“ಹಳದಿ,ಕೆಂಪು ಬತ್ತಿಗಳನ್ನು” ಹಾಕಿ ದೀಪ ಹಚ್ಚಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತೆ… ಇವತ್ತಿನ ವಿಡಿಯೋದಲ್ಲಿ ಹಳದಿ ಮತ್ತು ಕೆಂಪು ಬತ್ತಿಗಳನ್ನು ಯಾವ ರೀತಿಯಾಗಿ ಮಾಡುವುದು ಹಾಗೂ ಈ ಬತ್ತಿಗಳನ್ನು ಹಾಕಿ ದೀಪ ಹಚ್ಚುವುದರಿಂದ ಏನೇನು ಪ್ರಯೋಜನಗಳಿವೆ ಎಂದು ತಿಳಿಸಿಕೊಡುತ್ತೇನೆ.
ಮೊದಲಿಗೆ ಹಳದಿ ಹಾಗೂ ಕೆಂಪು ಬಣ್ಣದ ಬತ್ತಿಗಳನ್ನು ಮಾಡಲು ಒಂದು ತಟ್ಟೆಯನ್ನು ತೆಗೆದುಕೊಳ್ಳಬೇಕು ಯಾವ ತಟ್ಟೆಯನ್ನು ತೆಗೆದುಕೊಂಡರು ಪರವಾಗಿಲ್ಲಾ ಆನಂತರ ಆ ತಟ್ಟೆಯ ಒಳಗಡೆ ನಿಮಗೆ ಎಷ್ಟು ಬತ್ತಿಗಳು ಬೇಕೋ ಅಷ್ಟು ನೋಡಿಕೊಂಡು ಒಂದು ಸ್ವಲ್ಪ ಅರಿಶಿನ ಕುಂಕುಮವನ್ನು ಎರಡು ತಟ್ಟೆಯಲ್ಲಿ ಬೇರೆ.
ಬೇರೆಯಾಗಿ ತೆಗೆದುಕೊಳ್ಳಿ ಅನಂತರ ಕಲಸಿಕೊಳ್ಳಲು ನಾನು ರೋಜ್ ವಾಟರ್ ಅನ್ನು ತೆಗೆದುಕೊಳ್ಳುತ್ತಿದ್ದೇನೆ ರೋಜ್ ವಾಟರ್ ಅನ್ನು ಸ್ವಲ್ಪ ಸ್ವಲ್ಪನೇ ಹಾಕಿಕೊಂಡು ತುಂಬಾ ತೆಳುವಾಗಿಯೂ ಅಲ್ಲ ತುಂಬಾ ಗಟ್ಟಿಯಾಗಿಯೂ ಅಲ್ಲ ಆ ರೀತಿ ಕಲಸಿಕೊಳ್ಳಬೇಕಾಗುತ್ತದೆ ನಾನು ಸ್ವಲ್ಪ ಸ್ವಲ್ಪನೇ ಹಾಕಿಕೊಂಡು.
ಕಲಸಿ ಕೊಳ್ಳುತ್ತಿದ್ದೇನೆ ಈ ಬತ್ತಿಗಳನ್ನು ಮಾಡುವುದಕ್ಕೆ ರೋಜ್ ವಾಟರ್ ಮಾಮೂಲಿ ನೀರನ್ನು ಕೂಡ ಉಪಯೋಗಿಸಬಹುದು ಅಥವಾ ಹಾಲನ್ನು ಕೂಡ ಬಳಸಬಹುದು ಆದರೆ ರೋಜ್ ವಾಟರ್ ಬಳಸುವುದರಿಂದ ಗಮ ಚೆನ್ನಾಗಿರುತ್ತದೆ ನೀವು ದೀಪವನ್ನು ಹಚ್ಚಿದಾಗ ಸುವಾಸನೆಯುತವಾದ ಒಂದು ಗಮ.
ಬರುತ್ತಿರುತ್ತದೆ ಹಾಗಾಗಿ ರೋಜ್ ವಾಟರ್ ಅನ್ನ ಬಳಸಿ ನೀವು ಕುಂಕುಮ ಹಾಗೆ ಅರಿಶಿನವನ್ನು ಕಲಸಿಕೊಳ್ಳಿ. ಇದನ್ನು ಕಲಿಸಿದ ನಂತರ ಅದನ್ನು ಸೈಡಲ್ಲಿ ಇಟ್ಟುಕೊಳ್ಳೋಣ ನಿಮಗೆ ಗಂದಿಗೆ ಅಂಗಡಿಯಲ್ಲಿ ಈ ರೀತಿ ಹತ್ತಿಯಿಂದ ಮಾಡಿರುವಂತಹ ರೋಲ್ ಸಿಗುತ್ತದೆ ಆ ರೋಲನ್ನು ತೆಗೆದುಕೊಂಡು ನೀವು ಸಣ್ಣ ಸಣ್ಣದಾಗಿ.
ಎರಡು ಚಿಕ್ಕ ಬತ್ತಿಗಳನ್ನು ತೆಗೆದುಕೊಂಡು ಅದೆರಡನ್ನು ಸೇರಿಸಿ ಕೈಯಲ್ಲಿ ಹೊಸಕಿ ಕೊಳ್ಳಬೇಕು ನಿಮಗೆ ಕಾಣಿಸುತ್ತಿದೆ ಅಲ್ಲವಾ, ಈ ರೀತಿ ಎರಡು ಬತ್ತಿಗಳನ್ನ ಜೋಡಿಸಿ ಒಂದು ಬತ್ತಿಯಾಗಿ ಮಾಡಿ ಒಸಿಯಬೇಕು ಕೈಯಲ್ಲಿ ಆಗ ಎರಡು ಕೂಡ ಜೊತೆಗೆ ಕೂಡಿಕೊಳ್ಳುತ್ತದೆ ಒಂದೇ ಬತ್ತಿಯಾಗಿ ನಿಮಗೆ ಕಾಣಿಸುತ್ತದೆ.
ಇದೇ ರೀತಿ ನಿಮಗೆ ಎಷ್ಟು ಬತ್ತಿಗಳು ಬೇಕೋ ಹಳದಿ ಹಾಗೂ ಕೆಂಪು ಬಣ್ಣದ್ದು ಮಾಡುವುದಕ್ಕೆ ಅಷ್ಟು ಬತ್ತಿಯನ್ನು ತಯಾರು ಮಾಡಿಕೊಳ್ಳಬೇಕು. ಈಗ ಎಲ್ಲಾ ಬತ್ತಿಗಳು ಕೂಡ ತಯಾರಾಗಿವೆ ಮೊದಲು ನಾವು ಹಳದಿ ಬಣ್ಣದ ಬತ್ತಿಗಳನ್ನು ಯಾವ ರೀತಿಯಾಗಿ ಮಾಡೋದು ಎಂದು ನೋಡಿಕೊಳ್ಳೋಣ.
ನಾವು ಮೊದಲಿಗೆ ಅರಿಶಿಣವನ್ನ ಕಲಸಿ ಇಟ್ಟಿದ್ದವಲ್ಲ ಅದರೊಳಗಡೆ ನಾವು ಜೋಡಿಯಾಗಿ ಮಾಡಿಕೊಂಡಿರುವಂತಹ ಬತ್ತಿಯನ್ನು ಹದ್ದಿ ಅದರಲ್ಲಿ ಇರುವಂತಹ ಹಳದಿ ನೀರನ್ನೆಲ್ಲ ಹಿಂಡಿ ತೆಗೆದು ಕೈಯಲ್ಲಿ ಮತ್ತೆ ಆ ಬತ್ತಿಯನ್ನ ಹಾಕಿಕೊಂಡು ಒಸಿಯಬೇಕಾಗುತ್ತದೆ.
ನಿಮಗೆ ಕಾಣಿಸುತ್ತಿದೆಯಲ್ಲವ ವಿಡಿಯೋದಲ್ಲಿ ಅದೇ ರೀತಿ ಈ ರೀತಿ ಬತ್ತಿಯನ್ನ ಕೈ ಮೇಲೆ ಇಟ್ಟುಕೊಂಡು ಈ ರೀತಿ ಒತ್ತುತ್ತಾ ಅದನ್ನು ಒಸಿಯುವುದು ಅಷ್ಟೇ.ಎಲ್ಲವನ್ನು ಇದೇ ರೀತಿ ಮಾಡಿಕೊಳ್ಳಿ ಕೆಂಪು ಬತ್ತಿಗಳನ್ನು ಕೂಡ ಈ ರೀತಿಯಾಗಿ.
ಮಾಡಿಕೊಳ್ಳಬೇಕು ಅದನ್ನು ಅಜ್ಜಿದ ನಂತರ ಅದರಲ್ಲಿ ಇರುವ ನೀರಿನ ಅಂಶವೆಲ್ಲ ಹೋಗಲಿ ಎಂದು ಮತ್ತೆ ಬತ್ತಿಯನ್ನು ಒಸೆಯಬೇಕು ಆಗ ಅದು ಕಡ್ಡಿಯ ರೀತಿ ನೀಟಾಗಿ ಕೂರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ