಸುದ್ದಿಗಳನ್ನು ಕೇಳುತ್ತೀರಾ.
ಸಾಮಾನ್ಯವಾಗಿ ಪ್ರತಿಯೊಬ್ಬರು ಮುಂಜಾನೆ ಎದ್ದಾಗ ಈ ದಿನ ನನಗೆ ಶುಭವಾಗಲಿ ಈ ದಿನ ನನಗೆ ಧನಪ್ರಾಪ್ತಿಯಾಗಲಿ ಅಥವಾ ಈ ದಿನ ನನಗೆ ಯಾವ ತೊಂದರೆ ಬರದಿರಲಿ ಎಂದು ಕೇಳಿಕೊಂಡು ಹೇಳುತ್ತಾರೆ ಮತ್ತು ಇಂದು ಯಾರಿಗಾದರೂ ಸಾಲ ಕೊಡುವ ದಿನವಾಗಿದ್ದರೆ ನನಗೆ ಅದಕ್ಕೆ ನೀಡುವಂತೆ ಎಲ್ಲಾದರೂ ಹಣ ಒದಗಿಸುವಂತೆ ಮಾಡಿ ಎಂದು ಕೇಳಿಕೊಂಡು ಹೇಳುತ್ತಾರೆ. ಇನ್ನು ವಿದ್ಯಾರ್ಥಿಗಳಾದರೆ ಸ್ಕೂಲಿನಲ್ಲಿ ಇಂದು ಪರೀಕ್ಷೆಯನ್ನು ಚೆನ್ನಾಗಿ ಬರೆಯಲಿ ಎಂದು ಕೇಳಿಕೊಳ್ಳುತ್ತಾರೆ ಮತ್ತು ಕೆಲಸಕ್ಕೆ ಹೋಗುವವರು ಈ ದಿನ ಯಾವ ತೊಂದರೆ ಬರದೆ ಸಲೀಸಾಗಿ ಕೆಲಸವನ್ನು ಮುಗಿಸಿ ಹಿಂತಿರುಗಬೇಕೆಂದು ಕೇಳಿಕೊಳ್ಳುತ್ತಾರೆ. ನೀವು ಮುಂಜಾನೆ ಎದ್ದಾಗ ಈ ರೀತಿ ಹೇಳಿಕೊಂಡ ನಂತರ ನಿಮ್ಮ ಮನಸ್ಸಿನಲ್ಲಿರುವ ಒಳ್ಳೆಯ ವಿಷಯವನ್ನು ಕೇಳಿಕೊಂಡು ನಂತರ ಈ ಮೂರು ವಾಕ್ಯಗಳನ್ನು ಹೇಳಿದರೆ ನೀವು ಅದರ ಪ್ರಯೋಜನವನ್ನು ಅಂದೆ ಪಡೆಯುತ್ತೀರಾ ವಾಕ್ಯ ಎಂದರೆ ಸಣ್ಣ ಮಾತಾಗುತ್ತದೆ ಅದೊಂದು ಮಂತ್ರ ಎಂದು ಹೇಳಿದರೆ ಒಳ್ಳೆಯದು ಇದನ್ನು ಹೇಳಿಕೊಂಡರೆ ನಿಮಗೆ ಅದೃಷ್ಟದ ಜೊತೆಗೆ ಹಣಕಾಸು ಹಾಗೂ ವ್ಯವಹಾರ ಮತ್ತು ಸುಖ ಶಾಂತಿ ನೆಮ್ಮದಿ ಎಲ್ಲವು ದೊರೆಯುತ್ತದೆ.
ಆದಿನ ನೀವು ಮಾಡುವಂತ ಕೆಲಸಗಳಲ್ಲಿ ವಿಜಯವನ್ನು ಸಾಧಿಸುತ್ತೀರಾ ಮತ್ತು ಆ ದಿನ ನಿಮಗೆ ತುಂಬಾ ಸಂತೋಷಕರವಾಗಿ ಇರುತ್ತದೆ, ಸಾಮಾನ್ಯವಾಗಿ ಈ ಕಷ್ಟಕಾರ್ಪಣ್ಯಗಳು ಏಕೆ ಬರುತ್ತದೆ ಎಂದರೆ ನಾವು ಮುಂಜಾನೆ ಮಾಡಿಕೊಂಡಿರುವ ಹವ್ಯಾಸಗಳಿಂದ ಬಹುತೇಕರು ಮುಂಜಾನೆ ಎದ್ದ ತಕ್ಷಣ ಅವರ ಬಾಳ ಸಂಗತಿಯ ಮುಖ ನೋಡಿ ಎದ್ದೇಳುತ್ತಾರೆ ಅಥವಾ ತನ್ನ ತಾಯಿಯ ಮುಖವನ್ನು ನೋಡಿ ಎದ್ದೇಳುತ್ತಾರೆ ಇನ್ನು ಕೆಲವರು ತಮ್ಮ ಮಕ್ಕಳ ಮುಖವನ್ನು ನೋಡಿ ಅವರ ಮುಂಜಾನೆಯನ್ನು ಶುರು ಮಾಡುತ್ತಾರೆ ಇಲ್ಲವಾದರೆ ಸಾಮಾನ್ಯವಾಗಿ ದೇವರ ಫೋಟೋವನ್ನು ನೋಡಿ ಎದ್ದೇಳುತ್ತಾರೆ. ಇನ್ನು ಹಳ್ಳಿಗಳ ಕಡೆಯಂತೂ ಸ್ವಲ್ಪ ಜನ ಕಲ್ಪವೃಕ್ಷವನ್ನು ನೋಡಿ ಅವರ ಮುಂಜಾನೆಯನ್ನು ಶುರು ಮಾಡುತ್ತಾರೆ, ಪ್ರತಿಯೊಬ್ಬರೂ ಎದ್ದ ತಕ್ಷಣ ಮೊದಲು ಅವರ ಅಂಗೈಯನ್ನು ನೋಡಿಕೊಳ್ಳಬೇಕು ಏಕೆಂದರೆ ಅದರಲ್ಲಿ ಅದೃಷ್ಟ ಇರುತ್ತದೆ ಎಂದು ಪುರಾಣಗಳು ಹೇಳಿವೆ ಅದರ ಜೊತೆಗೆ ಈ ಒಂದು ಮೂರು ಮಂತ್ರಗಳನ್ನು ಪಠಿಸಿದರೆ ನಿಮಗೆ ಶುಭವಾಗುತ್ತದೆ.
ಶ್ರೀಮ್ ಶ್ರೀಮ್ ಶ್ರೀಮ್ ಎಂದು ಮೂರು ಬಾರಿ ಪಠಿಸುತ್ತಾ ನಿಮ್ಮ ದಿನವನ್ನು ಪ್ರಾರಂಭಿಸಿ ಈ ಮಂತ್ರವು ತಾಯಿ ಲಕ್ಷ್ಮಿ ದೇವಿಯ ಬೀಜಾಕ್ಷರಗಳಾಗಿವೆ.ಈ ರೀತಿ ನೀವು ಪ್ರತಿದಿನ ಎದ್ದ ತಕ್ಷಣ ನಿಮ್ಮ ಅಂಗೈಗಳನ್ನು ನೋಡಿ ನಂತರ ಈ ಮೂರು ಮಂತ್ರಗಳನ್ನು ಪಠಿಸುತ್ತಾ ಬಂದರೆ ನಿಮ್ಮ ಆ ದಿನ ಸುಖಕರವಾಗಿರುತ್ತದೆ ಮತ್ತು ಮನೆಯಲ್ಲಿರುವ ದರಿದ್ರ ಎಲ್ಲಾ ಹೋಗಿ ಹಣಕಾಸು ಹಾಗೂ ಮನೆಯಲ್ಲಿ ನೆಮ್ಮದಿ ತುಂಬಿದ ವಾತಾವರಣ ಶಾಶ್ವತವಾಗಿ ಇರುತ್ತದೆ ಇದು ಹಿಂದಿನ ಕಾಲದಿಂದ ಹೆಚ್ಚಾಗಿ ಬರುತ್ತಿತ್ತು ಆದರೆ ಈಗಿನ ಕಾಲದಲ್ಲಿ ಈ ರೀತಿ ಯಾರು ಮಾಡುವುದಿಲ್ಲ ನಮ್ಮ ಹಿಂದಿನವರು ಹೇಳಿರುವ ಹಾಗೆ ನಾವುಗಳು ಸ್ವಲ್ಪವಾದರೂ ನಮ್ಮ ದಿನಚರಿಯನ್ನು ಮಾಡುತ್ತ ಬಂದರೆ ಅದರಿಂದ ಲಾಭಗಳನ್ನು ನಾವು ಪಡೆಯುತ್ತೇವೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ