ಮಕರ ರಾಶಿಯವರ ಸಂಪೂರ್ಣ ವಿವರ ಇಲ್ಲಿದೆ.
ಮಕರ ರಾಶಿಯವರ ಸಂಪೂರ್ಣ ಗುಣ, ವೃತ್ತಿ, ಜೀವನ, ಹಣಕಾಸು, ಸಂಬಂಧದ ಕುರಿತು ನೋಡೋಣ ಬನ್ನಿ. 12 ರಾಶಿ ಚಕ್ರಗಳಲ್ಲಿ ಆರ್ಥಿಕ ವಿಚಾರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಹಣಕಾಸಿನ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಶಿಸ್ತು ಬದ್ಧ ಜೀವನ ನಡೆಸಿಕೊಂಡು ಹೋಗುವ ಅತ್ಯುತ್ತಮ ವ್ಯವಸ್ಥಾಪಕ ರಾಶಿ ಎಂದರೆ ಅದು ಮಕರ ರಾಶಿ. ರಾಶಿಚಕ್ರದಲ್ಲಿ ಹತ್ತನೇ ಸ್ಥಾನ ಪಡೆದಿರುವ ಈ ರಾಶಿ ಇವರನ್ನು ಮದುವೆಯಾಗುವವರು ಬಹಳ ಅದೃಷ್ಟವನ್ನು ಮಾಡಿರುತ್ತಾರೆ. ಕುಟುಂಬಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಇವರು ಕೋಪಕ್ಕೆ ತುತ್ತಾದರೆ ಕ್ಷಮಿಸುವುದು ಬಹಳ ಕಷ್ಟ. ಹಲವಾರು ವಿಚಾರಗಳಲ್ಲಿ ಮಕರ ರಾಶಿಯವರು ಬೇರೆ ರಾಶಿಯವರಿಗಿಂತ ವಿಭಿನ್ನರಾಗಿರುತ್ತಾರೆ. ಮಕರ ರಾಶಿಯು ಭೂಮಿಯ ಅಂಶದ ರಾಶಿ ಎಂದು ಹೇಳಲಾಗಿದೆ.

ಮಕರ ರಾಶಿಯನ್ನು ಆಳುವ ಗ್ರಹ ಶನಿ.ಇದರ ಬಣ್ಣ ಕಪ್ಪು. ಅದೃಷ್ಟ ವಾರ ಎಂದರೆ ಶನಿವಾರ. ಅತ್ಯುತ್ತಮವಾಗಿ ಹೊಂದಿಕೊಳ್ಳುವ ರಾಶಿ ಚಕ್ರಗಳು ಎಂದರೆ ವೃಷಭ ಹಾಗೂ ಕಟಕ ರಾಶಿ. ಅದೃಷ್ಟ ಸಂಖ್ಯೆ ಎಂದರೆ 4,8,13,22. ಮಕರ ರಾಶಿಯ ದಿನಾಂಕವೆಂದರೆ ಡಿಸೆಂಬರ್ 20 ರಿಂದ ಜನವರಿ 19 ರ ವರೆಗೂ. ಈ ರಾಶಿಯವರು ಜವಾಬ್ದಾರಿಯುತ ಶಿಸ್ತುಬುದ್ಧ ಸ್ವಯಂ ನಿಯಂತ್ರಣ ವ್ಯವಸ್ಥಾಪಕರು ಆಗಿರುತ್ತಾರೆ. ಎಲ್ಲವೂ ತಿಳಿದಿದೆ ಎಂಬುದು ಇವರ ದೌರ್ಬಲ್ಯವಾಗಿರುತ್ತದೆ. ಹಾಗೆ ಕ್ಷಮಿಸದೆ ಇರುವುದು, ಕೆಟ್ಟದ್ದನ್ನು ಆಮಂತ್ರಣ ಮಾಡಿಕೊಳ್ಳುವುದು ಕೂಡ ಇವರ ದೌರ್ಬಲ್ಯವಾಗಿದೆ. ಕುಟುಂಬ, ಸಂಪ್ರದಾಯ, ಸಂಗೀತ, ಉತ್ತಮವಾದ ಕರಕುಶಲಗಳು ಇವರ ಇಷ್ಟಗಳಾಗಿವೆ. ಧನುರ್ ರಾಶಿ, ಸಿಂಹ ರಾಶಿ, ಮೇಷ ರಾಶಿ ಈ ಮೂರು ರಾಶಿಗಳು ಮಕರ ರಾಶಿಯರವರೊಂದಿಗೆ ಹೊಂದುವುದಿಲ್ಲ.

WhatsApp Group Join Now
Telegram Group Join Now
See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಮಕರ ರಾಶಿಯು 12 ರಾಶಿ ಚಕ್ರಗಳಲ್ಲಿ ಅತ್ಯಂತ ನಿಗೂಢವಾದ ರಾಶಿಯಾಗಿದೆ. ಆಧ್ಯಾತ್ಮಿಕ ಮಟ್ಟದಲ್ಲಿ ಮಕರ ರಾಶಿಯು ಪ್ರಥಮ ಹಾಗೂ ಶಿಷ್ಯನ ಸಂಕೇತವಾಗಿದೆ. ಮಕರ ರಾಶಿಯ ಚಿತ್ರಿಸುವಲ್ಲಿ ವಿವಿಧ ರೀತಿಯ ಚಿನ್ಹೆಗಳನ್ನು ಬಳಸಲಾಗಿದೆ. ಮೊಸಳೆ, ಸಮುದ್ರ ಮೇಕೆ, ಯೂನಿಕಾರ್ನ್ ಬಳಸಲಾಗಿದೆ. ಮಕರ ರಾಶಿಯ ಗುಣವು ಎತ್ತರಕ್ಕೆ ಏರುವ ಗುಣವಾಗಿದೆ. ನೀರು, ಧ್ಯಾನ, ರಕ್ಷಣಾತ್ಮಕ ದೇವರೆಂದು ಸಮುದ್ರ ಮೇಕೆಯನ್ನು ಕರೆಯುತ್ತಾರೆ. ಇನ್ನು ಮಕರ ರಾಶಿಯವರ ಗಮನ ಮತ್ತು ಹೃದಯ ಗೆಲ್ಲುವುದು ಸುಲಭವಲ್ಲ. ಒಮ್ಮೆ ಸೇರಿದರೆ ಅವರು ಅವರನ್ನು ಸದಾ ನಂಬುತ್ತಾ ಇರುತ್ತಾರೆ. ಮಕರ ರಾಶಿಯ ಸಂಗಾತಿಯವರು ಇವರ ಮೇಲೆ ಬಹಳ ಅವಲಂಬಿತರಾಗಿರುತ್ತಾರೆ. ಏನೇ ಆದರೂ ಮಕರ ರಾಶಿಯವರು ಯಾರೊಂದಿಗೂ ರಾಜಿಯಾಗಲು ಇಚ್ಚಿಸುವುದಿಲ್ಲ. ಮಕರ ರಾಶಿಯವರು ಅವರ ತಂದೆಯವರ ಆದರ್ಶವನ್ನು ಬಹಳ ಪಾಲಿಸುತ್ತಾರೆ. ಹೆತ್ತವರನ್ನು ಬಹಳ ಭಕ್ತಿಯಿಂದ ನೋಡಿಕೊಳ್ಳುತ್ತಾರೆ.