ಭಯಂಕರ ನಟನೆ ಮೂಲಕ ನೋಡುವವರಿಗೆ ಭಯ ಹುಟ್ಟಿಸುತ್ತಿದ್ದ ಈ ನಟ ಈಗ ಏನ್ ಮಾಡ್ತಾ ಇದ್ದಾರೆ ಗೊತ್ತಾ?1996ರಲ್ಲಿ ರಿಲೀಸ್ ಆದ ಪೊಲೀಸ್ ಸ್ಟೋರಿ ಸಿನಿಮಾ ಕನ್ನಡದ ಒಂದು ಅದ್ಭುತವಾದ ಆಕ್ಷನ್ ಸಿನಿಮಾ ವಾಗಿತ್ತು.ಸಾಹಸಮಯ ನಿರ್ದೇಶಕರಾದ ಥ್ರಿಲ್ಲರ್ ಮಂಜು ಪೊಲೀಸ್ ಸ್ಟೋರಿ ಸಿನಿಮಾವನ್ನ ನಿರ್ದೇಶನ ಮಾಡಿದರು.ಇನ್ನು ಈ ಸಿನಿಮಾದಲ್ಲಿ ಪೊಲೀಸ್ ಗೆಟಪ್ ನಲ್ಲಿ ಮಿಂಚಿದ ಸಾಯಿಕುಮಾರ್ ನಟನೆಯಂತೂ ಅಮೋಘವಾಗಿತ್ತು.ಅದ್ಭುತವಾದ ಆಕ್ಷನ್ ಹಾಗೂ ಪಂಚಿಂಗ್ ಡೈಲಾಗ್ಗಳಿಂದ ಕನ್ನಡದ ಪ್ರೇಕ್ಷಕರ ಗಮನ ಸೆಳೆದಿತ್ತು.ಇನ್ನು ಈ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಅಂದ್ರೆ ಅದು ವಿಲನ್ ಪಾತ್ರ ವಿಲನ್ ಪಾತ್ರದಲ್ಲಿ ನಟಿಸಿದವರು. ಸತ್ಯಪ್ರಕಾಶ್ ಇವರು ಮೊದಲ ಬಾರಿಗೆ ಕನ್ನಡ ಸಿನಿಮಾದ ಮೂಲಕ ಬಣ್ಣ ಹಚ್ಚಿದರು ಇವರು ಇವರ ನಟನೆಯಿಂದ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಸತ್ಯ ಪ್ರಕಾಶ್ ಅವರು ಅನಂತರ ಬೇಡಿಕೆಯ ಖಳನಟನಾಗಿ ಹೆಜ್ಜೆ ಹಾಕಿದರು.ಸತ್ಯ ಪ್ರಕಾಶ್ ಅವರು ಮೂಲತ ಒರಿಸ್ಸಾ ದಿಂದ ಬಂದವರು ಇವರು ನಟನೆಯಲ್ಲಿ ಮಾತ್ರವಲ್ಲದೆ ಓದಿನಲೂ ಕೂಡ ಮುಂದೆ ಇದ್ದರು.
ಒರಿಸ್ಸಾದಿಂದ ಕೊಲ್ಕತ್ತಾ ಗೆ ಹೋಗಿ ಅಲ್ಲಿ ಎಂಬಿಎ ಮುಗಿಸಿದ್ದರು ನಂತರದ ದಿನದಲ್ಲಿ ಬ್ಯಾಂಕ್ ಮತ್ತು ಇತರೆ ಕೆಲಸ ಮಾಡಿದ ಇವರಿಗೆ ಇನ್ನೊಂದು ಕನಸಿತ್ತು.ಅದೇನೆಂದರೆ ನಾನು ಉತ್ತಮ ನಟನಾಗಬೇಕೆಂದು ಚಿಕ್ಕಂದಿನಿಂದಲೂ ಅಮಿತಾ ಬಚ್ಚನ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದ ಸತ್ಯ ಪ್ರಕಾಶ್ ಅವರಿಗೆ ನಾನು ಕೂಡ ಅವರಂತೆ ನಟಿಸಬೇಕೆಂಬ ಆಸೆ ಇತ್ತು. ಅದರಂತೆ ತಾನು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು ಚೆನ್ನೈಗೆ ಬಂದ ಸತ್ಯ ಪ್ರಕಾಶ್ ಸತತ ಐದು ವರ್ಷಗಳ ಕಾಲ ಸಿನಿಮಾದಲ್ಲಿ ಅವಕಾಶ ಪಡೆಯಲು ಓಡಾಡುತ್ತಿದ್ದರು.ನಂತರ ಹೇಗೋ ಕಷ್ಟಪಟ್ಟು ತೆಲುಗು ಹಾಗೂ ತಮಿಳ್ ಭಾಷೆಯನ್ನು ಕಲಿಯುತ್ತಾರೆ. ಆದರೆ ಅದರಲ್ಲಿ ಚಿಕ್ಕ ಪಾತ್ರವೂ ಸಹ ಸತ್ಯಪ್ರಕಾಶ್ ಅವರಿಗೆ ದೊರಕಲಿಲ್ಲ ಅದರೆ ಹೇಗೋ ಥ್ರಿಲ್ಲರ್ ಮಂಜು ಅವರ ಕಣ್ಣಿಗೆ ಬಿದ್ದ ಸತ್ಯ ಪ್ರಕಾಶ್ ಅವರಿಗೆ ಪೊಲೀಸ್ ಸ್ಟೋರಿ ಚಿತ್ರದಲ್ಲಿ ಖಳನಟನಾಗಿ ನಟಿಸುವ ಅವಕಾಶ ಕೊಡುತ್ತಾರೆ.
ಥ್ರಿಲ್ಲರ್ ಮಂಜು ಅವರ ನಂಬಿಕೆಯಂತೆ ಪಾತ್ರದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಸತ್ಯಪ್ರಕಾಶ್ ಅವರು ಪ್ರಶಂಸೆಯನ್ನು ಪಡೆದರು.ನಂತರ ಇವರ ನಟನೆಯನ್ನು ನೋಡಿದ ತೆಲುಗು ಮತ್ತು ತಮಿಳು ಚಿತ್ರರಂಗ ಇವರಿಗೆ ಅವಕಾಶ ಕೊಡುತ್ತಾರೆ. ಕನ್ನಡ ತಮಿಳು ತೆಲುಗು ಭೋಜಪುರಿ ಬೆಂಗಾಲಿ ಒರಿಸ್ಸಾ ಹೀಗೆ 10 ಭಾಷೆಗಳಲ್ಲಿ 540 ಚಿತ್ರಗಳಲ್ಲಿ ಸತ್ಯ ಪ್ರಕಾಶ್ ಅವರು ನಟಿಸಿದ್ದಾರೆ.ಕನ್ನಡ ತೆಲಗು ತಮಿಳಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ಹೆಜ್ಜೆ ಹಾಕಿದ ಸತ್ಯ ಪ್ರಕಾಶ್ ಕೇವಲ ನಟರಲ್ಲದೆ ನಿರ್ದೇಶಕ ರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.ಪ್ರಸ್ತುತ ತನ್ನ ಮಗ ನಟರಾಜರವರಿಗೆ ಉಲ್ಲಾಲ ಉಲ್ಲಾಲ ಎಂಬ ತೆಲುಗು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸತ್ಯಪ್ರಕಾಶ್ ಇವರು ಕನ್ನಡದಲ್ಲಿ ನಟಿಸಿದ್ದ ಕೊನೆಯ ಚಿತ್ರ ಗಿರಗಿಟ್ಲೆ ಇವರ ನಟನೆಯನ್ನು ನೀವು ನೋಡಿದ್ದರೆ ಇವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.