ಮೇಷ ರಾಶಿ :- ಇಂದು ನೀವು ಸಾಕಷ್ಟು ಖಿನ್ನತೆ ಮತ್ತು ತೊಡಕುಗಳನ್ನು ಅನುಭವಿಸುತ್ತೀರಿ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆ ಹಾಕುವುದನ್ನು ತಪ್ಪಿಸಿ ಇದು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ ಇದರಿಂದ ನಿಮ್ಮ ಕಾರ್ಯಕ್ಷಮತೆಯ ಕೂಡ ಕುಸಿಯುತ್ತದೆ. ಮಾರಾಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 6 ರಿಂದ ರಾತ್ರಿ 8 ಗಂಟೆವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನೀವು ಕಡಿಮೆ ಶ್ರಮದಿಂದ ಉತ್ತಮವಾದ ಲಾಭ ಪಡೆಯಬಹುದು ವ್ಯಾಪಾರ ಮಾಡುತ್ತಿರುವವರಿಗೆ ಉತ್ತಮವಾದ ಲಾಭಗಳಿಸುವ ಸಾಧ್ಯತೆ ಇದೆ ಹಣಕಾಸಿನ ಸಮಸ್ಯೆಯೂ ಕೂಡ ಬಗೆಹರಿಯುತ್ತದೆ. ಉದ್ಯೋಗ ಸರಬಾಗಿರುವ ಕೆಲಸವನ್ನು ಪೂರ್ಣಗೊಳಿಸಲು ನೀವು ಶ್ರಮವಹಿಸಬೇಕಾಗುತ್ತದೆ ಕುಟುಂಬ ಜೀವನದ ಪರಿಸ್ಥಿತಿಯು ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5 ರಿಂದ 7.30 ರವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ಎಲ್ಲಾ ಗಮನವೂ ಕೂಡ ಆರ್ಥಿಕ ಪರಿಸ್ಥಿತಿಯ ಮೇಲೆ ಇರುತ್ತದೆ ಹಣಕಾಸಿನ ವಿಚಾರದಲ್ಲಿ ನೀವು ತುಂಬಾ ಗಂಭೀರವಾಗಿರುತ್ತೀರಿ ನಿಮ್ಮ ಯೋಜನೆಗಳು ಕೂಡ ಸಹ ಬದಲಾಯಿಸಬಹುದು. ಈ ಅವಧಿಯಲ್ಲಿ ಸಾಲ ಪಡೆಯುವುದನ್ನು ತಪ್ಪಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:00 ಯಿಂದ 9ರವರೆಗೆ.


ಕಟಕ ರಾಶಿ :- ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ನಿಮಗೆ ಬರುವ ಅನೇಕ ಸಮಸ್ಯೆಗಳನ್ನು ನೀವು ಎದುರಿಸಬಹುದು ನೀವು ಇಂದು ಆರಾಮವಾಗಿ ಕೆಲಸ ಮಾಡಿದರೆ ಕುಟುಂಬ ಸದಸ್ಯರೊಂದಿಗೆ ನೀವು ಸಮಾಧಾನದಿಂದಿರಬಹುದು. ಇಂದು ನೀವು ಮಕ್ಕಳ ವಿಚಾರದಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಸಿಂಹ ರಾಶಿ :- ಈ ದಿನ ನಿಮಗೆ ಒಳ್ಳೆಯ ದಿನವಾಗಿರುತ್ತದೆ ಹಾಗೆಯೇ ನಿಮ್ಮ ಪರಿಸ್ಥಿತಿಯೂ ಕೂಡ ಅನುಕೂಲಕರವಾಗಿರುತ್ತದೆ ಕಚೇರಿಯಲ್ಲಿ ಅಭಿನಂದನೆಗಳು ಮತ್ತು ಗೌರವವನ್ನು ಪಡೆಯುತ್ತೀರಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಮಾತನಾಡಿ ಏಕೆಂದರೆ ನೀವು ಮಾತನಾಡುವ ತಪ್ಪು ವಿಧಾನವು ಮನಸ್ತಾಪಕ್ಕೆ ಕಾರಣವಾಗಬಹುದು ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:30 ರಿಂದ 7 ಗಂಟೆಯವರೆಗೆ.

ಕನ್ಯಾ ರಾಶಿ :- ನೀವು ಯಶಸ್ವಿಯಾಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ ಈ ಸಂದರ್ಭದಲ್ಲಿ ನಿಮ್ಮ ನಿರೀಕ್ಷೆ ತಕ್ಕಂತೆ ಫಲಿತಾಂಶವನ್ನು ಪಡೆಯದಿದ್ದರೆ ನೀವು ನಿರಾಸೆಗೊಳ್ಳುವುದು ಅಗತ್ಯವಿಲ್ಲ ಶೀಘ್ರದಲ್ಲಿ ಎಲ್ಲಾ ವಿಚಾರಗಳು ನಿಮ್ಮ ಪರವಾಗಿಯೇ ಗೋಚರಿಸುತ್ತದೆ. ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ತುಲಾ ರಾಶಿ :- ಇಂದು ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿಯನ್ನು ಕೂಡ ಪಡೆಯಬಹುದು ಅದು ನಿಮಗೆ ತುಂಬಾನೇ ಸಂತೋಷವನ್ನು ನೀಡುತ್ತದೆ ಆರ್ಥಿಕ ದೃಷ್ಟಿಯಿಂದ ಈ ದಿನ ತುಂಬಾನೇ ಒಳ್ಳೆಯ ದಿನವಾಗಿರುತ್ತದೆ ನಿಮ್ಮ ಆದಾಯ ಕೂಡ ಹೆಚ್ಚಾಗಬಹುದು. ವೆಚ್ಚವು ಕೂಡ ಕಡಿಮೆಯಾಗುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4 ರಿಂದ ರಾತ್ರಿ 7:00 ಗಂಟೆಯವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ವೃಶ್ಚಿಕ ರಾಶಿ :- ಬಹಳ ಸಮಯದ ನಂತರ ಕುಟುಂಬದೊಂದಿಗೆ ನೀವು ಸಮಯ ಕಳೆಯಲು ಅವಕಾಶ ಸಿಗಲಿದೆ ಎಲ್ಲ ಒತ್ತಡವನ್ನು ಮರೆತು ನೀವು ಸಂಪೂರ್ಣವಾಗಿ ಈ ಸಮಯವನ್ನು ಆನಂದಿಸುವುದು ಉತ್ತಮ ನೀವು ಇಂದು ನಿಮಗಾಗಿ ಸಾಕಷ್ಟು ಸಮಯವನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಉತ್ತಮವಾದ ನಡವಳಿಕೆ ಮತ್ತು ಹೊಂದಾಣಿಕೆ ಇರುತ್ತದೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7:30 ರಿಂದ 9 ಗಂಟೆಯವರೆಗೆ.

ಧನುಷ ರಾಶಿ :- ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ನೀವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು ಈ ಸಮಯದಲ್ಲಿ ಉದ್ಯೋಗ ಕೆಲವು ಸವಾಲುಗಳನ್ನು ಬರಬಹುದು ಈ ದಿನ ನೀವು ಬಹಳ ಜಾಗೃತೆಯನ್ನು ವಹಿಸಬೇಕಾಗುತ್ತದೆ ಸಂಗಾತಿಯೊಂದೆನ ಸಂಬಂಧವು ಕೂಡ ಸುಧಾರಿಸಬೇಕಾಗುತ್ತದೆ ಅದೃಷ್ಟ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:00 ಯಿಂದ ಮಧ್ಯಾಹ್ನ 2:00 ವರೆಗೆ.

ಮಕರ ರಾಶಿ :- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ ನಿಮಗೆ ಬೇಕಾಗುವ ವರ್ಗಾವಣೆ ಪಡೆಯುವ ಸಾಧ್ಯತೆ ಇದೆ ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ಬಹಳ ಶ್ರಮಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಮೇಲೆ ಬಹಳ ಗಮನ ಹರಿಸಿರುತ್ತಾರೆ ಅದೃಷ್ಟ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಕುಂಭ ರಾಶಿ :- ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ಕೆಲವು ದಿನದ ನಿರಂತರ ಕೆಲಸದಿಂದಾಗಿ ನಿಮ್ಮ ಸಂಗಾತಿಯನ್ನು ಭೇಟಿ ಆಗದಿದ್ದರೆ ಇಂದು ಭೇಟಿಯಾಗುವ ಸಾಧ್ಯತೆ ಇರುತ್ತದೆ ಮದುವೆಯಾಗಿದ್ದಾರೆ ನಿಮ್ಮ ಸಂಗಾತಿಯೊಂದಿಗೆ ಒಡನಾಟ ಚೆನ್ನಾಗಿರುತ್ತದೆ. ಮನೆಯ ವಾತಾವರಣ ಶಾಂತವಾಗಿರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 7:30 ರಿಂದ ರಾತ್ರಿ 9 ಗಂಟೆಯವರೆಗೆ.

ಮೀನ ರಾಶಿ :- ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿರುತ್ತದೆ ಈ ಹಿಂದೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಇಂದು ಅದು ನಿವಾರಣೆಯಾಗುವ ಸಾಧ್ಯತೆ ಇದೆ ನೀವು ಇಂದು ತುಂಬಾ ಶಕ್ತಿಯುತ ಆಗಿರುವಂತಹ ಮನಸ್ಥಿತಿಯಲ್ಲಿ ಇರುತ್ತೀರಿ. ಕಚೇರಿಯಲ್ಲಿ ಭಾಗಿ ಇರುವ ಕೆಲಸದ ಹೊರೆ ಕಡಿಮೆಯಾಗುತ್ತದೆ ಅದೃಷ್ಟ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 2:30 ರಿಂದ ಸಂಜೆ 5 ವರೆಗೆ.