ಮಹಿಳೆಯರು ಎಷ್ಟು ಮೂರ್ಖರಲ್ಲವೇ?… ಒಬ್ಬ ಮಹಿಳೆ ಬೆಳಿಗ್ಗೆ ಎದ್ದು ದೇವರಿಗೆ ಪ್ರಾರ್ಥಿಸಿ, ಅಡುಗೆ ಮನೆಯ ಕಡೆ ಹೊರಡುತ್ತಾಳೆ ನಂತರ ಚಹಾ ಮಾಡಲೆಂದು ಒಲೆಯ ಮೇಲೆ ಪಾತ್ರೆಯಲ್ಲಿ ನೀರಿಟ್ಟು ಬಳಿಕ ಮಕ್ಕಳನ್ನು ಶಾಲೆಗೆ ಹೋಗಲು ಲೇಟ್ ಆಗುತ್ತದೆ ಎಂದು ಅವರನ್ನು ಎಬ್ಬಿಸುತ್ತಾಳೆ ಹಾಗೆ ಚಹಾ ಕೂಡ ಮಾಡಿ ಅತ್ತೆ ಮಾವನಿಗೆ ಕೊಡುತ್ತಾಳೆ.ಬಳಿಕ ಮಕ್ಕಳಿಗೆ ತಿಂಡಿ ಮಾಡಿ ಮಕ್ಕಳಿಗೆ.
ತಿನ್ನಲು ಕೊಟ್ಟು ನಂತರ ಅವರ ಲಂಚ್ ಬಾಕ್ಸ್ ಗೆ ತಯಾರು ಮಾಡುತ್ತಾಳೆ ಅಷ್ಟರಲ್ಲಿ ಮಕ್ಕಳ ಶಾಲಾ ವ್ಯಾನ್ ಬರುತ್ತೆ ಅವರನ್ನು ಕಳುಹಿಸಿಕೊಟ್ಟು ಬಂದು ಟೇಬಲ್ ಅಲ್ಲಿದ್ದ ಪಾತ್ರೆಯನ್ನು ತೆಗೆದು ತೊಳೆಯುತ್ತಾಳೆ.ಇದರ ನಡುವೆ ಗಂಡ ಆಫೀಸ್ಗೆ ಹೋಗಲು ರೆಡಿಯಾಗುವ ಸಮಯದಲ್ಲಿ ಅವರಿಗೆ ಬೇಕಾದ ವಸ್ತುಗಳನ್ನು ಎತ್ತಿಡುತ್ತಾಳೆ, ನಂತರ ಬೇಗ ಕಿಚನ್ ಗೆ ಹೋಗಿ ಗಂಡನಿಗೆ ಚಪಾತಿ.
ಮಾಡುವಷ್ಟರಲ್ಲಿ ಚಿಕ್ಕನಾದನಿ ಬಂದು ಅತ್ತಿಗೆ ನನಗೆ ತಿಂಡಿ ಕೊಡಿ ಎಂದು ಕೇಳುತ್ತಾಳೆ ಹಾಗೆ ಮೈದುನ ಕೂಡ ಕಾಲೇಜಿಗೆ ಹೋಗಲು ರೆಡಿ ಆಗ್ತಾ ಇದ್ದ ಗಂಡ ಹಾಗೆ ಮೈದುನನಿಗೆ ಕೂಡ ತಿಂಡಿ ಮಾಡಿಕೊಡುತ್ತಾಳೆ.ಅವರದ್ದು ತಿಂಡಿ ಆಗುವ ಅಷ್ಟರಲ್ಲಿ ಗಂಟೆ ಒಂಬತ್ತು ಕಳೆದಿತ್ತು ಅತ್ತೆ ಹಾಗೂ ಮಾವನಿಗೂ ಕೂಡ ಚಪಾತಿ ಮಾಡಿಕೊಡುತ್ತಾಳೆ ಎಲ್ಲರೂ ತಿಂದು ಹೋದ ನಂತರ ಅಲ್ಲಿ.
ಪಾತ್ರೆಗಳ ರಾಶಿ ಇರುತ್ತದೆ ಅದನ್ನು ತೊಳೆಯುವಷ್ಟರಲ್ಲಿ ಗಂಟೆ 11 ಆಗುತ್ತೆ.ಇನ್ನೇನು ಬೆಳಗ್ಗಿನ ಎಲ್ಲಾ ಕೆಲಸ ಆಯ್ತು ಅನ್ನುವಷ್ಟರಲ್ಲಿ ಮದುವೆಯಾದ ದೊಡ್ಡ ನಾದಿನಿ ಮನೆಗೆ ಬರುತ್ತಾಳೆ ಮತ್ತೆ ಅವಳಿಗೆ ಉಪಚಾರ ಮಾಡುವಷ್ಟರಲ್ಲಿ ಗಂಟೆ 12 ಆದದ್ದೇ ಗೊತ್ತಿಲ್ಲ ಇನ್ನು ಮಧ್ಯಾಹ್ನದ ಊಟಕ್ಕೆ ರೆಡಿ ಅಗಬೇಕು ಅಷ್ಟರಲ್ಲಿ ಅತ್ತೆ ಇವತ್ತೇನಾದರೂ ಸ್ಪೆಷಲ್ ಆಗಿ ಮಾಡು ಮಗಳು ತುಂಬಾ.
ಸಮಯ ಆದ ನಂತರ ಮನೆಗೆ ಬಂದಿದ್ದಾಳೆ ಎಂದು ಹೇಳುತ್ತಾರೆ ಮತ್ತೆ ಊಟಕ್ಕೆ ತಯಾರಿ ಶುರು. ಅದಾಗಲೇ ಗಂಟೆ ಒಂದಾಗಿತ್ತು ಮೈದುನ ಹಾಗೂ ಚಿಕ್ಕನ್ ಅದನ್ನು ಕೂಡ ಕಾಲೇಜಿನಿಂದ ಬರ್ತಾರೆ ಅವರಿಗೆಲ್ಲ ಊಟ ರೆಡಿ ಮಾಡಿ ಬಡಿಸುವ ಅಷ್ಟರಲ್ಲಿ ಸಮಯ ಓದದ್ದೆ ಗೊತ್ತಿಲ್ಲ.ಇನ್ನು ಅವಳು ತುಂಬಾ ಹಸಿವಾಗ್ತಿದೆ ಸ್ವಲ್ಪ ಊಟ ಮಾಡುವ ಎಂದು ಪಾತ್ರೆ ನೋಡಿದರೆ ಅದರಲ್ಲಿ ಅನ್ನದ ಒಂದು.
ಅಗುಳು ಕೂಡ ಇರುವುದಿಲ್ಲ ಅಷ್ಟರಲ್ಲಿ ಯಾವತ್ತು ಮಧ್ಯಾಹ್ನದ ಊಟಕ್ಕೆ ಬರದ ಗಂಡ ಆ ದಿನ ಊಟಕ್ಕೆ ಬರ್ತಾನೆ ಬಂದವನೇ ಜೋರು ಹಸಿವಾಗ್ತಿದೆ ಊಟಕ್ಕೆ ಬಡಿಸು ಎಂದಾಗ ಅವಳಿಗೆ ಕೈಕಾಲು ಮರಗಟ್ಟಿನಂತಾಗುತ್ತದೆ ತಕ್ಷಣ ಅಡುಗೆ ಕೋಣೆಗೆ ಹೋಗಿ ಮತ್ತೊಮ್ಮೆ ಊಟಕ್ಕೆ ರೆಡಿ ಮಾಡಿ ಟೇಬಲ್ ನ ಮೇಲೆ ತಂದು ಇಡುವಾಗ ಗಂಟೆ 3 ಕಳೆದಿತ್ತು ಗಂಡ ಊಟಕ್ಕೆ ಕುಳಿತ ಮೇಲೆ.
ನೀನು ಕೂಡ ಕುಳಿತುಕೋ ಒಟ್ಟಿಗೆ ಊಟ ಮಾಡುವ ಎಂದು ಹೇಳುವಾಗ ಹೆಂಡತಿ ಗಂಡನನ್ನು ಆಶ್ಚರ್ಯದಿಂದ ನೋಡುತ್ತಾಳೆ. ಏಕೆಂದರೆ ಅವಳು ಬೆಳಿಗ್ಗೆಯಿಂದ ಏನನ್ನು ಕೂಡ ತಿಂದಿರಲಿಲ್ಲ ನಂತರ ಗಂಡನ ಜೊತೆ ಊಟಕ್ಕೆ ಕುಳಿತುಕೊಳ್ಳುತ್ತಾಳೆ.ಇನ್ನೇನು ಒಂದು ತುತ್ತು ಅನ್ನ ಬಾಯಲ್ಲಿ ಇಡುವಷ್ಟರಲ್ಲಿ ಅವಳ ಕಣ್ಣಿನಿಂದ ಒಂದು ಹನಿ ನೀರು ಕೆಳಗೆ ಬೀಳುತ್ತೆ, ಇದನ್ನು ನೋಡಿದ ಗಂಡ.
ಅಳ್ತಾ ಇದ್ದೀಯ ಯಾಕೆ ಎಂದು ಕೇಳುತ್ತಾನೆ ಆಗ ಅವಳು ನಾನು ಇವರಿಗೆ ಏನು ಅಂತ ಹೇಳುವುದು,ಇವರಿಗೇನು ಗೊತ್ತು ಅತ್ತೆ ಮನೆಯಲ್ಲಿ ಇಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದ ನಂತರನೇ ನನಗೆ ಊಟ ಸಿಗುವುದು ಅಂತ ಅದನ್ನು ಕೂಡ ಜನರು ಬಿಟ್ಟು ಕೂಳು.
ತಿಂದುಕೊಂಡು ಬಿದ್ದಿರೋದು ಎಂದು ಹೇಳುತ್ತಾರೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.ಹಾಗೆ ಗಂಡನಲ್ಲಿ ಯಾಕೆ ಅಳುತ್ತಿದ್ದೀಯ ಎಂಬ ಪ್ರಶ್ನೆಗೆ ಏನು ಇಲ್ಲ ಎಂದು ಹೇಳುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.